ಭಾರತದಲ್ಲಿ ಗೋವಿಗೆ ತಾಯಿಯ ಸ್ಥಾನಮಾನವಿದೆ. ಹಿಂದುಗಳು ಗೋವನ್ನ ಪೂಜಿಸುತ್ತಾರೆ ಮತ್ತು ಸೇವೆ ಮಾಡುತ್ತಾರೆ. ಇದೇ ಗೋಮಾತೆ ಈಗ ದೇವರ ರೂಪದಲ್ಲಿ ಬಂದು 13 ವಾರಗಳ ಹೆಣ್ಣು ಮಗುವಿನ ಜೀವವನ್ನು ಉಳಿಸಿದೆ. ವಾಸ್ತವವಾಗಿ ವಿಷಯವು ಸೌಥ್ ಈಸ್ಟ್ ಲಂಡನ್ನಲ್ಲಿರುವ ಸಿಡ್ಕಪ್ ನಗರದದ್ದಾಗಿದೆ. ಇಲ್ಲಿ ಜನಿಸಿದ ಹೆಣ್ಣು ಮಗುವಿನ ಹೃದಯದಲ್ಲಿ ಸಮಸ್ಯೆ ಇತ್ತು. ಮಗುವಿನ ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತ ಸಂಚಾರವಾಗುವ ಟ್ಯೂಬ್ನಲ್ಲಿ ಸೋರಿಕೆ ಪ್ರಾರಂಭವಾಯಿತು.
ಈ ರೋಗದಿದಿಂದಾಗಿ ಮಗುವಿಗೆ ಉಸಿರಾಟದ ತೊಂದರೆ ಶುರುವಾಯಿತು. ಮಗು ಹಾಲು ಕುಡಿಯುವುದನ್ನು ಸಹ ನಿಲ್ಲಿಸಿತು. ಇಂತಹ ಪರಿಸ್ಥಿತಿಯಲ್ಲಿ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸಿದ್ದಾರೆ. ಪರೀಕ್ಷೆಯಲ್ಲಿ, ಮಗುವಿಗೆ ಮಿಕ್ಸ್ಡ್ ಮಿಟ್ರಲ್ ವಾಲ್ವ್ ಡಿಸೀಸ್ ಇದೆ ಎಂದು ವೈದ್ಯರು ಕಂಡುಕೊಂಡರು. ಶೀಘ್ರವಾಗಿ ಚಿಕಿತ್ಸೆ ನೀಡದಿದ್ದರೆ, ಮಗು ಸಾಯಬಹುದು ಎಂದು ತಿಳಿಸಿದರು.
ಮಿಕ್ಸ್ಡ್ ಮಿಟ್ರಲ್ ವಾಲ್ವ್ ಎಂತಹ ಕಾಯಿಲೆಯೆಂದರೆ ಇದರಿಂದಾಗಿ ಮಿಟ್ರಲ್ ವಾಲ್ವ್ ಹಾಳಾಗಿಬಿಡುತ್ತದೆ. ಈ ಕಾರಣದಿಂದಾಗಿ ಆಮ್ಲಜನಕಯುಕ್ತ ರಕ್ತವು ಶ್ವಾಸಕೋಶದ ಮೂಲಕ ಇಡೀ ದೇಹಕ್ಕೆ ಹೋಗುತ್ತದೆ. ಇದರಿಂದ ತೊಂದರೆಯಾದರೆ ದೇಹದ ಇತರ ಭಾಗಗಳೂ ಹಾಳಾಗಲು ಆರಂಭಿಸುತ್ತವೆ. ಇದನ್ನ ಫಿಕ್ಸ್ ಮಾಡಲು ಹೆಚ್ಚಾಗಿ ಓಪನ್ ಹಾರ್ಟ್ ಸರ್ಜರಿ ಮಾಡಲಾಗುತ್ತದೆ. ಆದರೆ 13 ವಾರಗಳ ಮಗುವಿಗೆ ಈ ಸರ್ಜರಿ ಮಾಡುವುದು ವೈದ್ಯರಿಗೆ ತುಂಬಾ ಕಷ್ಟಕರವಾಗಿತ್ತು.
