2 ದಿನಗಳ ಕಾಲ ಪತಿಯ ಶ-ವದ ಬಳಿಯೇ ಕುಳಿತಿದ್ದ ಸುನಿತಾ: ಕಲ್ಯಾಣನ‌ ಕೈ ಬಿಟ್ಟು ಪ್ರವಾಹದಲ್ಲಿ ಕೊಚ್ಚಿ ಹೋಗೇಬಿಟ್ಟಳು

in Kannada News/News/Story/ಕನ್ನಡ ಮಾಹಿತಿ 426 views

ದೇವಭೂಮಿ ಉತ್ತರಾಖಂಡ ಮತ್ತೊಮ್ಮೆ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಚಮೋಲಿ ಜಿಲ್ಲೆಯಲ್ಲಿ ಗ್ಲೇಷಿಯರ್ ಸ್ಪೊ-ಟ-ವಾಗಿದ್ದರಿಂದ ಮತ್ತೊಮ್ಮೆ ಪ್ರವಾಹದ ಸ್ಥಿತಿ ಸೃಷ್ಟಿಯಾಗಿ ಅಪಾರ ಪ್ರಮಾಣದ ಹಾ-ನಿ-ಯನ್ನುಂಟುಮಾಡಿದೆ. ವರದಿಗಳ ಪ್ರಕಾರ, ಧೌಲಿಗಂಗಾ ಮತ್ತು ಅಲಕನಂದಾ ನೀರಿನ ಮಟ್ಟ ಏರಿಕೆಯಿಂದಾಗಿ 100 ರಿಂದ 150 ಜನರು ಕೊ-ಚ್ಚಿ ಹೋಗಿದ್ದಾರೆ. ಈ ಘಟನೆಯು ‘ಕೇದಾರನಾಥರ 2013 ರ ದುರಂತ’ದ ಭಯಾನಕ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದೆ. ಕೇದಾರನಾಥದಲ್ಲಿ ನಡೆದ ಆ ದುರಂತದಲ್ಲಿ ಸಾವಿರಾರು ಜನರು ಸಾ-ವ-ನ್ನ-ಪ್ಪಿ-ದ್ದರು. ಕೆಲವರು ಅದೃಷ್ಟವಂತರ ಜೀ-ವ ಉಳಿದಿತ್ತು. ಆದರೆ ಆ ನೈಸರ್ಗಿಕ ವಿಪತ್ತಿಗೆ ಸೆಡ್ಡುಹೊಡೆದು ನಿಂತರೂ ಆ ನೆನಪುಗಳು ಮಾತ್ರ ಇನ್ನೂ ಹೃದಯ ವಿ-ದ್ರಾ-ವ-ಕ-ವಾಗೇ ಅವರಲ್ಲಿ ಕಾಡುತ್ತಿವೆ‌.

Advertisement

ಅಂತಹ ನೂರಾರು ಕಥೆಗಳಲ್ಲಿ ಒಂದು ಸಹರಾನ್ಪುರದ ನಿವಾಸಿ ಸವಿತಾ ನಾಗ್ಪಾಲ್ ಅವರ ಪತಿ ಸುರೇಂದ್ರ ನಾಗ್ಪಾಲ್ ರವರದ್ದು. ಈ ದಂಪತಿಗಳು ಕೇದಾರನಾಥ ಯಾತ್ರೆಗೆ ತೆರಳಿದ್ದರು. ವೃದ್ಧ ದಂಪತಿಗಳು ಹೋಟೆಲ್‌ನಲ್ಲಿ ತಂಗಿದ್ದ ಸಮಯದಲ್ಲೇ ಅಂದು ರಾತ್ರಿ ಕೇದಾರನಾಥ್ ದಲ್ಲಿ ಪ್ರವಾಹ ಎದುರಾಗಿತ್ತು. ತನ್ನ ಜೀ-ವ-ವನ್ನು ಉಳಿಸಿಕೊಳ್ಳಲು, ಸುರೇಂದ್ರ ನಾಗ್ಪಾಲ್ ಹೋಟೆಲ್ ನಿಂದ ಹೊರಬಂದು ರಸ್ತೆಯ ಮೇಲೆ ಬಂದು ನಿಂತರು ಆದರೆ ಅವರಿಗೆ ಅಲ್ಲಿ ಮುಂದಾಗಲಿರುವ ಭ-ಯಾ-ನ-ಕ ಘಟನೆಯ ಬಗ್ಗೆ ಅರಿವೂ ಇರಲಿಲ್ಲ. ಹೊರಗೆ ನೀರಿನ ಹರಿವು ಎಷ್ಟು ವೇಗವಾಗಿತ್ತೆಂದರೆ ಸುರೇಂದ್ರ ನಾಗ್ಪಾಲ್ ಆ ಪ್ರವಾಹದಲ್ಲಿ ಸಿಲುಕಿ ಸಾ-ವ-ನ್ನ-ಪ್ಪಿ-ದರು. ಸವಿತಾ ಸುಮಾರು ಎರಡು ದಿನಗಳ ಕಾಲ ಗಂಡನ ದೇ-ಹ-ದ ಪಕ್ಕದಲ್ಲೇ ಮಲಗಿದ್ದರು. ಮೂರನೆಯ ದಿನ ಅವರ ಮಗ ಹೇಗೋ ಹರಸಾಹಸ ಪಟ್ಟು ಅಲ್ಲಿಗೆ ತಲುಪಿದಾಗ, ತಂದೆ ಸುರೇಂದ್ರ ನಾಗ್ಪಾಲ್ ಅವರ ಅಂ-ತ್ಯ-ಕ್ರಿ-ಯೆ ಮಾಡಿ ಮುಗಿಸಲಾಗಿತ್ತು. ತಂದೆ ಮುಖ ನೋಡಲೂ ಆತನಿಗೆ ಸಾಧ್ಯವಿಲ್ಲ.

