ಹೆಂಡತಿಗೆ ಬುರ್ಖಾ ಹಾಕಿಸಿ ಈ ಅಸಹ್ಯ ದೇಶದ್ರೋಹಿ ಕೃತ್ಯ ನಡೆಸುತ್ತಿದ್ದ #ಅಶ್ರಫ್ ಹಾಗು ಆತನ ಪತ್ನಿಯನ್ನ ಬಂಧಿಸಿದ ಪೋಲಿಸರು: 51 ಲಕ್ಷ ರೂಪಾಯಿಯ ಮಾದಕವಸ್ತುಗಳು ಜಪ್ತು

in Uncategorized 1,070 views

ಉತ್ತರಾಖಂಡದ ಡೆಹ್ರಾಡೂನ್ ಪೊಲೀಸರು ಡ್ರಗ್ಸ್ ಕಳ್ಳಸಾಗಣೆದಾರ ಮತ್ತು ಆತನ ಪತ್ನಿಯನ್ನು ಬಂಧಿಸಿದ್ದಾರೆ. ಆರೋಪಿ ಮಾದಕವಸ್ತು ಕಳ್ಳಸಾಗಣೆದಾರ ಅಶ್ರಫ್ ಪೋಲಿಸರಿಗೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ತನ್ನ ಪತ್ನಿ ಸಬ್ದಾ ಬುರ್ಖಾ ಹಾಕಿಸಿ ಆಕೆಯನ್ನು ಡ್ರಗ್ಸ್ ಸ್ಮಗ್ಲಿಂಗ್ ದಂಧೆಗೆ ಕರೆತಂದಿದ್ದ. ಪೋಲಿಸರು ಇಬ್ಬರಿಂದಲೂ 51 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಪ್ರದೇಶದಿಂದ ಇಬ್ಬರು ಡ್ರಗ್ಸ್ ತರುತ್ತಿದ್ದಾರೆ ಎಂದು ಡೆಹ್ರಾಡೂನ್ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮಾದಕ ದ್ರವ್ಯ ಸೇವಿಸಿದ ವ್ಯಕ್ತಿಯ ಜೊತೆ ಮಹಿಳೆಯೂ ಇದ್ದಳು ಎಂದು ಮಾಹಿತಿದಾರ ಪೊಲೀಸರಿಗೆ ತಿಳಿಸಿದ್ದರು. ಖಚಿತ ಮಾಹಿತಿ ಮೇರೆಗೆ ಡೆಹ್ರಾಡೂನ್ ಪೊಲೀಸರು ಘೇರಾವ್ ಹಾಕಿ ಚೆಕಿಂಗ್ ನಡೆಸುತ್ತಿದ್ದರು.

ಇದೇ ವೇಳೆ ಪೊಲೀಸರು ಸ್ಯಾಂಟ್ರೋ ಕಾರನ್ನು ತಪಾಸಣೆ ನಡೆಸಿದರು. ಈ ಕಾರಿನಲ್ಲಿಯೇ ಅಶ್ರಫ್ ಮತ್ತು ಆತನ ಪತ್ನಿ ಸಬ್ದಾ ಕುಳಿತಿದ್ದರು. ವಿಚಾರಣೆ ನಡೆಸಿದ ಬಳಿಕ ಪೊಲೀಸರು ತಪಾಸಣೆ ನಡೆಸಿದಾಗ ಇಬ್ಬರ ಬಳಿ 510 ಗ್ರಾಂ ಡ್ರಗ್ಸ್ ಪತ್ತೆಯಾಗಿದೆ. ಈ ಡ್ರಗ್ಸ್ ಬೆಲೆ 51 ಲಕ್ಷ ರೂ. ಮೌಲ್ಯದ್ದಾಗಿತ್ತು. ಆರೋಪಿಗಳಿಬ್ಬರೂ ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿಗಳಾಗಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ ಅಶ್ರಫ್ ತಾನು ಪೇಂಟರ್ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಈತ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಡ್ರಗ್ ಸ್ಮಗ್ಲರ್ ಜೊತೆ ಗುರುತಿಸಿಕೊಂಡಿದ್ದ. ಹೆಚ್ಚು ಹಣ ಗಳಿಸುವ ದುರಾಸೆಯಿಂದ ಮಾದಕ ವಸ್ತು ಕಳ್ಳಸಾಗಣೆ ಆರಂಭಿಸಿದ್ದ. ಬರೇಲಿಯಲ್ಲಿ ಈತ ಕಡಿಮೆ ದರದಲ್ಲಿ ಡ್ರಗ್ಸ್ ಖರೀದಿಸುತ್ತಿದ್ದ.

