ಐಪಿಎಲ್ ಟ್ರೋಫಿ ಈ ವರ್ಷವಾದರೂ ಆರ್.ಸಿ.ಬಿ ತಂಡದ ಕೈ ಸೇರುತ್ತದೆ ಎಂದು ಬಹಳ ಆಸೆ ಪಟ್ಟಿದ್ದ ಅಭಿಮಾನಿಗಳಿಗೆ ಈ ವರ್ಷ ಕೂಡ ನಿರಾಸೆಯಾಗಿದೆ. ಈ ವರ್ಷವೂ ಐಪಿಎಲ್ ನಿಂದ ಹೊರಬಂದಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಕಳೆದ ಹದಿಮೂರು ವರ್ಷದಿಂದ ಎಷ್ಟೇ ಪ್ರಯತ್ನ ಪಟ್ಟರೂ ಆರ್.ಸಿ.ಬಿ ತಂಡ ಕಪ್ ಗೆದ್ದಿಲ್ಲ. ಬೆಂಗಳೂರು ತಂಡದ ಅಭಿಮಾನಿಗಳು ಮುಂದಿನ ಸಲವಾದರೂ ಕಪ್ ನಮ್ಮದಾಗಲಿ ಎಂದು ಸುಮ್ಮನಾಗಿದ್ದಾರೆ. ಈ ವರ್ಷ ಬೆಂಗಳೂರು ತಂಡ ಕಪ್ ಗೆಲ್ಲದೆ ಹೋದರು, ಭರ್ಜರಿ ಬ್ಯಾಟ್ಸ್ಮನ್ ದೇವ್ ದತ್ ಪಡಿಕ್ಕಲ್ ತಂಡಕ್ಕೆ ಸಿಕ್ಕಿದ್ದಾರೆ. ಐಪಿಎಲ್ ನ ಮೊದಲ ಸೀಸನ್ ನಲ್ಲೇ 5 ಅರ್ಧ ಶತಕಗಳನ್ನು ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ ದೇವ್ ದತ್ ಪಡಿಕ್ಕಲ್. ಯಶಸ್ವಿ ಬೌಲರ್ ಗಳಾದ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಕಗಿಸೋ ರಬಾಡಾ ರಂತಹ ವಿಶ್ವದ ಅತ್ಯುತ್ತಮ ಬೌಲರ್ ಗಳ ಎದುರು ರನ್ ಬಾರಿಸಿದ ದೇವ್ ದತ್, ಸ್ಪಿನ್ನರ್ ಗಳ ಎದುರು ಬ್ಯಾಟಿಂಗ್ ಮಾಡುವುದು ಕಷ್ಟ ಎಂದಿದ್ದಾರೆ. ಅದರಲ್ಲೂ ಹೈದರಾಬಾದ್ ತಂಡದ ರಶೀದ್ ಖಾನ್ ಎದುರಲ್ಲಿ ಆಡುವುದು ಕ-ಷ್ಟವಾಗಿತ್ತಂತೆ ಪಡಿಕ್ಕಲ್ ಅವರಿಗೆ.
ಇನ್ನು ಈ ವರ್ಷ ಐಪಿಎಲ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡಗಳಲ್ಲಿ ಒಂದು KKR. ಈ ರೀತಿಯ ಪ್ರದರ್ಶನ ನೀಡಿದ್ದರಿಂದ KKR ತಂಡದಿಂದ ಐವರು ಆಟಗಾರರನ್ನು ಹೊರತೆಗೆಯಲಾಗಿದೆ. ದಿನೇಶ್ ಕಾರ್ತಿಕ್ ಸೇರಿದಂತೆ ಐವರು ಆಟಗಾರರನ್ನು ಕೈಬಿಡಲಾಗಿದೆ. ತಂಡದ ನಿರ್ವಹಣೆಯನ್ನು ದಿನೇಶ್ ಕಾರ್ತಿಕ್ ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ, ಮಧ್ಯದಲ್ಲಿ ಕ್ಯಾಪ್ಟನ್ ಬದಲಾವಣೆ ಕೂಡ ಆಗಿತ್ತು. ದಿನೇಶ್ ಕಾರ್ತಿಕ್, ಕುಲ್ ದೀಪ್ ಯಾದವ್, ಕ್ರಿಸ್ ಗ್ರೀನ್, ಟಿಮ್ ಸಿಫಾರ್ಟ್ಸ್ ಮತ್ತು ಸಿದ್ದೇಶ್ ಲಾರ್ಡ್ ಅವರನ್ನು ಕೆಕೆಆರ್ ತಂಡದಿಂದ ಹೊರತೆಗೆಯಲಾಗಿದೆ.
