ಕೊರೋನಾ ವೈರಸ್ ಬಗೆಗಿನ 2013ರ ಟ್ವೀಟ್‍ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಳೆದ 8 ವರ್ಷದ ಬಳಿಕ ಟ್ವೀಟ್ ವೈರಲ್ ಆಗುತ್ತಿದೆ. ಪ್ರತಿಯೊಬ್ಬರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ಕಳೆದ ಒಂದು ವರ್ಷದಿಂದ ಜಾಗತಿಕ ಯಾತನೆ ಹೇಳತೀರದು. ಜನಸಾಮಾನ್ಯರ ನೆಮ್ಮದಿಯ ಬದುಕೇ ಅಲ್ಲೋಲಕಲ್ಲೋಲ. ಇನ್ನು ನಮ್ಮ ಶಬ್ದಕೋಶದಲ್ಲಿ ಸಂತೋಷ, ನೆಮ್ಮದಿ ಎಂಬ ಪದಗಳು ಮಾಯವಾಗಿ ಕೊರೋನಾ ವೈರಸ್, ಸ್ಯಾನಿಟೈಸರ್, ಮಾಸ್ಕ್, ವ್ಯಾಕ್ಸಿನೇಷನ್, ಕೋವಿಡ್-19, ಸಾರ್ಸ್ ವೈರಸ್ ಎಂಬ ಪದಗಳು ಸರ್ವೇ ಸಾಮಾನ್ಯವಾಗಿದೆ. ಇನ್ನು ಎರಡನೇ ಅಲೆಗೆ ಅಕ್ಷರಶಃ ತತ್ತರಿಸುತ್ತಿರುವುದು ಭಾರತ ದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಒಂದು ವರ್ಷದಿಂದ ಎಷ್ಟೋ ರಾಷ್ಟ್ರಗಳು ಚೇತರಿಸಿಕೊಳ್ಳುತ್ತಿದ್ದರೆ ಭಾರತದ ಪರಿಸ್ಥಿತಿ ಮಾತ್ರ ಊಹಿಸಲು ಅಸಾಧ್ಯವಾದ ಕಡೆ ವಾಲುತ್ತಿದೆ. ದಿನದಿಂದ ದಿನಕ್ಕೆ ತನ್ನ ರುದ್ರನರ್ತನ ಪ್ರದರ್ಶಿಸುತ್ತಿರುವ ಕೊರೋನಾ ವೈರಸ್ ಹಿಂದೆಂದೂ ಕಂಡಿರದ ರೀತಿಯ ಚಿತ್ರಣ ನೀಡುತ್ತಿದ್ದು, ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ ಟ್ವಿಟ್ಟರ್‌ನಲ್ಲಿ ಹರಿದಾಡಿದ ಟ್ವೀಟ್‍ವೊಂದು ಇದರ ಬಗ್ಗೆ ಈ ಮೊದಲೇ ಸೂಚನೆ ಇತ್ತಾ? ಅಥವಾ ಗೊತ್ತಿದ್ದರೂ ಜಗತ್ತು ಗಂಭೀರವಾಗಿ ತೆಗೆದುಕೊಳ್ಳಲಿಲ್ಲವೇ? ಎಂಬ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಟ್ವೀಟ್‍ಗೆ ಬೇರೆ ಯಾವುದೇ ವಿವರಣೆ ಇಲ್ಲ. ಜೊತೆಗೆ ಇದು ಕೋವಿಡ್ – 19 ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಇದು ಕೊರೋನಾ ವೈರಸ್‍ಗೆ ಸಂಬಂಧಿಸಿದುದು. ಆದರೆ ಇದೀಗ ಒಂದು ವರ್ಷದಿಂದ ಇದು ಇಡೀ ಜಗತ್ತನ್ನೇ ಬಾಧಿಸುತ್ತಿದೆ. ಟ್ವಿಟ್ಟರ್‌ನಲ್ಲಿ ಒಮ್ಮೆ ಪೋಸ್ಟ್ ಮಾಡಿದ ದಿನಾಂಕ ಹಾಗೂ ವಿಷಯವನ್ನು ಎಡಿಟ್ ಮಾಡಲು ಹಾಗೂ ಹಿಂದಿನ ದಿನಾಂಕದಲ್ಲಿ ಪೋಸ್ಟ್ ಮಾಡಲು ಸಾಧ್ಯವಿಲ್ಲ ಎಂಬುದು ಮಾತ್ರ ನಿಜ.