ಇದಾದ ಬಳಿಕ ವಿವಿಧೆಡೆ ವಾಸವಾಗಿರುವ ಮಾದಕ ವಸ್ತು ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಬಂಧಿತ ಆರೋಪಿ ಅಶ್ರಫ್ ವಿರುದ್ಧ ಡೆಹ್ರಾಡೂನ್‌ನ ಸಹಸ್‌ಪುರ ಮತ್ತು ಪ್ರೇಮ್‌ನಗರದಲ್ಲಿ ಈ ಹಿಂದೆಯೂ ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿದ್ದವು. ಆತ ಈ ಹಿಂದೆಯೂ ಜೈಲಿಗೆ ಹೋಗಿ ಬಂದಿದ್ದಾನೆ. ಆದರೆ, ಇದಾದ ಬಳಿಕವೂ ಆತ ತನ್ನ ಈ ಕೆಲಸ ಬಿಟ್ಟಿರಲಿಲ್ಲ.

ವಿಚಾರಣೆ ವೇಳೆ ಆರೋಪಿ ಅಶ್ರಫ್ ತನ್ನ ಪತ್ನಿಯನ್ನು ಜೊತೆಯಲ್ಲಿಟ್ಟು ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಇದಕ್ಕೂ ಮೊದಲು ಆತ ತನ್ನ ಪತ್ನಿಯೊಂದಿಗೆ ಎಂದಿಗೂ ಅರೆಸ್ಟ್ ಆಗಿರಲಿಲ್ಲ. ಹಾಗಾಗಿ ಮಹಿಳೆಯ ಜೊತೆಗಿರುವುದು ಪೊಲೀಸರಿಗೆ ತನ್ನ ಮೇಲೆ ಅನುಮಾನ ಬರದಂತೆ ಮಾಡುತ್ತದೆ ಮತ್ತು ತಾನು ಸುರಕ್ಷಿತವಾಗಿರುತ್ತೇನೆ ಎಂದು ಆತ ಪ್ಲ್ಯಾನ್ ಮಾಡಿದ್ದ. ಸದ್ಯ ಪೊಲೀಸರು ಅಶ್ರಫ್ ಹಾಗೂ ಆತನ ಪತ್ನಿ ಸಬ್ದಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಇತರ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಪೆಡ್ಲರ್‌ಗಳ ಅಡಗುತಾಣಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.

ಇದನ್ನೂ ಓದಿ:

ಬ್ಯೂಟಿ‌ ಪಾರ್ಲರ್ ನಡೆಸುವ ನೆಪದಲ್ಲಿ ಜಾಹಿಲಾ ಬೇಗಂ ನಡೆಸುತ್ತಿದ್ದಳು ಖತರ್ನಾಕ್ ಹನಿ ಟ್ರ್ಯಾಪ್: ಸೂಸೈಡ್ ಮಾಡಿಕೊಂಡ ಹಿಂದೂ ಉದ್ಯಮಿ, ಈಕೆಯ ಅಸಹ್ಯ ಕೃತ್ಯ ನೋಡಿ ಬೆಚ್ಚಿಬಿದ್ದ ಪೋಲಿಸರು

ಲಖನೌ ಮೂಲದ ಯುವಕನನ್ನು ಹನಿಟ್ರ್ಯಾಪ್ ಮಾಡಿ 30 ಲಕ್ಷ ಸುಲಿಗೆ ಮಾಡುತ್ತಿದ್ದ ಮಹಿಳೆಯನ್ನು ಉತ್ತರ ಪ್ರದೇಶದ ಬಾಂದಾ ಎಂಬಲ್ಲಿ ಬಂಧಿಸಲಾಗಿದೆ. ಈ ಮಹಿಳೆಯ ಹೆಸರು ಜಾಹೀಲಾ ಬೇಗಂ. ಈಕೆ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾಳೆ. ಜಾಹೀಲಾ ಒಬ್ಬ ವ್ಯಕ್ತಿಯನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದು ಇದೇ ಮೊದಲೇನಲ್ಲ. ಈ ವರ್ಷದ ಮೇ ತಿಂಗಳ ಆರಂಭದಲ್ಲಿ ಈಕೆ ಒಬ್ಬ ವ್ಯಾಪಾರಿಯನ್ನೂ ಖೆಡ್ಡಾ ತೋಡಿದ್ದಳು.

ಮಾಧ್ಯಮ ವರದಿಗಳ ಪ್ರಕಾರ, ಜಾಹೀಲಾ ಬೇಗಂ ಉದ್ಯಮಿ ಶೈಲೇಶ್ ಜಾಡಿಯಾ ಎಂಬ ವ್ಯಕ್ತಿಯನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ದೈ ಹಿ ಕ ಸಂ ಬಂ ಧ ವನ್ನು ಬೆಳೆಸಿದ್ದಳು. ಅಷ್ಟೇ ಅಲ್ಲದೆ ಅದರ ವಿಡಿಯೋ ಕೂಡ ಮಾಡಿದ್ದಳು. ಇದಾದ ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಬ್ಲಾಕ್ ಮೇಲ್ ಮಾಡುವ ಮೂಲಕ ಉದ್ಯಮಿಯಿಂದ ಸುಮಾರು 50 ಲಕ್ಷ ರೂ. ವಸೂಲಿ ಮಾಡಿದ್ದಳು. ಅಷ್ಟಕ್ಕೂ ತೃಪ್ತಳಾಗದೆ ಈಕೆ ಮತ್ತೆ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಳು. ಪದೇ ಪದೇ ಬಂದ ಬೆದರಿಕೆಗಳಿಂದ ಬೇಸತ್ತು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಜಾಹಿಲಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ಜೈಲಿನಿಂದ ಹೊರಬಂದ ನಂತರ ಮತ್ತೆ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಳೆ.

