“ಮುಸ್ಲಿಂ ಮಹಿಳೆಯರು ಬಾಳೆಹಣ್ಣನ್ನ ಮುಟ್ಟಲೂಬಾರದು, ಹಾಗೇನಾದರೂ ಮಾಡದ್ರೆ….” ಮುಫ್ತಿ ಮೌಲಾನಾಗಳ 10 ಚಿತ್ರ ವಿಚಿತ್ರ ಫತ್ವಾಗಳು

in Kannada News/News/ಕನ್ನಡ ಮಾಹಿತಿ 1,044 views

ಇಂದು ನಾವು ಪ್ರಪಂಚದಾದ್ಯಂತದ ಮುಸ್ಲಿಂ ವಿದ್ವಾಂಸರು ಹೊರಡಿಸುವ ಚಿತ್ರ ವಿಚಿತ್ರ ಫತ್ವಾಗಳ ಬಗ್ಗೆ ನಿಮಗೆ ತಿಳಿಸಲಿದ್ದು ಅವುಗಳ ಬಗ್ಗೆ ಕೇಳಿದರೆ ನೀವು ಕೂಡ ಆಶ್ಚರ್ಯಚಕಿತರಾಗುತ್ತೀರಿ. ಈ ಫತ್ವಾಗಳು ಮುಸ್ಲಿಂ ಮಹಿಳೆಯರ ವಿರುದ್ಧ ಹೊರಡಿಸಲಾಗಿದೆ. ಈ ಫತ್ವಾಗಳ ಬಗ್ಗೆ ಓದಿದ ಮೇಲೆ ಹೆಂಗಸರು ತಮ್ಮ ಮೇಲೆ ಯಾವಾಗ ಬೇಕಾದರೂ ಹಕ್ಕು ಚಲಾಯಿಸುವ ಬೊಂಬೆಗಳಾ..? ಎಂದು ನಿಮಗೂ ಅನ್ನಿಸುತ್ತೆ.

Advertisement

ಇಂದು ಸರ್ಕಾರಗಳು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತವೆ, ಇಂದಿಗೂ ಒಂದು ನಿರ್ದಿಷ್ಟ ಸಮಾಜಕ್ಕೆ ಸೇರಿದ ಎಲ್ಲಾ ಮಹಿಳೆಯರು ದ ಬ್ಬಾ ಳಿಕೆಯ ಸಂಪ್ರದಾಯಗಳಿಂದ ಹೊರಬರಲು ಧ್ವನಿ ಎತ್ತುತ್ತಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಈ ಸಮಾಜದಲ್ಲಿ ಹೆಣ್ಣಿನ ಮೇಲೆ ಇಂತಹ ನಿರ್ಬಂಧಗಳನ್ನು ಹೇರುವ ಸಲುವಾಗಿ ಇಸ್ಲಾಂ ಜೊತೆಗೆ ತಳುಕು ಹಾಕಿ ಫತ್ವಾ ಹೊರಡಿಸಲಾಗುತ್ತದೆ. ಅಂತಹ ಕೆಲವು ಚಿತ್ರ ವಿಚಿತ್ರ ಫತ್ವಾಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.

ಈ ಫತ್ವಾಗಳಿಗೂ ಮುನ್ನ ‘ಫತ್ವಾ’ ಅಂದರೇನು ಅನ್ನೋದನ್ನ ಮೊದಲು ತಿಳಿದುಕೊಳ್ಳೋಣ

ಇಸ್ಲಾಂಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಕುರಾನ್ ಮತ್ತು ಹದೀಸ್ ಅಡಿಯಲ್ಲಿ ಹೊರಡಿಸಲಾದ ಆದೇಶವನ್ನು ಫತ್ವಾ ಎಂದು ಕರೆಯಲಾಗುತ್ತದೆ. ಮುಫ್ತಿ ಮಾತ್ರ ಫತ್ವಾ ಹೊರಡಿಸಬಹುದು ಮತ್ತು ಮುಫ್ತಿಯಾಗಲು, ಷರಿಯಾ ಕಾನೂನು, ಕುರಾನ್ ಮತ್ತು ಹದೀಸ್ ಅನ್ನು ಅಧ್ಯಯನ ಮಾಡುವುದು ಅವಶ್ಯಕ. ಇಂತಹ ಹಲವು ವಿವಾದಾತ್ಮಕ ಫತ್ವಾಗಳು ಮುಸ್ಲಿಂ ಮಹಿಳೆಯರ ವಿರುದ್ಧ ಬಂದಿವೆ.

