ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆಯಲು ಹೊರಟ 8 ಸದಸ್ಯರ ಮುಸ್ಲಿಂ ಕುಟುಂಬ

in Uncategorized 4,454 views

ಉತ್ತರ ಪ್ರದೇಶದ ಬದೋಹಿ ಜಿಲ್ಲೆಯ ಮುಸ್ಲಿಂ ಕುಟುಂಬದ ಒಂಬತ್ತು ಸದಸ್ಯರು ವಿಂಧ್ಯಾಚಲದಲ್ಲಿ ಪೂಜೆ ಸಲ್ಲಿಸಿದ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕುಟುಂಬದ ಮುಖ್ಯಸ್ಥರು, ಅಯೋಧ್ಯೆ ರಾಮ ಮಂದಿರಕ್ಕೆ ದರ್ಶನಕ್ಕೆ ಹೋಗುವುದಾಗಿ ಹೇಳಿದ್ದಾರೆ.

Advertisement

ನವದೆಹಲಿ: ಉತ್ತರ ಪ್ರದೇಶದ ಬದೋಹಿಯಲ್ಲಿ ಮುಸ್ಲಿಂ ಕುಟುಂಬವೊಂದು ವಿಂಧ್ಯಾಚಲದಲ್ಲಿ ಪೂಜೆ ಸಲ್ಲಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿತು. ಮುಸಲ್ಮಾನರಿಂದ ಹಿಂದೂವಾಗಿ ಮತಾಂತರಗೊಂಡ ಕುಟುಂಬದ ಮುಖ್ಯಸ್ಥರು ರಾಮಮಂದಿರ ದರ್ಶನಕ್ಕೆ ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕುಟುಂಬಕ್ಕೆ ಬಿಜೆಪಿ ಮುಖಂಡರು ಹೂಮಾಲೆ ಹಾಕಿ, ಕೇಸರಿ ಬಟ್ಟೆ ತೊಡಿಸಿ ಸನ್ಮಾನಿಸಿದ್ದಾರೆ. ಇಡೀ ವಿಷಯವು ಚೌರಿ ಪೊಲೀಸ್ ಠಾಣೆ ವ್ಯಾಪ್ತಿಯ ದನು ಪಟ್ಟಿಯದ್ದು. ಇಲ್ಲಿ, ಚೇಡಿ ಮತ್ತು ಅವನ ಕುಟುಂಬ, ಮುಸ್ಲಿಂ ಧರ್ಮದ ಕೆಳ ಸಮುದಾಯದಿಂದ ಬಂದವರು, ಬ್ಯಾಂಡ್ ನುಡಿಸುವುದರ ಜೊತೆಗೆ ಇತರ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಏತನ್ಮಧ್ಯೆ, ಚೇಡಿ ಶುಕ್ರವಾರ ತನ್ನ ಕುಟುಂಬದ ಎಲ್ಲಾ ಒಂಬತ್ತು ಸದಸ್ಯರೊಂದಿಗೆ ಮಿರ್ಜಾಪುರದ ವಿಂಧ್ಯಾಚಲ ಧಾಮ್‌ಗೆ ತೆರಳಿದರು. ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ ಬಳಿಕ ಹಿಂದೂ ಧರ್ಮವನ್ನು ಸ್ವೀಕರಿಸಿದರು.

ಮೊದಲು ತಾನು ಮುಸ್ಲಿಮನಾಗಿದ್ದೆ ಮತ್ತು ಕೆಲವೊಮ್ಮೆ ನಮಾಜ್ ಕೂಡ ಮಾಡುತ್ತಿದೆ. ಆದರೆ ಈಗ ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ ಎಂದು ಚೇಡಿ ಹೇಳಿದದಾರೆ. ಇದಕ್ಕಾಗಿ ಅವರು ವಿಂಧ್ಯಾಚಲ ಧಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಎಲ್ಲಿ ಬೇಕಾದರೂ ಹೋಗುವ ಹಕ್ಕಿದೆ ಎಂದು ಇದೇ ವೇಳೆ ಹೇಳಿದ್ದಾರೆ. ಅಯೋಧ್ಯೆಗೆ ಹೋಗುವ ಕುರಿತಾದ ಪ್ರಶ್ನೆಗೆ, ‘ಹೌದು ಹೋಗುತ್ತೇನೆ, ರಾಮಲಲ್ಲಾನನ್ನು ನೋಡಲು ಹೋಗುತ್ತೇನೆ’ ಎಂದು ತಿಳಿಸಿದ್ದಾರೆ.

ಚೇಡಿಯ ಮಕ್ಕಳು ತಮ್ಮ ತಂದೆ ಎಲ್ಲಿದ್ದರೂ ತಾವೂ ಆ ಧರ್ಮದಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ. ಚೇಡಿ ಅವರ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಮಾಹಿತಿ ತಿಳಿದ ಮುಖಂಡರು ಚೇಡಿಯವರ ಮನೆಗೆ ಆಗಮಿಸಿ ಇಡೀ ಕುಟುಂಬಕ್ಕೆ ಮಾಲಾರ್ಪಣೆ ಮಾಡಿ ಕೇಸರಿ ವಸ್ತ್ರ ತೊಡಿಸಿ ಗೌರವಿಸಿದರು.

ಮತ್ತೊಂದೆಡೆ, ವಿಂಧ್ಯಾಚಲದಲ್ಲಿ ಪೂಜೆ ಪುನಸ್ಕಾರದ ಫೋಟೋವೊಂದು ಹೊರಬಿದ್ದಿದ್ದು, ಮಿರ್ಜಾಪುರದ ಬಿಜೆಪಿ ಶಾಸಕ ರತ್ನಾಕರ್ ಮಿಶ್ರಾ ಈ ಕುಟುಂಬಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಚೇಡಿಗೆ ಐದು ಗಂಡು ಮಕ್ಕಳಿದ್ದಾರೆ, ಅವರ ಹೆಸರುಗಳು ಅನ್ವರ್, ಸನ್ವರ್, ಗುಡ್ಡು, ಬಬ್ಲು ಮತ್ತು ಗಬ್ಬರ್. ಅವರಿಗೆ ಐದು ಮೊಮ್ಮಕ್ಕಳು ಕೂಡ ಇದ್ದಾರೆ, ಅವರ ಹೆಸರುಗಳು ಶಂಶಾದ್, ಕಾಶ್‌, ಆರಿಫ್ ಮತ್ತು ಸಲೀಂ. ಎಲ್ಲರ ಹೆಸರನ್ನೂ ಬದಲಾಯಿಸುವುದಾಗಿ ಚೇಡಿ ಹೇಳಿದ್ದಾರೆ.

Advertisement
Share this on...