ಹಿಜಾಬ್ ಬ್ಯಾನ್ ಹಿಂಪಡೆದ ಸಿಎಂ ಸಿದ್ಧರಾಮಯ್ಯ: ಈ ಬಗ್ಗೆ ಅಲ್ಲಾಹು ಅಕ್ಬರ್ ಕೂಗಿ ಸುದ್ದಿಯಾಗಿದ್ದ ಮುಸ್ಕಾನ್ ಹೇಳಿದ್ದೇನು ನೋಡಿ

in Uncategorized 65 views

ಬೆಂಗಳೂರು: ಹಿಜಾಬ್ ಬ್ಯಾನ್ (Hijab Ban) ನಿಷೇಧ ಹಿಂಪಡೆಯುವ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಹಿಜಾಬ್ ಪರ ಹೋರಟಗಾರ್ತಿ ಮುಸ್ಕಾನ್ (Muskan) ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ನಿರ್ಧಾರದಿಂದ ತುಂಬಾ ಖುಷಿ ಆಯ್ತು. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಮೀರ್ ಅಹ್ಮದ್ , ಯು ಟಿ ಖಾದರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಮತ್ತೆ ನಮ್ಮ ಹಿಜಾಬ್ ವಾಪಸ್ ಬರುತ್ತೆ ಅಂತ ನಿರೀಕ್ಷೆ ಇತ್ತು. ಈಗ ನಮ್ಮ ಶಿಕ್ಷಣವನ್ನು ಮುಂದುವರಿಸುತ್ತೇವೆ. ನಿನ್ನೆ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿಕೆ ಸಂತಸ ತಂದಿದೆ. ಸದ್ಯ ಹಿಜಾಬ್ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಅಲ್ಲಿಯೂ ನಮ್ಮ ಹಕ್ಕು ನಮಗೆ ಸಿಗುವ ವಿಶ್ವಾಸವಿದೆ ಎಂದು ಮುಸ್ಕಾನ್ ಹೇಳಿದ್ದಾರೆ.

Advertisement

ಮುಸ್ಕಾನ್ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ. ಕಳೆದ ವರ್ಷ ಕಾಲೇಜಿಗೆ ಬುರ್ಕಾ ಧರಿಸಿ ಬಂದಾಗ ಕೇಸರಿ ಧರಿಸಿದ್ದ ಕೆಲ ಯುವಕರು ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಮುಸ್ಕಾನ್​ರನ್ನು ಮುತ್ತುವರಿದಿದ್ದರು. ಈ ವೇಳೆ ಮುಸ್ಕಾನ್ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದರು. ಅಲ್ಲಾಹು ಅಕ್ಬರ್ ಘೋಷಣೆ ಬಳಿಕ ಮುಸ್ಕಾನ್ ಹಿಜಾಬ್ ಐಕಾನ್ ಆಗಿದ್ದಾರೆ.

ಟಿಪ್ಪುವಿನ ಅವತಾರವೇ ಸಿದ್ದರಾಮಯ್ಯ

ಸಿದ್ದರಾಮಯ್ಯ ವೋಟ್ ಬ್ಯಾಂಕ್​ಗಾಗಿ ಹೀಗೆ ಮಾಡ್ತಿದ್ದಾರೆ. ಒಂದು ಸಮುದಾಯದ ತುಷ್ಟೀಕರಣ ಮಾಡ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಆ ಸಮುದಾಯವಷ್ಟೇ ಮತ ಹಾಕುತ್ತೆ ಎನ್ನುವ ಹಾಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಸಮಸ್ತ ಹಿಂದೂಗಳು ಅವರಿಗೆ ವೋಟ್ ಹಾಕುವುದಿಲ್ಲ.ಸಿದ್ದರಾಮಯ್ಯ ಹೇಳಿದ್ದು ಉದ್ದಟತನ. ಟಿಪ್ಪು ನಂತರ ಎರಡನೇ ಅವತಾರವೇ ಸಿದ್ದರಾಮಯ್ಯ. ಇವರು ಟಿಪ್ಪು ಪಾರ್ಟ್ ಟು ರೀತಿ ಆಗಿದ್ದಾರೆ. ಸಿದ್ದರಾಮಯ್ಯರದ್ದು ಅತಿರೇಕವಾಯ್ತ, ಇವರಿಗೆ ಅಂತ್ಯಕಾಲ ಬಂದಿದೆ ಎಂದು ಯತ್ನಾಳ್ ಕಿಡಿಕಾರಿದರು.

ವಿಜಯೇಂದ್ರ, ಅಶೋಕ್ ವಿರುದ್ಧ ವಾಗ್ದಾಳಿ

ಹಿಜಾಬ್ ನಿಷೇಧ ಹಿಂಪಡೆದರ ವಿರುದ್ಧ ಬಿಜೆಪಿ ಹೋರಾಟಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಮ್ಮ ರಾಜ್ಯದಲ್ಲಿ ಎರಡು ಜೋಡೆತ್ತುಗಳಿವೆ. ಅವರು ಏನು ಮಾಡ್ತಾರೆ ಅನ್ನೋದನ್ನು ನೋಡೋಣ.

ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಉಗ್ರ ಹೋರಾಟ ಎಂದಿದ್ದ ಜೋಡೆತ್ತು ಏನೂ ಮಾಡಲೇ ಇಲ್ಲ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.

Advertisement
Share this on...