ಕಾಲವು ಸಂಪೂರ್ಣವಾಗಿ ಬದಲಾಗಿದೆ ಮತ್ತು ಕಾಲಾನಂತರದಲ್ಲಿ ಫಿಲ್ಮಿ ದುನಿಯಾ ಕೂಡ ಸಂಪೂರ್ಣವಾಗಿ ಬದಲಾಗಿದೆ. ಸಿನಿಮಾವನ್ನು ಪ್ರೀತಿಸುವ ಜನರು ಚಲನಚಿತ್ರ ಜಗತ್ತಿಗೆ ಸಂಬಂಧಿಸಿದ ಪ್ರತಿಯೊಂದು ದೊಡ್ಡ ಮತ್ತು ಸಣ್ಣ ಸುದ್ದಿ, ಗಾಸಿಪ್ ಗಳನ್ನೂ ತಿಳಿದುಕೊಳ್ಳಲು ಬಯಸುತ್ತಾರೆ.
ಆಡಿಷನ್‌ಗಳಿಂದ ಹಿಡಿದು ಚಲನಚಿತ್ರಗಳಲ್ಲಿ ನಟಿಸುವವರೆಗೆ, ಏನೇನಾಯ್ತು, ಯಾವ ನಟಿ, ನಟ ಏನು ಮಾಡಿದರು ಹೀಗೆ ಪ್ರತಿಯೊಂದು ವಿಷಯವನ್ನೂ ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗಲೂ ಕುತೂಹಲದಿಂದ ಇರುತ್ತಾರೆ. ಇಂದು, ಈ ಲೇಖನದಲ್ಲಿ, 1951 ರ ಸಮಯದಲ್ಲಿ ನಟಿಯರು ಚಲನಚಿತ್ರಗಳಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಎಷ್ಟು ಕಷ್ಟಪಡುತ್ತಿದ್ದರು ಮತ್ತು ಅವರು ಯಾವ ರೀತಿಯ ಆಡಿಷನ್‌ಗಳನ್ನು ಎದುರಿಸಬೇಕಾಯಿತು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
60 ರ ದಶಕದಲ್ಲಿ ನಿರ್ದೇಶಕರೇ ಆಡಿಷನ್ ನಡೆಸುತ್ತಿದ್ದರು
ಈಗಿನ ಸಮಯದಲ್ಲಿ ಆಡಿಷನ್ ನಡೆಸಲು ಕಾಸ್ಟಿಂಗ್ ಟೀಮ್ ಇದ್ದು, ಹಲವು ಸುತ್ತಿನ ಆಡಿಷನ್ ಇರುತ್ತವೆ ಅದರೆ 1951ರ ಕಾಲದಲ್ಲಿ ಸ್ವತಃ ನಿರ್ದೇಶಕರೇ ನಟಿಯರ ಆಡಿಷನ್ ಮಾಡುತ್ತಿದ್ದರು.
1951 ರ ಆಡಿಷನ್‌ನ ಈ ಚಿತ್ರಗಳನ್ನು ಜೇಮ್ಸ್ ಬರ್ಕ್ ಅವರು ಕ್ಲಿಕ್ ಮಾಡಿದ್ದಾರೆ, ಇದು ಪ್ರಸಿದ್ಧ ಮ್ಯಾಗಜೀನ್ ನಲ್ಲಿ ಪಬ್ಲಿಷ್ ಆಗಿತ್ತು. ಈ ಚಿತ್ರಗಳಲ್ಲಿ ಚಿತ್ರರಂಗದ ಖ್ಯಾತ ನಿರ್ದೇಶಕ ಅಬ್ದುಲ್ ರಶೀದ್ ಕರ್ದಾರ್ ಯುವತಿಯರ ಸ್ಕ್ರೀನ್ ಟೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.
ನಿರ್ದೇಶಕರ ಎದುರೇ ಸೀರೆ ಬದಲಿಸುತ್ತಿದ್ದ ಮಾಡಲ್ಸ್
ಈ ಚಿತ್ರವನ್ನು ನೋಡಿದ ನಂತರ, ಆ ದಿನಗಳಲ್ಲಿ ಯುವತಿಯರು ಮನೆಯಿಂದ ಬಟ್ಟೆ ಧರಿಸಿ ಬರುತ್ತಿರಲಿಲ್ಲ, ಬದಲಿಗೆ ಅವರು ನಿರ್ದೇಶಕರ ಮುಂದೆಯೇ ಸೀರೆಯನ್ನು ಬದಲಾಯಿಸುತ್ತಾರೆ ಎಂದು ನೀವು ಊಹಿಸಬಹುದು. ಇದರೊಂದಿಗೆ, ಯುವತಿಯರ ನಟನೆ ಮತ್ತು ಅವರ ಸಂಪೂರ್ಣ ಲುಕ್ಸ್ ನ್ನೂ ಚೆಕ್ ಮಾಡಲಾಗುತ್ತಿತ್ತು.