ವಾಸ್ತವವಾಗಿ, ಮುಸ್ಲಿಂ ಮಹಿಳೆಯರ ಕೆಲಸಗಳನ್ನ ಗೈರ್ ಮಜಹಬಿ (ಅನ್ಯಮತೀಯ) ಎಂದು ಕರೆಯುವ ಮೂಲಕ ಅವರನ್ನ ಸಮುದಾಯದಿಂದ ಹೊರಹಾಕವ ಮಾತೂ ಇದೆ. ಅಂತಹ ಪರಿಸ್ಥಿತಿಯಲ್ಲಿ, ಇಂತಹ ಫತ್ವಾಗಳು ಅಥವಾ ಫರಮಾನುಗಳು ಜನರನ್ನು ಯೋಚಿಸುವಂತೆ ಮಾಡುತ್ತದೆ, ಅಷ್ಟಕ್ಕೂ, ಮಹಿಳೆಯರ ಬಗ್ಗೆ ಇಂತಹನಿ ರ್ಧಾರ ತೆಗೆದುಕೊಳ್ಳಲು ಇವರು ಯಾರು?

ಜಗತ್ತಿನಲ್ಲಿ ಹೊರಡಿಸಲಾದ ಚಿತ್ರ ವಿಚಿತ್ರ ಫತ್ವಾಗಳು

1. ಆಫೀಸಿನಲ್ಲಿ ನಿಮ್ಮ ಪುರುಷ ಸಹೋದ್ಯೋಗಿಗಳಿಗೆ ಬ್ರೆಸ್ಟ್ ಫೀಡಿಂಗ್ ಮಾಡಿಸಿ

2007 ರಲ್ಲಿ, ಈಜಿಪ್ಟ್‌ನ ಅಲ್ ಅಜರ್ ಯೂನಿವರ್ಸಿಟಿಯ ಡಿಪಾರ್ಟ್ಮೆಂಟ್ ಆಫ್ ಹದೀಸ್‌ನ ಮುಖ್ಯಸ್ಥರು ವಿಚಿತ್ರವಾದ ಫತ್ವಾವನ್ನು ಹೊರಡಿಸಿದ್ದರು. ಆಫೀಸಿನಲ್ಲಿ ಕೆಲಸ ಮಾಡುವ ಮಹಿಳೆಯರು ಅವರು ತಮ್ಮ ಪುರುಷ ಸಹೋದ್ಯೋಗಿಗಳಿಗೆ ತಮ್ಮ ಬ್ರೆಸ್ಟ್ ಫೀಡೀಂಗ್ (ಎದೆ ಹಾಲನ್ನು) ಮಾಡಿಸಬೇಕು. ಫತ್ವಾ ಪ್ರಕಾರ ಆಫೀಸಿನಲ್ಲಿ ಕೆಲಸ ಮಾಡುವ ಪುರುಷ ಸಹೋದ್ಯೋಗಿಗಳಿಗೆ ದಿನಕ್ಕೆ ಕನಿಷ್ಠ ಐದು ಬಾರಿ ಬ್ರೆಸ್ಟ್ ಫೀಡಿಂಗ್ ಮಾಡಿಸಬೇಕು. ಆಫೀಸಿನಲ್ಲಿ ಮುಸ್ಲಿಂ ಮಹಿಳೆಯರು ಹೀಗೆ ಮಾಡುವುದರಿಂದ ಅವರ ನಡುವೆ ತಾಯಿ-ಮಗನ ಬಾಂಧವ್ಯ ಏರ್ಪಡುತ್ತದೆ. ಈ ಕಾರಣದಿಂದಾಗಿ, ಅವರು ಪರಸ್ಪರ ದೈಹಿಕ ಸಂಬಂಧವನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಫತ್ವಾದ ಅರ್ಥವಾಗಿತ್ತು.

