115 ವರ್ಷಗಳ ಬಳಿಕ ತೆರೆದ ಮಹಾರಾಣಾ ಕೋಣೆಯ ಈ ಬಾಗಿಲು: ಅದರೊಳಗೆ ಸಿಕ್ಕ ಖಜಾನೆ ಕಂಡು ಶಾಕ್ ಆದ ತಜ್ಞರು

in Kannada News/News/Story/ಕನ್ನಡ ಮಾಹಿತಿ 5,829 views

ಹಳೆಯ ಕಾಲದ ರೂಮ್ ಆಗಿರುವುದರಿಂದ ಅದನ್ನ ತೆರೆದರೆ ಏನಾದರು ಅನಾಹುತವಾಗಬಹುದೆಂದು 115 ವರ್ಷಗಳಿಂದ ಮುಚ್ಚಲಾಗಿದ್ದ ಶಾಲೆಯೊಳಗಿನ ಬಾಗಿಲೊಂದನ್ನ ಇದೀಗ ತೆರೆಯಲಾಗಿದೆ. ಅಲ್ಲಿ ಕೋಣೆಯೊಳಗೆ ಇತಿಹಾಸದ ಎಂಥಾ ಖಜಾನೆ ಸಿಕ್ಕಿದೆಯೆಂದರೆ ಅದು ಭಾರತದ ಪರಂಪರೆಯ ಹಾಗು ಪ್ರಾಚೀನತೆಯ ಬಗ್ಗೆ ವಿವರಿಸುವ ಖಜಾನೆಯಾಗಿದೆ. 115 ವರ್ಷಗಳ ಬಳಿಕ ರಾಜಸ್ಥಾನದ ಧೌಲಪುರ್‌ ದ ಮಹಾರಾಣಾ ಶಾಲೆಯ 2-3 ಕೋಣೆಗಳನ್ನ ತೆರೆದ ಬಳಿಕ ಕೋಣೆಯಲ್ಲಿ ರಾಶಿ ರಾಶಿಯಷ್ಟು ಪುಸ್ತಕಗಳ ಖಜಾನೆಯೇ ಸಿಕ್ಕಿದೆ.

Advertisement

ವಜ್ರಗಳು ಕಲ್ಲಿದ್ದಲು ಗಣಿಯಿಂದ ಸಿಗುತ್ತವೆ, ಕಮಲವು ಕೆಸರಿನಲ್ಲಿ ಅರಳುತ್ತದೆ, ಭೂಮಿಯೊಳಗೆ ಚಿನ್ನ ಸಿಗುತ್ತದೆ ಆದರೆ ಅದ್ಭುತ ಭಂಡಾರವನ್ನೇ ಹೊಂದಿರುವ ಈ ಶಾಲಾ ಕೊಠಡಿಯನ್ನು ಮಾತ್ರ 115 ವರ್ಷಗಳಿಂದ ತೆರೆಯಲಾಗಿರಲಿಲ್ಲ, ಇದನ್ನು ಜಂಕ್ ಯಾರ್ಡ್ ಅಂದರೆ ವೇಸ್ಟ್ ರೂಂ ಎಂದು ಪರಿಗಣಿಸಲಾಗಿತ್ತು. ಎಣಿಸಲಾರದಷ್ಟಿರುವ ಕೊಠಡಿಗಳು, ಆದರೆ ಆ ಕೋಣೆಯ ಬಾಗಿಲು ತೆರೆದಾಗ, ಇತಿಹಾಸಕ್ಕೆ ಸಂಬಂಧಿಸಿದಂತಹ ಕಥೆಗಳು ಹಾಗು ಅನೇಕ ಕುರುಹುಗಳು ಹೊರಬಂದಿವೆ, ಇದು ಇತಿಹಾಸಕರರಿಗೂ ದಂಗುಬಡಿಸಿವೆ.

ಸಾಂದರ್ಭಿಕ ಚಿತ್ರ

ಧೋಲ್‌ಪುರದ ಮಹಾರಾಣ ಶಾಲೆಯ ಮುಚ್ಚಿದ ಕೊಠಡಿಗಳನ್ನ ತೆರೆದಾಗ, ಅಲ್ಲಿ ಪುಸ್ತಕಗಳ ನಿಧಿಯೇ ಸಿಕ್ಕಿದೆ, 115 ವರ್ಷಗಳ ಕಾಲ, ಮಹಾರಾಣ ಶಾಲೆಯ ಎರಡು ಹಾಗು ಮೂರು ಕೋಣೆಗಳಲ್ಲಿ ಒಂದು ಲಕ್ಷ ಪುಸ್ತಕಗಳನ್ನು ಕಪಾಟಿನಲ್ಲಿ ಲಾಕ್ ಮಾಡಿ ಇಡಲಾಗಿತ್ತು. ಪುಸ್ತಕಗಳು ಸನ್ 1905 ಕ್ಕೂ ಹಳೆಯವು. ಈ ಪುಸ್ತಕಗಳನ್ನು ನೋಡಿದರೆ ಮಹಾರಾಜ ಉದಯಭಾನ್ ಅಪರೂಪದ ಪುಸ್ತಕಗಳ ಬಗ್ಗೆ ಒಲವು ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಮಹಾರಾಜ ಉದಯಭಾನ್ ಸಿಂಗ್ ಬ್ರಿಟಿಷ್ ಅವಧಿಯಲ್ಲಿ ಲಂಡನ್ ಮತ್ತು ಯುರೋಪ್‌ಗೆ ಪ್ರಯಾಣಿಸುತ್ತಿದ್ದರು. ನಂತರ ಅವರು ಈ ಪುಸ್ತಕಗಳನ್ನು ಅಲ್ಲಿಂದ ತರುತ್ತಿದ್ದರು.

