400 ವರ್ಷಗಳಿಂದ ಆಳುತ್ತಿದ್ದ ಬ್ರಿಟನ್ ಕ್ವೀನ್ ಎಲಿಜಬೆತ್‌ನ್ನ ಕೆಳಗಿಳಿಸಿ ಸ್ವತಂತ್ರ ದೇಶವೆಂದು ಘೋಷಿಸಿಕೊಂಡ ದೇಶ

in Kannada News/News 206 views

ಬಾರ್ಬಡೋಸ್ ದೇಶ ಬ್ರಿಟನ್ ರಾಣಿ ಎಲಿಜಬೆತ್ ಅವರನ್ನು ರಾಷ್ಟ್ರಾಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿದೆ ಮತ್ತು ಈಗ ದೇಶವು ಗಣರಾಜ್ಯವಾಗಿದೆ. ಮಂಗಳವಾರ, ದೇಶವು ತನ್ನ ಮೊದಲ ಅಧ್ಯಕ್ಷರನ್ನು ಪಡೆದುಕೊಂಡಿದ್ದು, ಇದರಿಂದಾಗಿ ದೇಶವು ನಾಲ್ಕು ನೂರು ವರ್ಷಗಳ ನಂತರ ಗಣರಾಜ್ಯವಾಗಿ ಮಾರ್ಪಟ್ಟಿದೆ.

Advertisement

ನವೆಂಬರ್ 29 ರ ಮಂಗಳವಾರ ಮಧ್ಯರಾತ್ರಿಯಿಂದ ಬಾರ್ಬಡೋಸ್ ಗಣರಾಜ್ಯವಾಯಿತು. ರಾಜಧಾನಿ ಬ್ರಿಡ್ಜ್‌ಟೌನ್‌ನ ಚೇಂಬರ್ಲೇನ್ ಬ್ರಿಡ್ಜ್ ನ ಮೇಲೆ ಜಮಾಯಿಸಿದ ನೂರಾರು ಜನರು ಈ ಕ್ಷಣವನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಿದರು. ಬೃಹತ್ ಜನಸ್ತೋಮದ ನಡುವೆ ಹೀರೋಸ್ ಸ್ಕ್ವೇರ್‌ನಲ್ಲಿ ಬಾರ್ಬಡೋಸ್‌ನ ರಾಷ್ಟ್ರಗೀತೆಯನ್ನು ನುಡಿಸಲಾಯಿತು ಮತ್ತು 21-ತೋಪುಗಳ ಸೆಲ್ಯೂಟ್ ನೀಡಲಾಯಿತು.

ಈ ಸಂದರ್ಭದಲ್ಲಿ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಉಪಸ್ಥಿತರಿದ್ದರು. ಪ್ರಿನ್ಸ್ ಚಾಲ್ಸ್ ನೋಡು ನೋಡುತ್ತಲೇ, ಕ್ವೀನ್ ಎಲಿಜಬೆತ್ ಅವರ ಧ್ವಜವನ್ನು ಇಳಿಸಲಾಯಿತು ಮತ್ತು ದೇಶವು ಔಪಚಾರಿಕ ಸ್ವಾತಂತ್ರ್ಯವನ್ನು ಪಡೆಯಿತು. ಈ ಸಂದರ್ಭದಲ್ಲಿ ಅವರ ತಾಯಿ ಅಭಿನಂದನೆಗಳನ್ನು ಕಳುಹಿಸಿದ್ದಾರೆ ಎಂದು ಪ್ರಿನ್ಸ್ ಚಾರ್ಲ್ಸ್ ಹೇಳಿದ್ದಾರೆ.

ಈ ಗಣರಾಜ್ಯದ ಸ್ಥಾಪನೆಯು ಹೊಸ ಆರಂಭವಾಗಿದೆ ಎಂದ ಅವರು, ನಮ್ಮ ಕರಾಳ ಭೂತಕಾಲದಿಂದ ದೇಶದ ಜನತೆ ಇತಿಹಾಸಕ್ಕೆ ಮಸಿ ಬಳಿದಿದ್ದ ಗುಲಾಮಗಿರಿಯ ನೋವಿನ ಚಿತ್ರಹಿಂಸೆಯಿಂದ ಹೊರಬರಲು ಅಪ್ರತಿಮ ಶಕ್ತಿಯೊಂದಿಗೆ ತಮ್ಮ ದಾರಿಯನ್ನು ರೂಪಿಸಿದ್ದಾರೆ ಎಂದರು.