ಇನ್ನೊಂದು ವಿಚಿತ್ರ ಎಂದರೆ ಈ 2013ರ ಪೋಸ್ಟ್‌ಗೆ 2020-21ರಲ್ಲಿ ಪ್ರತಿಕ್ರಿಯೆ ದೊರೆತಿದ್ದು, ಎಲ್ಲರೂ ಅಚ್ಚರಿಗೊಂಡಿದ್ದಾರೆ. ಇನ್ನು ಕೆಲವರು ಏನಾಗುತ್ತಿದೆ?, ಇದು ನಿಮಗೆ ಹೇಗೆ ಗೊತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಆದರೆ ಮ್ಯಾಕ್ರೋ ಅವರು 2013ರ ಪೋಸ್ಟ್‌ಗೆ 2016ರಲ್ಲಿ ಸ್ಮೈಲಿ ಇಮೋಜಿ ಹಾಕಿ ಸುಮ್ಮನಾಗಿದ್ದಾರೆ. ಕೊರೋನಾ ವೈರಸ್ 2020ಕ್ಕಿಂತಲೂ ಮೊದಲೇ ಇದ್ದರೂ ಅಥವಾ 2013ಕ್ಕಿಂತೂ ಮುಂಚೆಯೇ ಅಸ್ತಿತ್ವದಲ್ಲಿದ್ದರೂ ಅದು ಒಂದು ರೋಗದ ಸಾಮಾನ್ಯ ಹೆಸರನ್ನು ಮಾತ್ರ ಸೂಚಿಸುತ್ತದೆ ಎಂದು ತಿಳಿಯುತ್ತದೆ.
ಈ ಟ್ವೀಟ್ ಮಾಡಿದ ಬಳಿಕ ಎರಡು ವರ್ಷಗಳ ಕಾಲ ಈತ ಟ್ವಿಟ್ಟರ್ ನಲ್ಲಿ ಆ್ಯಕ್ಟಿವ್ ಆಗಿದ್ದ ಆದರೆ ಅದಾದ ನಂತರ ಈತನ ಕಥೆ ಏನಾಯಿತು ಅಂತ ಯಾರಿಗೂ ಗೊತ್ತಿಲ್ಲ. ಕೊರೋನಾ ಬಗ್ಗೆ ಟ್ವೀಟ್ ಮಾಡಿದ ಬಳಿಕ ಈತನ ಪ್ರಾಣಕ್ಕೆ ಅ-ಪಾ-ಯ-ವಾಗಿರಬಹುದು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಜನ ಮಾತನಾಡುಕೊಳ್ಳುತ್ತಿದ್ದಾರೆ.
Corona virus….its coming
— Marco (@Marco_Acortes) June 3, 2013
ಅಲ್ಲದೇ ಕೊರೋನಾ ವೈರಸ್ ಕುರಿತು ಚೀನಾ 2015ರ ಅಧ್ಯಯನವನ್ನು ಪುನಃ ಅಧ್ಯಯನಿಸಲು ಶುರು ಮಾಡಿದಾಗ ಈ ಟ್ವೀಟ್ ವೈರಲ್ ಆಗುತ್ತಿದೆ. ಚೀನಾ ಸಂಶೋಧಕರು ಹಾಗೂ ಆರೋಗ್ಯ ತಜ್ಞರು ವಿನೂತನ ರೀತಿಯ ಜೆನೆಟಿಕ್ ಅಸ್ತ್ರಗಳ ಯುಗದ ಬಗ್ಗೆ ಹೊಸ ಸಂಶೋಧನೆ ಪ್ರಸ್ತುತಪಡಿಸಿದ್ದಾರೆ. ಮಾನವನಿಗೆ ಹಾನಿಯುಂಟು ಮಾಡಬಲ್ಲಂತಹ ವೈರಸ್ ಗಳನ್ನು ಒಳಗೊಂಡ ಜೆನೆಟಿಕ್ ಅಸ್ತ್ರಗಳು ಇವು ಆಗಿರಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಶೋಧನಾ ದಾಖಲೆಯೂ 2015ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು ಎಂದು ಹೇಳಲಾಗಿದೆ.
ಇನ್ನು ದಿ ಅನ್‍ನ್ಯಾಚುರಲ್ ಒರಿಜಿನ್ ಆಫ್ ಸಾರ್ಸ್ ಆ್ಯಂಡ್ ನ್ಯೂ ಸ್ಪೆಶಿಯಸ್ ಆಫ್ ಮ್ಯಾನ್ ಮೇಡ್ ವೈರಸಸ್ ಆಫ್ ಜೆನೆಟಿಕ್ ಬಯೋವೆಪನ್ಸ್ ಎಂಬ ಸಂಶೋಧನೆಯ ಪ್ರಕಾರ ಮೂರನೇ ಮಹಾಯುದ್ದವು ಜೈವಿಕ ಸಾಧನಗಳೊಂದಿಗೆ ಹೋರಾಡುವುದಾಗಿದೆ. ಇನ್ನು ಐದು ವರ್ಷಗಳ ಹಿಂದೆಯೇ ಚೀನಾದ ವಿಜ್ಞಾನಿಗಳು ಸಾರ್ಸ್ ಕೊರೋನಾ ವೈರಸ್‍ನ ಅ-ಸ್ತ್ರ-ಗಳ ಬಗ್ಗೆ ಚರ್ಚಿಸಿದ್ದರು ಎಂದು ಹೇಳಲಾಗುತ್ತಿದೆ.