ನ್ಯೂಯಾರ್ಕ್: ಕರೋನಾ ವೈರಸ್ ನಿಂದಾಗಿ ಪ್ರಪಂಚದಾದ್ಯಂತ ಬಹುತೇಕ ಎಲ್ಲ ದೇಶಗಳೂ ಪ್ರಭಾವಿತವಾಗಿವೆ. ಪ್ರತಿಯೊಂದು ರಾಷ್ಟ್ರವೂ ಕೂಡ ಕರೋನನಿಂದ ತನ್ನ ಜನರನ್ನ ರಕ್ಷಿಸಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಕರೋನಾ ವೈರಸ್ ಅಮೆರಿಕದಲ್ಲಿ ಸುಮಾರು 30 ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಅಭಿವೃದ್ಧಿ ಹೊಂದಿದ ಅಮೇರಿಲಾ ದಂತಹ ದೇಶದಲ್ಲಿ ಪ್ರತಿದಿನ ಒಂದೂವರೆ ಸಾವಿರದಿಂದ ಎರಡು ಸಾವಿರ ಜನ ಕೊರೋನಾಗೆ ಬಲಿಯಾಗುತ್ತಿದ್ದಾರೆ.
ಪ್ರಸಿದ್ಧ ಚಾನೆಲ್ ಫಾಕ್ಸ್ ನ್ಯೂಸ್ ಗುರುವಾರದಂದು ಚೀನಾ ವುಹಾನ್ನ ಪ್ರಯೋಗಾಲಯದಲ್ಲಿ ವಿಶೇಷ ಉದ್ದೇಶದಿಂದ ವೈರಸ್ನ್ನು ತ’ಯಾರಿ’ಸಿತ್ತು ಎಂದು ಹೇಳಿದೆ. ಇದರ ಹಿಂದಿರುವ ದು’ರುದ್ದೇ’ಶ ಕೇಳಿದರೆ ನೀವು ನಿಜಕ್ಕೂ ಒಂದು ಕ್ಷಣ ಚಕಿತರಾಗುತ್ತೀರ. ಹೌದು ಚೀನಾದ ವಿ’ಜ್ಞಾನಿಗ’ಳು ಅಮೇರಿಕಾದ ವಿ’ಜ್ಞಾನಿಗ’ಳಿಗಿಂತ ಮುಂದಿದ್ದಾರೆ ಎಂದು ಸಾಬೀತುಪಡಿಸಲು ಚೀನಾ ಕೊರೋನಾ ವೈರಸ್ ಸೃಷ್ಟಿಸಿತ್ತು. ಚೀನಾದ ಈ ಪ್ರಯೋಗಾಲಯದಲ್ಲಿ ಬಾವಲಿಗಳ ಬಗ್ಗೆ ಸಂಶೋಧನೆ ನಡೆದಿತ್ತು. ಈಗ ಈ ಲ್ಯಾಬ್ ಅನ್ನು ಸಂಪೂರ್ಣವಾಗಿ ದೊಡ್ಡ ಪ್ರಮಾಣದಲ್ಲಿ ತನಿಖೆ ಮಾಡಬೇಕೆಂದು ಟ್ರಂಪ್ ಹೇಳಿದ್ದಾರೆ. ಅಮೇರಿಕಾ ಈಗ ತನ್ನ ಮಟ್ಟದಲ್ಲಿ ಚೀನಾದ ಈ ಲ್ಯಾಬ್ ಅನ್ನು ಪರಿಶೀಲಿಸುತ್ತಿದೆ.