ಇಂತಹುದೇ ಒಂದು ಘಟನೆ ರಾಜಸ್ಥಾನದ ಕಲ್ಯಾಣ್ ಸಿಂಗ್ ರವರ ಜೊತೆಗೂ ನಡೆದಿತ್ತು ಅದರಲ್ಲಿ ಅವರು ತಮ್ಮ ಪತ್ನಿಯನ್ನ ಕಳೆದುಕೊಂಡಿದ್ದರು. ತಮ್ಮ ಪತ್ನಿಯ ಜೊತೆ ಅವರು ಕೇದಾರನಾಥ್ ಯಾತ್ರೆಗೆ ಬಂದಿದ್ದು ಹೋಟೆಲ್ ನಲ್ಲಿ ತಂಗಿದ್ದರು. ರಾತ್ರೋ ರಾತ್ರಿ ಹೋಟೆಲ್ ನಲ್ಲಿ ಎಲ್ಲಾ ಕಡೆ ನೀರು ತುಂಬಿಬಿಟ್ಟಿತ್ತು, ಆ ಕಾರಣದಿಂದ ಮಲಗಿದ್ದ ಕಲ್ಯಾಣ್ ಸಿಂಗ್ ಹಾಗು ಪತ್ನಿಗೆ ಎಚ್ಚರವಾಗಿಬಿಟ್ಟಿತ್ತು. ಆಗ ತಮ್ಮ ಪ್ರಾ-ಣ ಉಳಿಸಿಕೊಳ್ಳಲು ಅವರು ಹೋಟೆಲ್‌ನ ಮೂರನೆಯ ಮಹಡಿಗೆ ಹೋದರು, ಆಗಲೇ ಕಲ್ಯಾಣ್ ಸಿಂಗ್ ರವರ ಕೈ ಪತ್ನಿಯ ಕೈಯಿಂದ ಜಾರಿಬಿಟ್ಟಿತು ಹಾಗು ಆಕೆ ನೀರಿನಲ್ಲಿ ಕೊ-ಚ್ಚಿ-ಕೊಂಡು ಹೋದರು. ಕೆಲ ಸಮಯದಲ್ಲೇ ಅವರ ಜೊತೆಗಿದ್ದ ಇನ್ನಿತರ ಯಾತ್ರಾರ್ಥಿಗಳೂ ವೇಗವಾದ ಹರಿವಿನ ನೀರಿಗೆ ಸಿಲುಕಿ ಕೊ-ಚ್ಚಿ-ಹೋದರು. ಈ ಘಟನೆಯ ಬಗ್ಗೆ ಮಾತನಾಡುತ್ತ ಕಲ್ಯಾಣ್ ಸಿಂಗ್, “ಆ ರಾತ್ರಿ ನಿಜಕ್ಕೂ ನಮ್ಮ ಪಾಲಿಗೆ ಅತ್ಯಂತ ಭಯಾನಕ ಹಾಗು ಕಠಿಣ ಸಮಯವಾಗಿತ್ತು, ಅದನ್ನ ನಾನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ” ಎನ್ನುತ್ತಾರೆ.

