ಈ ಎಲೆಗಳನ್ನ ಬಳಸಿ‌ ಯಾವುದೇ ರೋಗದಿಂದಲೂ ಮುಕ್ತಿ ಪಡೆಯಬಹುದು: ಇದೇ ತಂತ್ರ ಬಳಸಿದ್ದರಿಂದ ಕಳೆದ 2 ದಶಗಳಿಂದ ಈ ಹಳ್ಳಿಯಲ್ಲಿ ಯಾರೊಬ್ಬರೂ ಹಾಸಿಗೆ ಹಿಡಿದಿಲ್ಲ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 651 views

ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ, ಇದುವರೆಗೆ ಈ ವೈರಸ್ ನಿಂದಾಗಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಕೂಡ ಕೊರೋನಾ ವಿ’ರುದ್ಧದ ಹೋರಾಟ ನಡೆಸುತ್ತಿದೆ.‌ ಭಾರತದಲ್ಲಿ ಇದುವರೆಗೆ 1 ಲಕ್ಷಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗು 98% ಗೂಅಧಿಕ ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕರೋನಾ ವೈರಸ್‌ಗೆ ಈಗ ಲಸಿಕೆ ಕಂಡು ಹಿಡಿಯಲಾಗಿದೆ. ಆದರೂ ಎಲ್ಲಾ ದೇಶಗಳು ಮತ್ತಿಷ್ಟು ಕೊರೋನಾ ವೈರಸ್ ವ್ಯಾಕ್ಸಿನ್ ಗಳಿಗಾಗಿ ಹಗಲಿರುಳು ಸಂಶೋಧನೆ ನಡೆಸುತ್ತಿವೆ.

Advertisement

ಈ ಮಧ್ಯೆ ಭಾರತದ ಈ ಹಳ್ಳಿಯಲ್ಲಿ ಜನ ಕೊರೋನಾ ವೈರಸ್ ವಿರುದ್ಧ ಒಂದು ಎಲೆಯ ಮೂಲಕ ತಮ್ಮನ್ನ ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ಹೌದು‌ ನಾವು ಇಂದು ನಿಮಗೆ ಹೇಳಲು ಹೊರಟಿರುವ ಈ ಗ್ರಾಮದಲ್ಲಿ ಕಳೆದ ಎರಡು ದಶಕಗಳಿಂದ ಒಬ್ಬನೇ ಒಬ್ಬ ವ್ಯಕ್ತಿಗೂ ಯಾವ ರೋಗವೂ ಬಂದಿಲ್ಲ ಹಾಗು ಯಾರೊಬ್ಬರೂ ಹುಷಾರಿಲ್ಲದೆ‌ ಮಲಗಿಲ್ಲ. ಅಷ್ಟೇ ಅಲ್ಲ ಈ ಊರಿನ ಜನರಿಗೆ ಆಸ್ಪತ್ರೆಗಳ ಗಂಧಗಾಳಿಯೂ ಗೊತ್ತಿಲ್ಲ. ಹೌದು ನಾವು ನಿಮಗೆ ಇಂದು ಹೇಳಲು ಹೊರಟಿರುವ ಈ ಗ್ರಾಮ ಝಾರ್ಖಂಡ್‌ನ ಶ್ರಮಿಕನಗರದ ಎರಡು ಕಿಲೋಮೀಟರ್ ದೂರದಲ್ಲಿದ್ದು ಈ ಗ್ರಾಮದ ಹೆಸರು ಧಾಡಜೋಡಿ ಎಂಬುದಾಗಿದೆ.

