ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನವ್ವರ್ ಫಾರುಕಿ ಬಗ್ಗೆ ನೀವು ಕೇಳಿರಬೇಕು. ಇದೇ ಮುನವ್ವರ್ ಫಾರೂಕಿ ಕೆಲ ತಿಂಗಳ ಹಿಂದಷ್ಟೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ನಿಮಗೆ ತಿಳಿದಿರುವಂತೆ ನಿರ್ದಿಷ್ಟ ಸಮುದಾಯದಿಂದ ಬೇರೆ ಬೇರೆ ವರ್ಗದ ಜನರವರೆಗೆ, ಹಿಂದೂ ದೇವತೆಗಳ ಬಗ್ಗೆ ಕಾಲಕಾಲಕ್ಕೆ ಈತ ವಿವಾದಾತ್ಮಕ ಹೇಳಿಕೆಗಳನ್ನು ಕಾಮಿಡಿ ಹೆಸರಲ್ಲಿ ನೀಡುತ್ತಲೇ ಇರುತ್ತಾನೆ. ಇದು ಸುಸಂಸ್ಕೃತ ಸಮಾಜಕ್ಕೆ ಒಳ್ಳೆಯದಲ್ಲ. ಇದೀಗ ಮುನವ್ವರ್ ಫಾರೂಕಿ ಬಗ್ಗೆ ಮಹತ್ವದ ಸುದ್ದಿಯೊಂದು ಬರುತ್ತಿದೆ. ಬನ್ನಿ ಈ ಬಗೆಗನ ಸಂಪೂರ್ಣ ಸುದ್ದಿಯನ್ನು ವಿವರವಾಗಿ ತಿಳಿಸುತ್ತೇವೆ.
ಇನ್ಮುಂದೆ ಸ್ಟ್ಯಾಂಡಪ್ ಕಾಮಿಡಿ ಮಾಡೋದನ್ನ ನಿಲ್ಲಿಸುತ್ತಾನಾ ಮುನವ್ವರ್ ಫಾರುಕಿ?
ಇತ್ತೀಚೆಗಷ್ಟೇ ಮುನಾವರ್ ಫಾರೂಕಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಟ್ವೀಟ್ ಒಂದನ್ನ ಮಾಡಿದ್ದಾನೆ. ಮುನವ್ವರ್ ಫಾರೂಕಿ ಟ್ವೀಟ್ ಮಾಡಿದ ನಂತರವೇ ಆತ ಇನ್ನು ಮುಂದೆ ಸ್ಟ್ಯಾಂಡಪ್ ಕಾಮಿಡಿ ಮಾಡೋದಿಲ್ಲ ಅಂತ ಹಲವರು ಊಹಿಸುತ್ತಿದ್ದಾರೆ. ಮುನವ್ವರ್ ಫಾರೂಕಿ ಟ್ವೀಟ್ ಮಾಡಿ, “ಕೊನೆಗೂ ದ್ವೇಷ ಯಶಸ್ವಿಯಾಯಿತು ಮತ್ತು ಒಬ್ಬ ಹಾಸ್ಯನಟ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ, ಗುಡ್ ಬೈ, ನನಗೆ ನ್ಯಾಯ ಸಿಗಲಿಲ್ಲ” ಎಂದು ಬರೆದಿದ್ದಾನೆ.
ಮುನವ್ವರ್ ಫಾರೂಕಿ ಟ್ವೀಟ್ ಮಾಡಿದ ನಂತರ ಅನೇಕರು ಈತನಿಗೆ ತಕ್ಕ ಉತ್ತರ ನೀಡುತ್ತಿದ್ದರೆ ಇನ್ನು ಆತನ ಸಮರ್ಥಕರು ಬೆಂಬಲಕ್ಕೆ ನಿಂತಿದ್ದಾರೆ.
Nafrat jeet hai, Artist haar gaya.
