2021 ಮುಗಿಯುವ ಹೊತ್ತಲ್ಲೇ ಭಾರೀ ವೈರಲ್ ಆಗುತ್ತಿದೆ ನೇತ್ರಹೀನ ಬಾಬಾ ವೆಂಗಾ ರವರ 2022 ರ ಸ್ಪೋಟಕ ಭವಿಷ್ಯವಾಣಿಗಳು: ಭಾರತದ ಬಗ್ಗೆ ಏನಿದೆ ನೋಡಿ

in Uncategorized 551 views

2021 ಕ್ಕೆ ವಿದಾಯ ಹೇಳುವ ಸಮಯ ಬಂದಿದೆ ಆದರೆ 2022 ಹೇಗಿರುತ್ತದೆ? ಬಾಬಾ ವೆಂಗಾ 2022 ರ ಬಗ್ಗೆ ಏನು ಭವಿಷ್ಯ ನುಡಿದಿದ್ದರು? ಬನ್ನಿ ಈ ಲೇಖನದ ಮೂಲಕ ನಿಮಗೆ ಅದನ್ನ ವಿಸ್ತೃತವಾಗಿ ತಿಳಿಸುತ್ತೇವೆ.

Advertisement

ಅಮೆರಿಕದಲ್ಲಿ ನಡೆದ 9/11 ದಾ ಳಿ ಯಿಂದ ಸುನಾಮಿಯವರೆಗಿನ ನಿಖರವಾದ ಭವಿಷ್ಯವಾಣಿ ನುಡಿದಿದ್ದ  ಬಾಬಾ ವೆಂಗಾ 2022 ಕ್ಕೆ ಕೆಲವು ವಿಷಯಗಳನ್ನು ಹೇಳಿದ್ದು ಅದು ಇದೀಗ ಸೋಶಿಯಲ್ ಮೀಡಿಯಾಗಳ ಮೂಲಕ ವೈರಲ್ ಆಗಿ ಜನರ ಆತಂಕವನ್ನು ಹೆಚ್ಚಿಸಲು ಮುಂದಾಗಿದೆ. ಬಾಬಾ ವೆಂಗಾ ಹುಟ್ಟಿದ ಸ್ವಲ್ಪ ಸಮಯದ ನಂತರ ಸಂಪೂರ್ಣವಾಗಿ ಕುರುಡರಾದರು, ಅವರು 1996 ರಲ್ಲಿ ತಮ್ಮ 85 ನೇ ವಯಸ್ಸಿನಲ್ಲಿ ತಮ್ಮ ದೇಹವನ್ನು ತೊರೆದರು, ಆದರೆ ಅದಕ್ಕೂ ಮೊದಲು ಅವರು ಆಘಾತಕಾರಿಯಾದ ಕೆಲವು ಭವಿಷ್ಯವಾಣಿಗಳನ್ನು ನುಡಿದು ಹೋಗಿದ್ದರು.

ನೀರಿನ ಅಭಾವ

ಬಾಬಾ ವೆಂಗಾ ಅವರ ಪ್ರಕಾರ, ಮುಂಬರುವ 2022 ರಲ್ಲಿ ಜಗತ್ತಿನಲ್ಲಿ ನೀರಿನ ಬಿಕ್ಕಟ್ಟು ತೀವ್ರಗೊಳ್ಳಲಿದೆ. ದೇಶ ಹಾಗು ಪ್ರಪಂಚದ ಅನೇಕ ನಗರಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗಲಿದೆ. ನದಿಗಳ ನೀರು ಕಲುಷಿತಗೊಳ್ಳುತ್ತದೆ ಮತ್ತು ಕೆರೆಗಳು ಮತ್ತು ಕೊಳಗಳು ಕುಗ್ಗುತ್ತವೆ. ನೀರಿನ ಕೊರತೆಯಿಂದ ಜನರು ತಮ್ಮ ಸ್ಥಳಗಳನ್ನು ಬಿಟ್ಟು ಬೇರೆಡೆ ವಲಸೆ ಹೋಗುವಂತಗುತ್ತದೆ.

ಗ್ಯಾಡ್ಜೆಟ್ ಗಳ ಗೀಳು

ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಮುಂಬರುವ ವರ್ಷದಲ್ಲಿ ಜನರು ಮೊಬೈಲ್, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಅವರ ಈ ಚಟ ಕ್ರಮೇಣ ಕೆಟ್ಟ ಚಟವಾಗಿ ರೂಪ ಪಡೆಯುತ್ತದೆ, ಇದರಿಂದ ಜನರ ಮಾನಸಿಕ ಸ್ಥಿತಿ ಹದಗೆಟ್ಟು ಮಾನಸಿಕ ಅಸ್ವಸ್ಥರಾಗುತ್ತಾರೆ.

