ಲಾಕ್‌ಡೌನ್: ಸಿಕ್ಕಾಪಟ್ಟೆ ಟ್ರೋಲ್ ಆದ ರಾಜ್ಯ ಸರ್ಕಾರ ಹಾಗು ಮುಖ್ಯಮಂತ್ರಿ ಯಡಿಯೂರಪ್ಪ

in Kannada News/News 160 views

ರಾಜ್ಯದಲ್ಲಿ ಕೊರೋನಾವೈರಸ್ ದಿನದಿಂದ ದಿನಕ್ಕೆ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಲೇ ಇದ್ದು ಆಕ್ಸಿಜನ್ ಸಮಸ್ಯೆ ಉಂಟಾಗಿ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಕರ್ನಾಟಕ ಸರ್ಕಾರ ಕಳೆದ 1 ವಾರದಿಂದ ಜನತಾ ಕರ್ಫ್ಯೂವನ್ನು ಘೋಷಣೆ ಮಾಡಿತ್ತು. ಜನತಾ ಕರ್ಫ್ಯೂ ಎಂದರೆ ಬೆಳಗಿನ ಜಾವ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿ, ಹೋಟೆಲ್ ಗಳಲ್ಲಿ ಪಾರ್ಸಲ್ ಮತ್ತು ಬಾರ್ ಅಂಗಡಿಗಳಲ್ಲಿ ಪಾರ್ಸೆಲ್ ಸೌಲಭ್ಯ ಇರುವುದು.

Advertisement

ಇದೀಗ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿರುವ ಕಾರಣ ಯಡಿಯೂರಪ್ಪನವರು ಜನತಾ ಕರ್ಫ್ಯೂ ಬದಲು ಮೇ 10ರಿಂದ  ಅಂದರೆ ಇಂದಿನಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಹೊಸ ನಿಯಮಗಳನ್ನು ಬಿಡುಗಡೆ ಮಾಡಿದರು. ಸಂಪೂರ್ಣ ಎಂದರೆ ಯಾವುದೇ ರೀತಿಯ ಓಡಾಟ ಇರುವುದಿಲ್ಲ ದಿನನಿತ್ಯದ ಬಳಕೆಯ ವಸ್ತುಗಳನ್ನು ಬಿಟ್ಟು ಬೇರೆ ಯಾವುದೇ ರೀತಿಯ ಅಂಗಡಿ ಮುಗ್ಗಟ್ಟುಗಳು ತೆಗೆಯುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮಾನ್ಯ ಯಡಿಯೂರಪ್ಪನವರ ಸರ್ಕಾರ ಈ ಹಿಂದೆ ಇದ್ದ ಜನತಾ ಕರ್ಫ್ಯೂ ನಿಯಮಗಳನ್ನೇ ಸಂಪೂರ್ಣ ಎಂದು ಘೋಷಿಸಿ ಬಿಡುಗಡೆ ಮಾಡಿದೆ. ಇದನ್ನು ಕಂಡ ಮೇಲೆ ಕರ್ನಾಟಕದ ಟ್ರೋಲ್ ಪೇಜ್ ಗಳು ಯಡಿಯೂರಪ್ಪನವರನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿವೆ. ಯಾವ ಯಾವ ರೀತಿ ಯಡಿಯೂರಪ್ಪನವರನ್ನು ಟ್ರೋಲ್ ಮಾಡಿದ್ದಾರೆ ಎಂಬುದು ಮುಂದೆ ಇದೆ ನೋಡಿ..

1.

ಯಡಿಯೂರಪ್ಪನವರ ಲಾಕ್ ಡೌನ್ ನಿಯಮವನ್ನು ಕಟ್ಟಡವಿಲ್ಲದ ಗೇಟ್ ಗೆ ಹೋಲಿಸಿ ನಿಮ್ಮ ನಿಯಮಗಳು ವ್ಯರ್ಥ ಎಂದು ಈ ಟ್ರೋಲ್ ಮಾಡಲಾಗಿದೆ.

2.

“ಇದು ಲಾಕ್ ಡೌನ್ ತರಾನೆ ಆದ್ರೆ ಲಾಕ್ ಡೌನ್ ಅಲ್ಲ” ಎಂಬ ಕನಸುಗಾರ ಮಾದರಿಯ ಟ್ರೋಲ್ ಮಾಡಿ ಯಡಿಯೂರಪ್ಪನವರ ಹೊಸ ಲಾಕ್ ಡೌನ್ ನಿಯಮವನ್ನು ಕಾಲೆಳೆದಿದ್ದಾರೆ ಈ ಅಡ್ಮಿನ್.

3.

ಮುಖ್ಯಮಂತ್ರಿ ಯಡಿಯೂರಪ್ಪನವರಿಗಿಂತ ಶಾಲಾ ಕಾಲೇಜಿನ ತರಗತಿಯ ಲೀಡರ್ ಚೆನ್ನಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಎಂದು ಯಡಿಯೂರಪ್ಪನವರು ತೆಗೆದುಕೊಂಡಿರುವ ನಿರ್ಧಾರ ತೀರಾ ಕಳಪೆ ಮಟ್ಟದ್ದು ಎಂದು ಈ ಅಡ್ಮಿನ್ ಟ್ರೋಲ್ ಮಾಡಿದ್ದಾರೆ.

