ಆಜ್ ತಕ್ ಚಾನೆಲ್‌ನ ಸಂದರ್ಶನದಲ್ಲಿ, ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಪ್ರಶ್ನೆಯ ಕುರಿತು ಮಾತನಾಡಿದ ಅಮಿತ್ ಶಾ, “ಸಿಎಎ ಕಾನೂನಿನ ಮೂಲಕ ಪೌರತ್ವ ಕೊಡಲು ನಾವು ಮುಂದಾಗಿದ್ದರ ಕಾರಣವೇನೆಂದರೆ ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳಲ್ಲಿ ಹಿಂದೂ ಹಾಗು ಸಿಖ್ಖರು ಚಿ-ತ್ರ-ಹಿಂ-ಸೆ ಅನುಭವಿಸಿ ಬಂದಿದ್ದಾರೆ. 70 ವರ್ಷಗಳಲ್ಲಿ ನ-ರ-ಕ-ದಲ್ಲೇ ಜೀವನ ಮಾಡಿದ್ದಾರೆ. ಎನ್‌ಆರ್‌ಸಿ ಯನ್ನ ಕಾಂಗ್ರೆಸ್ ಶುರು ಮಾಡಿತ್ತು. ಸಿಎಎ ಎನ್‌ಆರ್‌ಸಿ ವಿ-ರೋ-ಧಿ-ಸು-ವ ಕಾಂಗ್ರೆಸ್ ಪಾಕಿಸ್ತಾನ ಹಾಗು ಬಾಂಗ್ಲಾದೇಶದಿಂದ ಎಲ್ಲ ಮು-ಸ-ಲ್ಮಾ-ನ-ರೂ ಭಾರತಕ್ಕೆ ಬನ್ನಿ ಪೌರತ್ವ ಕೊಡುತ್ತೇವೆ ಎಂದು ಹೇಳಲಿ ನೋಡೋಣ. ಅವರು ನು-ಸು-ಳು-ಕೋ-ರ-ರಿ-ಗೂ ಪೌರತ್ವ ಕೊಡುವಂತೆ ಹೇಳುತ್ತಿದ್ದಾರೆ” ಎಂದರು.
ಅಷ್ಟಕ್ಕೂ ನಿಮಗೆ ಎನ್‌ಆರ್‌ಸಿ ಯಿಂದ ತೊಂದರೆಯಾದರೂ ಏನು? ಎಂದು ಅಮಿತ್ ಶಾಹ್ ಆ್ಯಂಕರ್‌ಗೆ ಕೇಳಿದರು. ಆಗ ಆ್ಯಂಕರ್ ರಾಹುಲ್ ಕನ್ವಲ್ ಉತ್ತರಿಸುತ್ತ, “ಒಬ್ಬ ಹಿಂ-ದೂ ಹಾಗು ಒಬ್ಬ ಮು-ಸ-ಲ್ಮಾ-ನ ಬಾಂಗ್ಲಾದೇಶದಿಂದ ಭಾರತಕ್ಕೆ ಬರುತ್ತಾನಂದ್ರೆ ಅದು ಕೆಲಸಕ್ಕೆ ಮಾತ್ರ” ಎನ್ನುತ್ತಲೇ ಮಧ್ಯಪ್ರವೇಶಿಸಿದ ಅಮಿತ್ ಶಾಹ್, “ಹಿಂ-ದೂ ಕೆಲಸಕ್ಕಾಗಿ ಅಲ್ಲ ಬದಲಾಗಿ ಅಲ್ಲಿ ಚಿ-ತ್ರ-ಹಿಂ-ಸೆ ಅನುಭವಿಸಲಾಗದೆ ಭಾರತಕ್ಕೆ ಬಂದಿದ್ದಾನೆ. ಭಾರತದಲ್ಲಿ ಮು-ಸಲ್ಮಾ-ನರ ಜನಸಂಖ್ಯೆ ಕಡಿಮೆಯಾಗಿಲ್ಲ ಬದಲಾಗಿ ಹೆಚ್ಚಾಗಿದೆ ಆದರೆ ಪಾಕಿಸ್ತಾನ ಹಾಗು ಬಾಂಗ್ಲಾದೇಶದಲ್ಲಿ ಹಿಂ-ದು-ಗಳ ಜನಸಂಖ್ಯೆ ಕಡಿಮೆಯಾಗಿದೆ” ಎಂದರು.
ರಾಹುಲ್ ಕನ್ವಲ್ ಮಾತನಾಡುತ್ತ “ಬಹುಶಃ ಅಸ್ಸಾಂ ನಲ್ಲಿ ವಾಸಿಸುವ ಬಂಗಾಳಿ ಹಿಂ-ದೂ ತಾನು 1971 ಕ್ಕಿಂದ ಮುಂಚೆಯಿಂದ ನಾನು ಇಲ್ಲೇ ವಾಸಿಸುತ್ತಿದ್ದೇವೆ ಅಂತ ಸು-ಳ್ಳು ಹೇಳಿದರೆ?” ಎಂದು ಕೇಳಿದಾಗ ಉತ್ತರಿಸಿದ ಅಮಿತ್ ಶಾಹ್, “ನೀವು ಭಾರತದಲ್ಲಿ ಜನಸಿದ್ದೀರ ಹಾಗಾಗಿ ಈ ಮಾತುಗಳನ್ನಾಡುತ್ತಿದ್ದೀರ” ಎಂದರು.
