ಕಾಣಿಕೆ ಅಥವ ದೇಣಿಗೆಗಾಗಿ 21, 51, 101 ಹೀಗೆ ಹಣಣ ಮೇಲೆ 1 ರೂ. ಸೇರಿಸಿ ಯಾಕೆ ಕೊಡುತ್ತಾರೆ ಗೊತ್ತಾ? ಏನಿದರ ಹಿಂದಿನ ಅರ್ಥ?

in Kannada News/News/Story/ಕನ್ನಡ ಮಾಹಿತಿ 1,183 views

ನಿಮ್ಮ ಮನೆಗೆ ಯಾವುದೋ ದೇವರ ಕಾರ್ಯಕ್ಕೊ ಅಥವಾ ಇನ್ನೋನೋ ಒಳ್ಳೆಯ ಕೆಲಸಕ್ಕಾಗಿ ದೇಣಿಗೆ ಕೇಳಲು ಬರುತ್ತಾರೆ. ಆಗ ನೀವೆಷ್ಟು ಹಣ ಕೊಡುತ್ತೀರಿ? 11, 21, 51, 101 ಅಥವಾ 501 ರೂಪಾಯಿ. ಒಟ್ಟಿನಲ್ಲಿ ಸಮ ಸಂಖ್ಯೆಯ ರೂಪದಲ್ಲಿ ಹಣವನ್ನು ಕೊಡುವುದಿಲ್ಲ.  ಏಕೆ ಹೀಗೆ?

Advertisement

ದೇಣಿಗೆ ಕೊಡುವ ವಿಷಯದಲ್ಲಿ ಮಾತ್ರವಲ್ಲ ವಾಹನ ಖರೀದಿ, ದದೇವರಿಗೆ ಕಾಣಿಕೆ ಹಾಕುವುದರಿಂದ ಹಿಡಿದು  ಸಾಕು ಪ್ರಾಣಿ ಖರೀದಿಯವರೆಗೂ ಹೀಗೆಯೇ. ಕೊನೆಯಲ್ಲಿ 1 ರೂಪಾಯಿ ಬರುವಂತೆಯೇ ಹಣ ಕೊಡುತ್ತಾರೆ.

ತುಂಬಾ ಜನರಿಗೆ ಏಕೆ ಹೀಗೆ ಕೊಡುವುದು ಎಂಬ ಮಾಹಿತಿ ಗೊತ್ತಿಲ್ಲ. ನನ್ನ ಅಜ್ಜ, ಅಪ್ಪ ಹೀಗೆ ಮಾಡ್ತಿದ್ರು ಅದನ್ನೇ ಮುಂದುವರೆಸಿರುವುದಾಗಿ ಹೇಳ್ತಾರೆ.

ಇದರ ಹಿಂದಿರುವುದು ಸಿಂಪಲ್ ಕಾರಣ.. ಆಗಿನ ಕಾಲದಲ್ಲಿ ಹಣವನ್ನು ಕೈಯಿಂದ ಕೈಯಿಗೆ ಕೊಡುತ್ತಿರಲಿಲ್ಲ. ನೆಲದ ಮೇಲೆ ಇಡುತ್ತಿದ್ದರು. ಬರಿ ನೋಟನ್ನು ನೆಲದ ಮೇಲೆ ಇಟ್ಟರೆ ಹಾರಿ ಹೋಗುತ್ತದೆ ಎನ್ನುವ ಕಾರಣಕ್ಕೆ ಅದರ ಮೇಲೆ ಒಂದು ರೂಪಾಯಿ ನಾಣ್ಯ ಇಡುತ್ತಿದ್ದರು.

ಇದನ್ನೂ ಓದಿ: ಭಾರತದ ಈ ಒಂದು ಮಂದಿರಕ್ಕೆ ಕಾಲಿಡಲು ಜನರು ಗಡಗಡ ನಡುಗುತ್ತಾರೆ: ಅಷ್ಟಕ್ಕೂ ಈ ಮಂದಿರದಲ್ಲಿರುವ ದೇವರ‌್ಯಾರು ಗೊತ್ತಾ?