ಬಹಳ ಹತ್ತಿರದಿಂದ ಕೂಲಂಕಷವಾಗಿ ಪರಿಶೀಲಿಸಿ ಆಡಿಷನ್‌ಗಳನ್ನು ತೆಗೆದುಕೊಳ್ಳಲಾಗುತ್ತಿತ್ತು
ತಮ್ಮ ಚಿತ್ರದ ನಾಯಕಿಯನ್ನು ಆಯ್ಕೆ ಮಾಡಲು ನಿರ್ದೇಶಕರು ತುಂಬಾ ಹತ್ತಿರದಿಂದ ನಟನೆಯ ಜೊತೆಗೆ ಎಲ್ಲ ವಿಷಯಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಿದ್ದರು. ಆಕೆಯ ಕೂದಲಿನಿಂದ ಹಿಡಿದು ನಿರ್ದೇಶಕರು ಮಾಡಲ್ ತಮ್ಮ ಜೊತೆ ಹೇಗೆ ಸಂವಹನ ನಡೆಸುತ್ತಿದ್ದಾಳೆ ಎಂಬುದನ್ನು ನೀವು ಚಿತ್ರಗಳಲ್ಲಿ ನೋಡಬಹುದು.
ಧೈರ್ಯ ಮತ್ತು ಆತ್ಮವಿಶ್ವಾಸ ಅತ್ಯಗತ್ಯವಾಗಿತ್ತು
1951 ರಲ್ಲಿ, ಒಬ್ಬ ನಟಿ ಯಾವುದಾದರೂ ಪಾತ್ರಕ್ಕೆ ಆಯ್ಕೆಯಾದಾಗ, ಅವಳು ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವ ಧೈರ್ಯವನ್ನು ಹೊಂದಿರಬೇಕಿತ್ತು ಮತ್ತು ಅದೇ ಸಮಯದಲ್ಲಿ ಯಾವುದೇ ಸವಾಲನ್ನು ಎದುರಿಸುವ ಆತ್ಮವಿಶ್ವಾಸವನ್ನೂ ಹೊಂದಿರಬೇಕು ಎಂದು ನಿರ್ದೇಶಕರು ವಿಶೇಷ ಕಾಳಜಿ ವಹಿಸುತ್ತಿದ್ದರು. ಸೀರೆಯ ಬಳಿಕ ಪಾಶ್ಚಿಮಾತ್ಯ ಉಡುಗೆಯಲ್ಲಿ ಮಾಡಲ್ ಗಳು ನಿರ್ದೇಶಕರ ಮುಂದೆ ತುಂಬು ಆತ್ಮವಿಶ್ವಾಸದಿಂದ ನಿಂತಿರುವುದನ್ನು ಕಾಣಬಹುದು.
ಚಾನ್ಸ್ ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭದ್ದಾಗಿರಲಿಲ್ಲ
ಆಗಿನ ಕಾಲದಲ್ಲಿ ಸಿನಿಮಾಗಳಲ್ಲಿ ಪಾತ್ರ ಸಿಗುವುದು ಸುಲಭದ್ದಾಗಿತ್ತು ಎಂದು ಜನ ಅಂದುಕೊಳ್ಳಬಹುದು ಆದರೆ ಅದು ಅಷ್ಟು ಸುಲಭದ್ದಾಗಿರಲಿಲ್ಲ. ನಟಿಯರು ಆಡಿಷನ್ ಜೊತೆಗೆ ನಿರ್ದೇಶಕರಿಂದ ಹಲವು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತಿತ್ತು.
ಅನೇಕ ಹುಡುಗಿಯರು ಒಂದೇ ಬಾರಿಗೆ ಆಡಿಷನ್ ಮಾಡುತ್ತಿದ್ದರು, ಅದರಲ್ಲಿ ನಿರ್ದೇಶಕರು ಒಬ್ಬ ನಟಿಯನ್ನು ಪಾತ್ರಕ್ಕೆ ಆಯ್ಕೆ ಮಾಡುತ್ತಿದ್ದರು.
ಒಂದು ಪಾತ್ರಕ್ಕಾಗಿ ಹಲವು ಹಂತಗಳನ್ನ ಪಾರು ಮಾಡಬೇಕಿತ್ತು
ಆಡಿಷನ್‌ಗೆ ಕಾಣಿಸಿಕೊಂಡ ಹುಡುಗಿಯರು ನಿರ್ದೇಶಕರ ಪ್ಯಾರಾಮೀಟರ್ ಗಳನ್ನು ಫುಲ್‌ಫಿಲ್ ಮಾಡಬೇಕಿತ್ತು. ಅದಕ್ಕಾಗಿ ಅವರು ನಿರ್ದೇಶಕರು ಹೇಳಿದಂತೆ ಆಡಿಷನ್ ನೀಡಬೇಕಾಗುತ್ತಿತ್ತು.
ಯುವತಿಯರು ದೇಸಿ ಮತ್ತು ವೆಸ್ಟರ್ನ್ ಲುಕ್ ಎರಡರಲ್ಲೂ ಆಡಿಷನ್ ನೀಡಬೇಕಿತ್ತು. 1951 ರಲ್ಲಿ ಚಲನಚಿತ್ರಗಳಲ್ಲಿ ಪಾತ್ರವನ್ನು ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ, ಇದಕ್ಕಾಗಿ ಯುವತಿಯರು ಅನೇಕ ಹಂತಗಳನ್ನು ಪಾರು ಮಾಡಬೇಕಿತ್ತು. ಆಗ ನಿರ್ದೇಶಕರು ಎಲ್ಲವನ್ನೂ ನೋಟಿಸ್ ಮಾಡುತ್ತಿದ್ದರು