ಕೇದಾರನಾಥ ದೇವಾಲಯದ ಅರ್ಚಕ ರವೀಂದ್ರ ಭಟ್ ಅವರು 16-17 ಜೂನ್ 2013 ರಂದು ನಡೆದ ಆ ಭಯಾನಕ ಘಟನೆಯ ಬಗ್ಗೆ ಮಾತನಾಡುತ್ತ, “ರಾತ್ರಿಯ ಹೊತ್ತಿಗೆ ಎಲ್ಲವೂ ಸಾಮಾನ್ಯವಾಗಿತ್ತು. ರಾತ್ರಿ 8 ಗಂಟೆಯವರೆಗೆ ಯಾರಿಗೂ ಅಲ್ಲಿ ಸಂಭವಿಸಬಹುದಾಗಿದ್ದ ಘಟನೆಯ ಬಗ್ಗೆ ಯಾವುದೇ ಸೂಚನೆಯಾಗಲಿ ಅಥವಾ ಕಲ್ಪನೆಯಾಗಲಿ ಇರಲಿಲ್ಲ. ಇದ್ದಕ್ಕಿದ್ದಂತೆ ದೇವಾಲಯದ ನಾಲ್ಕು ದಿಕ್ಕುಗಳಿಂದ ನೀರು ಹರಿಯಿತು. ಜೀ-ವ ಉಳಿಸಿಕೊಳ್ಳಲು, ಕೆಲವು ಪ್ರಯಾಣಿಕರು ದೇವಾಲಯದ ಒಳಗೆ ಆಶ್ರಯ ಪಡೆದರು, ಜನರು ರಾತ್ರಿಯಿಡೀ ಭ-ಯ-ದ ನೆರಳಲ್ಲೇ ನಡುಗುತ್ತಿದ್ದರು. ಜೂನ್ 17 ರ ಬೆಳಿಗ್ಗೆ ಸುಮಾರು 6 ಗಂಟೆಗೆ, ಪ್ರವಾಹವು ಮತ್ತೊಮ್ಮೆ ಸಂಭವಿಸಿತು ಮತ್ತು ಈ ಸಮಯದ ಪ್ರವಾಹ‌ ಮಾತ್ರ ಮತ್ತಷ್ಟು ಭೀ-ಕ-ರ-ವಾಗಿತ್ತು. ಕಲ್ಲುಗಳು, ಬಂಡೆಗಳು ಮತ್ತು ಕಣ್ಣು ಹಾಯಿಸಿದಲ್ಲೆಲ್ಲಾ ಮೃ-ತ ದೇ-ಹ-ಗಳೇ ಕಾಣುತ್ತಿದ್ದವು. ಬಹುಶಃ ಆ ದೃಶ್ಯಕ್ಕಿಂತ ಭ-ಯಾ-ನ-ಕ-ವಾದ ದೃಶ್ಯ ಮತ್ತೊಂದಿರಲಿಕ್ಕೆ ಸಾಧ್ಯವೇ ಇಲ್ಲ” ಎನ್ನುತ್ತಾರೆ.

ಇಂತಹುದೇ ಒಂದು ಕಥೆ ರಾಜಸ್ಥಾನದ ಸೀಕರ್, ಚುರು ಹಾಗು ಝುಂಝುನ್ ಊರುಗಳಿಂದಲೂ 12 ಕುಟುಂಬಗಳು ಕೇದಾರನಾಥ್ ಧಾಮ್ ಗೆ ಯಾತ್ರೆಗೆಂದು ತೆರಳಿದ್ದವು. ಕೇದಾರನಾಥ್ ದಲ್ಲಿ ಏನಾಗುತ್ತಿದೆ ಅಂತ ತಿಳಿಯೋಕೂ ಮುಂಚೆಯೇ ಅವರೆಲ್ಲಾ ಆ ಪ್ರವಾಹದಲ್ಲಿ ಸಿಲುಕಿ ಸಾ-ವ-ನ್ನ-ಪ್ಪಿ-ದರು ಹಾಗು ಅವರ‌್ಯಾವತ್ತೂ ಮನೆಗೆ ಮರಳಲೇ ಇಲ್ಲ. ಕೆಲವರು ಹೋಟೆಲ್‌ನ ಅವಶೇಷಗಳಡಿ ಸಿಲುಕಿ ಸ-ತ್ತ-ರೆ ಇನ್ನು ಹಲವಾರು ಜನರಂತೂ ಶಾಶ್ವತವಾಗಿ ಕಣ್ಮರೆಯೇ ಆಗಿದ್ದರು.

ಅಂದಿನಿಂದ ಇಂದಿನವರೆಗೂ ಅಂದು ಕಣ್ಮರೆಯಾದವರ ಕುಟುಂಬದವರು ತಮ್ಮ ಕುಟುಂಬ ಸದಸ್ಯರು ಇವತ್ತು ಬರಬಹುದು ನಾಳೆ ಬರಬಹುದು ಅಂತ ಕಾಯುತ್ತಲೇ ಇದ್ದಾರೆ ಆದರೆ ಆ ಕನಸು ಕನಸಾಗೇ ಉಳಿಯಲಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ ಕೇದಾರನಾಥ್ ಪ್ರವಾಹದಲ್ಲಿ ಸತ್ತವರ ಸಂಖ್ಯೆ 4500 ಕ್ಕೂ ಅಧಿಕವಿದೆ. ಆದರೆ ಇದಕ್ಕೂ ಹೆಚ್ಚಿನ ಜನ ಸಾವನ್ನಪ್ಪಿದ್ದಾರೆ, ಇಂದಿನವರೆಗೂ ಅವರ ಸುಳಿವೇ ಇಲ್ಲ.

Advertisement
Share this on...