“ನಕ್ಸಲ್ ಅಂಕಲ್ ಪ್ಲೀಸ್ ನನ್ನ ಡ್ಯಾಡಿಯನ್ನ ಬಿಟ್ಟುಬಿಡಿ”

in Kannada News/News 220 views

ಜಮ್ಮು: ಕಾ-ಣೆ-ಯಾಗಿರುವ ಸಿಆರ್‌ ಪಿಎಫ್ ಯೋ-ಧ ರಾಕೇಶ್ವರ ಸಿಂಗ್ ಮಿನ್ಹಾಸ್ ಅವರ ಮನೆಯಲ್ಲಿ ಭಾವನಾತ್ಮಕ ಕ್ಷಣವೊಂದು ಕಂಡುಬಂದಿದ್ದು, ರಾಕೇಶ್ವರ್ ಸಿಂಗ್ ರವರ 5 ವರ್ಷದ ಮಗಳು ನ-ಕ್ಸ-ಲ ರಿಗೆ ಅ-ಪ-ಹ-ರಿ&ಸಿರುವ ತನ್ನ ತಂದೆಯನ್ನು ಬಿ-ಡು-ಗ-ಡೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತ, “ದಯವಿಟ್ಟು, ನನ್ನ ತಂದೆಯನ್ನು ಬಿ-ಡು-ಗ-ಡೆ ಮಾಡಿ” ಎಂದು ಛತ್ತೀಸ್‌ಗಢ್ ದಲ್ಲಿ ನಡೆದ ದಾ-ಳಿ-ಯ ನಂತರ ನ-ಕ್ಸ-ಲ್ಸ್‌-ರಿಂದ ಒ-ತ್ತೆ-ಯಾ-ಳಾ ಗಿರುವ ಕೋ-ಬ್ರಾ ಕ-ಮಾಂ-ಡೋ-ನ ಮಗಳು ಐದು ವರ್ಷದ ಶ್ರಾಗ್ವಿ ಪತ್ರ ಬರೆದಿದ್ದಾಳೆ.

ನ-ಕ್ಸ-ಲ-ರ ಜೊತೆಗಿನ ಭೀ-ಕ-ರ ಕಾ-ಳ-ಗ ಹಾಗು ಕ-ಮಾಂ-ಡೋ ರಾಕೇಶ್ವರ್ ಸಿಂಗ್ ಕಾ-ಣೆ-ಯಾದ ಸುದ್ದಿ ಕೇಳಿ ಅವರ ಕುಟುಂಬಕ್ಕೆ ಭಾ-ರೀ ಆ-ಘಾ-ತ-ವುಂಟಾಗಿದ್ದು ಅದರಿಂದ ಈಗಲೂ ಅವರಿಗೆ ಹೊರಬರಲು ಸಾಧ್ಯವಾಗುತ್ತಿಲ್ಲ. ಕೊ-ಬ್ರಾ ಬೆ-ಟಾ-ಲಿ-ಯ-ನ್‌ನ ಕನಿಷ್ಟ 22 ಭ-ದ್ರ-ತಾ ಸಿಬ್ಬಂದಿಗಳು ಈ ದಾ-ಳಿ-ಯಲ್ಲಿ ಸಾ-ವ-ನ್ನ-ಪ್ಪಿ-ದ್ದು ಬಳಿಕ ರಾಕೇಶ್ವರ್ ಸಿಂಗ್ ಮಿನ್ಹಾಸ್ ರವರನ್ನ ನ-ಕ್ಸ-ಲ-ರು ಅ-ಪ-ಹ-ರಿ-ಸಿದ್ದಾ‌ರೆ.

Advertisement

“ನಾವು ದಾ-ಳಿ-ಯ ಬಗ್ಗೆ ತಿಳಿದುಕೊಂಡೆವು ಮತ್ತು ನ್ಯೂಸ್ ಚಾನೆಲ್ಗಳಿಂದ ಅವರು ಕಾ-ಣೆ-ಯಾಗಿದ್ದಾರೆ ಎಂದು ತಿಳಿದುಬಂತು. ಘಟನೆಯ ಬಗ್ಗೆ ಸರ್ಕಾರದಿಂದ ಅಥವಾ ಸಿಆರ್‌ಪಿಎಫ್‌ನಿಂದ ಯಾರೂ ನಮಗೆ ಮಾಹಿತಿ ನೀಡಿಲ್ಲ” ಎಂದು ಮಿನ್ಹಾಸ್ ಅವರ ಪತ್ನಿ ಮೀನು ಜಮ್ಮು-ಅಖ್ನೂರ್ ರಸ್ತೆಯ ಬರ್ನಾಯ್ ಪ್ರದೇಶದ ತಮ್ಮ ನಿವಾಸದಲ್ಲಿ ಹೇಳಿದರು.

