ತಾಲಿಬಾನ್ ನಾಯಕ ಯಾಸಿರ್ ಅಹ್ಮದ್ (Yasir Ahmad) ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಗೃಹ ಸಚಿವ ರಾಣಾ ಸನಾವುಲ್ಲಾ ಅಫ್ಘಾನ್ ತಾಲಿಬಾನ್ಗೆ ಬೆದರಿಕೆ ಹಾಕಿದ್ದರು ಮತ್ತು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ತನ್ನ ದಾಳಿಯನ್ನು ನಿಲ್ಲಿಸದಿದ್ದರೆ, ಪಾಕಿಸ್ತಾನವು ಅಫ್ಘಾನಿಸ್ತಾನಕ್ಕೆ ಪ್ರವೇಶಿಸಿ ಅವರನ್ನು ಮಟ್ಟ ಹಾಕುತ್ತೆ ಎಂದು ಹೇಳಿದರು. ಇದಕ್ಕೆ ಪ್ರತ್ಯುತ್ತರವಾಗಿ ತಾಲಿಬಾನ್ ನಾಯಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತ 1971ರಲ್ಲಿ ಭಾರತೀಯ ಸೇನೆಯ ಕೈಯಲ್ಲಿ ಪಾಕಿಸ್ತಾನದ ಹೀನಾಯ ಸೋಲಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಯಾಸಿರ್ ಅಹ್ಮದ್ ಈ ಐತಿಹಾಸಿಕ ಫೋಟೋವನ್ನು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರ ಭಾರತೀಯ ಸೇನೆಯ ಶೌರ್ಯದ ಪ್ರತೀಕವಾಗಿದೆ. ಡಿಸೆಂಬರ್ 16, 1971 ರಂದು, ಪಾಕಿಸ್ತಾನಿ ಸೇನೆಯ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಅವರು ಭಾರತೀಯ ಸೇನೆಯ ಮುಂದೆ ಶರಣಾಗತಿ ದಾಖಲೆಗಳಿಗೆ ಸಹಿ ಹಾಕಿದ್ದರು. ಪಾಕಿಸ್ತಾನದ ಸೈನ್ಯದ ಶರಣಾಗತಿಯ ನಂತರ, ವಿಶ್ವ ವೇದಿಕೆಯಲ್ಲಿ ಹೊಸ ದೇಶವಾಗಿ ಬಾಂಗ್ಲಾದೇಶ ಹೊರಹೊಮ್ಮಿತ್ತು.
د پاکستان داخله وزیر ته !
عالي جنابه! افغانستان سوريه او پاکستان ترکیه نده چې کردان په سوریه کې په نښه کړي.
دا افغانستان دى د مغرورو امپراتوريو هديره.
په مونږ دنظامي يرغل سوچ مه کړه کنه دهند سره دکړې نظامي معاهدې د شرم تکرار به وي داخاوره مالک لري هغه چې ستا بادار يې په ګونډو کړ. pic.twitter.com/FFu8DyBgio— Ahmad Yasir (@AhmadYasir711) January 2, 2023
ವಾಸ್ತವವಾಗಿ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವು ಕೆಲ ಸಮಯದಿಂದ ಹದಗೆಟ್ಟಿದೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಎರಡೂ ದೇಶಗಳಲ್ಲಿ ಘರ್ಷಣೆಗೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಟಿಟಿಪಿ ನಿರಂತರವಾಗಿ ದಾ-ಳಿ ನಡೆಸುತ್ತಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಅಂತರಾಷ್ಟ್ರೀಯ ಗಡಿಯನ್ನು ಅಂದರೆ ಡ್ಯುರಾಂಡ್ ಲೈನ್ ಅನ್ನು TTP ಒಪ್ಪಿಕೊಳ್ಳುವುದಿಲ್ಲ. ಇದರಿಂದಾಗಿ ಇಲ್ಲಿ ಉಭಯ ದೇಶಗಳ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನದ ಗೃಹ ಸಚಿವರು ಗುರುವಾರ (ಡಿಸೆಂಬರ್ 27, 2022) ಅಫ್ಘಾನಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.
ಪಾಕ್ ಗೃಹಸಚಿವ ಮಾತನಾಡುತ್ತ, “TTP ಭಯೋತ್ಪಾದಕರು ಪಾಕಿಸ್ತಾನದ ದಾ-ಳಿಯ ನಂತರ ಓಡಿಹೋಗಿ ಅಫ್ಘಾನಿಸ್ತಾನದಲ್ಲಿ ಅಡಗಿಕೊಳ್ಳುತ್ತಾರೆ. ಅಫ್ಘಾನಿಸ್ತಾನ ಈ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸದಿದ್ದರೆ, ನಾವು ಅಫ್ಘಾನಿಸ್ತಾನಕ್ಕೆ ಪ್ರವೇಶಿಸಿ ಅವರನ್ನು ಕೊ-ಲ್ಲು-ತ್ತೇವೆ. ಅಫ್ಘಾನಿಸ್ತಾನದಲ್ಲಿ ಅವರ ಅಡಗುತಾಣಗಳು ಎಲ್ಲಿವೆ ಎಂಬುದು ನಮಗೆ ತಿಳಿದಿದೆ. ಅಲ್ಲಿಂದಲೇ ಆಯುಧಗಳೂ ಸಿಗುತ್ತವೆ” ಎಂದಿದ್ದರು. ಇದೀಗ ಪಾಕಿಸ್ತಾನದ ಗೃಹ ಸಚಿವರ ಹೇಳಿಕೆಗೆ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯವೂ ಪ್ರತಿಕ್ರಿಯಿಸಿದೆ. ಅಫ್ಘಾನಿಸ್ತಾನದಲ್ಲಿ ಎಲ್ಲಿಯೂ ಟಿಟಿಪಿಗೆ ಆಶ್ರಯ ನೀಡಿಲ್ಲ. ಈ ಆರೋಪಗಳು ಆಧಾರರಹಿತವಾಗಿವೆ. ಇನ್ನು ಪಾಕಿಸ್ತಾನ ದಾಳಿ ನಡೆಸಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಸಚಿವಾಲಯ ಹೇಳಿತ್ತು.