2. ಈ ಫತ್ವಾ ಬಗ್ಗೆಯಂತೂ ಸೋಶಿಯಲ್ ಮೀಡಿಯಾಗಳಲ್ಲಿ ಜನ ಟ್ರೋಲ್ ಮಾಡಿದ್ದೆ ಮಾಡಿದ್ದು

ಇಸ್ತಾನ್‌ಬುಲ್‌ನಲ್ಲಿ, ಮುಖಾಹಿದ್ ಸಿಹಾದ್ ಹಾಲ್ ಅಶ್ಲೀಲ ಕೃತ್ಯಗಳನ್ನು (ಹಸ್ತಮೈತುನ) ಮಾಡುವ ವ್ಯಕ್ತಿ ತನ್ನ ಕೈಯಿಂದ ಗರ್ಭಿಣಿಯಾಗುತ್ತಾನೆ ಮತ್ತು ಅವನ ಕೈ ತನ್ನ ಹಕ್ಕುಗಳನ್ನು ಕೇಳುತ್ತದೆ ಎಂದು ಫತ್ವಾ ಹೊರಡಿಸುವ ಮೂಲಕ ಎಚ್ಚರಿಕೆ ನೀಡಿತು. ಈ ಫತ್ವಾವನ್ನು ನೋಡಿ ಸೋಶಿಯಲ್ ಮೀಡಿಯಾ ಯೂಸರ್ ಗಳು ಸಾಕಷ್ಟು ಅಪಹಾಸ್ಯ ಮಾಡಿದ್ದರು.

3. ಮುಸ್ಲಿಂ ಮಹಿಳೆಯರು ಬಾಳೆಹಣ್ಣು ಮತ್ತು ಸೌತೆಕಾಯಿಗಳನ್ನು ಮುಟ್ಟಬಾರದು

ಸೌತೆಕಾಯಿ ಮತ್ತು ಬಾಳೆಹಣ್ಣನ್ನು ಮುಟ್ಟದಂತೆ ಮುಸ್ಲಿಂ ಮಹಿಳೆಯರಿಗೆ ಸಲಹೆ ನೀಡಿ ಇಂಗ್ಲೆಂಡ್‌ನ ಮೌಲಾನಾ ಫತ್ವಾ ಹೊರಡಿಸಿದ್ದರು. ಅವುಗಳನ್ನು ಸ್ಪರ್ಶಿಸುವುದರಿಂದ ಮಹಿಳೆಯರ ಮನಸ್ಸಿನಲ್ಲಿ ಕೊಳಕು ಆಲೋಚನೆಗಳು ಬರುತ್ತವೆ, ಆದ್ದರಿಂದ ಈ ಹಣ್ಣುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಹಿಳೆಯರಿಗೆ ನೀಡಬೇಕು ಎಂದು ಮೌಲಾನಾ ಹೇಳಿದ್ದರು.

4. ಬಫೆ ನಲ್ಲಿಟ್ಟ ಊಟ ಹರಾಮ್

2014 ರಲ್ಲಿ, ಸೌದಿ ಅರೇಬಿಯಾದಲ್ಲಿ ಸ್ಟ್ಯಾಂಡಿಂಗ್ ಕಮಿಟಿ ಆಫ್ ಕೌನ್ಸಿಲ್ ಆಫ್ ಸೀನಿಯರ್ ಸ್ಕಾಲರ್ಸ್, ಶೇಖ್ ಸಲೇಹ್ ಬಿನ್ ಅಬ್ದುಲ್ಲಾ ಅಲ್ ಫೌಜಾನ್, ರೆಸ್ಟೋರೆಂಟ್‌ಗಳಲ್ಲಿ ಬಫೆ ನಲ್ಲಿನ ಊಟ ತಿನ್ನುವುದು ಹರಾಮ್ ಆಗಿದೆ, ಏಕೆಂದರೆ ಅದು ಆಹಾರದ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ, ಆದ್ದರಿಂದ ಅದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದಿದ್ದರು.