ಈ ಗ್ರಾಮದ ಜನರಿಗೆ ಬೇವು ಸಾಕ್ಷಾತ್ ಸಂಜೀವಿನಿಯಂತೆಯೇ ಆಗಿದೆ. ಈ ಗ್ರಾಮದ ಜನ ಹೆಚ್ಚೆಚ್ಚು ಬೇವಿನ ಸೊಪ್ಪನ್ನ ಬಳಸುವುದರಿಂದ ಗ್ರಾಮದ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದ್ದು ಇವರು ಯಾವ ರೋಗದ ವಿರುದ್ಧವೂ ಹೋರಾಡಬಲ್ಲವರಾಗಿದ್ದಾರೆ. ಕೊರೋನಾ ಬಂದಿದೆಯಂತ ನಗರದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿರುವ ಸುದ್ದಿಯನ್ನ ನೀವು ಕೇಳಿರುತ್ತೀರ ಆದರೆ ಈ ಗ್ರಾಮದ ಜನ ಬೇವಿನ ನೀರನ್ನ ಇಡೀ ಗ್ರಾಮದಲ್ಲಿ ಸಿಂಪಡಿಸುತ್ತಿದ್ದಾರೆ. ಮನೆಯ ಬಾಗಿಲಿಗೆ ಬೇವಿನ ಎಲೆಗಳನ್ನು ಕಟ್ಟಿದ್ದಾರೆ. ಗ್ರಾಮದ ಜ‌ನ ಎಚ್ಚರವಾಗಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಊರಿನ ಜನ ತಮ್ಮ ಗ್ರಾಮಕ್ಕೆ ಬರದಂತೆ ಗ್ರಾಮದ ಎಲ್ಲಾ ಪ್ರವೇಶದ್ವಾರಗಳನ್ನ ಬಂದ್ ಮಾಡಿದ್ದಾರೆ.

ಝಾರ್ಖಂಡ್‌ನ ಧನಬಾದ್ ಜಿಲ್ಲೆಯ ಧಾಡಜೋಡಿ ಗ್ರಾಮದಲ್ಲಿ ಆದಿವಾಸಿಗಳು ಹಾಗು ಮೂಲವಾಸಿ ಜನಾಂಗದವರ ಜನಸಂಖ್ಯೆ ಜಾಸ್ತಿಯಿದೆ. ಗ್ರಾಮದ ವ್ಯಕ್ತಿಯೊಬ್ಬರು ಮಾತನಾಡುತ್ತ ತಮ್ಮ ಪೂರ್ವಜರು ಬೇವಿನ ಪ್ರಯೋಜನಗಳ ಹಾಗು ಅದರ ಮಹತ್ವವನ್ನ ತಿಳಿಸಿಹೋಗಿದ್ದಾರೆ ಎಂದು ಹೇಳುತ್ತಾರೆ. ಇದು ರಾಮಬಾಣ ಔಷಧಿಯೇ ಸರಿ. ಬೇವಿನ ಎಲೆ ಗ್ರಾಮದ ಜನರ ಜೀವನಶೈಲಿಯ ಪ್ರಮುಖ ಭಾಗವಾಗಿದೆ. ಇಲ್ಲಿನ ಜನ ಹಲ್ಲನ್ನು ಉಜ್ಜಲು ಬೇವನನ್ನೇ ಬಳಸುತ್ತಾರೆ. ಯಾವುದೇ ರೀತಿಯ ಅಡುಗೆ ಮಾಡುವುದಿದ್ದರೂ ಅದರಲ್ಲಿ ಬೇವಿನ ಎಲೆಗಳನ್ನು ಹಾಕದೇ ಅಡುಗೆ ಮಾಡುವುದೇ ಇಲ್ಲ. ಈಗ ನಗರ ಪ್ರದೇಶಗಳಲ್ಲಿ ಕರೋನಾ ವೈರಸ್ ಹಬ್ಬುತ್ತಿದೆ ಅಂತ ಗೊತ್ತಾದ ಕೂಡಲೇಇಡೀ ಹಳ್ಳಿಯಲ್ಲಿ ಬೇವಿನ ಎಲೆಗಳನ್ನು ಹಾಕಿ ಬೇಯಿಸಿದ ನೀರನ್ನು ಹಳ್ಳಿಯಲ್ಲೆಲ್ಲಾ ಸಿಂಪಡಿಸುವ ಕೆಲಸ ಶುರುಮಾಡಿದ್ದಾರೆ. ಲಾಕ್‌ಡೌನ್ ಆದ ಬಳಿಕ, ಆರೋಗ್ಯ ಇಲಾಖೆ ತಂಡವೂ ಬಂದು ಎರಡು ಬಾರಿ ಗ್ರಾಮವನ್ನು ಸ್ಯಾನಿಟೈಸ್ ಮಾಡಿದೆ.