55 ವರ್ಷಗಳ ಹಿಂದೆ ಸ್ವತಂತ್ರವಾದ ದೇಶ

ಬ್ರಿಟನ್‌ನ ರಾಣಿ ಎಲಿಜಬೆತ್ II ಇನ್ನೂ 15 ದೇಶಗಳ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ಇವುಗಳಲ್ಲಿ ಯುನೈಟೆಡ್ ಕಿಂಗ್‌ಡಮ್ ಹೊರತುಪಡಿಸಿ ಆಸ್ಟ್ರೇಲಿಯಾ, ಕೆನಡಾ ಮತ್ತು ಜಮೈಕಾ ಸೇರಿವೆ. ಬಾರ್ಬಡೋಸ್ ರಾಣಿಯನ್ನು ರಾಷ್ಟ್ರದ ಮುಖ್ಯಸ್ಥ ಹುದ್ದೆಯಿಂದ ತೆಗೆದುಹಾಕುವ ಮೂಲಕ ಹೊಸ ಆರಂಭವನ್ನು ಮಾಡಿದೆ. ಅವರ ಸ್ಥಾನದಲ್ಲಿ ಈಗ ಸಾಂಡ್ರಾ ಮೇಸನ್ ದೇಶದ ಅಧ್ಯಕ್ಷರಾಗಲಿದ್ದಾರೆ.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಾಷಣಗಳು ನಡೆದವು ಮಾತ್ರವಲ್ಲದೇ, ಬಾರ್ಬಡಿಯನ್ ಗಾಯಕಿ ರಿಹಾನ್ನಾ ಅವರನ್ನು ರಾಷ್ಟ್ರೀಯ ನಾಯಕಿ ಎಂದು ಘೋಷಿಸಲಾಯಿತು. ಬ್ರಿಟಿಷ್ ಹಡಗು 1625 ರಲ್ಲಿ ಬಾರ್ಬಡೋಸ್‌ಗೆ ಆಗಮಿಸಿತ್ತು ಮತ್ತು ಕಿಂಗ್ ಜೇಮ್ಸ್ I ರ ಪ್ರದೇಶವೆಂದು ಘೋಷಿಸಿತ್ತು. ಆ ನಂತರ ನೂರಾರು ವರ್ಷಗಳ ಕಾಲ ಈ ದೇಶ ಬ್ರಿಟಿಷರ ಗುಲಾಮರಾಗಿ ಉಳಿದು 55 ವರ್ಷಗಳ ಹಿಂದೆ ಸ್ವಾತಂತ್ರ್ಯ ಘೋಷಿಸಿತು. ಆದರೆ ಬ್ರಿಟನ್ ರಾಣಿ ಇನ್ನೂ ದೇಶದ ಮುಖ್ಯಸ್ಥರಾಗಿ ಉಳಿದಿದ್ದರು.

ಬಾರ್ಬಡೋಸ್‌ನಂತೆ, ಇತರ ದೇಶಗಳಲ್ಲಿ ರಾಣಿ ತಮ್ಮ ದೇಶದ ರಾಷ್ಟ್ರಾಧ್ಯಕ್ಷರಾಗಿ ಮುಂದುವರೆಯಬೇಕೋ ಅಥವಾ ಬೇಡವೇ ಎಂಬ ಚರ್ಚೆ ನಡೆಯುತ್ತಿದೆ. ಬಾರ್ಬಡೋಸ್ ಅನ್ನು ಗಣರಾಜ್ಯವೆಂದು ಘೋಷಿಸುವ ಅಭಿಯಾನದ ನೇತೃತ್ವ ವಹಿಸಿದ್ದ ಪ್ರಧಾನಿ ಮಿಯಾ ಮೋಟ್ಲಿ ಸಮಾರಂಭದ ನೇತೃತ್ವ ವಹಿಸಿದ್ದರು. ಸಮಾರಂಭದಲ್ಲಿ ನಾಡಿನ ಕವಿಗಳಲ್ಲೊಬ್ಬರಾದ ವಿನ್ ಸ್ಟನ್ ಫಾರೆಲ್ ಮಾತನಾಡಿ, ‘ಈಗ ನಮ್ಮ ಕಾಲ, ಕಬ್ಬಿನ ಗದ್ದೆಗಳನ್ನು ಬಿಟ್ಟು ನಮ್ಮ ಇತಿಹಾಸವನ್ನು ಸಾರುತ್ತಿದ್ದೇವೆ’ ಎಂದರು.