5. ಸಮೋಸಾ ಇಸ್ಲಾಂನ ವಿರುದ್ಧ

2011 ರಲ್ಲಿ ಸೊಮಾಲಿಯಾವನ್ನು ಆಕ್ರಮಿಸಿಕೊಂಡಿದ್ದ ಅಲ್ ಶಬಾಬ್ ಎಂಬ ಭ ಯೋ ತ್ಪಾ ದಕ ಸಂಘಟನೆಯು ಜನಪ್ರಿಯ ಸ್ನ್ಯಾಕ್ಸ್ ಆದ ಸಮೋಸಾಗಳ ವಿರುದ್ಧವೂ ಫತ್ವಾ ಹೊರಡಿಸಿದ ಸೊಮಾಲಿಯಾದಲ್ಲಿ ಸಮೋಸಾವನ್ನ ನಿಷೇಧಿಸಲಾಯಿತು. ಸಮೋಸ ತಿನ್ನುವುದು ಇಸ್ಲಾಂನಲ್ಲಿ ಹರಾಮ್ ಎಂದು ಅದು ಹೇಳಿತ್ತು. ಅಲ್ ಶಬಾಬ್ ಮೂರು ಬದಿ ಹೊಂದಿರುವ ಸಮೋಸಾವನ್ನು ಕ್ರಿಶ್ಚಿಯನ್ ಹೋಲಿ ಟ್ರಿನಿಟಿಯ ಸಂಕೇತಕ್ಕೆ ಹೋಲಿಸಿದ್ದರು.

6. ಕುಂಬಳಕಾಯಿ ಹಿಂದೂ ಮತ್ತು ಟೊಮೆಟೊ ಕ್ರಿಶ್ಚಿಯನ್

ಈ ಫತ್ವಾಗಳು ತರಕಾರಿಗಳನ್ನೂ ಬಿಟ್ಟಿಲ್ಲ ನೋಡಿ, ಇಸ್ಲಾಮಿಕ್ ಅಸೋಸಿಯೇಷನ್ ​​ಆಫ್ ಈಜಿಪ್ಟ್ ಕೂಡ ತರಕಾರಿಗಳನ್ನು ಧರ್ಮವಾಗಿ ವಿಂಗಡಿಸಿದೆ. ಈ ಫತ್ವಾ ಮೂಲಕ ಸಲಾಫಿ ಶೇಖ್ ಟೊಮೆಟೊವನ್ನು ಕ್ರಿಶ್ಚಿಯನ್ ಧರ್ಮ ಎಂದು ಹೇಳಿದ್ದರು. ಟೊಮೆಟೊವನ್ನು ಎರಡು ಭಾಗಗಳಾಗಿ ಕತ್ತರಿಸುವುದರಿಂದ ಅದು ಅಡ್ಡ ಆಕಾರವನ್ನು ನೀಡುತ್ತದೆ, ಇದು ಮುಸ್ಲಿಮರಿಗೆ ಸರಿಯಲ್ಲ ಎಂದು ಅದು ಹೇಳಿದ್ದರು. ಇದಾದ ನಂತರ ಸೌತೆಕಾಯಿ ಮತ್ತು ಬಾಳೆಹಣ್ಣಿನ ಬಗ್ಗೆಯೂ ಫತ್ವಾ ಹೊರಡಿಸಿ ಹಿಂದೂ ಧರ್ಮದವರು ಮಾತ್ರ ಸೀತಾಫಲ ತಿನ್ನಬೇಕೇ ಹೊರತು ಮುಸಲ್ಮಾನರಲ್ಲ ಎಂದು ಸಲಹೆ ನೀಡಿದ್ದರು.

7. ಮುಸ್ಲಿಂ ಮಹಿಳೆಯರು ಕುರ್ಚಿಯ ಮೇಲೆ ಕುಳಿತುಕೊಳ್ಳಬಾರದು

2014ರಲ್ಲಿ ಭ ಯೋ ತ್ಪಾ ದಕ ಸಂಘಟನೆ ಐಸಿಸ್ ಫತ್ವಾ ಹೊರಡಿಸಿತ್ತು. ಮಹಿಳೆಯರು ಕುರ್ಚಿ ಮೇಲೆ ಕುಳಿತುಕೊಳ್ಳುವುದರ ಬಗ್ಗೆಯೂ ಫತ್ವಾ ಹೊರಡಿಸಿದ್ದರು. ಮಹಿಳೆಯರು ಕುರ್ಚಿಯ ಮೇಲೆ ಕುಳಿತುಕೊಳ್ಳಬಾರದು, ಯಾಕಂದ್ರೆ ಮಹಿಳೆಯರು ಈ ರೀತಿ ಕುರ್ಚಿಯ ಮೇಲೆ ಕುಳಿತೆ ಅದು ಪುರುಷರನ್ನು ಪ್ರಚೋದಿಸುತ್ತದೆ ಎಂದು ಐಸಿಸ್ ಹೇಳಿತ್ತು.

8. ಹಸಿದ ಗಂಡ ತನ್ನ ಹೆಂಡತಿಯನ್ನು ಕ ಟ್ ಮಾಡಿ ತಿನ್ನಬಹುದು

ಈ ಫತ್ವಾದಲ್ಲಂತೂ ಕ್ರೌರ್ಯ ತುಂಬಿ ತುಳುಕುತ್ತಿದೆ. ಸೌದಿ ಅರೇಬಿಯಾದ ಶಾಹಿ ಇಮಾಮ್ ಮುಫ್ತಿ ಶೇಖ್ ಅಬ್ದುಲ್ ಅಜೀಜ್ ಈ ಫತ್ವಾ ಹೊರಡಿಸಿದ್ದರು, ಇದರಿಂದಾಗಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಗಂಡನಿಗೆ ಹಸಿವಾದರೆ ಹೆಂಡತಿಯ ಅಂಗಾಂಗಗಳನ್ನು ಕ ತ್ತ ರಿ ಸಿ ತಿನ್ನಬಹುದು ಎಂದು ಫತ್ವಾ ನೀಡಿದ್ದರು. ಹೆಂಡತಿಯ ದೇಹವು ಗಂಡನ ಹಸಿವನ್ನು ನೀಗಿಸಲು ಸಾಧ್ಯವಾದರೆ, ಅದು ಆ ಹೆಂಡತಿಗೆ ಹೆಮ್ಮೆಯ ವಿಷಯ ಎಂದು ಹೇಳಿದ್ದರು.

9. ಫುಟ್ಬಾಲ್ ಪಂದ್ಯಗಳನ್ನು ನೋಡುವ ಬಗ್ಗೆ ನಿಷೇಧ

2015 ರಲ್ಲಿ ಸೌದಿ ಅರೇಬಿಯಾದಲ್ಲಿ ಒಬ್ಬ ಉಲೇಮಾ ಮಹಿಳೆಯರು ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವುದರ ವಿರುದ್ಧ ಫತ್ವಾ ಹೊರಡಿಸಿದ್ದರು. ಮಹಿಳೆಯರು ಫುಟ್ಬಾಲ್ ಆಟಗಾರರ ಬರಿಯ ಕಾಲುಗಳನ್ನು ನೋಡುತ್ತಾರೆಯೇ ಹೊರತು ಫುಟ್ಬಾಲ್ ಪಂದ್ಯಗಳನ್ನಲ್ಲ ಎಂದಿದ್ದರು.

10. ಸೆ-ಕ್ಸ್ ಮಾಡುವಾಗ ದೇಹದ ಎಲ್ಲಾ ಬಟ್ಟೆಗಳನ್ನು ತೆಗೆದರೆ ಅದು ತಲಾಕ್‌ಗೆ ಸಮ

2006 ರಲ್ಲಿ, ಅಲ್-ಅಝರ್ ವಿಶ್ವವಿದ್ಯಾನಿಲಯದ ಷರಿಯಾ ಅಥವಾ ಇಸ್ಲಾಮಿಕ್ ಕಾನೂನು ವಿಭಾಗದ ಮಾಜಿ ಡೀನ್ ರಶಾದ್ ಹಸನ್ ಖಲೀಲ್ ಅವರು ಯಾವುದೇ ದಂಪತಿಗಳು ಸಂ ಭೋ ಗಿಸಲು ತಮ್ಮ ದೇಹದಿಂದ ಎಲ್ಲಾ ಬಟ್ಟೆಗಳನ್ನು ತೆಗೆದುಹಾಕಬಾರದು ಎಂದಿದ್ದರು. ಬೆ ತ್ತ ಲೆ ಯಾಗಿ ಲೈಂಗಿಕ ಸಂ ಭೋ ಗದಲ್ಲಿ ತೊಡಗುವವರ ವಿವಾಹಗಳನ್ನು ರದ್ದುಗೊಳಿಸುವ ಫತ್ವಾವನ್ನು ಅವರು ಹೊರಡಿಸಿದ್ದರು.

Advertisement
Share this on...