ಕರೊನಾ ಹಾವಳಿ ಇಂದಾಗಿ ವಿಶ್ವಾದ್ಯಂತ ಕೋಟ್ಯಾಂತರ ಜನರ ಬದುಕು ಅಸ್ತವ್ಯಸ್ತವಾಗಿದೆ. ಕೆಲಸ ಕಳೆದುಕೊಂಡಿರುವವರ ಬದುಕಿನ ಸ್ಥಿತಿಯನ್ನಂತೂ ಕೇಳುವ ಹಾಗಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇವರ ಆಕ್ಟೊಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಆಸ್ಟೇಲಿಯದಲ್ಲಿ ಟಿ20 ವಿಶ್ವ ಕಪ್ ಟೂರ್ನಿ ಆರಂಭವಾಗಬೇಕಿತ್ತು. ಕರೊನಾ ಇಂದಾಗಿ ಈ ಟೂರ್ನಿ ಮುಂದಕ್ಕೆ ಹೋಗಿದೆ. ಇದರಿಂದಾಗಿ ಜೀವನ ಸಾಗಿಸಲು ಕಷ್ಟವಾಗಿ, ಹೊಟ್ಟೆ ಪಾಡಿಗಾಗಿ ಡೆಲಿವರಿ ಬಾಯ್ ಆಗಿದ್ದಾರೆ ಒಬ್ಬ ಕ್ರಿಕೆಟ್ ಆಟಗಾರ.
ಟಿ20 ವಿಶ್ವಕಪ್ ಪೋಸ್ಟ್ ಪೋನ್ ಆಗಿರುವ ಕಾರಣ ನೆದರ್ ಲ್ಯಾಂಡ್ ನ ಆಟಗಾರ ಪೌಲ್ ವಾನ್ ಮಿಕೆರನ್ ಅವರು ಊಬರ್ ಈಟ್ಸ್ ನ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಸೈಕಲ್ ಏರಿ ಫುಡ್ ಡೆಲಿವರಿ ಮಾಡುತ್ತಿದ್ದಾರೆ. ಈ ಕುರಿತು ಅವರೇ ಟ್ವೀಟ್ ಮಾಡಿ “ಈ ಸಮಯಕ್ಕೆ ಕ್ರಿಕೆಟ್ ಆಡಬೇಕಿತ್ತು. ಆದರೆ ಚಳಿಗಾಲದ ದಿನಗಳನ್ನು ಕಳೆಯಲು ಊಬರ್ ಈಟ್ಸ್ ಗಾಗಿ ಡೆಲಿವರಿ ಮಾಡುತ್ತಿದ್ದೇನೆ. ವಸ್ತುಸ್ಥಿತಿಗಳು ಬದಲಾಗುವ ರೀತಿ ಫನ್ನಿ ಎನ್ನಿಸುತ್ತದೆ.. ಎಲ್ಲರೂ ಯಾವಾಗಲೂ ನಗುನಗುತ್ತಾ ಇರಿ..” ಎಂದು ಟ್ವೀಟ್ ಮಾಡಿದ್ದಾರೆ. ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಹಾಗು ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.