ಪಾಕಿಸ್ತಾನವನ್ನ ತಗೊಳ್ಳಿ ಅಂತ ಪಾಕಿಸ್ತಾನದವರೇ ಬಂದು ಹೇಳಿದರೂ ನಾವದನ್ನ ತಗೊಳ್ಳಲ್ಲ ಎಂದು ಕುಹಕವಾಡಿದ್ದ ತಾಲಿಬಾನ್
ತಾಲಿಬಾನ್ ಕಮಾಂಡರ್ ಪಾಕಿಸ್ತಾನದ ಬಡತನವನ್ನು ಗೇಲಿ ಮಾಡಿದ್ದರು. ತಾಲಿಬಾನ್ ಕಮಾಂಡರ್ ಪಾಕಿಸ್ತಾನದ ಗಡಿಯ ಬಳಿ ಮಾತನಾಡುತ್ತ, ಅವರು ನಮಗೆ ಕೊಟ್ಟರೂ ನಾವು ಪಾಕಿಸ್ತಾನವನ್ನ ತೆಗೆದುಕೊಳ್ಳುವುದಿಲ್ಲ. ಅವರ ಸಾಲ ತೀರಿಸುವವರು ಯಾರು? ಎಂದಿದ್ದರು.
ಪಾಕಿಸ್ತಾನದ ಆರ್ಥಿಕತೆಯು ಕೆಟ್ಟ ಹಂತದಲ್ಲಿ ಸಾಗುತ್ತಿದೆ ಮತ್ತು ದೇಶದ ಡೀಫಾಲ್ಟ್ ರಿಸ್ಕ್ ಕೂಡ ಹೆಚ್ಚುತ್ತಿದೆ. ಪಾಕಿಸ್ತಾನ ಸರ್ಕಾರ ಅಮೆರಿಕದಲ್ಲಿರುವ ತನ್ನ ರಾಯಭಾರಿ ಕಚೇರಿಯ ಕಟ್ಟಡಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನ ನಿರಂತರವಾಗಿ ಚೀನಾ, ಸೌದಿ ಅರೇಬಿಯಾ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯುತ್ತಿದೆ, ಆದರೆ ಸೇನೆಗೆ ಹೆಚ್ಚು ಖರ್ಚು ಮಾಡುವುದರಿಂದ ಬಜೆಟ್ ಕೊರತೆಯನ್ನು ಎದುರಿಸುತ್ತಿದೆ. ಇದೀಗ ತನ್ನ ಸ್ನೇಹಿತನಿಂದ ಶತ್ರುವಾಗಿ ಬದಲಾಗಿರುವ ತಾಲಿಬಾನ್ ಪಾಕಿಸ್ತಾನದ ಈ ದುಸ್ಥಿತಿಯನ್ನು ಲೇವಡಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ತಾಲಿಬಾನ್ ಸೇನಾ ಅಧಿಕಾರಿ ಜನರಲ್ ಮೊಬಿನ್ ಖಾನ್ ಅವರಿಗೆ ಪತ್ರಕರ್ತರೊಬ್ಬರು, “ನೀವು ಪಾಕಿಸ್ತಾನದ ಗಡಿಯನ್ನು ದಾಟುತ್ತಿದ್ದೀರಾ?” ಎಂದು ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ಜನರಲ್ ಮೊಬಿನ್, “ಸ್ವತಃ ವರೇ ಪಾಕಿಸ್ತಾನವನ್ನು ನೀಡಿದರೂ ನಾವು ತೆಗೆದುಕೊಳ್ಳುವುದಿಲ್ಲ. ಅವರ ಸಾಲ ತೀರಿಸುವವರು ಯಾರು?” ಎನ್ನುತ್ತಾರೆ. ಈ ನಡುವೆ ಗಡಿಯಲ್ಲಿ ಭೀಕರ ಘರ್ಷಣೆಗಳು ನಡೆದಿದ್ದು, ಎರಡೂ ಕಡೆಯ ಜನರು ಸಾವನ್ನಪ್ಪಿರುವ ಸಂದರ್ಭದಲ್ಲಿ ತಾಲಿಬಾನ್ ಕಮಾಂಡರ್ ಬಡ ಪಾಕಿಸ್ತಾನವನ್ನು ಗೇಲಿ ಮಾಡಿದ್ದಾರೆ.