ಜೈಲಿನಿಂದ ಹೊರಬಂದ ನಂತರ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯಳಾದಳು. ಈ ವೇಳೆ ಲಕ್ನೋ ನಿವಾಸಿ ಇರ್ಸಾದ್ ಶಹಾದ್ ಖಾನ್ ಎಂಬಾತನನ್ನು ಬಲೆಗೆ ಬೀಳಿಸಿದ್ದಾನೆ. ಇರ್ಸಾದ್ ಶಹಾದ್ ಖಾನ್ ನೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದಳು. ಇದಾದ ನಂತರ ಇಬ್ಬರೂ ಪರಸ್ಪರ ಹತ್ತಿರವಾದರು. ನಂತರ, ಮಹಿಳೆ ಶಹಾದ್‌ನೊಂದಿಗೆ ಈ ಹಿಂದೆ ಬೇರೆ ಗಂಡಸರೊಂದಿಗೆ ಮಾಡಿದ್ದ ಕೆಲಸವನ್ನೇ ಮಾಡಿದ್ದಳು. ದೈ ಹಿ ಕ ಸಂ‌ಬಂ‌ಧ ಬೆಳೆಸಿ ವಿಡಿಯೋ ಮಾಡಿದ್ದಾಳೆ. ನಂತರ ಖಾನ್‌ಗೂ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದಳು. ಆತನಿಂದ ಸುಮಾರು 30 ಲಕ್ಷ ರೂ. ವಸೂಲಿ ಮಾಡಿದ್ದಾಳೆ. ಕೆಲವು ವರದಿಗಳಲ್ಲಿ ಈ ಮೊತ್ತ 40 ಲಕ್ಷ ಎಂದು ನಮೂದಿಸಲಾಗಿದೆ. ಮಹಿಳೆಯ ಬ್ಲ್ಯಾಕ್‌ಮೇಲಿಂಗ್‌ನಿಂದ ಬೇಸತ್ತ ಯುವಕ ಲಕ್ನೋದಲ್ಲಿ ಪ್ರಕರಣ ದಾಖಲಿಸಿದ್ದಾನೆ. ಕೆಲವು ಮಾಧ್ಯಮಗಳಲ್ಲಿ ಬಂಧಿತ ಮಹಿಳೆಯ ಹೆಸರನ್ನು ರಾಹಿಲಾ ಬೇಗಂ ಎಂದು ಉಲ್ಲೇಖಿಸಲಾಗಿದೆ.

ಈ ಮಹಿಳೆ ತನ್ನ ಪ್ರೀತಿಯ ಬಲೆಯಲ್ಲಿ ಬುಲಿಯನ್ ವ್ಯಾಪಾರಿಯನ್ನು ಸಿಲುಕಿಸಿ ಸಾಕಷ್ಟು ಹಣವನ್ನು ಸುಲಿಗೆ ಮಾಡಿದ್ದಾಳೆ. ಇದರಿಂದ ಆತ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಈಕೆಯನ್ನ ಜೈಲಿಗೂ ಕಳುಹಿಸಲಾಗಿತ್ತು. ಇದೀಗ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದ್ದು, ಫೇಸ್ ಬುಕ್ ಮೂಲಕ ಯುವಕನ ಜತೆ ಸಂಪರ್ಕ ಹೊಂದಿದ್ದಳು. ಸಂಪರ್ಕದ ನಂತರ, ಇಬ್ಬರೂ ತುಂಬಾ ಹತ್ತಿರವಾದರು. ನಂತರ ಯುವಕನಿಗೆ ಯುವತಿಯ ವಿವಾಹವಾಗಿರುವುದು ಗೊತ್ತಾಯಿತು. ಮಹಿಳೆಯು ಯುವಕನ ಆಕ್ಷೇಪಾರ್ಹ ಚಿತ್ರಗಳು ಮತ್ತು ಫೋಟೋಗಳನ್ನು ಹೊಂದಿದ್ದು, ಈ ಕಾರಣದಿಂದಾಗಿ ಆಕೆಯ ಖಾತೆಗೆ 30 ರಿಂದ 40 ಲಕ್ಷ ರೂಪಾಯಿಗಳನ್ನು ಜಮಾ ಮಾಡಲಾಗಿದೆ, ಅದರ ಪುರಾವೆಗಳು ಸಹ ಸಿಕ್ಕಿವೆ. ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಬಾಂದಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ನಿವಾಸ್ ಮಿಶ್ರಾ ಹೇಳಿದ್ದಾರೆ. ಈ ವೇಳೆ ಆರೋಪಿ ಮಹಿಳೆ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅಭಿನಂದನ್ ತಿಳಿಸಿದ್ದಾರೆ.

Advertisement
Share this on...