ನಮಸ್ತೆ ಸ್ನೇಹಿತರೆ, ದೇವರು ಎಲ್ಲೂ ಇರಲ್ಲ ನಮ್ಮ ತಂದೆ ತಾಯಿ ರೂಪದಲ್ಲಿ, ಒಡ ಹುಟ್ಟಿದವರ ರೂಪದಲ್ಲಿ.. ಸ್ನೇಹಿತರು, ಹಿತೈಷಿಗಳ ರೂಪದಲ್ಲಿ ಇರ್ತಾರೆ. ಮಾನವೀಯತೆ ಉಳ್ಳವರೇ ದೇವರು ಅಲ್ಲವೇ.. ನಾವು ಈ ಮಾಹಿತಿಯಲ್ಲಿ ತಿಳಿದುಕೊಳ್ಳಲು ಹೊರಟಿರುವವರು ಮಾನವೀಯತೆಯ ಮತ್ತೊಂದು ರೂಪ.. ಹೇಗೆಂದು ನೊಡೋಣ ಬನ್ನಿ. ಅಶ್ವಿನಿ ಮತ್ತು ಅವರ ಗಂಡ ಪ್ರತಿದಿನ ಮುಂಜಾನೆ 4 ಗಂಟೆಯಿಂದ 10 ಗಂಟೆಯವರೆಗೆ ರೈಲ್ವೇ ನಿಲ್ದಾಣದ ಹೊರಗೆ ಪುಟ್ ಪಾತ್ ಮೇಲೆ ನಿಂತು ತಿಂಡಿ ಮಾರುತ್ತಾರೆ. 10 ಗಂಟೆಯ ನಂತರ ಇಬ್ಬರು ತಮ್ಮ ತಮ್ಮ ಕೆಲಸಕ್ಕೆ ಹೋಗುತ್ತಾರೆ..
ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈ ದಂಪತಿ ಯಾಕೆ ರಸ್ತೆಯ ಮೇಲೆ ನಿಂತು ತಿಂಡಿ ಮಾರುತ್ತಿದ್ದಾರೆ ಗೊತ್ತಾ? ಕಾರಣ ತಿಳಿದರೆ ಖಂಡಿತ ಇವರ ಕೆಲಸ ಹೃದಯಕ್ಕೆ ಟಚ್ ಆಗುತ್ತದೆ.. ಮುಂಬೈಗೆ ಸೇರಿದ ಅಶ್ವಿನಿ ಹಾಗು ಅವರ ಪತಿ ಎಂಬಿಎ ಪದವಿದರರು. ಇನ್ನೂ ಇವರು ದೊಡ್ಡ ದೊಡ್ಡ ಕಂಪನಿಯಲ್ಲಿ ಮೇನೆಜರ್ ಆಗಿ ಕೆಲಸ ಮಾಡುತ್ತಿದ್ದಾರೆ.. ಆದರೆ ಬೆಳಗ್ಗೆ 4 ಗಂಟೆಗೆ ತಮ್ಮ ಮನೆ ಕೆಲಸದವಳು ಮಾಡಿರುವ ಬಿಸಿ ಬಿಸಿ ತಿಂಡಿಗಳನ್ನು ಹಿಡಿದು ರೈಲ್ವೇ ಸ್ಟೇಷನ್ ನಲ್ಲಿ ಪುಟ್ಪಾತ್ ಗೆ ಬರುವ ಇವರು ಸುಮಾರು 10 ಗಂಟೆಯವರೆಗೂ ತಿಂಡಿ ಮಾರುತ್ತಾರೆ.
ಅದಕ್ಕೆ ಕಾರಣ ಅಶ್ವಿನಿ ಅವರ ಮನೆಯಲ್ಲಿ 55 ವರ್ಷದ ಮನೆ ಕೆಲಸದವಳು ಇದ್ದು ಆಕೆಯ ಪತಿ ಪಾ’ರ್ಶ್ವವಾಯುವಿಗೆ ತುತ್ತಾಗಿದ್ದಾರೆ.. ಹಾಗಾಗಿ ಈ ವಯಸ್ಸಿನಲ್ಲಿ ಅವರು ಹಣಕ್ಕಾಗಿ ಪರದಾಡುವುದು ಬೇಡ ಎಂದು ಮನೆ ಕೆಲಸದಾಕೆ ತಯಾರಿಸಿದ ತಿಂಡಿಗಳನ್ನು ರಸ್ತೆ ಬದಿಯಲ್ಲಿ ಈ ದಂಪತಿಗಳು ಮಾರುತ್ತಿದ್ದಾರೆ. ಈ ಗಂಡ ಹೆಂಡತಿಯದ್ದು ಎಂತಹ ಒಳ್ಳೆಯ ಹೃದಯ ಅಲ್ಲವೇ.. ತಮ್ಮ ಮನೆಕೆಲಸದಾಕೆಯ ಕಷ್ಟವನ್ನು ತಮ್ಮ ಕಷ್ಟು ಎಂದು ಭಾವಿಸಿ ಬೆಳ ಬೆಳಗ್ಗೆ ಎದ್ದು ಸುಮಾರು 5 ಗಂಟೆಗಳ ಕಾಲ ಪುಟ್ಪಾತ್ ಮೇಲೆ ನಿಂತು ತಿಂಡಿ ಮಾರಿ ಆ ಹಣವನ್ನು ಮನೆ ಕೆಲಸದಾಕೆಗೆ ಕೊಡುತ್ತಿದ್ದಾರೆ. ಮಾನವೀಯತೆ ಅಂದರೆ ಇದೇ ಅಲ್ಲವೇ.. ಈ ದಂಪತಿ ಮಾಡುತ್ತಿರುವ ಕೆಲಸದ ಬಗ್ಗೆ ನೀವೇನ್ ಹೇಳ್ತೀರಾ.