ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ವಾಸ್ತವವಾಗಿ ಈ ವೀಡಿಯೊ ಮಸೀದಿಯೊಂದರದ್ದಾಗಿದ್ದು ಇದರಲ್ಲಿ ಒಬ್ಬ ಮೌಲ್ವಿ ಅಜಾನ್‌ಗೆ ಬಳಸುವ ಮೈಕ್ ಅನ್ನು ಅಜಾನ್ ಮುಗಿದ ಬಳಿಕ ಆಫ್ ಮಾಡಲು ಮರೆತಿದ್ದಾರೆ. ಈ ಕಾರಣದಿಂದಾಗಿ ಜನರು ರಾತ್ರಿಯಿಡೀ ಮೈಕ್‌ನಿಂದ ಜೋರಾಗಿ ಗೊರಕೆ ಶಬ್ದಗಳನ್ನು ಕೇಳಲು ಪ್ರಾರಂಭಿಸುತ್ತಾರೆ. ವೈರಲ್ ವೀಡಿಯೊದಲ್ಲಿ, ಮೌಲ್ವಿ ಚಿಂತೆಯಿಲ್ಲದೆ ಮಲಗಿದ್ದಾನೆ ಮತ್ತು ಅವನ ಗೊರಕೆಯ ಶಬ್ದವು ದೂರದವರೆಗೆ ಪ್ರತಿಧ್ವನಿಸುತ್ತಿರುವುದು ಸ್ಪಷ್ಟವಾಗಿ ಕೇಳಲಾಯಿತು. ಗೊರಕೆ ಶಬ್ದಗಳ ಜೊತೆಗೆ ಜನರ ನಗೆಯನ್ನು ಈ ವೀಡಿಯೊದಲ್ಲಿ ಕೇಳಬಹುದು.
Molvi sahab mic on kr k sogaye 😂😂😂 pic.twitter.com/kjBypHqGZh
— Arnold (@dapakiguy92) February 17, 2021
ವೀಡಿಯೊದಲ್ಲಿ ಮೌಲಾನಾನ ಈ ಲೋಪದ ನಂತರ, ಸೋಶಿಯಲ್ ಮೀಡಿಯಾಗಳಲ್ಲಿ ಜನರು ಈ ವಿಡಿಯೋವನ್ನ ಪೋಸ್ಟ್ ಮಾಡುತ್ತ ಟ್ರೋಲ್ ಮಾಡುತ್ತಿದ್ದು ಫನ್ನಿ ಮೀಮ್ಸ್ ಗಳನ್ನೂ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ
This is the most hilarious thing I've seen in a while.😀#MaulviBloopers pic.twitter.com/zxzj3vUqCb
— Mohammad Danish Shaikh(MDS) (@Danish_Shaikh7) February 18, 2021
— LyeingLawfing (@riteshsingh25) February 20, 2021
Shweta to Molvi sahab* pic.twitter.com/5WgDD5imCW
— Arfat Ansari 🤺 🚜عرفات (@Arfat_Ansari007) February 18, 2021
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕೆಲ ದಿನಗಳ ಹಿಂದೆಯಷ್ಟೇ ಜೂಮ್ (ZOOM) ನಲ್ಲಿ ನಡೆಯುತ್ತಿದ್ದ ಕ್ಲಾಸ್‌ನ ವಡಿಯೋ ವೈರಲ್ ಆಗಿತ್ತು, ಇದರಲ್ಲಿ ಶ್ವೇತಾ ಎಂಬ ಹುಡುಗಿ ಮೈಕ್ ಆಫ್ ಮಾಡಲು ಮರೆತಿದ್ದಳು. ಶ್ವೇತಾ ZOOM ಸಭೆಯಲ್ಲಿ 111 ಜನರೊಂದಿಗೆ ಆನ್ಲೈನ್ ನಲ್ಲಿದ್ದಳು ಮತ್ತು ಈ ಸಮಯದಲ್ಲಿ ಅವಳು ತನ್ನ ಅಫೇಯರ್ ಬಗ್ಗೆ ತನ್ನ ಬಾಯ್‌ಫ್ರೆಂಡ್ ಜೊತೆ ಮಾತನಾಡಲು ಪ್ರಾರಂಭಿಸಿದಳು. ಒಂದು ಕಡೆ, ಶ್ವೇತಾ ಈ ಅಫೇಯರ್ ಬಗ್ಗೆ ಮಾತನಾಡುತ್ತಿದ್ದರೆ, ಮತ್ತೊಂದೆಡೆ ಅವಳ ಮೈಕ್ ಆನ್ ಆಗೇ ಇತ್ತು ಮತ್ತು ಆಕೆಯ ರಹಸ್ಯ ವಿಷಯಗಳನ್ನ 111 ಜನರೂ ಕೇಳಿದ್ದರು. ಶ್ವೇತಾ ಅವರ ಸಂಭಾಷಣೆಯ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಪ್ರಾರಂಭಿಸಿತ್ತು ಮತ್ತು ಅದರ ಮೇಲೂ ಸಾಕಷ್ಟು ಮೀಮ್ಸ್ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಹತಿದಾಡಿತ್ತು.
Almost forgot to post it here as well. But here you go!#Shweta #shwetayourmicison #ShwetaZoomCall pic.twitter.com/Bh5vuR2tjS
— Mayur Jumani (@MayurJumani) February 19, 2021