ಹಸುವಿನ ಟಿಶ್ಯೂನಿಂದಾದ ವಾಲ್ವ್ನ್ನ ಅಳವಡಿಸಿದ ವೈದ್ಯರು
ಅಂತಹ ಪರಿಸ್ಥಿತಿಯಲ್ಲಿ ಗೋಮಾತೆ ಮಗುವಿಗೆ ದೇವರ ರೂಪದಲ್ಲಿ ಬಂದಿತು. ಸರ್ಜರಿ ನಡೆಸಿದ ಪೀಡಿಯಾಟ್ರಿಕ್ ಕಾರ್ಡಿಯಾಲಾಜಿಸ್ಟ್ ಡಾಕ್ಟರ್ ಆರೋನ್ ಬೆಲ್ ಅವರು ಓಪನ್ ಹಾರ್ಟ್ ಸರ್ಜರಿ ಮಾಡಲು ಹಸುವಿನ ಟಿಶ್ಯೂವನ್ನ (ಅಂಗಾಂಶವನ್ನು) ಬಳಸಿದರು. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಹಸುವಿನ ಹೃದಯದ ವಾಲ್ವ್ ನಿಂದ ಮೆಲೊಡಿ ವಾಲ್ವ್ ಮಾಡುವ ತಂತ್ರವನ್ನು ಕಳೆದ ಎರಡು ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತಿದೆ. ಆದರೆ, ಇಷ್ಟು ಚಿಕ್ಕ ಮಗುವಿನ ಮೇಲೆ ಇದುವರೆಗೆ ಯಾವುದೇ ಪ್ರಯೋಗ ನಡೆದಿರಲಿಲ್ಲ.
ಮಗುವಿನ ಸ್ಥಿತಿ ಚಿಂತಾಜನಕವಾಗಿರುವುದನ್ನು ಕಂಡ ವೈದ್ಯರು ಈ ಆಪರೇಷನ್ ಮಾಡಲು ನಿರ್ಧರಿಸಿದರು. ಓಪನ್ ಹಾರ್ಟ್ ಸರ್ಜರಿ ಮಾಡಿದ ನಂತರ, ಮಗುವಿನ ಹೃದಯದಲ್ಲಿ ಹೊಸ ವಾಲ್ವ್ ನ್ನ ಹಾಕಲಾಯಿತು. ಹಸುವಿನ ಟಿಶ್ಯೂ (ಅಂಗಾಂಶವೂ) ಪವಾಡ ಮಾಡಿತು. ಆಪರೇಷನ್ ಯಶಸ್ವಿಯಾಗಿದ್ದು ಮಾತ್ರವಲ್ಲದೇ ಮಗು ಕೂಡ ಚೇತರಿಸಿಕೊಂಡು 8 ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ.
6 ಗಂಟೆಗಳ ಕಾಲ ನಡೆದ ಆಪರೇಷನ್
ಮಗುವಿನ ಈ ಆಪರೇಷನ್ ಸುಮಾರು 6 ಗಂಟೆಗಳ ಕಾಲ ನಡೆಯಿತು. ಆಪರೇಷನ್ ನಲ್ಲಿ, ವೈದ್ಯರು ಮೊದಲು ಮಗುವಿನ ಹೃದಯದಿಂದ ದೋಷಯುಕ್ತ ವಾಲ್ವ್ನ್ನ ತೆಗೆದುಹಾಕಿದರು. ನಂತರ ಹಸುವಿನ ಅಂಗಾಂಶದಿಂದ ಮಾಡಿದ ಹೊಸ ಮೆಲೋಡಿ ವಾಲ್ವ್ ಅನ್ನು ಹಾಕಿದರು. ಇದಕ್ಕಾಗಿ ಅವರು ತೆಳುವಾದ ಬಲೂನ್ ತರಹದ ವಸ್ತುವನ್ನು ಬಳಸಿದರು. ಹೊಸ ವಾಲ್ವ್ನ ಸ್ಥಳದಲ್ಲಿ ಫಿಕ್ಸ್ ಮಾಡಿದಾಗ ಬಲೂನ್ ಅನ್ನು ತೆಗೆದುಹಾಕಲಾಯಿತು. ಇದಾದ ಬಳಿಕ ಮಗುವಿನ ದೇಹದ ಎಲ್ಲಾ ಭಾಗಗಳಲ್ಲಿ ರಕ್ತ ಸಂಚಾರ ಆರಂಭವಾಗಿದೆ. ಅದೇ ಸಮಯದಲ್ಲಿ ಆಕ್ಸಿಜನ್ ಸಪ್ಲೈ ಕೂಡ ಪ್ರಾರಂಭವಾಯಿತು.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಭಾರತದಲ್ಲಿ ಪ್ರತಿ ವರ್ಷ ಸುಮಾರು ಎರಡು ಲಕ್ಷ ಮಕ್ಕಳು ಹೃದ್ರೋಗದಿಂದ ಜನಿಸುತ್ತಿದ್ದಾರೆ. ಈ ಪೈಕಿ 25ರಿಂದ 30 ಸಾವಿರ ಮಕ್ಕಳಿಗೆ ಹಾರ್ಟ್ ಸರ್ಜರಿ ಮಾಡಬೇಕಾಗುತ್ತಿದೆ.