ನೀಲಗಿರಿ ಮರವನ್ನು ಬ್ಯಾನ್ ಮಾಡಿದ್ಯಾಕೆ ? ನಿಮ್ಮ ಮನೆ ಬಳಿ ಇದ್ದರೆ ಏನಾಗುತ್ತೆ ಗೊತ್ತಾ..?

in ಕನ್ನಡ ಮಾಹಿತಿ 1,259 views

ಫೆಬ್ರವರಿ 23, 2017 ರಂದು ಕರ್ನಾಟಕದ ಹೈಕೋರ್ಟ್ ಒಂದು ತೀರ್ಪನ್ನು ನೀಡುತ್ತದೆ. ಇನ್ನು ಮುಂದೆ ಯಾರು ತಮ್ಮ ಜಮೀನುಗಳಲ್ಲಿ ಮತ್ತೆ ತಮ್ಮ ಜಾಗಗಳಲ್ಲಿ ಯಾವುದೇ ಕಾರಣಕ್ಕೂ ನೀಲಗಿರಿ ಮರವನ್ನ ಬೆಳೆಸಬಾರದು ಇನ್ಮುಂದೆ ನೀಲಗಿರಿ ಮರವನ್ನ ಬೆಳೆಸುವುದು ನಿಷೇಧಿಸಲಾಗಿದೆ ಎಂಬ ತೀರ್ಪನ್ನ ಕೊಡುತ್ತದೆ. ಏನಿದು..? ನೀಲಗಿರಿ ಮರವನ್ನ ಬೆಳೆಸುವುದರಿಂದ ಯಾರಿಗೆ ಏನು ತೊಂದರೆ ಆಗುತ್ತೆ..? ಅದನ್ನ ಯಾಕೆ ಬ್ಯಾನ್ ಮಾಡಿದರು ಅಂತೀರಾ..?
ವೈಜ್ಞಾನಿಕವಾಗಿ ದೃಢ ಪಟ್ಟಿರುವ ಮಾಹಿತಿಯ ಪ್ರಕಾರ ಎಲ್ಲ ಜಾತಿಯ ಮರಗಳಿಗಿಂತ ಅತಿ ಹೆಚ್ಚು ನೀರನ್ನ ಅಂತರ್ಜಾಲ ಮಟ್ಟದಿಂದ ಪಡೆಯುವ ಏಕೈಕ ಮರ ಅಂದರೆ ಅದು ನೀಲಗಿರಿ ಮರ. ಒಂದು ನೀಲಗಿರಿ ಮರ ಪ್ರತಿ ದಿನಕ್ಕೆ 15 ರಿಂದ 20 ಲೀಟರ್ ನೀರನ್ನ ನೆಲದಿಂದ ಹೀರಿಕೊಳ್ಳುವಂತಹ ಶಕ್ತಿ ಈ ಮರಗಳಿಗಿದೆ. ಇದರಿಂದ ಅಂತರ್ಜಾಲ ಮಟ್ಟ ಪಾತಾಳಕ್ಕೆ ಇಳಿಯುತ್ತೆ. ಮತ್ತೆ ನೀಲಗಿರಿ ಮರಗಳಿಗಿರುವ ಸ್ಥಳಗಳಲ್ಲಿ ಹೆಚ್ಚು ತೇವಾಂಶ ಕೂಡ ಇರುವುದಿಲ್ಲ. ಜೊತೆಗೆ ಇಲ್ಲಿ ಯಾವುದೇ ಬೇರೆ ಮರ-ಗಿಡಗಳು ಬೆಳೆಯುವುದಿಲ್ಲ. ಮತ್ತೆ ಇದರಿಂದ ಅರಣ್ಯ ಕೂಡ ಅಭಿವೃದ್ಧಿಯಾಗುವುದಿಲ್ಲ.

Advertisement

ಕೇವಲ ಒಂದು ಮರ ದಿನಕ್ಕೆ 15 ರಿಂದ 20 ಲೀಟರ್ ನೀರನ್ನು ಹೀರಿಕೊಳ್ಳುತ್ತದೆ ಅಂದರೆ ನೂರಾರು ಸಾವಿರಾರು ಮರಗಳು ಇರುವ ಜಾಗದಲ್ಲಿ ಎಷ್ಟು ನೀರನ್ನ ಹೀರಿಕೊಳ್ಳುತ್ತದೆ. ಅಂತರ್ಜಾಲ ಮಟ್ಟ ಯಾವ ಮಟ್ಟಕ್ಕೆ ಪಾತಾಳಕ್ಕೆ ಕುಸಿಯುತ್ತದೆ ಅನ್ನುವುದನ್ನು ನೀವು ಒಮ್ಮೆ ಯೋಚನೆ ಮಾಡಿ. ಮತ್ತೆ ಆ ಜಾಗಗಳಲ್ಲಿ ಒಂದುವರೆ ಸಾವಿರ ಅಡಿವರೆಗೂ ಬೋರ್ ವೆಲ್ ಕೊರೆಸಿದರುನೂ ನೀರು ಸಿಗುತ್ತಿಲ್ಲ. ನೀಲಗಿರಿ ತೋಪನ್ನ ಬೆಳೆಸುವುದು ಪರಿಸರಕ್ಕೆ ಮಾರಕ ಇಂತಹ ತೋಪುಗಳ ಅಕ್ಕ-ಪಕ್ಕದಲ್ಲಿ ನೀರಿನಾಂಶ ನಾಶವಾಗಿ ಇತರೆ ಸಸ್ಯಗಳು ಬೆಳೆಯದ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಮರಗಳಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರ ಇಲ್ಲದಂತಾಗುತ್ತದೆ. ಹಾಗಾಗಿ ಯಾವ ರೈತರುಗಳು ತಮ್ಮ ಜಾಗಗಳಲ್ಲಿ ಮತ್ತೆ ಜಮೀನುಗಳಲ್ಲಿ ನೀಲಗಿರಿ ಮರವನ್ನ ಬೆಳೆಸುತ್ತಿದ್ದಾರೋ ಅಂತಹ ಜಾಗಗಳನ್ನ ಸರ್ಕಾರ ವಶ ಮಾಡಿಕೊಳ್ಳುತ್ತದೆಯಂತೆ.