ಕೊರೋನಾ ವೈರಸ್ ಸೃ’ಷ್ಟಿಸು’ವ ಈ ಯೋಜನೆ ಅತ್ಯಂತ ದುಬಾರಿ ಹಾಗು ರ’ಹಸ್ಯ ಪ್ರೋಗ್ರಾಂ ಆಗಿತ್ತು ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಆರಂಭದಲ್ಲಿ ಈ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡಿತು ಎಂದು ಹೇಳಲಾಗಿತ್ತು ಆದರೆ ಈ ವೈರಸ್ ಸೃ’ಷ್ಟಿಸು’ವ ವುಹಾನ್ನ ರಹ’ಸ್ಯ ಪ್ರಯೋಗಾಲಯದಲ್ಲಿ ‘ಪೇಶಂಟ್ ಜೀರೋ’ ಸಹ ಕೆಲಸ ಮಾಡಿದ್ದ ಎಂದು ತಿಳಿಸಿದೆ. ಈ ಪೇಶಂಟ್ ಜೀರೋ ವುಹಾನ್ ಮಾರುಕಟ್ಟೆಗೆ ಹೋದಾಗ, ಅಲ್ಲಿ ಈತನಿಂದಲೇ ವೈ’ರಸ್ ಹಬ್ಬಿ ಬಿಟ್ಟಿತು ಎಂದು ಸುದ್ದಿಗಳ ಹರಿದಾಡಿದ್ದವು. ಈ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, “ನಾವು ನಿರಂತರವಾಗಿ ಚೀನಾದ ಅನೇಕ ಕಥೆಗಳನ್ನು ಕೇಳುತ್ತಿದ್ದೇವೆ… ನಾವು ಈ ವಿಷಯಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ವೈದ್ಯರ ಪ್ರಯತ್ನಗಳು ಮತ್ತು ಪ್ರಯೋಗಾಲಯದಲ್ಲಿ ಆರಂಭದಲ್ಲಿ ವೈರಸ್ ತಡೆಗಟ್ಟುವಿಕೆಗೆ ಸಂಬಂಧಿಸಿದ ಹಲವಾರು ದಾಖಲೆಗಳಿಂದ ತಿಳಿದುವರುವ ವಿಷಯವೇನೆಂದರೆ ವುಹಾನ್ ಮಾರ್ಕೆಟ್ನ್ನ ಬೇಕೂಂತಲೇ ಕೊರೋನಾ ವೈರಸ್ ಅಲ್ಲಿಂದಲೇ ಹರಡಿತ್ತು ಎಂದು ನಂಬಿಸಲಾಯಿತು. ಆದರೆ ವಾಸ್ತವವಾಗಿ ಅಲ್ಲಿ ಆಗ ಬಾವಲಿಗಳನ್ನ ಮಾರಾಟ ಮಾಡೋದನ್ನ ನಿಲ್ಲಿಸಿಬಿಡಲಾಗಿತ್ತಂತೆ. ಮೂಲಗಳ ಪ್ರಕಾರ ಚೀನಾ ಸರ್ಕಾರ ವುಹಾನ್ ವೆಟ್ ಮಾರ್ಕೆಟ್ ಥಿಯರಿಯನ್ನ ಷಡ್ಯಂತ್ರದ ಒಂದು ಭಾಗವಾಗಿ ಸುಳ್ಳು ಸುದ್ದಿ ಹಬ್ಬಿಸಿತ್ತು, ಇದರಿಂದ ತನ್ನ ಲ್ಯಾಬ್ ನಲ್ಲಿ ನಡಸಿದ್ದ ಸಂಶೋಧನೆಗಳು ಹಾಗು ತನ್ನ ಲ್ಯಾಬ್ ಬಗ್ಗೆ ಜಗತ್ತಿಗೆ ತಿಳಿಯದಿರಲಿ ಎಂಬುದು ಚೀನಾದ ಉದ್ದೇಶವಾಗಿತ್ತು. ಅಮೇರಿಕಾ ಹಾಗು ಇಟಲಿಯನ್ನ ಟಾ’ರ್ಗೆಟ್ ಮಾಡುವುದೇ ಚೀನಾದ ಉದ್ದೇಶವಾಗಿತ್ತು ಎಂದು ಫಾಕ್ಸ್ ನ್ಯೂಸ್ ಸ್ಪೋ’ಟಕ ವರದಿಯೊಂದನ್ನ ಬಿತ್ತರಿಸಿದೆ.
