ಹರಿಯಾಣ ಕಾಂಗ್ರೆಸ್ ಮುಖಂಡೆ ವಿದ್ಯಾ ದೇವಿ ಇತ್ತೀಚೆಗೆ ಹೇಳಿಕೆಯೊಂದನ್ನ ನೀಡಿದ್ದು, ಇದು ಕಾಂಗ್ರೆಸ್ಸಿಗೆ ಭಾರೀ ಡ್ಯಾಮೇಜ್ ಮಾಡಲಿದೆ. ವಿದ್ಯಾ ದೇವಿ ನರವಾನಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿದ್ದರು. ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕಿ ಮನವಿ ಮಾಡುತ್ತ ಕಿಸಾನ್ ಆಂದೋಲನ್ನ್ನ ಜೀವಂತವಾಗಿಡಲು ಹಣ ಕೊಡಿ ಅಗತ್ಯ ಬಿದ್ರೆ ಮದ್ಯವನ್ನೂ ಕೊಡಿ ಕಾಂಗ್ರೆಸ್ ಮುಖಂಡೆ ಕಾರ್ಯಕರ್ತರಿಗೆ ಅಪೀಲ್ ಮಾಡಿದ್ದಾರೆ.
ಜಿಂದ್ ಜಿಲ್ಲೆಯ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡೆ ವಿದ್ಯಾ ದೇವಿ, ಜನರಿಗೆ ತರಕಾರಿ, ಹಣ ಮತ್ತು ಮದ್ಯ ಕೊಟ್ಟು ಕಿಸಾನ್ ಆಂದೋಲನಕ್ಕೆ ತಲುಪಿಸಬೇಕು ಎಂದಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಸುಭಾಷ್ ಗಂಗೋಲಿ ಕೂಡ ಭಾಗವಹಿಸಿದ್ದರು!
ಆದರೆ, ಕೆಲವು ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಮುಖಂಡ ವಿದ್ಯಾ ದೇವಿ ಅವರ ಹೇಳಿಕೆಯನ್ನು ಮಾಧ್ಯಮದವರು ತಮ್ಮ ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡುವಲ್ಲಿ ನಿರತರಾಗಿರುವುದನ್ನು ನೋಡಿದಾಗ, ಕಾಂಗ್ರೆಸ್ ನಾಯಕರು ವಿದ್ಯಾ ದೇವಿಯನ್ನು ತಡೆಯಲು ಪ್ರಯತ್ನಿಸಿದರು ಆದರೆ ಆಗಲೂ ಅವರು ತಾವು ಹೇಳಿದ ಮದ್ಯ ವಿತರಣೆಯನ್ನು ಸಮರ್ಥಿಸಿಕೊಂಡರು.
ಆದರೆ ವಿದ್ಯಾ ದೇವಿ ತನ್ನ ಹೇಳಿಕೆಗಳನ್ನ ಸಮರ್ಥಿಸಿಕೊಳ್ಳುತ್ತ ಆಂದೋಲನದಲ್ಲಿ ಬೇರೆ ಬೇರೆ ರೀತಿಯ ಜನರಿರುತ್ತಾರೆ, ಅಂತಹವರಿಗಾಗಿ ಬೇರೆ ಬೇರೆ ವಸ್ತುಗಳ ಅಗತ್ಯವೂ ಇರುತ್ತೆ. ಹುಷಾರಿಲ್ಲದ ವ್ಯಕ್ತಿಗೆ ಮದ್ಯ ಕೊಡಬಾರದೇ? ನಾವು ಬೇರೆ ಬೇರೆ ಮಾರ್ಗಗಳಿಂದ ಈ ಆಂದೋಲನವನ್ನ ಬಲಪಡಿಸಬೇಕಿದೆ ಎಂದರು.
ಈಗ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಸುದ್ದಿ ಸಂಸ್ಥೆ ಎನ್ಐಎ ಹಾಕಿದೆ. ಈ ಕಾಂಗ್ರೆಸ್ ನಾಯಕಿ ತನ್ನ ಕಾರ್ಯಕರ್ತರಿಗೆ ಹೇಗೆ ಮನವಿ ಮಾಡುತ್ತಿದ್ದಾರೆಂದು ನೀವೇ ನೋಡಿ
#WATCH: Haryana Congress leader Vidya Rani says, "…We'll take out a 'padyatra' in Jind. It'll give new direction & strength to Congress. It'll be reborn. Agitation has risen again as farmers are firm. Be it money, vegetables, liquor-we can contribute to them as we like.."(14.2) pic.twitter.com/FwX7aGNHo9
— ANI (@ANI) February 15, 2021