ಅವರಿಗೆ ಮತ್ತೆ ಬ್ಯಾಂಕ್ ಗಳಲ್ಲಿ ಯಾವುದೇ ಕಾರಣಕ್ಕೂ ಲೋನ್ ಸಿಗುವುದಿಲ್ಲ ಅಂತ ಪ್ರತಿ ಜಿಲ್ಲೆಗಳಲ್ಲಿಯೂ ರೈತರಿಗೆ ಹೇಳಲಾಗುತ್ತದೆ. ಆದರೆ ವಿಪರ್ಯಾಸ ಏನು ಅಂದರೆ ಇವತ್ತು ಎಷ್ಟೋ ಸರ್ಕಾರಿ ಜಾಗಗಳಲ್ಲಿ ಮತ್ತೆ ಗೋಮಾಳಗಳಲ್ಲಿ ಎಕರೆಗಟ್ಟಲೆ ನೀಲಗಿರಿ ತೋಪುಗಳು ಬೆಳೆದುಕೊಂಡು ನಿಂತಿವೆ. ಈ ಮರಗಳನ್ನ ಬೆಳೆಯುವುದಕ್ಕೆ ಬಿಡಬೇಡಿ ಅಂತ ಕೋರ್ಟಿನ ಆದೇಶ ಇದ್ದರೂ ಕೂಡ ಆ ಜಾಗಗಳ ಲಿಮಿಟ್ ಗೆ ಒಳಪಡುವ ಅಧಿಕಾರಿಗಳ ಆ ಒಂದು ತೀರ್ಪನ್ನ ಕಿವಿಗೆ ಹಾಕಿಕೊಂಡಿಲ್ಲ ಮತ್ತೆ ಈ ಮರಗಳಿಗೆ ಯಾವುದೇ ಮಳೆ ಬೇಕಾಗಿಲ್ಲ, ನೀರು ಬೇಕಾಗಿಲ್ಲ ಆ ನೆಲದಲ್ಲಿರುವ ಸುತ್ತ-ಮುತ್ತಲಿನ ನೀರನ್ನ ಹೀರಿಕೊಂಡು ಬೆಳೆಯುವಂತಹ ಶಕ್ತಿ ಈ ಮರಕ್ಕಿದೆ. ಮತ್ತೆ ಈ ಮರಗಳನ್ನ ಕತ್ತರಿಸಿ ಬಿಸಾಕಿದರನ್ನೂ ಮತ್ತೆ ಬಹು ಬೇಗ ಬೆಳೆಯುವಂತಹ ಗುಣ ಈ ಮರಗಳಿಗೆ ಇದೆ.
ಹಾಗಾಗಿ ಈ ಮರವನ್ನ ಬೆಳೆಯುವುದು ಪರಿಸರಕ್ಕೆ ಮಾರಕ ಮತ್ತೆ ಅಂತರ್ಜಾಲ ಮಟ್ಟ ಪಾತಾಳಕ್ಕೆ ಕುಸಿಯುತ್ತದೆ. ಮತ್ತೆ ಬೇರೆ ಮರ-ಗಿಡಗಳಿಗೆ ಉಳಿಗಾಲವಿಲ್ಲ ಅಂತ ಯೋಚಿಸಿ ನೀಲಗಿರಿ ಮರವನ್ನ ಬೆಳೆಯುವುದನ್ನ ನಿಷೇಧ ಮಾಡಲಾಯಿತು.

ಇವತ್ತಿಗೂ ಕೂಡ ಸಾಕಷ್ಟು ಕಡೆಗಳಲ್ಲಿ ನೀಲಗಿರಿ ಮರವಿದೆ. ನೀಲಗಿರಿ ಮರವನ್ನ ಸಂಪೂರ್ಣವಾಗಿ ನಿಷೇಧ ಮಾಡಬೇಕು ಅಂದರೆ ಅದನ್ನ ಬುಡ ಸಮೇತ ಕಿತ್ತು ಬಿಸಾಕ ಬೇಕಾಗುತ್ತದೆ. ಬರೀ ಮರವನ್ನಷ್ಟೆ ಕಡಿದರೆ ಸಾಲದು ಅದು ತುಂಬಾ ಬೇಗ ಬೆಳೆಯುವಂತಹ ಗುಣವನ್ನು ಹೊಂದಿರುವುದರಿಂದ ಇನ್ನು ಬಹುತೇಕ ಜಿಲ್ಲೆಗಳಲ್ಲಿ ಸಾವಿರಾರು ಎಕರೆ ನೀಲಗಿರಿ ಮರ ಇವತ್ತಿಗೂ ಇದೆ. ಈ ಕಾರಣಗಳಿಗೋಸ್ಕರನೇ ನೀಲಗಿರಿ ಮರವನ್ನ ಬೆಳೆಯಬಾರದು ಅಂತ ಹೈಕೋರ್ಟ್ ತೀರ್ಪನ್ನ ನೀಡಿತ್ತು.

– ಸುಷ್ಮಿತಾ

Advertisement
Share this on...