4.

ಹಾಲು ಮಾರಾಟ ಕೇಂದ್ರಗಳು ಸಂಜೆ ಆರರವರೆಗೂ ತೆಗೆದಿರುತ್ತವೆ ಎಂದು ಯಡಿಯೂರಪ್ಪನವರು ಹೊಸ ನಿಯಮದಲ್ಲಿ ಹೇಳಿದ್ದಾರೆ. ಆದರೆ ಜನ ಮಾತ್ರ ಹತ್ತು ಗಂಟೆಯ ಮೇಲೆ ಮನೆಯಿಂದ ಹೊರಬರಬಾರದು ಎಂದು ಕೂಡ ಇದೇ ಯಡಿಯೂರಪ್ಪನವರು ಇದೇ ನಿಯಮದಲ್ಲಿ ಹೇಳಿದ್ದಾರೆ. ಅಂದಮೇಲೆ ಹಾಲು ಮಾರಾಟ ಕೇಂದ್ರವನ್ನು ಸಂಜೆ 6ಗಂಟೆವರೆಗೆ ತೆಗೆಯುವ ಅಗತ್ಯವೇನಿದೆ ಎಂದು ಸಾಮಾನ್ಯ ಜನ ಎದ್ದುಬಿದ್ದು ನಗುವಂತಹ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಈ ಅಡ್ಮಿನ್ ಟ್ರೋಲ್ ಮಾಡಿದ್ದಾರೆ.

5.

ಜನತಾ ಕರ್ಫ್ಯೂ ನಿಯಮಗಳಿಗೂ ಮತ್ತು ಹೊಸ ಕಠಿಣ ಲಾಕ್ ಡೌನ್ ನಿಯಮಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ಈ ಅಡ್ಮಿನ್ ತುಂಬಾ ವಿಭಿನ್ನವಾಗಿ ಟ್ರೋಲ್ ಮಾಡಿದ್ದಾರೆ.

6.

ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ಕೊಡಿಸುವುದು ಆಂಧ್ರಪ್ರದೇಶದ ಮುಖ್ಯಮಂತ್ರಿಯ ಸ್ಟೈಲ್, ಸಿಎಂ ಇನ್ಶೂರೆನ್ಸ್ ಯೋಜನೆಯಿಂದ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ಕೊಡಿಸುವುದು ತಮಿಳುನಾಡು ಮುಖ್ಯಮಂತ್ರಿಯ ಸ್ಟೈಲ್, ನಾನು ಬೇರೆ ತರನೇ ಸ್ಟೈಲ್ ಮಾಡಬೇಕಲ್ಲಾ ಎಂದು ಲಾಕ್ ಡೌನ್ ಘೋಷಿಸಿದ್ದಾರೆ ಯಡಿಯೂರಪ್ಪ ಅಂತ ಈ ಪೇಜ್ ಅಡ್ಮಿನ್ ಗೂಗ್ಲಿ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ..

7.

ಈ ಲಾಕ್ ಡೌನ್ ಒಂಥರಾ ವಿಚಿತ್ರ ಎಷ್ಟು ಬೇಕಾದ್ರೂ ಲಿಕ್ಕರ್ ಸಿಗತ್ತೆ ಆದ್ರೆ ಹಾಕ್ಕೊಳ್ಳೋಕೆ ನಿಕ್ಕರ್ ಮಾತ್ರ ಸಿಗಲ್ಲ ಎಂದು ಈ ಪೇಜ್ ಅಡ್ಮಿನ್ ಯಡಿಯೂರಪ್ಪನವರ ನಿರ್ಧಾರವನ್ನು ತುಂಬಾ ಅರ್ಥಗರ್ಭಿತವಾಗಿ ಟ್ರೋಲ್ ಮಾಡಿದ್ದಾರೆ.

ಈ ಮೇಲಿನ ಎಲ್ಲಾ ಟ್ರೋಲ್ ಪೋಸ್ಟ್ಗಳಲ್ಲಿಯೂ ಎಷ್ಟು ನಗು ತುಂಬಿದೆಯೋ ಅದರ ಹತ್ತುಪಟ್ಟು ದುಃಖ ತುಂಬಿದೆ. ಜನಸಾಮಾನ್ಯನ ಕಷ್ಟವನ್ನು ಟ್ರೋಲ್ ಮೂಲಕ ಅಡ್ಮಿನ್ ಗಳು ಪ್ರಸ್ತುತ ಪಡಿಸಿದ್ದಾರೆ. ಯಡಿಯೂರಪ್ಪನವರು ತೆಗೆದುಕೊಂಡಿರುವ ನಿರ್ಧಾರವನ್ನು ಜಾಲಾಡಿ ಪಕ್ಕದ ರಾಜ್ಯದಲ್ಲಿರುವ ಸವಲತ್ತುಗಳಿಗೂ ನಮ್ಮ ರಾಜ್ಯದಲ್ಲಿರುವ ಕೆಲಸಕ್ಕೆ ಬಾರದ ನಿಯಮಗಳಿಗೂ ಹೋಲಿಕೆ ಮಾಡಿ ಜನರಿಗೆ ಅರ್ಥೈಸುವ ಪ್ರಯತ್ನ ಮಾಡಿದ್ದಾರೆ.

Advertisement
Share this on...