2 ವರ್ಷದ ಮಗುವನ್ನೇ ನುಂಗಿ ಬಿಟ್ಟ ದೈತ್ಯ ಹಿಪ್ಪೋ: ಬಳಿಕ ನಡೆದದ್ದೇ ಬೆಚ್ಚಿಬೀಳಿಸುವ ರೋಚಕ ಚಮತ್ಕಾರ

in Uncategorized 313 views

ಹಿಪ್ಪೋ ಎಂದರೆ ಹಿಪಪಾಟಮಸ್, ಅದು ನೋಡೋಕೆ ಎಷ್ಟೇ ಕ್ಯೂಟ್ ಹಾಗು ಮತ್ತು ಸರಳ ಜೀವಿ ಎಂದು ಕಾಣುತ್ತದೆ, ಆದರೆ ಅವು ತುಂಬಾ ಅಪಾಯಕಾರಿ ಎಂಬುದು ಮಾತ್ರ ಸತ್ಯ. ಇವುಗಳಿಗಿಂತ ಹಿಂಸಾತ್ಮಕ ಜೀವಿಗಳು ಮತ್ತೊಂದಿಲ್ಲ. ಹಿಪ್ಪೋ ದಾ-ಳಿಗೆ ಸಂಬಂಧಿಸಿದ ಹಲವು ವೀಡಿಯೋಗಳು ಮತ್ತು ಸುದ್ದಿಗಳು ಹೊರಬರುತ್ತಲೇ ಇರುತ್ತವೆ, ಆದರೆ ಇತ್ತೀಚೆಗೆ ಆಫ್ರಿಕಾದ ಸುದ್ದಿಯೊಂದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇಲ್ಲಿ ಹಿಪ್ಪೋವೊಂದು 2 ವರ್ಷದ ಮಗುವನ್ನೇ ಜೀವಂತ ನುಂಗಿದ್ದೇ ಇದಕ್ಕೆ ಕಾರಣ.

Advertisement

ಇಂದು ನಾವು ಎಂತಹ ಸುದ್ದಿಯನ್ನು ಹೇಳಲು ಹೊರಟಿದ್ದೇವೆಂದರೆ ಅದನ್ನ ಕೇಳಿದಾಕ್ಷಣ ನಿಮಗೆ ಒಂದು ಕ್ಷಣ ಎದೆ ಝಲ್ಲೆನ್ನಬಹುದು. ಈ ಸುದ್ದಿ ಆಫ್ರಿಕಾ ಖಂಡದ ಉಗಾಂಡಾದಿಂದ ವರದಿಯಾಗಿದ್ದು, ಇಲ್ಲಿ ಹಿಪ್ಪೋ 2 ವರ್ಷದ ಮಗುವನ್ನು ಜೀವಂತವಾಗೇ ನುಂಗಿದೆ. ಇದನ್ನು ಓದುವ ಮೂಲಕ ಹಿಪ್ಪಿಗಳು ಮೊಸಳೆಗಳಿಗಿಂತ ಹೆಚ್ಚು ಅನಿರೀಕ್ಷಿತ ಅಪಾಯಕಾರಿ ಜೀವಿಗಳು ಎಂದು ನೀವು ಊಹಿಸಬಹುದು.

2 ವರ್ಷದ ಮಗುವನ್ನು ಜೀವಂತ ನುಂಗಿದ ಹಿಪ್ಪೋ

ಡೈಲಿ ಮೇಲ್ ನ್ಯೂಸ್ ವೆಬ್‌ಸೈಟ್ ವರದಿ ಪ್ರಕಾರ, ಈ ಘಟನೆ ಉಗಾಂಡಾದ ಎಡ್ವರ್ಡ್ ಲೇಕ್ ನಲ್ಲಿ ನಡೆದಿದೆ. ಇಲ್ಲಿ ಪೌಲ್ ಇಗಾ (Paul Iga) ಎಂಬ ಮಗು ತನ್ನ ಮನೆಯ ಹೊರಗೆ ಕೊಳದ ದಡದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹಿಪ್ಪೋ ಕೊಳದಿಂದ ಹೊರಬಂದು ಮಗುವಿನ ಮೇಲೆ ದಾ-ಳಿ ಮಾಡಿತು. ಹಿಪ್ಪೋ ತಕ್ಷಣ ಮಗುವನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಒಳಗೆ ಹಾಕಿಕೊಂಡಿತು.

ಮಗುವನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು

ಅದೇ ಸಮಯದಲ್ಲಿ ಕ್ರಿಸ್ಪಾಸ್ ಬಾಗೊಂಜಾ (Chrispas Bagonza) ಎಂಬ ವ್ಯಕ್ತಿ ಈ ಘಟನೆಯನ್ನು ನೋಡುತ್ತಿದ್ದನು. ವ್ಯಕ್ತಿ ತಕ್ಷಣ ತಡ ಮಾಡದೆ ಸಮಯ ಪ್ರಜ್ಞೆ ತೋರುತ್ತ ಹಿಪ್ಪೋ ಮೇಲೆ ಕಲ್ಲು ತೂರಾಟ ಆರಂಭಿಸಿದರು. ಪ್ರಾಣಿಯ ಮೇಲೆ ಕಲ್ಲುಗಳು ಬಿದ್ದಾಗ, ಅದು ತಕ್ಷಣವೇ ಹೆದರಿತು ಮತ್ತು ಮಗುವನ್ನು ತನ್ನ ಬಾಯಿಯಿಂದ ಉಗುಳಿ, ಅದು ನೀರಿನಲ್ಲಿ ಓಡಿಹೋಯಿತು. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವನ್ನು ಹಿಪ್ಪೋ ಬಾಯಿಂದ ಉಗುಳಿದಾಗ ಮಗು ಜೀವಂತವಾಗಿತ್ತು ಎಂದು ವ್ಯಕ್ತಿ ಹೇಳಿದನು. ಅಚ್ಚರಿಯ ವಿಷಯವೆಂದರೆ ಮಗುವಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ವೈದ್ಯರು ರೇಬೀಸ್ ಚುಚ್ಚುಮದ್ದಿನ ನಂತರ ಅವನನ್ನು ಮನೆಗೆ ಕಳಿಸಿದ್ದಾರೆ. ಬಿಟ್ಟರು.

Chrispas Bagonza ಕಾರಣದಿಂದ ಉಳಿದ ಮಗು

ಹಿಪ್ಪೋ ಕೊಳದಿಂದ ಹೊರಬಂದು ಮಗು ಅಥವಾ ವ್ಯಕ್ತಿಯೊಬ್ಬರ ಮೇಲೆ ದಾ-ಳಿ ಮಾಡಿರುವುದು ಇದೇ ಮೊದಲು ಎಂದು ಉಗಾಂಡಾ ಪೊಲೀಸರು ಹೇಳಿಕೆ ನೀಡಿದ್ದಾರೆ. ಕ್ರಿಸ್ಪಸ್‌ನ ಧೈರ್ಯ ಮತ್ತು ತಿಳುವಳಿಕೆಯಿಂದಲೇ ಮಗುವಿನ ಜೀವ ಉಳಿಯಿತು ಎಂದು ಪೊಲೀಸರು ಹೇಳಿದ್ದಾರೆ. ಏಕೆಂದರೆ ಆತ ಕಲ್ಲು ಎಸೆಯದಿದ್ದರೆ ಹಿಪ್ಪೋ ಆ ಮಗುವನ್ನು ಬಿಡುತ್ತಿರಲಿಲ್ಲ ಹಾಗು ಆ ಮಗು ಸಾವನ್ನಪ್ಪಿರುತ್ತಿತ್ತು.

Advertisement
Share this on...