VIDEO : ತೊಂದರೆ ಕೊಟ್ಟ ಪೊಲೀಸರಿಗೆ ಪಾಠ ಕಲಿಸಿದ ರೈತ! ಐವತ್ತೇ ಸೆಕೆಂಡಿನಲ್ಲಿ ಪೊಲೀಸರ ಬೆವರಿಳಿಸಿದ.! ವಿಡಿಯೊ ನೋಡಿ

in Kannada News/News 338 views

ಮೊದಲೇ ಒಂದು ವರ್ಷದಿಂದ ಕೊರೋನ ಹಾವಳಿಗೆ ತತ್ತರಿಸಿ ಜನ ಕಂಗಾಲೆದ್ದಿದ್ದಾರೆ, ಈ ನಡುವೆ ಪೊಲೀಸರೂ ತೊಂದರೆ ಕೊಟ್ಟರೆ ಹೇಗಾಗಬೇಡ. ಸರಿಯಾದ ಕಾರಣಕ್ಕೆ ಅಥವಾ ತಪ್ಪೇನಾದರೂ ಇದ್ದರೆ ಪೊಲೀಸರು ನಡುರಾತ್ರಿ ನಿಲ್ಲಿಸಿ ಕೇಳಲಿ, ಅದುಬಿಟ್ಟು ಹೊಲಕ್ಕೆ ಹೊರಟ, ಹೊಲದಿಂದ ಮನೆಗೆ – ಮಾರ್ಕೆಟಿಗೆ ಹೊರಟ ರೈತರ ಟ್ರ್ಯಾಕ್ಟರ್ ಗಳನ್ನು ಕೂಡ ನಿಲ್ಲಿಸುತ್ತಾರೆಂದರೆ ಏನು ಹೇಳಬೇಕು.

Advertisement

ಇಲ್ಲೊಬ್ಬ ರೈತ ತಡೆ ಹಾಕಿದ ಪೊಲೀಸರಿಗೆ ಕ್ಲಾಸ್ ತಗೆದುಕೊಂಡ ಪರಿ ಹೇಗಿದೆ ನೋಢಿ… ಸರ್ಕಾರ ಮೊದಲೇ ಕೃಷಿ ಕೆಲಸಕ್ಕೆ ಯಾವುದೇ ತೊಂದರೆ ಇಲ್ಲ ಅಂತ ಹೇಳಿದೆ. ಅದೆಂಥ ಲಾಕ್ ಡೌನ್ ಇದ್ದರೂ ಕೆಲವು ವೃತ್ತಿಗಳಿಗೆ ವಿನಾಯಿತಿ ಕೊಟ್ಟಿರುವುದು ನಿಮಗೆ ಗೊತ್ತಿದೆ. ಅದರಲ್ಲೂ ಕೃಷಿ ಕೆಲಸ ಬಂದ್ ಮಾಡಿದರೆ ತಿನ್ನುವುದಾದರೂ ಏನನ್ನು?

ಇಲ್ಲೊಬ್ಬ ರೈತ ತನ್ನ ತೋಟದಲ್ಲಿ ಬೆಳೆದ ಮಾವಿನಕಾಯಿಗಳನ್ನು ತಗೆದುಕೊಂಡು ಹೊರಟಿದ್ದಾನೆ. ಆಗ ಒಬ್ಬ ಪಿ.ಸಿ ಆ ಟ್ರ್ಯಾಕ್ಟರ್ ಗೂ ಕೂಡ ಕೈ ಹೊಡೆದಿದ್ದಾನೆ, ತಕ್ಷಣ ರೈತನ ಪಿತ್ತ ನೆತ್ತಿಗೇರಿದೆ. ಆ ರೈತ ಬಹುಶಃ ಮೊದಲೇ ಹೀಗೆ ತಡೆ ಹಾಕುತ್ತಾರೆ ಎಂದೆಣಿಸಿ ಮೊಬೈಲ್ ನಲ್ಲಿ ವಿಡಿಯೊ ರೆಕಾರ್ಡಿಂಗ್ ಆನ್ ಮಾಡಿಯೇ ಹೊರಟಿದ್ದ‌. ಅವನ ನಿರೀಕ್ಷೆಯಂತೆಯೇ ಆಯಿತು.

ಒಂದ ನಿಮಿಷದಲ್ಲಿ ಪೊಲೀಸರಿಗೆ ಬೆವರಿಳಿಸಿದ ಆತ ಇನ್ನೊಮ್ಮೆ ಅವರು ಯಾವ ರೈತನ ವಾಹನವನ್ನೂ ತಡೆಯದ ಹಾಗೆ ಮಾಡಿದ! ರೈತನಾಗುವುದರ ಜೊತೆಗೆ ಆತ ಗ್ರಾಮ ಪಂಚಾಯತ್ ಅಧ್ಯಕ್ಷ ಕೂಡ ಹೌದು (ವಿಡಿಯೊದಲ್ಲಿ ಆತನೇ ಹೇಳಿದಂತೆ) ಹೀಗಾಗಿ ಸ್ವಲ್ಪ ದ್ವನಿ ಏರಿಸಿಯೇ ಮಾತಾಡಿದ್ದು ಪೊಲೀಸರಿಗೆ ಇರಿಸುಮುರಿಸು ಉಂಟುಮಾಡಿತು. ಈ ಘಟನೆ ನಡೆದಿರುವುದು ರಾಮನಗರದ ಕೆಂಗಲ್ ಬಳಿ ಬೆಂಗಳೂರು – ಮೈಸೂರು ರಸ್ತೆಯಲ್ಲಿ.

ವಿಡಿಯೊದಲ್ಲಿ ಈವು ಗಮನಿಸಿ, ಟ್ರ್ಯಾಕ್ಟರ್ ಮುಂದೆ ಒಂದು ಗೂಡ್ಸ್ ಲಾರಿ ಇದೆ, ಈ ಸಮಯದಲ್ಲಿ ಗೂಡ್ಸ್ ಸಾಗಿಸಲು ಪರವಾನಿಗೆ ಇದೆ, ಆದರೂ ಪೊಲೀಸರು ಅದನ್ನೂ ತಡೆದಿದ್ದಾರೆ. ಕೆಲವು ಕಡೆ ಪೊಲೀಸರು ನಿಯಮ ಮುರಿಯುವುದನ್ನು ನೋಡಿಯೂ ನೋಡದಂತೆ ಇದ್ದರೆ ಇನ್ನು ಕೆಲವು ಕಡೆ ವಿನಾಕಾರಣ ತೊಂದರೆ ಕೊಡುತ್ತಾರೆ. ಅವರಿಗೆ ಸರಿಯಾಗಿ ನಿರ್ದೇಶನ ನೀಡಿದರೆ ಬಹುಶಃ ಹೀಗಾಗದು.

Advertisement
Share this on...