Im done! Goodbye! INJUSTICE pic.twitter.com/la4xmaeQ0C— munawar faruqui (@munawar0018) November 28, 2021
ತನ್ನ ಕಾಮಿಡಿಯಲ್ಲಿ ಹಿಂದೂ ದೇವತೆಗಳ ಅವಮಾನ
ಮುನವ್ವರ್ ಫಾರೂಕಿ ಹಾಸ್ಯಗಾರ ಕಮ್ಮಿ ಮತ್ತು ಹಿಂದೂ ದೇವತೆಗಳ ಬಗ್ಗೆ ಹೆಚ್ಚು ಮಾತನಾಡುತ್ತಾನೆ. ನಾವು ದೇವತೆಗಳ ಬಗ್ಗೆ ಮಾತನಾಡಬೇಕು. ಆದರೆ ಮುನವ್ವರ್ ಫಾರೂಕಿ ತನ್ನ ಕಾಮಿಡಿಯಲ್ಲಿ ದೇವತೆಗಳನ್ನು ಚಿತ್ರಿಸುವ ರೀತಿಯಿದೆಯಲ್ಲ ಅದು ಸರಿಯಲ್ಲ. ಹಿಂದೂ ಧರ್ಮದ ಬಗ್ಗೆ ಹಾಸ್ಯದ ಹೆಸರಿನಲ್ಲಿ ಯಾರು ಬೇಕಾದರು ಎಂಥಾ ಮಾತುಗಳನ್ನೂ ಆಡಬಹುದೇ? ಮುನವ್ವರ್ ಫಾರೂಕಿ ಹಾಸ್ಯದ ಮೂಲಕ ಜನರನ್ನು ರಂಜಿಸುತ್ತಿದ್ದಾನೆ ಆದರೆ ಆ ಕಾಮಿಡಿ ದೇವತೆಗಳನ್ನ ಅವಮಾನಿಸುವ ಮೂಲಕ ಮಾಡುವುದು ಎಷ್ಟು ಸರಿ?
Comedian @munawar0018's show has been asked to cancel by #Bengaluru police due to threats from right wing groups.#HinduJanajagrutisamiti has opposed conducting his show *Dongri to Nowhere* in the city calling him #antihindu.They had submitted a memorandum in this regard to cops. pic.twitter.com/SULMhBPvdQ
— Imran Khan (@KeypadGuerilla) November 28, 2021
ಮುನವ್ವರ್ ಫಾರುಕಿಗೆ ಸಿಕ್ಕಿತು ಬೆಂಗಳೂರು ಪೋಲಿಸರ ಪತ್ರ
ಸಂಘಟಕರು ಮತ್ತು ಪ್ರೇಕ್ಷಕರಿಗೆ ಬೆದರಿಕೆ ಹಾಕಿದ ನಂತರ ಕಳೆದ ಎರಡು ತಿಂಗಳಲ್ಲಿ ರದ್ದಾದ 12 ನೆಯ ಶೋ ಇದು ಎಂದು ಸ್ಟ್ಯಾಂಡಪ್ ಕಾಮಿಡಿಯನ್ ಮುನವ್ವರ್ ಫಾರುಕಿ ಫಾರೂಕಿ ಹೇಳಿದ್ದಾನೆ. ಈ ಹಿಂದೆ ಗೋವಾ, ಇಂದೋರ್, ಛತ್ತೀಸ್‌ಗಢ ಮತ್ತು ಮುಂಬೈನಲ್ಲೂ ಈತನ ಶೋಗಳನ್ನ ರದ್ದುಗೊಳಿಸಲಾಗಿತ್ತು.
ಈ ಬಾರಿ ಬೆಂಗಳೂರು ಪೊಲೀಸರು ಕಾರ್ಯಕ್ರಮದ ಆಯೋಜಕರಿಗೆ ಪತ್ರ ಬರೆದಿದ್ದು, ನಮ್ಮ ಸಮಾಜದಲ್ಲಿ ಜನರನ್ನು ವಿವಿಧ ರೂಪಗಳಲ್ಲಿ ವಿಭಜಿಸುವ ಕೆಲಸ ಮಾಡುವ ವ್ಯಕ್ತಿ ಫಾರೂಕಿ ಎಂದು ತಿಳಿಸಿದ್ದಾರೆ. ಈ ಮಾಹಿತಿಯನ್ನು ಖುದ್ದು ಮುನವ್ವರ್ ಫಾರುಕಿ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾನೆ.
"It is learned that #MunawarFaruqui is a controversial figure as he was been (sic) in controversial statements and on other religion Gods. Many states have banned his comedy shows…"
Instead of assuring security @BlrCityPolice "suggest" organisers cancel today's comedy act pic.twitter.com/fGQqVEbEwW— Article 14 (@Article14live) November 28, 2021