ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ (Sheikh Mohammed bin Rashid Al Maktoum) ಅವರು ಭಾನುವಾರ (ಜನವರಿ 29, 2023) ಅಲ್ ಮಿನ್ಹಾದ್ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ‘ಹಿಂದ್ ಸಿಟಿ’ ಎಂದು ಮರುನಾಮಕರಣ ಮಾಡಿದ್ದಾರೆ. UAE ಯ ಅಧಿಕೃತ ಸುದ್ದಿ ಸಂಸ್ಥೆ WAM ಈ ಮಾಹಿತಿಯನ್ನು ನೀಡಿದೆ. ಹಿಂದ್ 1 ರಿಂದ ಹಿಂದ್ 4 ರವರೆಗೆ 4 zone ಗಳನ್ನ ಹೊಂದಿರುವ ಈ ನಗರವು 83.9 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ ಎಂದು ಅವರು ಹೇಳಿದರು.
The Vice President and Prime Minister of the UAE and Ruler of Dubai, Sheikh Mohammed bin Rashid Al Maktoum, has renamed the Al Minhad district and its surrounding areas to 'Hind City'.
Follow @NewsreelsIndia for more news updates!#dubai #UAE #news #newsreels pic.twitter.com/XlwiBnM6RO
— Newsreels Trending India (@NRTrendingIndia) January 31, 2023
ಈ ಸುದ್ದಿ ಭಾರತಕ್ಕೆ ತಲುಪಿದ ತಕ್ಷಣ, ಕೆಲವರು ಸೋಶಿಯಲ್ ಮೀಡಿಯಾ ಯೂಸರ್ ಗಳು ಭಾರತೀಯರ ಕೊಡುಗೆಯನ್ನು ಗುರುತಿಸಲು ದುಬೈನ ಈ ಪ್ರದೇಶಗಳನ್ನು ಮರುನಾಮಕರಣ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ, ಹೆಸರು ಬದಲಾವಣೆಯ ಹಿಂದೆ ಯಾವುದೇ ಅಧಿಕೃತ ಕಾರಣವನ್ನು ನೀಡಲಾಗಿಲ್ಲ. ಅಲ್ ಮಿನ್ಹಾದ್ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮರುನಾಮಕರಣದ ಹಿಂದಿನ ನಿಜವಾದ ಕಾರಣ ಇದಲ್ಲ.
Ruler of Dubai and PM of UAE, Sheikh Mohammed bin Rashid Al Maktoum has ordered that a district in the emirate be renamed.
Al Minhad and its surrounding 84 Square KM areas will now be known as “Hind City” to honour the contribution of India and Hindus towards humanity. pic.twitter.com/3o5y45FLSU
— Megh Updates 🚨™ (@MeghUpdates) January 30, 2023
ಹಿಂದ್ ಎಂಬುದು ಅರೇಬಿಕ್ ಭಾಷೆಯಲ್ಲಿ ಅನೇಕ ವಿಷಯಗಳನ್ನು ಅರ್ಥೈಸಬಲ್ಲದು. ಇದು ಹಳೆಯ ಅರೇಬಿಕ್ ಹೆಸರು. ವಾಸ್ತವವಾಗಿ, ಶೇಖ್ ಮೊಹಮ್ಮದ್ ಅವರ ಮೊದಲ ಹೆಂಡತಿಯ ಹೆಸರು ಕೂಡ ಹಿಂದ್ ಆಗಿದೆ. ಶೇಖ್ ಮೊಹಮ್ಮದ್ ಅವರ ಪತ್ನಿ ಹಿಂದ್ ಬಿಂತ್ ಅಲ್ ಮಕ್ತೌಮ್ ಅವರನ್ನು ಏಪ್ರಿಲ್ 26, 1979 ರಂದು ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದರು. ದಂಪತಿಗೆ 12 ಮಕ್ಕಳಿದ್ದಾರೆ, ಇವರಲ್ಲಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್, ಕ್ರೌನ್ ಪ್ರಿನ್ಸ್ ಮತ್ತು ದುಬೈ ಕ್ರೌನ್ ಎರಡನೇ ಸಾಲಿನಲ್ಲಿದ್ದಾರೆ. ಆದ್ದರಿಂದ, ಈ ಪ್ರದೇಶಗಳಿಗೆ ಅವರ ಹೆಸರನ್ನು ಇಟ್ಟಿರಬಹುದು.
ಹಿಂದ್ ಎಂಬುದು ಅರೇಬಿಕ್ ಭಾಷೆಯಲ್ಲಿ ಒಂಟೆಗಳ ದೊಡ್ಡ ಹಿಂಡನ್ನೂ ಸೂಚಿಸುತ್ತದೆ. 100 ಅಥವಾ ಹೆಚ್ಚಿನ ಒಂಟೆಗಳನ್ನು ಹಿಂದ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಹೆಣ್ಣುಮಕ್ಕಳಿಗೆ ಅರೇಬಿಕ್ನಲ್ಲಿ ಹಿಂದ್ ಎಂದು ಹೆಸರಿಡುವುದೆಂದರೆ ಆಕೆಗೆ 100 ಅಥವಾ ಅದಕ್ಕಿಂತ ಹೆಚ್ಚಿನ ಒಂಟೆಗಳನ್ನು ಸಿಗಬೇಕು ಎಂದು ಪ್ರಾರ್ಥಿಸುವುದು. ಅದೇ ಸಮಯದಲ್ಲಿ, ಹಿಂದ್ ಭಾರತವನ್ನು ಸಹ ಉಲ್ಲೇಖಿಸಬಹುದು. ಅರಬ್ಬರು ಭಾರತೀಯರನ್ನು ಹಿಂದಿ ಅಥವ ಹಿಂದ್ ಎಂದೂ ಕರೆಯುತ್ತಾರೆ.
ಹಾಗಾಗಿ ಈ ಪ್ರದೇಶದ ಮರುನಾಮಕರಣಕ್ಕೆ ಯಾವುದೇ ಅಧಿಕೃತ ಕಾರಣ ನೀಡಲಾಗಿಲ್ಲ. ಈ ನಿಟ್ಟಿನಲ್ಲಿ ಭಾರತದ ಕೆಲ ಮಾಧ್ಯಮಗಳು UAE ಪ್ರಧಾನ ಮಂತ್ರಿಗಳ ಕಚೇರಿಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವಂತೆ ವಿನಂತಿಸಿವೆ. ಆ ಮಾಹಿತಿ ಬಂದ ಕೂಡಲೇ ನಾವು ಕೂಡ ಈ ಕುರಿತಾದ updates ನಿಮಗೆ ನೀಡುತ್ತೇವೆ.