ಮಿನ್ಹಾಸ್ ಅವರ ಮಗಳಷ್ಟೇ ಅಲ್ಲದೆ, ಅವರ 7 ವರ್ಷದ ಸೋದರಳಿಯ ಆಕಾಶ್ ಕೂಡ ಚಿಕ್ಕಪ್ಪ ಎಲ್ಲಿದ್ದಾರೆ ಅವರನ್ನ ಕರೆತನ್ನಿ ಎನ್ನುತ್ತಿದ್ದಾನೆ. “ಅಂಕಲ್, ನೀವು ಮಾಧ್ಯಮದಲ್ಲಿದ್ದೀರಿ, ನನ್ನ ಚಿಕ್ಕಪ್ಪ ಎಲ್ಲಿದ್ದಾರೆ ಎಂದು ನಿಮಗೆ ತಿಳಿದಿರಬೇಕು” ಎಂದು ಆತ ತಮ್ಮ ಮನೆಗೆ ಬಂದ ಸುದ್ದಿಗಾರರನ್ನು ಕೇಳುತ್ತಿದ್ದನು.

ಯೋ-ಧ-ನ ಅ-ಪ-ಹ-ರ-ಣ-ದ ಸುದ್ದಿ ಹೊರಬಂದ ನಂತರ, ದುಃ-ಖ-ದ ಈ ಕ್ಷಣದಲ್ಲಿ ಕುಟುಂಬದೊಂದಿಗೆ ಇರಲು ದೂರದ ಸ್ಥಳಗಳಿಂದ ಆಗಮಿಸಿದ ಸಂಬಂಧಿಕರಿಂದ ಮಿನ್ಹಾಸ್ ಅವರ ಮನೆ ತುಂಬಿದೆ.

ಮಿನ್ಹಾಸ್ ಎಲ್ಲಿದ್ದಾರೆ ಎಂದು ತಿಳಿಯಲು ಜಮ್ಮುವಿನ ಸಿಆರ್‌ ಪಿಎಫ್ ಕೇಂದ್ರ ಕಚೇರಿಯನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಮೀನು ಹೇಳಿದರು. “ನಾವು ನಿಮ್ಮೊಂದಿಗೆ ಹಂಚಿಕೊಳ್ಳಲು ಏನೂ ಇಲ್ಲ. ನಮಗೆ ಸ್ಪಷ್ಟವಾದ ಚಿತ್ರಣ ಹಾಗು ಮಾಹಿತಿ ಸಿಕ್ಕ ಕೂಡಲೇ, ನಾವು ನಿಮ್ಮ ಬಳಿಗೆ ಬರುತ್ತೇವೆ” ಎಂದು ಸಿಆರ್‌ ಪಿಎಫ್ ಅಧಿಕಾರಿಗಳು ಹೇಳಿದ್ದಾರೆ ಎಂದು ಮೀನು ಹೇಳಿದರು.

ಅವರು ಮನೆಗೆ ಸು-ರ-ಕ್ಷಿ-ತವಾಗಿ ಮರಳುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಮನ್ಹಾಸ್ ಪತ್ನಿ ಮೀನು ಹೇಳಿದರು. “ನನ್ನ ಪತಿ ಕಳೆದ 10 ವರ್ಷಗಳಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಮತ್ತು ಈಗ ಅವರು ನಮ್ಮ ಬಳಿಗೆ ಮರಳುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ” ಎಂದು ಅವರು ಹೇಳಿದರು.

“ಮಿನ್ಹಾಸ್ 2011 ರಲ್ಲಿ ಸಿಆರ್‌ ಪಿಎಫ್ ಗೆ ಸೇರಿದರು ಮತ್ತು ಅವರು ಕಳೆದ 10 ವರ್ಷಗಳಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅಸ್ಸಾಂನಿಂದ ಕೇವಲ ಮೂರು ತಿಂಗಳ ಹಿಂದೆಯಷ್ಟೇ ಅವರನ್ನು ಛತ್ತೀಸ್‌ಗಢಕ್ಕೆ ವರ್ಗಾಯಿಸಲಾಯಿತು” ಎಂದು ಅವರು ಕ-ಣ್ಣೀ-ರೀ-ಡು-ತ್ತ ಹೇಳಿದರು.

“ಛತ್ತೀಸ್‌ಗಡದ ಸ್ಥಳೀಯ ವರದಿಗಾರರೊಬ್ಬರೆಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ನನಗೆ ದೂರವಾಣಿ ಕರೆ ಬಂತು. ಅವರು ನನ್ನ ಗಂ-ಡ-ನ ಚಿತ್ರ ಹಾಗು ನ-ಕ್ಸ-ಲ-ರಿಗೆ ಮನವಿಯೊಂದನ್ನು ಬರೆದು ತನಗೆ ಕಳುಹಿಸಬೇಕೆಂದು ಹೇಳಿದರು” ಎಂದು ಮೀನು ಹೇಳಿದರು.

ಈ ಮಧ್ಯೆ, ಸಿಆರ್‌ ಪಿಎಫ್ ತನ್ನ ಸೈ-ನಿ-ಕ-ರನ್ನು ಸು-ರ-ಕ್ಷಿ-ತ-ವಾ-ಗಿ ಮರಳಿ ಕರೆತರುವ ಭರವಸೆ ನೀಡಿದೆ ಮತ್ತು ಕಾ-ಣೆ-ಯಾದ ಯೋ-ಧ-ನ ಸು-ರ-ಕ್ಷಿ-ತ ಮರಳುವಿಕೆಗೆ ಕೇಂದ್ರ ಸರ್ಕಾರವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ.

Advertisement
Share this on...