ಶ್ರದ್ಧಾ ಹ-ತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಅಫ್ತಾಬ್‌ನ ಹಿಂಸಾತ್ಮಕ ವರ್ತನೆಗೆ ಸಂಬಂಧಿಸಿದಂತೆ ಶ್ರದ್ಧಾ ಎರಡು ವರ್ಷಗಳ ಹಿಂದೆಯೇ ಮುಂಬೈನ ತುಲಿಂಜ್ ಪೊಲೀಸ್ ಠಾಣೆಯಲ್ಲಿ ಅಫ್ತಾಬ್ ವಿರುದ್ಧ ದೂರು ದಾಖಲಿಸಿದ್ದಳು ಎಂದು ಹೇಳಲಾಗುತ್ತಿದೆ. ತನಗೆ ಅಫ್ತಾಬ್ ನಿಂದ ಜೀವ ಬೆದರಿಕೆ ಇದೆ ಎಂದು ಶ್ರದ್ಧಾ ದೂರಿನಲ್ಲಿ ತಿಳಿಸಿದ್ದಳು. ನವೆಂಬರ್ 23, 2020 ರಂದು ಮುಂಬೈನ ಪಾಲ್ಘರ್ ಪೊಲೀಸರಿಗೆ ಶ್ರದ್ಧಾ ಪತ್ರ ಬರೆದಿದ್ದಳು ಎಂದು ಮತ್ತೊಂದು ಮಾಧ್ಯಮ ವರದಿ ಹೇಳುತ್ತಿದೆ.
ಇದರಲ್ಲಿ ಆಕೆ ತನ್ನ ಲಿವ್ ಇನ್ ಪಾರ್ಟನರ್ ಅಫ್ತಾಬ್ ತನಗೆ ಥಳಿಸುತ್ತಿದ್ದ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ, ಅಫ್ತಾಬ್ ತನ್ನನ್ನು ಹೊಡೆದು ತುಂಡಾಗಿ ಕತ್ತರಿಸಿ ಹಾಕ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಳು. ಬುಧವಾರ (ನವೆಂಬರ್ 23, 2022) ಬಹಿರಂಗಪಡಿಸಿದ ಮಾಹಿತಿಯಲ್ಲಿ, ಶ್ರದ್ಧಾ ಅಫ್ತಾಬ್‌ನ ನಡವಳಿಕೆಯನ್ನು ಆತನ ಕುಟುಂಬ ಸದಸ್ಯರಿಗೂ ತಿಳಿಸಿದ್ದಳು, ಆದರೆ ಅವರು ಏನನ್ನೂ ಮಾಡಲಿಲ್ಲ ಎಂದು ಹೇಳಲಾಗುತ್ತಿದೆ. ದೆಹಲಿ ಪೊಲೀಸರು ಶ್ರದ್ಧಾಳ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಲು ಇಂದು ಮುಂಬೈಗೆ ತೆರಳಿದ್ದಾರೆ.
ಅಫ್ತಾಬ್ ವಿರುದ್ಧ ನೀಡಿದ ದೂರಿನಲ್ಲಿ ಶ್ರದ್ಧಾ, “ಆತನ ನನ್ನನ್ನು ಬೈಯುತ್ತಾನೆ ಮತ್ತು ಹಲ್ಲೆ ಮಾಡುತ್ತಾನೆ. ಇಂದು ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ. ನನ್ನ ದೇಹವನ್ನು ತುಂಡು ತುಂಡು ಮಾಡುವುದಾಗಿ ಬೆದರಿಕೆ ಹಾಕುತ್ತಾನೆ. ಕಳೆದ 6 ತಿಂಗಳಿಂದ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಅವನು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾನೆ, ಆದ್ದರಿಂದ ನಾನು ಪೊಲೀಸರ ಬಳಿ ಹೋಗಲೂ ಸಾಧ್ಯವಾಗಲಿಲ್ಲ. ಅವನು ನನ್ನನ್ನು ಹೊಡೆದು ಕೊಲ್ಲಲು ಪ್ರಯತ್ನಿಸುತ್ತಿದ್ದನೆಂದು ಅವನ ಕುಟುಂಬ ಸದಸ್ಯರಿಗೂ ತಿಳಿದಿದೆ” ಎಂದು ಬರೆದಿದ್ದಳು.
