ನಮಸ್ತೆ ಸ್ನೇಹಿತರೆ, ತುಂಬಾ ಕಷ್ಟದಿಂದ ಬಂದು ಸಿನಿಮಾ ರಂಗದಲ್ಲಿ ಸಾಧನೆಯ ಶಿಖರವೇರಿದ ಅದೆಷ್ಟೋ ನಟರು ನಮ್ಮ ಕಣ್ಣ ಮುಂದೆ ಬರುತ್ತಾರೆ.. ಈ ನಟ ಕೂಡ ತನಗೆ ಎಷ್ಟೇ ಕಷ್ಟವಿದ್ದರೂ.. ನಟನೆಯ ಮೇಲೆ ಆಸಕ್ತಿ ಕಳೆದು ಕೊಳ್ಳಲಿಲ್ಲ. ಮುಂದೊಂದು ದಿನ ತಾನೊಬ್ಬ ದೊಡ್ಡ ನಟನಾಗಬೇಕು, ತನ್ನ ನಟನೆಯನ್ನು ನೋಡಿ ಎಲ್ಲರೂ ಚಪ್ಪಾಳೆ ತಟ್ಟಬೇಕು ಎಂಬ ಕನಸು ಕಂಡರು. ಅತಿಯಾದ ಕಷ್ಟಗಳ ನಡುವೆಯೂ ತನ್ನ ಕನಸನ್ನ ನನಸಾಗಿಸಿಕೊಂಡರು.. ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುವ ನಟ ನಾಸರ್. ಚಿಕ್ಕ ವಯಸ್ಸಿನಲ್ಲಿ ತುಂಬಾ ಕಷ್ಟಗಳನ್ನು ನೋಡಿದ ನಾಸರ್ ನಾನೊಬ್ಬ ದೊಡ್ಡ ನಟನಾಗಬೇಕೆಂದು ಕನಸು ಕಂಡರು..
ನಟನಾಗುವ ಆಸೆ ಹೊತ್ತು ನಾಸರ್ ಮದ್ರಾಸ್ ನ ಒಂದು ಆ್ಯಕ್ಟಿಂಗ್ ಸ್ಕೂಲ್ ಗೆ ಸೇರಿದರು. ಈ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ನಾಸರ್ ಅವರ ಸೀನಿಯರ್ ಆಗಿದ್ದರು.. ತಮ್ಮ ಮನೆಯಲ್ಲಿ ಅನುಭವಿಸುತ್ತಿದ್ದ ಕಷ್ಟಗಳನ್ನು ನೋಡಲಾಗದೇ ನಾಸರ್ ತಾಜ್ ಹೋಟೆಲ್ ನಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರ ಕೆಲಸ ಮಾಡಿಕೊಂಡೆ ಆ್ಯಕ್ಟಿಂಗ್ ಕಲಿತರು.. ಸಿನಿಮಾದಲ್ಲಿ ನಟಿಸುವ ಅವಕಾಶಗಳು ಪಡೆಯಲು ನಾಸರ್ ಹಲವಾರು ನಿರ್ದೇಶಕರ ಬಳಿ ಅಲೆದರು. ಆದರೆ ಯಾರು ಕೂಡ ಅವಕಾಶಗಳನ್ನು ನೀಡಲಿಲ್ಲ.. ನಂತರ ಏಗೋ ಕೊನೆಗೆ ನಾಸರ್ ಅವರಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಸಿಗುತ್ತದೆ.
ನಂತರದಲ್ಲಿ ನಾಸರ್ ಅವರಿಗೆ ತಮಿಳಿನ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ರವರ ಪರಿಚಯವಾಗುತ್ತದೆ.. ಕೆ ಬಾಲಚಂದರ್ ರವರು ತಮ್ಮ ಸಿನಿಮಾ ಒಂದರಲ್ಲಿ ನಾಸರ್ ಅವರಿಗೆ ನಟಿಸಲು ಅವಕಾಶ ನೀಡುತ್ತಾರೆ. ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಿಸಿಕೊಂಡ ನಾಸರ್ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟರಾಗಿ ಬೆಳೆದರು.. ನಂತರ ನಿರ್ದೇಶನ, ನಿರ್ಮಾಣಕ್ಕು ಇಳಿದ ನಾಸರ್ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದರು. ಆದರೆ ಆ ಚಿತ್ರಗಳು ನಿರೀಕ್ಷಿತ ಯಶಸ್ಸು ಕಾಣದೇ.. ನಾಸರ್ ಕೈ ಖಾಲಿ ಮಾಡಿಕೊಂಡರು. ಮತ್ತೆ ಅಭಿನಯದ ಕಡೆಗೆ ಪೂರ್ತಿ ವಾಲಿದ ನಾಸರ್ ಅವರು ಈ ದಿನ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಅದ್ಬುತ ಪೋಷಕ ನಟರಾಗಿ ಬೆಳೆದಿದ್ದಾರೆ..