ಆಗ ರಾಹುಲ್ ಕನ್ವಲ್, “ಹಾಗಾದರೆ ಜನ ಈ ದೇಶದವರೇ ಅಂತ ಹೇಗೆ ಸಾಬೀತುಪಡಿಸುತ್ತಾರೆ?” ಅಂತ ಕೇಳಿದಾಗ ಅಮಿತ್ ಶಾಹ್, “ಹಳೆಯ ಮತದಾರರ ಪಟ್ಟಿಯಲ್ಲಿ ಅವರ ಹೆಸರಿದ್ದರೆ ಅದೂ ಕೂಡ ಒಂದು ದಾಖಲೆ ಎಂದು ಪರಿಗಣಿಸಲ್ಪಡುತ್ತದೆ” ಎಂದರು.
ಮತ್ತೆ ಪ್ರಶ್ನಿಸಿದ ರಾಹುಲ್ ಕನ್ವಲ್, “ನು-ಸು-ಳು-ಕೋ-ರು ಯಾರು ಅನ್ನೋದನ್ನ ನೀವು ಹೇಗೆ ಪತ್ತೆ ಹಚ್ಚುತ್ತೀರ?” ಎಂದು ಕೇಳಿದಾಗ ಉತ್ತರಿಸಿದ ಅಮಿತ್ ಶಾಹ್, “ಆ ಚಿಂತೆ ನೀವು ಸರ್ಕಾರದ ಮೇಲೆ ಬಿಟ್ಟುಬಿಡಿ. ನೀವು ಸೆಕ್ಯೂಲರಿಸಂ ಬಗ್ಗೆ ಚಿಂತೆ ಮಾಡಿ” ಎಂದರು.
ಅಮಿತ್ ಶಾಹ್ ಮಾತನಾಡುತ್ತ, ಜಗತ್ತಿನ ಎಲ್ಲ ದೇಶಗಳ ಬಳಿಯೂ ಅವರವರ ದೇಶದ ನಾಗರಿಕರ ರೆಕಾರ್ಡ್ ಇರುತ್ತದೆ. ಜಗತ್ತಿನ ಎಲ್ಲ ಮು-ಸ-ಲ್ಮಾ-ನ-ರೂ ಭಾರತಕ್ಕೇ ಬಂದುಬಿಡಲಿ ಅಂತ ಕಾಂಗ್ರೆಸ್ ಬಯಸುತ್ತದೆ. ಪಾಕಿಸ್ತಾನ ಹಾಗು ಬಾಂಗ್ಲಾದೇಶದ ಹಿಂ-ದು-ಗಳ ಪ್ರತಿ ಭಾರತದ ಕಮಿಟ್ಮೆಂಟ್ ಇದೆ. ಇದು ಈಗಿನದ್ದಲ್ಲ 1947 ರದ್ದು ಎಂದರು.
ಇದನ್ನೂ ಓದಿ: ಮತಾಂತರವಾಗುವವರಿಗೆ ಬಿಗ್ ಶಾಕ್ ಕೊಟ್ಟ ಅಮಿತ್ ಶಾಹ್
ದೇಶದ ಗೃಹಮಂತ್ರಿ ಅಮಿತ್ ಶಾಹ್ ಮಹತ್ವದ ಹೆಜ್ಜೆಯೊಂದನ್ನ ಇಡುವುದರ ಮೂಲಕ ಖಡಕ್ ನಿರ್ಣಯ ಕೈಗೊಂಡಿದ್ದಾರೆ. ಈ ನಿರ್ಣಯದಿಂದಾಗಿ ವಿದೇಶಿ ಮೂಲದಿಂದ ಫಂಡಿಂಗ್ ಬರುತ್ತಿದ್ದ ಎನ್‌ಜಿಓ ಗಳಿಗೆ ಭಾರೀ ಹೊಡೆತ ಬಿದ್ದಿದೆ. ಹೌದು ಎನ್‌ಜಿಓ ಗಳ ಹೆಸರಿನಲ್ಲಿ ಹಿಂದುಗಳನ್ನ ಮತಾಂತರಿಸಲು ವಿದೇಶದಿಂದ ದುಡ್ಡು ಹರಿದುಬರುತ್ತಲೇ ಇದೆ. ಇದೀಗ ಗೃಹಸಚಿವ ಅಮಿತ್ ಶಾಹ್ ರವರು ದೇಶದ ಇಂತಹ ನಾಲ್ಕು ದೊಡ್ಡ ಕ್ರಿಶ್ಚಿಯನ್ ಸಂಘಟನೆಗಳ ವಿದೇಶಿ ಫಂಡಿಂಗ್ ಪಡೆಯುತ್ತಿದ್ದ ಎನ್‌ಜಿಓ ಗಳ ಲೈಸೆನ್ಸ್ ರದ್ದು ಮಾಡಿದ್ದಾರೆ. ಭಾರತ ಸರ್ಕಾರ ಇತ್ತೀಚೆಗಷ್ಟೇ ನಾಲ್ಕು ಮಿಷನರಿ ಸಂಘಟನೆಗಳ FCRA ಲೈಸೆನ್ಸ್ ರದ್ದು ಮಾಡಿದೆ.