ಬ್ರಿಡ್ಜ್‌ಟೌನ್‌ನ ನಾಗರಿಕ ರಾಸ್ ಬಿಂಗಿ ಮಾತನಾಡಿ, “ನನಗೆ ತುಂಬಾ ಸಂತೋಷವಾಗಿದೆ, ನಾನು ಹೊಸ ಗಣರಾಜ್ಯಕ್ಕೆ ಮದ್ಯ ಮತ್ತು ಸಿಗರೇಟ್ ಹೊಗೆಯೊಂದಿಗೆ ಸೆಲ್ಯೂಟ್ ಮಾಡುತ್ತೇನೆ” ಎಂದು ಹೇಳಿದರು.

ಗುಲಾಮಗಿರಿಯ ಇತಿಹಾಸ

ಪ್ರಿನ್ಸ್ ಚಾರ್ಲ್ಸ್ ತಮ್ಮ ಭಾಷಣದಲ್ಲಿ, ಇಂಗ್ಲೆಂಡ್ನ ಇತಿಹಾಸವು ಗುಲಾಮಗಿರಿಯಿಂದ ಕಳಂಕಿತವಾಗಿದೆ ಎಂದು ಒತ್ತಿಹೇಳಿದರು, ಆದರೆ ಪ್ರಸ್ತುತ ಸಮಯದಲ್ಲಿ ಎರಡು ದೇಶಗಳು ಉತ್ತಮ ಸಂಬಂಧವನ್ನು ಹೊಂದಿವೆ. ಬ್ರಿಟನ್ ಗುಲಾಮಗಿರಿಯನ್ನು ಹಿಂದಿನ ಪಾಪ ಎಂದು ಕರೆಯುತ್ತದೆ, ಆದರೆ ಕೆಲವರು ಪರಿಹಾರವನ್ನು ಕೇಳುತ್ತಾರೆ ಎಂದರು.

ಪೋರ್ಚುಗೀಸ್ ಯುವಕರಿಂದ ಯುರೋಪಿನ ಮೇಲೆ ಮೊಕದ್ದಮೆ

1627 ಮತ್ತು 1833 ರ ನಡುವೆ, ಆರು ಲಕ್ಷಕ್ಕೂ ಹೆಚ್ಚು ಜನರನ್ನು ಬಾರ್ಬಡೋಸ್‌ಗೆ ಗುಲಾಮರನ್ನಾಗಿ ತರಲಾಯಿತು. ಈ ಗುಲಾಮರನ್ನು ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವಂತೆ ಮಾಡಲಾಯಿತು, ಇದರಿಂದ ಬ್ರಿಟಿಷ್ ಜಮೀನುದಾರರು ಭಾರಿ ಲಾಭವನ್ನು ಗಳಿಸಿದರು.

ಕಾರ್ಯಕರ್ತ ಡೇವಿಡ್ ಡೆನ್ನಿ ಗಣರಾಜ್ಯೋತ್ಸವವನ್ನು ಆಚರಿಸಿದರು ಆದರೆ ಈ ಸಂದರ್ಭದಲ್ಲಿ ಪ್ರಿನ್ಸ್ ಚಾರ್ಲ್ಸ್ ಅವರನ್ನು ಆಹ್ವಾನಿಸಿದ ಬಗ್ಗೆ ಅವರು ಸಂತೋಷಪಡಲಿಲ್ಲ. ಶತಮಾನಗಳಿಂದಲೂ ಗುಲಾಮರ ಮಾರಾಟದಿಂದ ರಾಜಮನೆತನಕ್ಕೆ ಲಾಭವಿದೆ ಎಂದರು. “ನಮ್ಮ ಚಳುವಳಿ ರಾಜಮನೆತನಕ್ಕೆ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸುತ್ತದೆ” ಎಂದು ಡೆನ್ನಿ ಹೇಳಿದರು.

ಬಾರ್ಬಡೋಸ್ ಕಾಮನ್‌ವೆಲ್ತ್‌ನ ಭಾಗವಾಗಿ ಮುಂದುವರಿಯುತ್ತದೆ, ಇದು ಬ್ರಿಟಿಷ್ ರಾಜಮನೆತನದ ಆಳ್ವಿಕೆಯಲ್ಲಿರುವ 54 ದೇಶಗಳ ಗುಂಪಾಗಿದೆ. ಇವುಗಳಲ್ಲಿ ಆಫ್ರಿಕಾ, ಅಮೆರಿಕ, ಯುರೋಪ್ ಮತ್ತು ಏಷ್ಯಾದ ದೇಶಗಳು ಸೇರಿವೆ.

Advertisement
Share this on...