ನಮಸ್ಕಾರ ಸ್ನೇಹಿತರೆ ನಿಮಗೆ ರಹಸ್ಯಮಯ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರಾದರೆ ಇಂದು ನಿಮಗೆ ನಮ್ಮ ಧರ್ಮಕ್ಕೆ ಹಾಗು ನಂಬಿಕೆಗೆ ಸಂಬಂಧಿಸಿದ 21 ಸಾವಿರ ವರ್ಷಗಳಷ್ಟು ಪುರಾತನವಾದ ಕೈಲಾಶ ಪರ್ವತದ ಬಗ್ಗೆ ನಿಮಗೆ ತಿಳಿಸಿಲಿದ್ದೇವೆ. ಈ ರಹಸ್ಯ ತಿಳಿದು ಒಮ್ಮೆ ನೀವು ಹೌಹಾರುವಿರಿ.
ನಮ್ಮೆಲ್ಲರಲ್ಲೂ ಮಾನಸ ಸರೋವರದ ಕೈಲಾಶ ಪರ್ವತದ ಬಗ್ಗೆ ಅಪಾರ ನಂಬಿಕೆ ಹಾಗು ಭಕ್ತಿಯಿದೆ, ಯಾಕಂದ್ರೆ ಕೈಲಾಶ ಪರ್ವತ ಶಿವನ ಆವಾಸ ಸ್ಥಾನವಾಗಿದೆ ಎಂದೇ ಹೇಳಲಾಗುತ್ತದೆ. ಶಿವ ತನ್ನ ಪರಿವಾರದೊಂದಿಗೆ ಈಗಲೂ ಮಾನಸ ಸರೋವರದ ಕೈಲಾಶ ಪರ್ವತದಲ್ಲಿ ವಾಸಿಸುತ್ತಾನೆಂದು ಹೇಳಲಾಗುತ್ತದೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕೈಲಾಶ ಪರ್ವತ ಬರೋಬ್ಬರಿ 6638 ಮೀಟರ್ ಎತ್ತರದಲ್ಲಿದೆ ಹಾಗು ಈ ಪರ್ವತವನ್ನ ಹತ್ತುವುದು ಸಾಧ್ಯವೇ ಇಲ್ಲ. ಇದೇ ಕೈಲಾಶ ಪರ್ವತದ ರಹಸ್ಯವಾಗಿದೆ.
ಇದುವರೆಗೂ ಕೈಲಾಶ ಪರ್ವತದ ತುದಿಗೆ ಯಾರೂ ಕೂಡ ಮುಟ್ಟಿಲ್ಲ ಅಥವ ಆ ಪರ್ವತದ ತುತ್ತ ತುದಿಗೆ ಒಬ್ಬೇ ಒಬ್ಬ ನರಪಿಳ್ಳೆಯೂ ಹತ್ತೋಕೆ ಸಾಧ್ಯವಾಗಿಲ್ಲ. ಕೈಲಾಶ ಪವರ್ತದ ದರ್ಶನ ಮಾಡಬಯಸುವವರು ಮಾನಸ ಸರೋವರದಲ್ಲಿರುವ ಕೈಲಾಶ ಪರ್ವತದ ಪರಿಕ್ರಮ (ಸುತ್ತು ಹಾಕುವುದು) ಮಾಡುಬಹುದು ಮಾತ್ರ, ಅಲ್ಲಿರುವ ಕನಿಷ್ಟ ತಾಪಮಾನ ಹಾಗು ತೀವ್ರ ಚಳಿಯ ಕಾರಣ ಅನೇಕರು ಕೈಲಾಶ ಪರ್ವತದ ಪರಿಕ್ರಮ ಕೂಡ ಮಾಡೋಕೂ ಸಾಧ್ಯವಾಗಲ್ಲ ಅಂಥದ್ರಲ್ಲಿ ಪರ್ವತದ ಮೇಲೆ ಹತ್ತೋದಂತೂ ಅಸಾಧ್ಯವೇ ಸರಿ.
ಆದರೆ ಈ ಪರ್ವತದ ಮೇಲೆ ಹತ್ತೋಕೆ ಸಾಧ್ಯವಾಗದಿರುವ ಕಾರಣವಾದರೂ ಏನು? ಮೌಂಟ್ ಎವರೆಸ್ಟ್ ನಂತಹ ಪರ್ವತವನ್ನ ಹತ್ತಬಹುದಾದರೆ ಕೈಲಾಶ ಪರ್ವತ ಹತ್ತೋಕೆ ಯಾಕೆ ಸಾಧ್ಯವಿಲ್ಲ? ಈ ಬಗ್ಗೆ ವಿಜ್ಞಾನಿಗಳು ಹಲವಾರು ವರ್ಷಗಳಿಂದ ರಿಸರ್ಚ್ ಮಾಡುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಆದರೆ ಈ ರಹಸ್ಯವನ್ನ ವಿಜ್ಞಾನಿಗಳು ಈಗ ಭೇದಿಸಿದ್ದಾರೆ. ವಿಜ್ಞಾನಿಗಳ ರಿಸರ್ಚ್ ನಲ್ಲಿ ತಿಳಿದುಬಂದಿರುವ ವಿಷಯವೇನೆಂದರೆ ಕೈಲಾಶ ಪರ್ವತ ತುಂಬ ರೇಡಿಯೋಆ್ಯಕ್ಟಿವ್ ಆಗಿದೆ ಹಾಗು ಈ ರೇಡಿಯೋ ಆ್ಯಕ್ಟಿವಿಟಿ ಕೈಲಾಶ ಪರ್ವತದ ನಾಲ್ಕೂ ಕಡೆ ಸಮಾನವಾಗಿದೆ. ವಿಜ್ಞಾನಿಗಳು ಹೇಳುವ ಮತ್ತೊಂದು ವಿಷಯವೆಂದರೆ ಭೂಮಂಡಲದ ಮೇಲಿನ ರೇಡಿಯೋಆ್ಯಕ್ಟಿವ್ ತರಂಗಗಳ ಮೂಲ ಕೇಂದ್ರ ಕೈಲಾಶ ಪರ್ವತವೇ ಆಗಿದೆ ಎಂದು ಹೇಳುತ್ತಾರೆ.
ಇದೇ ಕಾರಣದಿಂದಾಗಿ ಇದುವರೆಗೂ ಕೈಲಾಶ ಪರ್ವತದ ಮೇಲೆ ಯಾವ ವ್ಯಕ್ತಿಯೂ ಹತ್ತೋಕೆ ಸಾಧ್ಯವಾಗಿಲ್ಲ. ಕೆಲ ವಿಜ್ಞಾನಿಗಳ ಪ್ರಕಾರ ಕೈಲಾಶ ಪರ್ವತ ನೈಸರ್ಗಿಕ ರಚನೆಯ ಪರ್ವತವಲ್ಲ ಬದಲಾಗಿ ಇದನ್ನ ಕೃತಕವಾಗಿ ಸಾವಿರಾರು ವರ್ಷಗಳ ಹಿಂದೆ ಮಾಡಲಾಗಿತ್ತು. ಅದು ಈಜಿಪ್ಟಿನ ಪಿರಮಿಡ್ ಗಳನ್ನ ಹೇಗೆ ಕೃತಕವಾಗಿ ಕಟ್ಟಲಾಗಿತ್ತೋ ಅದೇ ರೀತಿಯಲ್ಲಿ ಕೈಲಾಶ ಪರ್ವತವೂ ಕೂಡ ನಿರ್ಮಿತವಾದ ಪರ್ವತವೆಂದು ಹೇಳುತ್ತಾರೆ. ಕೈಲಾಶ ಪರ್ವತ ಕೂಡ ನೈಸರ್ಗಿಕ ಪರ್ವತದಂದೆ ಕಾಣುವುದಿಲ್ಲ ಅದೂ ಕೂಡ ಪಿರಮಿಡ್ ಆಕಾರದಲ್ಲೇ ಇರುವುದನ್ನ ನೀವು ಗಮನಸಿಬಹುದು.
ವಿಜ್ಞಾನಿಗಳ ಪ್ರಕಾರ ಈ ಪರ್ವತದೊಳಗೆ ಹೋಗುವ ದಾರಿ ಪರ್ವತದ ತುತ್ತತುದಿಯಲ್ಲಿದೆಯಂತೆ, ಆದರೆ ಅದರ ಮೇಲೆ ಹೋಗೋಕೆ ಮಾತ್ರ ಯಾರಿಗೂ ಸಾಧ್ಯವಿಲ್ಲ. ನಮ್ಮ ವೇದಗಳಲ್ಲಿ ಉಲ್ಲೇಖವಾಗಿರುವಂತೆ ಕೈಲಾಶ ಪರ್ವತದ ಮೇಲೆ ಶುದ್ಧ ಆತ್ಮ ಮಾತ್ರ ಹೋಗಬಹುದಂತೆ. ನಿಮಗೇನನ್ಸತ್ತೆ? ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