ಈ ಪುಸ್ತಕಗಳಲ್ಲಿ ಅಂತಹ ಅನೇಕ ಪುಸ್ತಕಗಳಿವೆ, ಅದರಲ್ಲಿ ಶಾಯಿಯ ಬದಲು ಚಿನ್ನದ ನೀರನ್ನು ಬಳಸಲಾಗುತ್ತಿತ್ತು. 1905 ರಲ್ಲಿ, ಈ ಪುಸ್ತಕಗಳ ಬೆಲೆ 25 ರಿಂದ 65 ರೂಪಾಯಿಗಳ ನಡುವೆ ಇತ್ತು. ಆ ಸಮಯದಲ್ಲಿ ಒಂದು ತೊಲೆ ಚಿನ್ನಕ್ಕೆ 27 ರೂ. ಇತ್ತು, ಆದರೆ ಮಾರುಕಟ್ಟೆಯಲ್ಲಿ ಈ ಪುಸ್ತಕಗಳ ಬೆಲೆ ಈಗ ಲಕ್ಷ ರೂಪಾಯಿಗಳಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಸಿಕ್ಕಿರುವ ಎಲ್ಲಾ ಪುಸ್ತಕಗಳನ್ನ ಭಾರತ, ಲಂಡನ್ ಹಾಗು ಯುರೋಪಿನಲ್ಲಿ ಮುದ್ರಿಸಲಾಗಿವೆ. ಇದರಲ್ಲಿ 3 ಅಡಿ ಉದ್ದದ ಪುಸ್ತಕಗಳಲ್ಲಿ ಇಡೀ ವಿಶ್ವದ ಮತ್ತು ದೇಶಗಳ ರಾಜ ರಾಜ್ಯಗಳ ನಕ್ಷೆಗಳನ್ನು ಮುದ್ರಿಸಿವೆ.

ಪುಸ್ತಕಗಳ ಮೇಲೆ ಗೋಲ್ಡನ್ ಪ್ರಿಂಟಿಂಗ್ ಇದೆ. ಭಾರತ ಸರ್ಕಾರವು 1957 ರಲ್ಲಿ ಮುದ್ರಿಸಿದ ನ್ಯಾಷನಲ್ ಅಟ್ಲಾಸ್, ವೆಸ್ಟರ್ನ್-ಟಿಬೆಟ್ ಮತ್ತು ಬ್ರಿಟಿಷ್ ಬಾರ್ಡರ್ ಲ್ಯಾಂಡ್, ಸೇಕ್ರೆಡ್ ಕಂಟ್ರಿ ಆಫ್ ಹಿಂದೂ & ಬೌದ್ಧ 1906, ಅರೇಬಿಕ್, ಪರ್ಷಿಯನ್, ಉರ್ದು ಮತ್ತು ಹಿಂದಿ, ಆಕ್ಸ್‌ಫರ್ಡ್ ಅಟ್ಲಾಸ್, ಎನ್‌ಸೈಕ್ಲೋಪೀಡಿಯಾ, ಬ್ರಿಟಾನಿಕಾ, ಲಂಡನ್‌ನಲ್ಲಿ ಬರೆದ ಹಸ್ತಪ್ರತಿಗಳು, 1925 ರಲ್ಲಿ ಮಹಾತ್ಮ ಗಾಂಧಿಯವರ ಜೀವನಚರಿತ್ರೆಯ ಪುಸ್ತಕಗಳು ಇಲ್ಲು ದೊರೆತಿವೆ. ಇತಿಹಾಸಕಾರರು ಈ ಪುಸ್ತಕಗಳನ್ನು ಜ್ಞಾನದ ಭಂಡಾರವೆಂದೇ ಬಣ್ಣಿಸುತ್ತಿದ್ದಾರೆ.

115 ವರ್ಷಗಳಲ್ಲಿ ಶಾಲೆಯಲ್ಲಿ ಅನೇಕ ಸಿಬ್ಬಂದಿ ಬದಲಾದರು ಆದರೆ ಯಾರೂ ಮುಚ್ಚಿದ ಕೊಠಡಿಗಳನ್ನು ತೆರೆದಿರಲಿಲ್ಲ. ಕಸ ತುಂಬಿರುವ ಕಾರಣ ಸ್ವಚ್ಛಗೊಳಿಸಲು ಈ ಕೊಠಡಿಗಳನ್ನು ತೆರೆದಾಗ ಎಲ್ಲರೂ ದಿಗ್ಭ್ರಮೆಗೊಂಡರು, ಏಕೆಂದರೆ ಮೂರು ಕೋಣೆಗಳಲ್ಲಿ, ಪುಸ್ತಕಗಳೇ ತುಂಬಿದ್ದವು, ಈ ಪುಸ್ತಕಗಳ ಮೇಲೆ ಅವುಗಳ ಇತಿಹಾಸದ ಪ್ರತಿ ದಿನಾಂಕವೂ ಮುದ್ರಣವಾಗಿವೆ.

ಈ ಪುಸ್ತಕಗಳನ್ನು ಭದ್ರವಾಗುಯ ಜೋಪಾನವಾಗಿ ಇಡುವ ಅವಶ್ಯಕತೆಯಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಭವಿಷ್ಯದಲ್ಲಿ, ವಿದ್ಯಾರ್ಥಿಗಳು ಈ ಪುಸ್ತಕಗಳಿಂದ ಇತಿಹಾಸದ ಕುರಿತಾದ ಅನೇಕ ಮಾಹಿತಿಯನ್ನು ಪಡೆಯುತ್ತಾರೆ ಎನ್ನುತ್ತಾರೆ‌.

Advertisement
Share this on...