ಬೆಳಗಾವಿ: ರಾಜ್ಯದಲ್ಲಿ ಹಿಜಾಬ್ ಬ್ಯಾನ್ (Hijab Ban) ವಾಪಸ್ ವಿಚಾರಕ್ಕೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (chakravarthy sulibele) ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಂ ತುಷ್ಟೀಕರಣ ಮಾಡ್ತಾರೆ. ಇದು ಹೊಸತೇನು ಅಲ್ಲ, ಈ ಸಲ ಅಧಿಕಾರಕ್ಕೆ ಬಂದಿದ್ದು ಮುಸ್ಲಿಂ ಮತಗಳಿಂದ ಎಂಬುದನ್ನು ಕಾಂಗ್ರೆಸ್ (Congress) ಪಕ್ಷ ಸ್ಪಷ್ಟವಾಗಿ ಹೇಳಿದೆ. ಬಳಿಕ 10 ಸಾವಿರ ಕೋಟಿ ಕೊಡ್ತಿನಿ ಅಂತ ಹೇಳಿದರು.
ನಂತರ ಹಿಜಾಬ್ ಬ್ಯಾನ್ ವಾಪಸ್ ಹೊಸದಲ್ಲ. ಹಿಂದುಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ್ದು ದುರಂತ ಎಂದು ಹೇಳಿದರು. ಮುಸ್ಲಿಂ ಮಹಿಳೆಯರ ಅಭಿವೃದ್ಧಿ ಮುಖ್ಯ ಎಂದು ಮೋದಿ ಸರ್ಕಾರ ತ್ರೀವಳಿ ತಲಾಕ್ ರದ್ದು ಮಾಡಿತು. ಸಿದ್ದರಾಮಯ್ಯ ನಡೆ ಪ್ರಗತಿಗೆ ವಿರೋಧವಾಗಿದೆ. ಹೋರಾಟವನ್ನು ಯಾರು ಮಾಡಬೇಕಿಲ್ಲ. ಹಿಂದೂಗಳು ಸಹ ಕೇಸರಿ ಶಾಲ್ (Saffron Shawl) ಹಾಕಿ ಬಂದ್ರೆ ಯಾರು ತಡೆಯುವಂತೆ ಇಲ್ಲ ಎಂದು ಹೇಳಿದರು.
ತರಗತಿಯ ವಾತಾವರಣ ಹಾಳು ಮಾಡೋ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಸಮಾಜ ತನ್ನದೇ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡುತ್ತೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಈ ಹಿಂದೆ ಮಹಮ್ಮದ್ ಬಿನ್ ತುಘಲಕ್ ಎಂಬ ಹುಚ್ಚು ದೊರೆ ಅಂತ ಕರೆಯುತ್ತಿದ್ದರು. ಆ ರೀತಿ ಸಿದ್ದರಾಮಯ್ಯನವರು ಹುಚ್ಚು ದೊರೆ ಆಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿನ್ನೆವರೆಗೂ ಶಿಕ್ಷಣ ಸಚಿವರು ಈ ವಿಚಾರ ಕೋರ್ಟ್ ನಲ್ಲಿದ್ದು, ನಾವೇನು ಮಾಡುದಕ್ಕೆ ಆಗುವುದಿಲ್ಲ ಎಂದಿದ್ದರು. ಇಂದು ಕೋರ್ಟ್ ಎಲ್ಲಿ ಹೋಯಿತು. ಮುಸ್ಲಿಮರನ್ನು ಓಲೈಕೆ ಮಾಡಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥಿತ ಕಾನೂನು ಯಾವುದು ಬೇಡವಾ? ಕರ್ನಾಟಕದಲ್ಲಿ ಹಿಂದೂ ಮುಸ್ಲಿಮರು ಬಡಿದಾಡುತ್ತಲೇ ಇರಲಿ ಎಂಬುದು ಅವರ ಆಸೆ ಎಂದು ಈಶ್ವರಪ್ಪ ಆರೋಪಿಸಿದರು.
ಊಟಕ್ಕೂ ಸಮವಸ್ತ್ರಕ್ಕೂ ಏನು ಸಂಬಂಧ?
ಒಂದು ಕಡೆ ಮುಸ್ಲಿಮರನ್ನು ಎತ್ತಿಕಟ್ಟಿ ಕುತಂತ್ರದ ರಾಜಕೀಯ ಮಾಡುತ್ತಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟನ್ನು ಕಾಂಗ್ರೆಸ್ ಪಡೆದುಕೊಂಡಿತು. ಈ ಬಾರಿ ಎಲ್ಲ 28 ಸೀಟುಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಭಯ ಅವರಿಗೆ ಹುಟ್ಟಿದೆ.
ಹಾಗಾಗಿ ಈ ರೀತಿಯ ಹೇಳಿಕೆಯನ್ನು ಸಿದ್ದರಾಮಯ್ಯನವರು ಕೊಡುತ್ತಿದ್ದಾರೆ. ಊಟಕ್ಕೂ ಸಮವಸ್ತ್ರಕ್ಕೂ ಏನು ಸಂಬಂಧ? ರಾಜ್ಯದಲ್ಲಿ ದಂಗೆಯಾಗಿ ಯಾರದ್ರೂ ಸತ್ತರೆ ನೇರವಾಗಿ ಸಿಎಂ ಸಿದ್ದರಾಮಯ್ಯನವರೇ ನೇರವಾಗಿ ಕಾರಣ ಆಗುತ್ತಾರೆ ಎಂದು ಕಿಡಿಕಾರಿದರು.