ಜಮ್ಮು ಕಾಶ್ಮೀರ ಈ ಹಿಂದೆ ಎಂತಹ ರಾಜ್ಯವಾಗಿತ್ತೆಂದರೆ ಅಲ್ಲಿನ ಯುವತಿ ಅನ್ಯ ರಾಜ್ಯದ ಯುವಕನನ್ನ ಮದುವೆಯಾದರೆ ಆಕೆಯ ಜಮ್ಮು ಕಾಶ್ಮೀರದ ಎಲ್ಲ ಅಧಿಕಾರಗಳು, ಆಸ್ತಿಯಲ್ಲಿ ಪಾಲು ಎಲ್ಲವೂ ತೊರೆಯಬೇಕಾಗಿತ್ತು. ಆದರೆ ಈಗ ಅದೆಲ್ಲಾ ಇಲ್ಲ, ಮೋದಿ ಸರ್ಕಾರವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನಗಳನ್ನೆಲ್ಲಾ ರದ್ದುಪಡಿಸಿತ್ತು (2019 ರ ಅಗಷ್ಟ್ 5 ರಂದು ಜಮ್ಮು ಕಾಶ್ಮೀರದ ಆರ್ಟಿಕಲ್ 370 ತೆಗೆದು ಹಾಕಿತ್ತು). ಅದಾದ ಬಳಿಕ ಈಗ ಜಮ್ಮು ಕಾಶ್ಮೀರದ ಯಾವ ಯುವತಿ ಬೇಕಾದರೂ ಬೇರೆ ರಾಜ್ಯದ ಯುವಕನನ್ನ ಮದುವೆಯಾಗಬಹುದು ಹಾಗು ಆಕೆಯ ಯಾವ ಅಧಿಕಾರಗಳೂ ಸಮಾಪ್ತಿಯಾಗುವುದಿಲ್ಲ.
ಆರ್ಟಿಕಲ್ 370 ತೆಗೆದ ಬಳಿಕ ಬಹಳಷ್ಟು ಪ್ರಯೋಜನಗಳಾಗಿವೆ. ಹೌದು ಅಂತಹ ಉದಾಹರಣೆ ಈಗ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಸೈನಿಕ ಅಜಿತ್ ಪಾಟೀಲ್ ಹಾಗು ಕಾಶ್ಮೀರಿ ಯುವತಿ ಸುಮನ್ ದೇವಿ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಉಂಡಾಲೆ ಗ್ರಾಮದ ನಿವಾಸಿಯಾದ ಅಜಿತ್ ಪ್ರಹ್ಲಾದ್ ಪಾಟೀಲ್ 2019 ರಲ್ಲಿ ಭಾರತೀಯ ಸೇನೆಯಲ್ಲಿ ಆರ್ಮಿ ಎಜುಕೇಷನ್ ಇನ್ಸ್ಪೆಕ್ಟರ್ ಪೋಸ್ಟ್ ನಲ್ಲಿ ಮೊದಲು ಝಾನ್ಸಿಗೆ ತಲುಪಿದ್ದರು. ಅಲ್ಲಿ ಅವರ ಸ್ನೇಹಿತನೂ ಕೆಲಸ ಮಾಡುತ್ತಿದ್ದ. ಆ ಸ್ನೇಹಿತನ ಮನೆಗೆ ಕೆಲ ದಿನಗಳ ಕಾಲ ಅವರ ಸಂಬಂಧಿ ಕಾಶ್ಮೀರಿ ಯುವತಿ ಸುಮನ್ ದೇವಿ ಕೂಡ ಗೆಸ್ಟ್ ಆಗಿ ಬಂದಿದ್ದಳು.
ಸುಮನ್ ದೇವಿ ಕಾಶ್ಮೀರದ ಕಿಸ್ತವಾಡ ಜಿಲ್ಲೆಯ ಜೋಧಾನಗರ ತೆಹಸೀಲ್ನ ಪಲಮಾರ್ ಗ್ರಾಮದ ನಿವಾಸಿಯಾಗಿದ್ದಾಳೆ. ಆಗ ಅಜಿತ್ ಸ್ನೇಹಿತ ತನ್ನ ಸಹೋದರಿ ಸುಮನ್ ದೇವಿಯನ್ನ ತನ್ನ ಸೈನಿಕ ಮಿತ್ರನಾದ ಅಜಿತ್ ನ್ನ ಪರಿಚಯ ಮಾಡಿಸಿದ್ದ. ಸುಮನ್ ದೇವಿ ಮೊದಲ ಭೇಟಿಯಲ್ಲೇ ಅಜಿತ್ನನ್ನ ಇಷ್ಟಪಡಲು ಆರಂಭಿಸಿದಳು. ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಆದರೆ ಅವರಿಬ್ಬರ ನಡುವೆ ಆರ್ಟಿಕಲ್ 370 ದೊಡ್ಡ ಗೋಡೆಯಾಗಿ ನಿಂತುಬಿಟ್ಟಿತ್ತು.
