ಮಮತಾ ಬ್ಯಾನರ್ಜಿಯ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳಲು ಮುಂದಾದ EC, ಆತಂಕದಲ್ಲಿ ಮಮತಾ ಬ್ಯಾನರ್ಜಿ

in Kannada News/News 203 views

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ನಂದಿಗ್ರಾಮದ ಬೋಯಲ್ ಮತದಾನ ಕೇಂದ್ರದಲ್ಲಿ ಮತದಾನದ ಸಂದರ್ಭದಲ್ಲಿ ಉಂಟಾದ ಎಲ್ಲಾ ಅವಾಂತರಗಳ ಆರೋಪಗಳನ್ನು ಚುನಾವಣಾ ಆಯೋಗ ಸಾರಾಸಗಟಾಗಿ ನಿರಾಕರಿಸಿದೆ. ಮಮತಾ ಅವರ ಕೈಬರಹದ ದೂರನ್ನು ‘ವಾಸ್ತವಿಕವಾಗಿ ತಪ್ಪು’ ಮತ್ತು ‘ಸತ್ಯಕ್ಕೆ ದೂರ’ ಎಂದು ಹೇಳಿರುವ ಆಯೋಗವು ಮಾದರಿ ನೀತಿ ಸಂಹಿತೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ಯೋಚಿಸುತ್ತಿದೆ ಎಂದು ಹೇಳಿದೆ. ಮುಖ್ಯಮಂತ್ರಿ ತನ್ನ ದೂರಿನಲ್ಲಿ ಬೋಯಲ್ ಮಕ್ತಾಬ್ ಪ್ರಾಥಮಿಕ ಶಾಲೆಯಲ್ಲಿ ಯಾವುದೇ ನಿಜವಾದ ಮತದಾರರಿಗೆ ಬೂತ್ ಪ್ರವೇಶಿಸಲು ಅವಕಾಶವಿರಲಿಲ್ಲ, ಆದರೆ ಬೂತ್ ಅನ್ನು ಕ್ಯಾಪ್ಚರ್ ಮಾಡಲಾಗಿತ್ತು ಮತ್ತು ಇದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಉಪಸ್ಥಿತಿಯಲ್ಲಿ ಮಾಡಲಾಯಿತು ಎಂದು ಆರೋಪಿಸಿದ್ದರು. ಸ್ಥಳೀಯ ಮತದಾರರು ಈ ಮಾಹಿತಿಯನ್ನು ಮಮತಾ ಅವರಿಗೆ ದೂರವಾಣಿ ಮೂಲಕ ನೀಡಿದಾಗ, ಮುಖ್ಯಮಂತ್ರಿ ಕಾರಿನಲ್ಲಿ ಅಲ್ಲಿಗೆ ಬಂದು ಬೂತ್‌ನ ಹೊರಗೆ ಅವಳ ವ್ಹೀಲ್ ಚೇರ್ ನಲ್ಲಿ ಕುಳಿತು ಒಂದು ಕಾಗದವನ್ನು ತೆಗೆದುಕೊಂಡು ಪೆನ್ನಿನಿಂದ ದೂರು ಬರೆದು ಆಯೋಗಕ್ಕೆ ಕಳುಹಿಸಿದ್ದರು. ನಂತರ ಬಿಎಸ್ಎಫ್ ಜವಾನರು ಅವರನ್ನು ಅಲ್ಲಿಂದ ವಾಪಸ್ ಕಳಿಸಿದ್ದರು.

ನಂದಿಗ್ರಾಮದ ಬೋಯಲ್ ಮತದಾನ ಕೇಂದ್ರದಲ್ಲಿ ಬಿಎಸ್‌ಎಫ್ ಸಿಬ್ಬಂದಿಗಳ ವಿರುದ್ಧದ ಆರೋಪಗಳು ‘ಸತ್ಯಕ್ಕೆ ದೂರವಾಗಿವೆ’ ಎಂದು ಚುನಾವಣಾ ಆಯೋಗ ಹೇಳಿದೆ. ಬೆಳಿಗ್ಗೆ 5.30 ಕ್ಕೆ ನಂದಿಗ್ರಾಮದ ಬೋಯಲ್ ಮತದಾನ ಕೇಂದ್ರದಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು ಮತ್ತು ಏಪ್ರಿಲ್ 1 ರಂದು ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಮಾಕ್ ಡ್ರಿಲ್ ಸಮಯದಲ್ಲಿ ಬಿಜೆಪಿ, ಸಿಪಿಐ (ಎಂ) ಮತ್ತು ಪಕ್ಷೇತರ ಅಭ್ಯರ್ಥಿಯ ಪೋಲಿಂಗ್ ಏಜೆಂಟ್ ಗಳು ಬೋಯಲ್ ಮತದಾನ ಕೇಂದ್ರದೊಳಗೆ ಉಪಸ್ಥಿತರಿದ್ದರು ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ ತೃಣಮೂಲ ಕಾಂಗ್ರೆಸ್ ನ ಪೋಲಿಂಗ್ ಏಜೆಂಟ್ ಮಾತ್ರ ಅಲ್ಲಿ ಕಾಣಲೇ ಇಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಆಯೋಗವು ತನ್ನ ಪತ್ರದಲ್ಲಿ, “ಮತದಾನದ ಏಜೆಂಟ್ ಆಗಿ ಕೆಲಸ ಮಾಡಲು ಯಾವುದೇ ಇಷ್ಟವಿಲ್ಲದವರನ್ನು ECI ಒತ್ತಾಯಿಸಲು ಸಾಧ್ಯವಿಲ್ಲ” ಎಂದಿದೆ. ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಅವರು ಹಾಗು ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಪ್ರತಿಕ್ರಿಯೆ ಪಕ್ಷಪಾತ ಮತ್ತು ಆಯೋಗವು ‘ಪಕ್ಷಪಾತದ ರೀತಿಯಲ್ಲಿ ವರ್ತಿಸುತ್ತಿದೆ’ ಎಂದು ಪದೇ ಆರೋಪಿಸುತ್ತಿದೆ.

“ಸೆಕ್ಷನ್ 144 ಅನ್ನು ವಿಧಿಸಲಾಗಿದೆ ಎಂದು ಆಯೋಗವು ಹೇಗೆ ನಿರಾಕರಿಸಬಹುದು, ಆದರೆ ಇದರ ಹೊರತಾಗಿಯೂ, ಬಿಜೆಪಿ ಬೆಂಬಲಿಗರು ಬೋಯಲ್‌ನಲ್ಲಿನ ಮತದಾನ ಕೇಂದ್ರಕ್ಕೆ ಬಹಳ ಹತ್ತಿರ ಜಮಾಯಿಸಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಆ ನಿರ್ದಿಷ್ಟ ದಿನ ಏನಾಯಿತು ಎಂದು ಬಂಗಾಳದ ಜನರು ನೋಡಿದ್ದಾರೆ” ಎಂದು ಕುನಾಲ್ ಘೋಷ್ ಹೇಳಿದ್ದಾರೆ

Advertisement
Share this on...