28 ವಯಸ್ಸಿನ ತನ್ನ ಸೊಸೆಯನ್ನೇ ಮದುವೆಯಾದ 70 ವರ್ಷದ ಮಾವ: ಕಾರಣ ತಿಳಿದರೆ ಶಾಕ್ ಆಗ್ತೀರ

in Uncategorized 709 views

70 ವರ್ಷದ ಮಾವ ತನ್ನ 28 ವರ್ಷದ ವಿಧವೆ ಸೊಸೆಯನ್ನೇ (70 year man married 28 year old daughter in law) ವಿವಾಹವಾದ ಪ್ರಕರಣ ಗೋರಖ್‌ಪುರ್ ಜಿಲ್ಲೆಯ ಬರ್ಹಲ್‌ಗಂಜ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಇವರಿಬ್ಬರೂ ಸ್ಥಳೀಯ ದೇವಸ್ಥಾನದಲ್ಲಿ ಪರಸ್ಪರ ಹಾರ ಬದಲಿಸಿ ದೇವರ ದರ್ಶನ ಪಡೆದು ಮದುವೆಯಾಗಿದ್ದಾರೆ. ತನ್ನ ಮಗನ ಹೆಂಡತಿಯನ್ನ ಮದುವೆ ಮಾಡಿಕೊಂಡು ಆಕೆಯ ಹಣೆಯ ಮೇಲೆ ಸಿಂಧೂರವನ್ನು ಹಚ್ಚಿದ್ದಾನೆ. ಈ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ನಂತರ, ಮಾವ ಮತ್ತು ಸೊಸೆ ನಡುವಿನ ಸಂಬಂಧದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿವೆ. ಮದುವೆಯಾದ ವ್ಯಕ್ತಿ ಬರ್ಹಲ್‌ಗಂಜ್ ಪೊಲೀಸ್ ಠಾಣೆಯ ವಾಚ್‌ಮನ್ ಆಗಿದ್ದಾನೆ. ಸೊಸೆಯೊಂದಿಗೆ ಸಪ್ತಪದಿ ತುಳಿದು ಆಕೆಯನ್ನು ಪತ್ನಿಯನ್ನಾಗಿ ಮಾಡಿಕೊಂಡಿದ್ದಾನೆ.

Advertisement

ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿ ಕೈಲಾಶ್ ಯಾದವ್ ಅವರಿಗೆ 70 ವರ್ಷ. ಮೃತ ಮಗನ ಪತ್ನಿ ಪೂಜಾಳನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದಾನೆ. ಪೂಜಾಳ ವಯಸ್ಸು 28 ವರ್ಷ. ಕೈಲಾಶ್ ಪತ್ನಿ 12 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಅವರ ಮೂರನೇ ಮಗ ಕೆಲವು ವರ್ಷಗಳ ಹಿಂದೆಯಷ್ಟೇ ನಿಧನನಾಗಿದ್ದ. ಗಂಡನ ಸಾವಿನ ನಂತರ, ಕೈಲಾಶ್‌ನ ನಾಲ್ಕು ಮಕ್ಕಳಲ್ಲಿ ಮೂರನೆಯ ಮಗನ ಹೆಂಡತಿ ಅಂದರೆ ಕೈಲಾಶ್‌ನ ಸೊಸೆ ಪೂಜಾ ತನ್ನ ಜೀವನ ನೋಡಿಕೊಳ್ಳಲು ಬೇರೆಯವರ ಜೊತೆ ಮದುವೆಯಾಗಲು ಯೋಚಿಸಿದ್ದಳು. ಈ ಮಾಹಿತಿ ಹಾಗು ನಡೆಯುತ್ತಿರುವ ಚರ್ಚೆಗಳನ್ನು ನೋಡಿ ಸೊಸೆಯ ಮೇಲೆಯೇ ಮಾವನ ಕಣ್ಣು ಬಿದ್ದಿತು.

ವಯಸ್ಸು, ಸಮಾಜದ ಭಯವಿಲ್ಲದೆ ದೇವಸ್ಥಾನಕ್ಕೆ ತೆರಳಿ ಸಪ್ತಪದಿ ತುಳಿಯುವ ಮೂಲಕ ಇಬ್ಬರೂ ಮದುವೆಯಾಗಿದ್ದಾರೆ. ದೇವಸ್ಥಾನದಲ್ಲಿ ಮುದುಕನ ಮದುವೆ ಸೊಸೆಯೊಂದಿಗೆ ನಡೆದ ಫೋಟೋ ಇದೀಗ ವೈರಲ್ ಆಗಿದೆ. ಫೋಟೋ ವೈರಲ್ ಆದ ಕೂಡಲೇ ಈ ಮದುವೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ನಂತರ ಇಬ್ಬರೂ ಮನೆಗೆ ಬಂದವರು ಯಾರ ಪ್ರಶ್ನೆಗಳಿಗೂ ಉತ್ತರ ನೀಡುತ್ತಿಲ್ಲ. ಸದ್ಯ ಈ ವಯಸ್ಸಿನಲ್ಲಿ ಸೊಸೆಯ ಜೊತೆ ಮದುವೆ ವಿಚಾರವಾಗಿ ಏನೇ ಚರ್ಚೆ ನಡೆಯುತ್ತಿದ್ದರೂ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ವಿಷಯಗಳು ಮುಂದೆ ಬರುತ್ತಿವೆ. ಹಳ್ಳಿಯಲ್ಲಿ ಈ ಮದುವೆಯನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆ ಕಡಿಮೆಯಿದ್ದು ಎಲ್ಲರೂ ಛೀ ಥೂ ಅಂತ ಉಗಿಯುತ್ತಿದ್ದಾರೆ.

ಮಾವ ತನ್ನ ಸೊಸೆಯನ್ನ ಬೇರೆಯವರೊಂದಿಗೆ ಮದುವೆ ಮಾಡಿಸಬೇಕಿತ್ತು ಎಂಬ ಚರ್ಚೆ ಗ್ರಾಮದಲ್ಲಿ ನಡೆಯುತ್ತಿದೆ. ಆಕೆ ತಾನು ಬೇರೆಯವರೊಂದಿಗೆ ಮದುವೆಯಾಗಲು ಬಯಸಿದ್ದರೆ ಆಕೆಯ ಮದುವೆ ಮಾಡಸಬೇಕಿತ್ತು ಅದು ಬಿಟ್ಟು ಇಂತಹ ಮುದಿ ವಯಸ್ಸಿನಲ್ಲಿ ತನ್ನ ಸೊಸೆಯನ್ನೇ ಮದುವೆಯಾಗಿದ್ದು ತಪ್ಪು ಎಂದು ಜನ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಎಲ್ಲೋ ಇಬ್ಬರೂ ಒಪ್ಪಿಗೆ ಸೂಚಿಸಿರಬೇಕು ಬಳಿಕವೇ ಈ ವಿಷಯ ಮದುವೆಯ ಹಂತದವರೆಗೂ ಹೋಗಿದೆ. ಇಬ್ಬರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

Advertisement
Share this on...