ಪ್ರಧಾನಿ ಮೋದಿಯನ್ನ ಸೋಲಿಸಲು ವಾರಣಾಸಿಯಿಂದ ಸ್ಪರ್ಧಿಸಲು ಮುಂದಾದ ಮಮತಾ ಬ್ಯಾನರ್ಜಿ, ಈ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು ಕೇಳಿ

in Kannada News/News 280 views

ನವದೆಹಲಿ: ಶನಿವಾರ, ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಸೋನಾರ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಈ ಸಮಯದಲ್ಲಿ ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಹೇಳಿಕೆಗೆ ಪಿಎಂ ಮೋದಿ ಖಾರವಾಗಿ ಪ್ರತಿಕ್ರಿಯಿಸಿದರು. ಅದೇ ಸಮಯದಲ್ಲಿ, ಜೈ ಶ್ರೀ ರಾಮ್ ಘೋಷಣೆಯ ಬಗ್ಗೆ ಅವರು ಮಮತಾ ಬ್ಯಾನರ್ಜಿಯವರನ್ನೂ ಗುರಿಯಾಗಿಸಿಕೊಂಡರು. ರ‌್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೀದಿ ಪಕ್ಷವು ಈಗ ವಾರಣಾಸಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು. ಈ ಹೇಳಿಕೆಗಳು ಬಂದ ನಂತರ ಎರಡು ವಿಷಯಗಳು ಸ್ಪಷ್ಟವಾಗುತ್ತವೆ. ಒಂದು, ದೀದಿ ಬಂಗಾಳದಲ್ಲಿ ತನ್ನ ಸೋಲನ್ನು ಒಪ್ಪಿಕೊಂಡಿದ್ದಾರೆ. ಎರಡನೆಯದು- ದೀದಿ ಈಗ ಬಂಗಾಳದ ಹೊರಗೆ ತನಗಾಗಿ ಒಂದು ಸ್ಥಳವನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಸೋತ ನಂತರ ಲೋಕಸಭಾ ಚುನಾವಣೆಯಲ್ಲಿ ದೀದಿ ಕೈ ಹಾಕಲು ಪ್ರಯತ್ನಿಸಲಿ ಎಂದು ಪ್ರಧಾನಿ ಮೋದಿ ಹೇಳಿದರು. ಇಲ್ಲಿ ಹಲ್ದಿಯಾದಿಂದ ವಾರಣಾಸಿಗೆ ಹೋಗುವ ಜಲಮಾರ್ಗವನ್ನು ನಮ್ಮ ಸರ್ಕಾರ ಅಭಿವೃದ್ಧಿಪಡಿಸಿದೆ, ಅದು ನಿಮಗೆ ಸಹಾಯ ಮಾಡುತ್ತದೆ ಎಂದು ವ್ಯಂಗ್ಯವಾಡಿದರು.

Advertisement

ಪ್ರಧಾನಿ ಮೋದಿಯವರು ಮುಂದೆ ಮಾತನಾಡುತ್ತ, ಮಮತಾ ಬನಾರಸ್‌ನಿಂದ ಸ್ಪರ್ಧಿಸಿದರೆ, ಅಲ್ಲಿ ಅಲ್ಲಿ ತಿಲಕ ಇರುವ ಬಹಳಷ್ಟು ಜನರನ್ನು ಮತ್ತು ಜನಿವಾರವಿರುವ ಸಾಕಷ್ಟು ಜನರು ಸಿಗುತ್ತಾರೆ. ಇಲ್ಲಿ (ಪಶ್ಚಿಮ ಬಂಗಾಳದಲ್ಲಿ) ಅವರು ಜೈ ಶ್ರೀ ರಾಮ್ ಎಂಬ ಘೋಷಣೆಯೆಂದರೆ ಉರಿದು ಬೀಳುತ್ತಾರೆ ಆದರೆ ಅಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಹರ್ ಹರ್ ಮಹಾದೇವ್ ಎನ್ನುತ್ತಾರೆ. ಆಗ ದೀದಿ ಏನು ಮಾಡುತ್ತಾಳೆ? ಎಂದರು.

ಪ್ರಧಾನಿ ಮೋದಿ ಮುಂದೆ ಮಾತನಾಡುತ್ತ, ದೀದಿ, ಓ ದೀದಿ, ಆಗ ನೀವೇನು ಮಾಡ್ತೀರ? ನಿಮಗೆ ನನ್ನದೊಂದು ವಿನಂತಿಯಿದೆ, ಬನಾರಸ್ ನ ಜನರ ಮೇಲೆ, ಉತ್ತರಪ್ರದೇಶದ ಜನರ ಮೇಲೆ ಕೋಪ ತೋರಿಸೋಕೆ ಹೋಗಬೇಡಿ. ಯುಪಿ-ಬನಾರಸ್ ನ ಜನರು ನನಗೆ ಎಷ್ಟು ಪ್ರೀತಿ ಕೊಟ್ಟಿದ್ದಾರೋ ಅಷ್ಟೇ ಸ್ನೇಹ ನಿಮಗೂ ತೋರಿಸಲಿದ್ದಾರೆ ಎಂದರು.

ಅವರು ಮುಂದೆ ಮಾತನಾಡುತ್ತ, ಕೇಂದ್ರ ಸರ್ಕಾರ, ಮಹಿಳೆಯರ ವಿ-ರು-ದ್ಧ-ದ ಅ-ಪ-ರಾ-ಧ-ಗಳ ತ್ವರಿತ ವಿಚಾರಣೆಗಾಗಿ ದೇಶಾದ್ಯಂತ ಒಂದು ಸಾವಿರಕ್ಕೂ ಅಧಿಕ ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳನ್ನ ಸ್ಥಾಪಿಸುತ್ತಿದೆ. ಆದರೆ ಒಂದು ಇಲ್ಲಿ (ಪಶ್ಚಿಮ ಬಂಗಾಳದಲ್ಲಿ) ದೀದಿ ಸರ್ಕಾರವಂತೂ ಇದಕ್ಕೆ ಅನುಮತಿಯೂ ನೀಡುತ್ತಿಲ್ಲ ಎಂದರು.

Advertisement
Share this on...