ಗೃಹ ಸಚಿವಾಲಯದ DATA ಪ್ರಕಾರ, ಫೆಬ್ರವರಿ 10 ರಂದು New Life Fellowship Associationನ ಎಫ್‌ಸಿಆರ್‌ಎ ಪರವಾನಗಿಯನ್ನು ರದ್ದುಗೊಳಿಸಿದೆ! ಎಫ್‌ಸಿಆರ್‌ಎ ಪರವಾನಗಿಗಳನ್ನು ಅಮಾನತುಗೊಳಿಸಿದ ಆರು ಎನ್‌ಜಿಒಗಳಲ್ಲಿ ನಾಲ್ಕು ಶಾಶ್ವತ ಸಂಘಗಳೂ ಇವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇವುಗಳಲ್ಲಿ ಝಾರ್ಖಂಡ್‌ನ ಇಕೋಸೌಲಿಸ್ ನಾರ್ತ್ ವೆಸ್ಟರ್ನ್ ಗೋಸ್ನರ್ ಇವಾಂಜೆಲಿಕಲ್, ಮಣಿಪುರದ ಇವಾಂಜೆಲಿಕಲ್ ಚರ್ಚ್ ಅಸೋಸಿಯೇಷನ್ (ಇಸಿಎ), ಝಾರ್ಖಂಡ್‌ನ ನಾರ್ದರ್ನ್ ಇವಾಂಜೆಲಿಕಲ್ ಲೂಥರನ್ ಚರ್ಚದ ಹಾಗು ಮುಂಬೈನ ನ್ಯೂ ಲೈಫ್ ಫೆಲೊಶಿಪ್ ಅಸೋಸಿಯೇಷನ್ NLLA ಕೂಡ ಇವೆ.
ಇದು ಮಾತ್ರವಲ್ಲದೆ ಯುಎಸ್ಎ ಮೂಲದ ಇಬ್ಬರು ಕ್ರಿಶ್ಚಿಯನ್ ಡೋನರ್‌ಗಳು (ದಾನಿಗಳು) ಕೂಡ MHA ರಡಾರ್ ಲ್ಲಿದ್ದಾರೆ.! ಈ ಎರಡು ಡೊನರ್ ಗಳು ಕೆಳಕಂಡಂತಿವೆ – ಸೆವೆಂತ್ ಡೇ ಎಡ್ವೆಂಟಿಸ್ಟ್ ಚರ್ಚ್ ಮತ್ತು ಬ್ಯಾಪ್ಟಿಸ್ಟ್ ಚರ್ಚ್! ಪ್ರಸ್ತುತ ಇವುಗಳ ಫಂಡಿಂಗ್ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, 2017 ರಲ್ಲಿ, ಯುಎಸ್ ಮೂಲದ ಮತ್ತೊಂದು ಪ್ರಬಲ ಕ್ರಿಶ್ಚಿಯನ್ ಡೋನರ್ ಕಂಪ್ಯಾಷನ್ ಇಂಟರ್ನ್ಯಾಷನಲ್ ಅನ್ನು ಭಾರತದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಾಗಿತ್ತು.
ಈ ಸಂಸ್ಥೆಯು ಭಾರತದಲ್ಲಿ ಹಿಂದುಗಳನ್ನ ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸಲು ಎನ್‌ಜಿಓ ಮೂಲಕ ಹಣದ ಸರಬರಾಜು ಮಾಡಿತ್ತು ಎಂಬ ಮಾಹಿತಿ ದೇಶದ ಗೃಹ ಸಚಿವಾಲಯಕ್ಕೆ ಸಿಕ್ಕಿತ್ತು. ಏತನ್ಮಧ್ಯೆ, ಎನ್‌ಸಿಒಗಳಲ್ಲಿ ಲೈಸೆನ್ಸ್ ರದ್ದುಪಡಿಸಲಾಗಿರುವ ಎಫ್‌ಸಿಆರ್‌ಎ ಗಳಲ್ಲಿ ಇನ್ನೆರಡು ಸಂಸ್ಥೆಗಳಿದ್ದು ಅವುಗಳು ರಾಜನಂದಗಾಂವ್ ಲೆಪ್ರೋಸಿ ಹಾಸ್ಪಿಟಲ್ & ಕ್ಲಿನಿಕ್ ಮತ್ತು ಡಾನ್ ಬಾಸ್ಕೊ ಟ್ರೈಬಲ್ ಡೆವಲಪ್ಮೆಂಟ್ ಸೊಸೈಟಿ ಆಗಿವೆ.