ಈ ಗ್ರಾಮದ ಜನರು ಬೇವಿನ ಮಹತ್ವದ ಬಗ್ಗೆ ಹೀಗೆ ತಿಳಿಸುತ್ತಾರೆ ನೋಡಿ:

ಮದುವೆಯಾಗಿ ನಾನು ಈ ಗ್ರಾಮಕ್ಕೆ ಬಂದಾಗ ನೋಡಿದ್ದೇನೆಂದರೆ ಜನ ಪ್ರತಿಯೊಂದು ಕೆಲಸದಲ್ಲೂ ಬೇವನ್ನ ಉಪಯೋಗಿಸುತ್ತಾರೆ. ಸಮಯ ಕಳೆದಂತೆ ನನಗೂ ಇದು ರೂಢಿಯಾಗಿಬಿಟ್ಟಿತು. ಈಗ ನಾನು ನನ್ನ ಮಕ್ಕಳಿಗೆ ಬೇವಿನ ಎಲೆ ಹಾಕಿರುವ ನೀರಿನಿಂದಲೇ ಸ್ನಾನ ಮಾಡಿಸುತ್ತೇನೆ. ಹೀಗಾಗಿ ನಮ್ಮ ಕುಟುಂಬಕ್ಕೆ ಇದುವರೆಗೂ ಯಾವ ರೋಗವೂ ಹತ್ತಿರ ಸುಳಿದಿಲ್ಲ ಎನ್ನುತ್ತಾರೆ ಗೃಹಿಣಿಯಾಗಿರುವ ಸುಭದ್ರಾ ದೇವಿ.

ನನಗೆ ತಿಳಿದಿರುವ ಮಟ್ಟಿಗೆ ಈ ಊರಲ್ಲಿ ಕಳೆದ 20-25 ವರ್ಷಗಳಿಂದ ಯಾವ ರೋಗವೂ ಬಂದಿಲ್ಲ.‌ ಡಾಕ್ಟರುಗಳು ಈ ಊರಿಗೆ ಕಾಲಿಟ್ಟಿದ್ದು ನೆನಪಿದೆ ಆದರೆ ಅದೂ ಕೂಡ ಮಲೇರಿಯಾದಿಂದ ಜನರನ್ನ ರಕ್ಷಿಸೋಕೆ ಔಷಧಿ ಸಿಂಪಡಿಸೋಕಷ್ಟೇ ಎನ್ನುತ್ತಾರೆ ಗ್ರಾಮದ ನಿವಾಸಿಯಾಗಿರುವ ಮನೋಹರ್ ಮಹತೋ.

ಬೇವಿನ ಎಲೆಯ ಸೇವನೆ ಮಾಡುವುದರಿಂದ ತ್ವಚೆ ಹಾಗು ಹೊಟ್ಟೆಗೆ ಸಂಬಂಧಿಸಿದ ರೋಗಗಳೂ ದೂರವಾಗುತ್ತವೆ. ನಾವು ಆಲೂಗಡ್ಡೆ, ಬದನೆಕಾಯಿ ಪಲ್ಯೆಯಲ್ಲೂ ಬೇವಿನ ಎಲೆಯನ್ನ ಹಾಕುತ್ತೇವೆ. ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ಗ್ರಾಮದ ನಿವಾಸಿಯಾಗಿರುವ ವಿಜಯ್ ಮಹತೋ

ಯಾವಾಗಲಾದರೂ ಮಕ್ಕಳಲ ಮೈ ಮೇಲೆ ಗುಳ್ಳೆಗಳು, ಚಿಕನ್ ಪಾಕ್ಸ್ ಕಂಡುಬಂದರೆ ಮಕ್ಕಳನ್ನ ಬೇವಿನ ಎಲೆಯ ಮೇಲೆ ಮಲಗಿಸಿ ಬೇವಿನ ಸೊಪ್ಪಿನಿಂದ ಗಾಳಿ ಬೀಸುತ್ತೇವೆ. ಬೇವು ಇರೋ ಕಾರಣಕ್ಕೆ ನಾವು ಯಾವ ಔಷಧಿಯನ್ನೂ ಇದುವರೆಗೆ ನಮ್ಮ ಹಳ್ಳಿಯಲ್ಲಿ ಯಾರೂ ನೋಡಿಲ್ಲ ಎನ್ನುತ್ತಾರೆ ಗೃಹಿಣಿಯಾದ ಮಾಲತಿ ದೇವಿ.

Advertisement
Share this on...