ಪತ್ರದಲ್ಲಿ ಶೃದ್ಧಾ ಮುಂದೆ ಬರೆಯುತ್ತ, “ನಾನು ಇನ್ನು ಮುಂದೆ ಅವನೊಂದಿಗೆ ಇರಲು ಬಯಸುವುದಿಲ್ಲ. ಅವನು ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾನೆ, ಹಾಗಾಗಿ ನನ್ನ ಜೊತೆ ಏನಾದರೂ ದುರ್ಘಟನೆ ಸಂಭವಿಸಿದರೆ ಅದಕ್ಕೆ ಆತನೇ ಜಬ್ದಾರನಾಗಿರುತ್ತಾನೆ” ಎಂದು ಬರೆದಿದ್ದಳು.
ಅದೇ ಸಮಯದಲ್ಲಿ, ಕಿರುತೆರೆ ನಟ ಇಮ್ರಾನ್ ನಜೀರ್ ಖಾನ್ ಅವರು ಶ್ರದ್ಧಾ ಹ-ತ್ಯೆ ಪ್ರಕರಣದಲ್ಲಿ ಅಫ್ತಾಬ್ ಅಮೀನ್ ಪೂನಾವಾಲಾ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಇಮ್ರಾನ್ ಟಿವಿ ಸಂದರ್ಶನವೊಂದರಲ್ಲಿ ಅಫ್ತಾಬ್ ಮಾದಕ ವ್ಯಸನಿಯಾಗಿದ್ದು, ಶ್ರದ್ಧಾ ಆತನನ್ನ ಈ ಚಟದಿಂದ ಮುಕ್ತಗೊಳಿಸಬೇಕೆಂದು ಬಯಸಿದ್ದಳು. ಶ್ರದ್ಧಾ ನನಗೆ ಆಗಲೇ ಪರಿಚಯ ಇತ್ತು. ತನ್ನ ಲಿವ್ ಇನ್ ಪಾರ್ಟನರ್ ಅಫ್ತಾಬ್ ಮಾದಕ ವ್ಯಸನಿಯಾಗಿದ್ದಾನೆ ಎಂದು ಶ್ರದ್ಧಾ ಎರಡು ವರ್ಷಗಳ ಹಿಂದೆ ಹೇಳಿದ್ದಳು. ಸುಮಾರು ಎರಡು-ಮೂರು ವರ್ಷಗಳಿಂದ ಡ್ರಗ್ಸ್ ಸೇವಿಸುತ್ತಿದ್ದ ಎಂಬುದು ಶೃದ್ಧಾಗೆ ತಿಳಿದಿತ್ತು ಎಂದಿದ್ದಾರೆ.
ನಟನ ಪ್ರಕಾರ, ಮುಂಬೈನಿಂದ ಕಾಶ್ಮೀರದಲ್ಲಿರುವ ತನ್ನ ಮನೆಗೆ ತೆರಳಿದ್ದ ಕಾರಣ ಮುಂಬೈನಲ್ಲಿ ಏನಾಗುತ್ತಿದೆ ಎಂದು ಅವರಿಗೆ ತಿಳಿದಿರಲಿಲ್ಲ. ಅವರು ಸೋಮವಾರ (ನವೆಂಬರ್ 21, 2022) ಬೆಳಿಗ್ಗೆ ಮುಂಬೈಗೆ ಹಿಂತಿರುಗಿದಾಗ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಶ್ರದ್ಧಾ ವಾಕರ್ ಸಾವಿನ ಸುದ್ದಿಯನ್ನು ನೋಡಿದಾಗ, ಅವರು ಆಘಾತಕ್ಕೊಳಗಾದರು. ಅವರಿಗೆ ಶ್ರದ್ಧಾ ವಾಕರ್ ಸಾವಿನ ಸುದ್ದಿ ಆಘಾತ ತಂದಿದೆ ಎಂದು ತಿಳಿಸಿದ್ದಾರೆ.