ಸೈಬೇರಿಯಾದಿಂದ ಬರಲಿದೆ ಮಾರಕ ವೈರಸ್

ಸದ್ಯ ಕರೋನಾ ಇರುವಿಕೆಯ ಮಧ್ಯೆಯೇ ಜಗತ್ತು ಮತ್ತೊಂದು ಅಪಾಯಕಾರಿ ವೈರಸ್‌ನೊಂದಿಗೆ ಬಳಲುವಂತಾಗಲಿದೆ. ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಈ ವರ್ಷ ದುರಂತವಾಗಿ ಪರಿಣಮಿಸುತ್ತದೆ. ಈ ಕಾರಣದಿಂದಾಗಿ, ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಐಸ್ ಕರಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ವಿಜ್ಞಾನಿಗಳ ತಂಡಕ್ಕೆ ಮಾರಣಾಂತಿಕ ವೈರಸ್ ಬಗ್ಗೆ ತಿಳಿಯುತ್ತದೆ. ವೈರಸ್ ತುಂಬಾ ಸಾಂಕ್ರಾಮಿಕ ಎಂದು ಹೇಳಲಾಗುತ್ತದೆ, ಇದು ಸೂಪರ್ ಸ್ಪ್ರೆಡರ್ ಆಗಿರುತ್ತದೆ. ಈ ಸೋಂಕನ್ನು ಎದುರಿಸುವಲ್ಲಿ ಪ್ರಪಂಚದ ಎಲ್ಲಾ ವ್ಯವಸ್ಥೆಗಳು ವಿಫಲವಾಗುತ್ತವೆ.

ಭಾರತದಲ್ಲಿ ಹೆಚ್ಚಾಗಲಿದೆ ತಾಪಮಾನ

ಭಾರತವು ಭಾರೀ ಗ್ಲೋಬಲ್ ವಾರ್ಮಿಂಗ್ (ಜಾಗತಿಕ ತಾಪಮಾನ) ನಿಂದ ಪ್ರಭಾವಿತವಾಗಲಿದೆ, ದೇಶದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಸುಮಾರು 50 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಉಷ್ಣತೆಯ ಏರಿಕೆಯಿಂದಾಗಿ, ಮಿಡತೆಗಳ ಹುಟ್ಟುವಿಕೆಯ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಅವು ಹೊಲಗಳಲ್ಲಿನ ಲಕ್ಷಾಂತರ ಹಸಿರು ಪ್ರದೇಶಗಳನ್ನು ಆಕ್ರಮಣ ಮಾಡಿ ನಾಶಮಾಡುತ್ತವೆ. ದೇಶದಲ್ಲಿ ಬರಗಾಲದ ಪರಿಸ್ಥಿತಿ ತರಬಹುದು.

ಸುನಾಮಿ ಮತ್ತು ಭೂಕಂಪದ ಅಪಾಯ

ಬಾಬಾ ವೆಂಗಾ ಅವರ ಪ್ರಕಾರ, 2022 ರಲ್ಲಿ ಜಗತ್ತಿನಲ್ಲಿ ಭೂಕಂಪ ಮತ್ತು ಸುನಾಮಿಯ ಅಪಾಯವು ಹೆಚ್ಚಾಗುತ್ತದೆ. ಹಿಂದೂ ಮಹಾಸಾಗರದಲ್ಲಿ ಭೂಕಂಪನದ ಎಚ್ಚರಿಕೆಯಿದ್ದು, ನಂತರ ದೊಡ್ಡ ಸುನಾಮಿ ಉಂಟಾಗುತ್ತದೆ, ಇದು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಡೋನೇಷ್ಯಾ, ಭಾರತ ಸೇರಿದಂತೆ ವಿಶ್ವದ ದೇಶಗಳ ಕರಾವಳಿ ಪ್ರದೇಶಗಳನ್ನು ಆವರಿಸುತ್ತದೆ. ಇದರಲ್ಲಿ ಸಾವಿರಾರು ಜನರು ಸಾಯಬಹುದು.

ಬಾಬಾ ವೆಂಗಾ ರವರು ಭವಿಷ್ಯವನ್ನು ಊಹಿಸುವ ಶಕ್ತಿ ಹೊಂದಿದ್ದರು

ಬಾಬಾ ವೆಂಗಾ ಒಬ್ಬ ಮಹಿಳಾ ಭವಿಷ್ಯವಾಣಿ ನುಡಿಯುವ ಮಹಿಳೆಯಾಗಿದ್ದರು. ಬಲ್ಗೇರಿಯಾ ನಿವಾಸಿಯಾಗಿದ್ದ ಕುರುಡು ವಂಜೆಲಿಯಾ ಪಾಂಡವಾ ಗುಶ್ಟೆರೋವಾ ಉರ್ಫ್ ಬಾಬಾ ವೆಂಗಾ ಫಕೀರ್ ಬಾಬಾ ವೆಂಗಾ, ದೃಷ್ಟಿ ಇಲ್ಲದಿದ್ದರೂ ಭವಿಷ್ಯವನ್ನು ಸ್ಪಷ್ಟವಾಗಿ ನೋಡಬಲ್ಲ ಮಹಿಳೆಯಾಗಿದ್ದರು.

ಕಳೆದ ವರ್ಷಗಳಲ್ಲಿ, ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. 2022 ರಲ್ಲೂ ಅವರು ಅನೇಕ ವಿಷಯಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಎಷ್ಟು ಸತ್ಯವಾಗುತ್ತವೋ ಎಂಬುದನ್ನು ಕಾದು ನೋಡಬೇಕಿದೆ.

Advertisement
Share this on...