ಈ ಸುದ್ದಿ ಅಂದರೆ ಅವರಿಬ್ಬರ ನಡುವಿನ ಪ್ರೀತಿ ಆಗಷ್ಟ್ 5, 2019 ಕ್ಕಿಂತ ಹಿಂದಿನ ಸುದ್ದಿಯಾಗಿದೆ. ಇಬ್ಬರೋ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರನ್ನೋದೇನೋ ನಿಜವಾಗಿತ್ತು ಆದರೆ ಮದುವೆಯ ಮಾತುಕತೆ ಆಗಿರಲಿಲ್ಲ ಹಾಗು ಎರಡೂ ಕುಟುಂಬದವರು ಈ ಪ್ರೀತಿಯ ಪರವಾಗಿರಲಿಲ್ಲ. ಆದರೆ ಈ ಮಧ್ಯೆ ಮಾರ್ಚ್ 2020 ರಲ್ಲಿ ಅಜಿತ್ ತನ್ನ ಮಿತ್ರನ ಜೊತೆ ಕಾಶ್ಮೀರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ. ಅದೇ ಸಮಯದಲ್ಲಿ ಕೊರೋನಾ ಲಾಕ್ಡೌನ್ ಆಗಿಬಿಟ್ಟಿತು. ಒಂದಲ್ಲ ಎರಡಲ್ಲ ಬರೋಬ್ಬರಿ 3 ತಿಂಗಳ ಲಾಕ್ಡೌನ್ ಆದ ಕಾರಣ ಕಾಶ್ಮೀರದಲ್ಲೇ ಉಳಿಯುವಂತಾಗಿಬಿಟ್ಟಿತು. ಈ ಮೂರು ತಿಂಗಳಲ್ಲಿ ಅಜಿತ್ ಹಾಗು ಸುಮನ್ ನಡುವಿನ ಪ್ರೀತಿ ಮತ್ತಷ್ಟು ಗಾಢವಾಯಿತು ಹಾಗು ಇಬ್ಬರೂ ಮದುವೆಯಾಗಬೇಕು ಎಂದು ತೀರ್ಮಾನಿಸಿದರು.
ಲಾಕ್ಡೌನ್ ಮುಗಿದ ಬಳಿಕ ಅಜಿತ್ ವಾಪಸ್ ಝಾನ್ಸಿಗೆ ತಲುಪಿದ ಹಾಗು 3 ತಿಂಗಳು ಡ್ಯೂಟಿ ಮಾಡಿದ ಬಳಿಕ ಆತ ತನ್ನ ಮಹಾರಾಷ್ಟ್ರದ ಗ್ರಾಮಕ್ಕೆ ವಾಪಸ್ಸಾದ. ಆತ ತನ್ನೂರಿಗೆ ಮರಳಿದ ಬಳಿಕ ತನ್ನ ಕುಟುಂಬದೊಂದಿಗೆ ಎಲ್ಲ ವಿಷಯಗಳನ್ನೂ ತಿಳಿಸಿದ. ಮೊದಲಂತೂ ಕಾಶ್ಮೀರದ ಹೆಸರು ಕೇಳಿದ ಕೂಡಲೇ ಕುಟುಂಬದವರು ಆತಂಕಗೊಂಡರು. ಆದರೆ ಅಜಿತ್ ಆರ್ಟಿಕಲ್ 370 ತೆಗೆದಿರುವುದರ ಬಗ್ಗೆ ಹಾಗು ಮದುವೆಗೆ ಯಾವ ಸರ್ಕಾರಿ ಅಡಚಣೆಯೂ ಆಗುವುದಿಲ್ಲ ಎಂದು ವಿವರಿಸಿದ. ಆಗ ಕುಟುಂಬದವರು ಸಂಭ್ರಮದಿಂದ ಸೊಸೆಯನ್ನ ಊರಿಗೆ ಕರೆತರಲು ನಿರ್ಧರಿಸಿದರು. ಅದಾದ ಬಳಿಕ ಎರಡೂ ಕುಟುಂಬದವರು ಮದುವೆಗೆ ಒಪ್ಪಿದರು, ಮೊದಲು ಕಾಶ್ಮೀರಿ ರೀತಿ ರಿವಾಜುಗಳ ಪ್ರಕಾರ ಮದುವೆಯಾಗಬೇಕು ನಂತರ ಮಹಾರಾಷ್ಟ್ರದ ಪದ್ಧತಿಗಳ ಪ್ರಕಾರ ಎಂದು ನಿರ್ಣಯವಾಯಿತು.
ಕಳೆದ ನವೆಂಬರ್ 27, 2020 ರಂದು ಅಜಿತ್ ಹಾಗು ಸುಮನ್ ಮದುವೆ ಮೊದಲು ಕಾಶ್ಮೀರಿ ರೀತಿ ರಿವಾಜುಗಳ ಪ್ರಕಾರವಾಯಿತು ಹಾಗು ಡಿಸೆಂಬರ್ 18, 2020 ರಂದು ಅಜಿತ್ ಗ್ರಾಮದಲ್ಲಿ ಮಹಾರಾಷ್ಟ್ರದ ರೀತಿ ರಿವಾಜುಗಳ ಪ್ರಕಾರ ಮದಯವೆಯಾಯಿತು. ಮೋದಿ ಸರ್ಕಾರ ಕೈಗೊಂಡ ಆರ್ಟಿಕಲ್ 370 ಬಗೆಗಿನ ನಿರ್ಣಯದಿಂದ ಅಜಿತ್ ಹಾಗು ಸುಮನ್ ದೇವಿಗೆ ಮೊಟ್ಟಮೊದಲ ಲಾಭವಾಯಿತು ಹಾಗು ಅಜಿತ್ ಜಮ್ಮು ಕಾಶ್ಮೀರದ ಮೊದಲ ಹೊರರಾಜ್ಯದ ಅಳಿಯನಾಗಿದ್ದಾನೆ.