ಇಂಡಿಯಾ ಟಿವಿ ಜೊತೆ ಮಾತನಾಡಿದ ನಜೀರ್ ಖಾನ್, “ನನಗೆ ಶ್ರದ್ಧಾ ಪರಿಚಯವಿತ್ತು. ನಾನು ಅವರನ್ನು ಫೆಬ್ರವರಿ 2021 ರಲ್ಲಿ ಮುಂಬೈನಲ್ಲಿ ಸ್ವಚ್ಛತಾ ಅಭಿಯಾನದ ಸಂದರ್ಭದಲ್ಲಿ ಭೇಟಿಯಾದೆ. ನರಕಯಾತನೆಯ ಜೀವನ ನಡೆಸುತ್ತಿದ್ದೇನೆ ಎಂದು ಆಕೆ ಹೇಳಿದ್ದಳು. ಆಕೆಯ ಗೆಳೆಯ ಅಫ್ತಾಬ್ ಆಕೆಗೆ ಚಿತ್ರಹಿಂಸೆ ನೀಡುತ್ತಾನೆ ಎಂದು ಹೇಳಿದ್ದಳು. ಶ್ರದ್ಧಾ ಹೇಳುವಂತೆ ಆಕೆಯ ಗೆಳೆಯ ಮಾದಕ ವ್ಯಸನಿಯಾಗಿದ್ದ. ಸುಮಾರು 2-3 ವರ್ಷಗಳಿಂದ ಡ್ರಗ್ಸ್ ಸೇವಿಸುತ್ತಿದ್ದ. ಅಫ್ತಾಬ್ ಡ್ರಗ್ಸ್ ಅನ್ನು ತ್ಯಜಿಸಬೇಕೆಂದು ಆಕೆ ಬಯಸಿದ್ದಳು, ಇದಕ್ಕಾಗಿ ಆಕೆ ನನ್ನನ್ನು ಪುನರ್ವಸತಿ ಕೇಂದ್ರದ ಬಗ್ಗೆ ಮಾಹಿತಿ ಕೇಳಿದ್ದಳು. ನಾನು ಕೂಡ ಶ್ರದ್ಧಾಗೆ ಸಹಾಯ ಮಾಡುವ ಭರವಸೆ ನೀಡಿದ್ದೆ, ಆದರೆ ದೆಹಲಿಗೆ ತೆರಳಿದ ನಂತರ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.
ಇಮ್ರಾನ್ ನಜೀರ್ ಖಾನ್ ಅವರು ‘ಹಮಾರಿ ಬಹು ಸಿಲ್ಕ್’, ‘ಗಠಬಂಧನ್’ ‘ಮರಿಯಮ್ ಖಾನ್ ರಿಪೋರ್ಟಿಂಗ್ ಲೈವ್’, ‘ಮೇಡಂ ಸರ್ ಔರ್ ಅಲ್ಲಾದೀನ್: ನಾಮ್ ತೋ ಸುನಾ ಹೋಗಾ’ ಮುಂತಾದ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಮುಂಬೈನ ಶ್ರದ್ಧಾ ವಾಕರ್ ದೆಹಲಿಯ ಫ್ಲಾಟ್‌ನಲ್ಲಿ ಅಫ್ತಾಬ್ ಜೊತೆ ಲಿವ್ ಇನ್ ಪಾರ್ಟನರ್ ಆಗಿ ವಾಸಿಸುತ್ತಿದ್ದರು ಎಂಬುದು ಗಮನಾರ್ಹ. ಅಫ್ತಾಬ್ ಮೇ 18 ರಂದು ಶ್ರದ್ಧಾಳನ್ನು ಕ-ತ್ತು ಹಿಸುಕಿ ಕೊಂದಿದ್ದ. ಇದಾದ ಬಳಿಕ ಶ್ರದ್ಧಾಳ ಮೃ-ತದೇ-ಹವನ್ನು 35 ತುಂ-ಡುಗಳಾಗಿ ಕ-ತ್ತ-ರಿಸಿದ್ದಾನೆ. ಅವುಗಳನ್ನು ಇಡಲು ಫ್ರಿಡ್ಜ್ ಖರೀದಿಸಿದ್ದ. 18 ದಿನಗಳಲ್ಲಿ ಆತ ದೇ-ಹದ ತುಂ-ಡುಗಳನ್ನು ಒಂದೊಂದಾಗಿ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದ.