1200 ವರ್ಷಗಳ ಹಿಂದೆ ಮುಳುಗಿ ಹೋಗಿದ್ದ ರಹಸ್ಯಮಯ ಊರು ಪತ್ತೆ; ಅನೇಕ ಪ್ರಾಚೀನ ಮೂರ್ತಿಗಳ ಅವಶೇಷಗಳನ್ನು ಕಂಡು ದಂಗಾದ ವಿಜ್ಞಾನಿಗಳು..!

in Uncategorized 13,667 views

ಪ್ರಕೃತಿಯ ವಿಸ್ಮಯವನ್ನ ಮನುಷ್ಯನಿಂದ ಭೇದಿಸಲು ಸಾಧ್ಯವಿಲ್ಲ.‌ ಪ್ರಕೃತಿಯ ವಿರುದ್ಧ ತೆರಳುವ ಯಾವ ದುಸ್ಸಾಹಸಕ್ಕೆ ಕೈ ಹಾಕಿದರೂ ಅದು ಫಲಿಸಲು ಸಾಧ್ಯವೇ ಇಲ್ಲ. ತನ್ನ ಮಡಿಲಲ್ಲಿ ಪ್ರಕೃತಿಯು ಸಾಕಷ್ಟು ರಹಸ್ಯಗಳನ್ನ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದ್ದು ಅಂತಹ ರಹಸ್ಯಗಳ ಬಗ್ಗೆ ಮಾನವ ತಲುಪಲು ಅಸಾಧ್ಯದ ಮಾತೇ ಸರಿ. ಆದರೂ ಮನುಷ್ಯ ತಾನು ಇಂತಹ ಅಗೋಚರ, ವಿಸ್ಮಯ ರಹಸ್ಯಗಳ‌ ಕುರಿತಾಗಿ ಅಧ್ಯಯನ, ಶೋಧ ನಡೆಸುತ್ತಲೇ ಇರುತ್ತಾನೆ. ಹೌದು ಇದೀಗ ಅಂತಹ ರಹಸ್ಯಮಯ ಜಾಗವೊಂದು ಪತ್ತೆಯಾಗಿದ್ದು ಜಗತ್ತನ್ನೇ ಅಚ್ಚರಿಗೊಳಪಡಿಸಿದೆ.

Advertisement

ನಿಮಗೆ ನಂಬಲು ಅಸಾಧ್ಯವೆನಿಸಬಹುದು, 1200 ವರ್ಷಗಳ ಹಿಂದೆ ಕಣ್ಮರೆಯಾಗಿ ಹೋಗಿದ್ದ ಈಜಿಪ್ಟಿನ ಒಂದು ದೊಡ್ಡ ಊರು ಸಮುದ್ರದಲ್ಲಿ ಮುಳುಗಡೆಯಾಗಿ ಅಲ್ಲೊಂದು ಊರಿತ್ತು ಅನ್ನೋ ನಿಶಾನೆಯನ್ನೇ ಅಳಿಸಿ ಹಾಕಿತ್ತು. ಪುರಾತತ್ವ ವಿಜ್ಞಾನಿಗಳ ಸಾಕಷ್ಟು ಪರಿಶ್ರಮದ ಬಳಿಕ ಭೂಮಧ್ಯೆ ಸಾಗರದ ಗರ್ಭದಲ್ಲಿ ಮಲಗಿದ್ದ 1200 ವರ್ಷಗಳಷ್ಟು ಹಳೆಯದಾದ ಪುರಾತನ ನಗರವಾಗಿದ್ದ ಹೆರಾಕಲೊಯೋನ್ ನ ಅವಶೇಷಗಳನ್ನು ಜಗತ್ತಿನೆದುರು ತರಲು ಸಫಲರಾಗಿದ್ದಾರೆ.

ಸಮುದ್ರದಾಳದಲ್ಲಿ ನಗರವೊಂದು ಮುಳುಗಡೆಯಾಗಿದೆ ಅನ್ನೋದರ ಕುರಿತಾಗಿ 2000 ನೆ ಇಸವಿಯಲ್ಲಿಯೇ ಫ್ರಾನ್ಸ್ ಪುರಾತತ್ವವಾದಿ ಮಾಹಿತಿಯನ್ನ ನೀಡಿದ್ದರು. ಇದಾದ ಬಳಿಕದ ಹಲವಾರು ವರ್ಷಗಳ ಕಠಿಣ ಪರಿಶ್ರಮದ ಬಳಿಕ ಕೊನೆಗೂ ಸಮುದ್ರದಾಳದಲ್ಲಿ ಮುಳುಗಿ ಹೋಗಿದ್ದ ಊರಿನ ಒಂದೊಂದೇ ಅವಶೇಷಗಳು ಸಿಗಲಾರಂಭಿಸಿವೆ. ಈಜಿಪ್ಟಿನ ಐತಿಹಾಸಿಕ ಕಥೆಗಳಲ್ಲಿ ಈ ಬಂದರು ನಗರಿನ ಕುರಿತಾಗಿ ಹಾಗು ಈ ಊರಿನ‌ ಸೌಂದರ್ಯದ ಕುರಿತು ಸಾಕಷ್ಟು ವರ್ಣನೆಗಳು ಕಾಣಸಿಗುತ್ತವೆ ಆದರೆ 1200 ವರ್ಷಗಳ ಹಿಂದೆಯೇ ಇದರ ಅಸ್ತಿತ್ವೇ ಸಮುದ್ರದಲ್ಲಿ ಮುಳುಗಿಯಾಗಿತ್ತು. ಸಮುದ್ರರಾಜ ಈ ನಗರವನ್ನ ಆಪೋಷಣ ತೆಗೆದುಕೊಂಡು ಬಿಟ್ಟಿದ್ದ.

ಆದರೆ ಇದೀಗ ಸಮುದ್ರದ ಒಳಗೆ ಸಿಕ್ಕ ಈ ಊರಿನ ಹುಡುಕಾಟ ನಡೆಸಿದಾಗ ಭಿನ್ನ ವಿಭಿನ್ನ ವಿಷಯಗಳ ಸತ್ಯಾಸತ್ಯತೆ ಹೊರಬರಲಿವೆ. ಸುದ್ದಿ ಮೂಲಗಳ ಪ್ರಕಾರ ಅಬೂಕರ್ ಘಾಟಿಯ ಅಲೆಕ್ಸೋಂಡ್ರಿಯಾ ದ ಹತ್ತಿರದ ಭೂಮಧ್ಯೆ ಸಾಗರದ ಸಮುದ್ರದಾಳದ 30 ಅಡಿ ಆಳದಲ್ಲಿ ಶೋಧ ನಡೆಸಿದಾಗ ಈ ನಗರದ ಅವಶೇಷಗಳು ಸಿಗಲಾರಂಭಿಸಿವೆ. ಇದರಿಂದ ಅರ್ಥವಾಗುವ ವಿಷಯವೆಂದರೆ ಬಹುಶಃ ಸಮುದ್ರದಲ್ಲಿ ಸುನಾಮಿ ಬಂದಿದ್ದ ಕಾರಣವಾಗಿ ಈ ನಗರಪ್ರದೇಶ ಸಮುದ್ರದಾಳದಲ್ಲಿ ಮುಳುಗಿ ಹೋಗಿತ್ತು ಅನಿಸುತ್ತೆ.

ಈ ಕುರಿತಾಗಿ ಇದೀಗ ತಯಾರಾಗುತ್ತಿರುವ ಡಾಕ್ಯುಮೆಂಟರಿ ಫಿಲಂ ಒಂದರಲ್ಲಿ ಸತತ 13 ವರ್ಷಗಳ ಉತ್ಖನನ (Excavation) ನ ಬಳಿಕ ಈ ಊರಿನ ಸಭ್ಯತೆ, ಸಂಸ್ಕೃತಿ, ಪ್ರಾಚೀನತೆಯ ಅನಾವರಣ ಮಾಡಲಾಗಿದೆ. ಸಮುದ್ರದಲ್ಲಿ ಸಿಗುತ್ತಿರುವ ಅವಶೇಷಗಳು, ವಸ್ತುಗಳನ್ನ ನೋಡಿದ ಪುರಾತತ್ವ ವಿಜ್ಞಾನಿಗಳು ಈ ಊರಿ ಕೇವಲ ಅಂತರಾಷ್ಟ್ರೀಯ ಮಟ್ಟದ ವ್ಯಾಪಾರ ವಹಿವಾಟಿನ ಕೇಂದ್ರವಷ್ಟೇ ಅಲ್ಲದೆ ಧಾರ್ಮಿಕವಾಗಿಯೂ ಮಹತ್ವಪೂರ್ಣವಾದ ನಗರವಾಗಿತ್ತು ಎಂದು ಹೇಳುತ್ತಿದ್ದಾರೆ.

ಮಹಾಭಾರತದ ಕೃಷ್ಣನ ದ್ವಾರಕಾ ನಗರ ಪತ್ತೆ ಮಾಡಿದ್ದ ವಿಜ್ಞಾನಿಗಳು:

ಮಹಾಭಾರತದ ಮೌಸಲ ಪರ್ವದಲ್ಲಿ ದ್ವಾರಕಾ ನಗರಿಯ ವರ್ಣನೆಯಿದೆ. ಅಲ್ಲದೇ ಈ ಕೃಷ್ಣಪುರಿ, ಪ್ರಭಾಸ ಸಮುದ್ರದಲ್ಲಿ ಮುಳುಗಿ ಅಂತ್ಯಕಂಡ ಉಲ್ಲೇಖವೂ ಇದೆ. ಮೌಸಲ ಪರ್ವ ಮತ್ತು ಮಹಾಭಾರತ ಕುರಿತಾದ ಇನ್ನಿತರ ಪುಸ್ತಕಗಳು ವಿದ್ವಾಂಸರ ಗಮನ ಸೆಳೆಯಲು ಯಶಸ್ವಿಯಾಗಿದ್ದವು. ಈ ನಗರಿ ಈಗಿನ ಗುಜರಾತ್ ಅಥವಾ ಮಹಾರಾಷ್ಟ್ರದಲ್ಲಿದ್ದರಬಹುದೆಂಬ ಎಣಿಕೆಗಳೂ ಸೃಷ್ಟಿಯಾಗಿದ್ದವು. ಸಮುದ್ರತಳ ಸೇರಿದ ದ್ವಾರಕೆಯನ್ನು ಹುಡುಕಬೇಕೆಂಬ ಪುರಾತತ್ವ ಇಲಾಖೆಯ ಮಹೋನ್ನತ ಆಸೆಯಿಂದ ಪುರಾತತ್ವ ಇಲಾಖೆ ಮತ್ತು ರಾಷ್ಟ್ರೀಯ ಸಮುದ್ರವಿಜ್ಞಾನ ಇಲಾಖೆ 1955 ರಿಂದ ದ್ವಾರಕೆಯ ಸಂಶೋಧನೆಯಲ್ಲಿ ನಿರತವಾದವು.

ಅದರಲ್ಲೂ ಈ ಪ್ರಯತ್ನದಲ್ಲಿ ಮೇಲುಗೈ ಸಾಧಿಸಿದ್ದು ಭಾರತದ ಖ್ಯಾತ ಪುರಾತತ್ವ ಶಾಸ್ತ್ರಜ್ಞ, ಕನ್ನಡಿಗ ಡಾ. ಶಿಕಾರಿಪುರ ರಂಗನಾಥ್ ರಾವ್ ನೇತೃತ್ವದ ತಂಡ. ದ್ವಾರಕಾಧೀಶ ಮಂದಿರದ ಉಪಸ್ಥಿತಿಯಿಂದ ಪ್ರೇರಣೆಗೊಂಡಿದ್ದ ಮೇಲಿನ ಎರಡೂ ಇಲಾಖೆಗಳು ‘ಸಾಗರ ಪುರಾತತ್ವಶಾಸ್ತ್ರ ಘಟಕ’ವನ್ನು ಸ್ಥಾಪಿಸಿದವು. ಅತ್ಯುತ್ತಮ ಈಜುಗಾರರು, ಫೋಟ್ರೋಗ್ರಾಫರ್‌ಗಳು, ಸಂಶೋಧಕರನ್ನೊಳಗೊಂಡ ತಂಡದ ನೇತೃತ್ವ ರಾವ್ ಅವರ ಹೆಗಲಿಗೇರಿತು.

ಪ್ರತಿಧ್ವನಿ ಸಂಕೇತ ಸಾಧನಗಳು, ನೀರೊಳಗಿನ ಲೋಹ ಶೋಧಕಗಳು ಇತ್ಯಾದಿ ಉಪಕರಣಗಳು ಈ ತಂಡಕ್ಕೆ ಆಸರೆಯಾದವು. ಸಮುದ್ರ ಶೋಧದಲ್ಲಿ ಇವರಿಗೆ ಸಿಕ್ಕ ವಸ್ತುಗಳನ್ನು ಕಾರ್ಬನ್ ಡೇಟಿಂಗ್, ಥರ್ಮೋ ಲ್ಯೂಮಿನಿನ್ಸ್ ಮತ್ತು ಇನ್ನಿತರ ಆಧುನಿಕ ತಂತ್ರಜ್ಞಾನಗಳಿಂದ ಪರೀಕ್ಷಿಸಲಾಯಿತು. 1983 ಮತ್ತು 1990ರಲ್ಲಿ ಅರ್ಧ ಮೈಲು ವ್ಯಾಪ್ತಿಯ ಪುರಾಣಪ್ರಸಿದ್ಧ ದ್ವಾರಕಾನಗರಿಯ ಪತ್ತೆಯಾಯಿತು. ಹೀಗೆ ದೊರೆತ ಅವಶೇಷಗಳು, ಇಂದಿನ ದ್ವಾರಕಾ ನಗರವನ್ನು ತಾಕುವ ಸಮುದ್ರದ ಒಡಲಲ್ಲೇ ಇವೆ.

Advertisement
Share this on...