ಚೀನಾ ವಿ’ರುದ್ಧ ಪ್ರತ್ಯೇಕ ಕಾನೂನನ್ನೇ ಜಾರಿಗೆ ತರಲು ಮುಂದಾದ ಅಮೇರಿಕಾ:
ಕರೋನಾ ವೈರಸ್ ಜಾಗತಿಕ ಸಾಂಕ್ರಾಮಿಕ ರೋಗದಿಂದ ಉಂಟಾದ ಸಾವು ಮತ್ತು ಆರ್ಥಿಕ ನಷ್ಟಗಳಿಗೆ ಸಂಬಂಧಿಸಿದಂತೆ ಅಮೇರಿಕನ್ ನಾಗರಿಕರಿಗೆ ಫೆಡರಲ್ ನ್ಯಾಯಾಲಯದಲ್ಲಿ ಚೀನಾ ವಿರುದ್ಧ ಮೊಕದ್ದಮೆ ಹೂಡಲು ಅವಕಾಶ ನೀಡುವ ಮಸೂದೆಯನ್ನು ಅಮೇರಿಕನ್ ಸಂಸತ್ತಿನಲ್ಲಿ ಮಂಡಿಸಬೇಕು ಎಂಬ ಪ್ರಸ್ತಾವನೆಯನ್ನು ಗುರುವಾರದಂದು ಇಬ್ಬರು ಸಂಸದರು ಒತ್ತಾಯಿಸಿದ್ದಾರೆ.
ಈ ವಿಧೇಯಕವನ್ನ ಅಮೇರಿಕಾದ ಸೆನೆಟ್ ನಲ್ಲಿ ಟಾಮ್ ಕಾಟನ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಡಾನ್ ಕ್ರೆನ್ಶಾ ಪರಿಚಯಿಸಿದರು. ಅದನ್ನು ಅಂಗೀಕರಿಸಿ ಕಾನೂನಾಗಿ ಪರಿವರ್ತಿಸಿದರೆ, ಚೀನಾ ಮಾಡಿದ ಹಾನಿಗೆ ಸಾಂಕ್ರಾಮಿಕ ರೋಗವನ್ನು ಎದುರಿಸಲು Foreign sovereign immunity act ತಿದ್ದುಪಡಿ ಮಾಡುತ್ತದೆ. ಈ ಮಸೂದೆಯ ಮೂಲಕ ಚೀನಾ ವಿರುದ್ಧ ಮೊಕದ್ದಮೆ ಹೂಡಿ ಪರಿಹಾರ ಪಡೆಯಿವ ಹಕ್ಕನ್ನು ಅಮೆರಿಕ ಪಡೆಯಬಹುದಾಗಿದೆ. ಒಂದು ವೇಳೆ ಅಮೇರಿಲಾ ಹಾಗಯ ಚೀನಾ ಈ ಸಮಸ್ಯೆಯನ್ನ ಪರಸ್ಪರ ಒಪ್ಪಂದ ಮಾಡಿಕೊಳ್ಳಲು ಮುಂದಾದರೆ ಈ ಖಾಸಗಿ ಪ್ರಕರಣಗಳು ವಜಾ ಆಗಲಿವೆ.
ಈ ಬಗ್ಗೆ ಮಾತನಾಡಿದ ಕಾಂಟನ್, “ಕರೋನಾ ವೈರಸ್ ಬಗ್ಗೆ ಜಗತ್ತಿಗೆ ತಿಳಿಸಲು ಪ್ರಯತ್ನಿಸಿದ ವೈದ್ಯರು ಮತ್ತು ಪತ್ರಕರ್ತರ ಬಾಯಿಯನ್ನ ಮುಚ್ಚಿಸುವ ಮೂಲಕ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪ್ರಪಂಚದಾದ್ಯಂತ ಕರೋನಾ ವೈರಸ್ ವೇಗವಾಗಿ ಹರಡಲು ಅವಕಾಶ ಮಾಡಿಕೊಟ್ಟಿತು. ಈ ವೈರಸ್ ಬಗೆಗಿನ ಮಾಹಿತಿಯನ್ನ ಮರೆಮಾಚುವ ಚೀನಾದ ನಿರ್ಧಾರದಿಂದ ಸಾವಿರಾರು ಜನರ ಅಕಾಲಿಕ ಸಾವಿಗೆ ತುತ್ತಾಗುತ್ತಿದ್ದಾರೆ ಹಾಗು ಇದು ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡಿದೆ. ಈ ನಷ್ಟಕ್ಕೆ ನಾವು ಚೀನಾ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವುದು ಸೂಕ್ತ” ಎಂದಿದ್ದಾರೆ.