ಪ್ರತಿಯೊಬ್ಬರೂ ದೇವಾಲಯಕ್ಕೆ ಭೇಟಿ ನೀಡಬೇಕು ಮನಸ್ಸು ಹಗುರ ಮಾಡಿಕೊಳ್ಳಬೆಡಕು ಎಂದು ಇಷ್ಟಪಡುತ್ತಾರೆ ಹಾಗೂ ಪ್ರತಿಯೊಬ್ಬರೂ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಲು ಮುಂದಾಗ್ತಾರೆ ಇದಲ್ಲದೆ ತಮ್ಮ ಮನಸ್ಸನ್ನು ಶಾಂತವಾಗಿರಿಸಲು ಮತ್ತು ದುಃಖಗಳನ್ನು ನಾಶಮಾಡಲು ದೇವಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ.

ಆದರೆ ಇಂದು ನಾವು ನಿಮಗೆ ಹೇಳುವ ದೇವಸ್ಥಾನ ಹೇಗಿದೆ ಎಂದರೆ ಈ ವಿಶಿಷ್ಟ ದೇವಾಲಯದ ಬಗ್ಗೆ ತಿಳಿದರೆ ನಿಮಗೆ ಅಚ್ಚರಿ ಎನಿಸುತ್ತದೆ, ಹೌದು ಈ ದೇವಸ್ಥಾನಕ್ಕೆ ಹೋಗಲು ಜನ ಹಿಂಜರಿಯುತ್ತಾರೆ ಹಾಗೆಯೇ ಈ ದೇವಸ್ಥಾನದ ಹತ್ತಿರ ಹೋಗುತ್ತಿದ್ದಂತೆ ಜನರ ಪಾದಗಳು ನಡುಗಲು ಪ್ರಾರಂಭಿಸುತ್ತವೆ, ಇಂತಹ ವಿಚಿತ್ರ ದೇವಾಲಯದ ಬಗ್ಗೆ ನಿವೆಂದು ಕಂಡು ಕೇಳಿರಲಿಲ್ಲ.

ವಾಸ್ತವವಾಗಿ, ಈ ದೇವಾಲಯವು ಹಿಮಾಚಲ ಪ್ರದೇಶದ ಚಂಬಾದಲ್ಲಿರುವ ಭರ್ಮೌರ್ ಎಂಬ ಸಣ್ಣ ಪಟ್ಟಣದಲ್ಲಿದ್ದು, ಈ ದೇವಾಲಯವು ನೋಡಲು ಚಿಕ್ಕದಾಗಿದೆ, ಆದರೆ ಈ ದೇವಸ್ತಾನದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುತ್ತವೆ ಹೌದು ಈ ದೇವಾಲಯದ ಒಳಗೆ ಹೋಗುವ ಮಹಾಕಾರ್ಯ ಅಲ್ಲಿನ ಜನರು ಎಂದಿಗೂ ಮಾಡುವುದಿಲ್ಲ, ಬದಲಾಗಿ ಆ ದೇವರನ್ನು ಹೊರಗಿನಿಂದಲೆ ಪ್ರಾರ್ಥಿಸಿ ಮನೆಗೆ ಹೊರಟು ಹೋಗುತ್ತಾರಂತೆ.

ಸ್ಥಳಿಯರಿಗೆ ಈ ದೇವಸ್ತಾನದ ಕುರಿತು ವಿಚಾರಿಸಿದಾಗ ಈ ದೇವಾಲಯದ ದೇವರಿಗೆ ಸಾವಿನ ದೇವ ಯಮರಾಜ ದೇವರು ಎಂದು ಕರೆಯುತ್ತಾರೆ ಈ ಕಾರಣಕ್ಕಾಗಿಯೇ ಅಲ್ಲಿನ ಜನರು ಈ ದೇವಾಲಯಕ್ಕೆ ಭೇಟಿ ನೀಡಲು ಹೆದರುತ್ತಾರೆ, ಇದು ಯಮರಾಜನಿಗೆ ಸಮರ್ಪಿತವಾದ ವಿಶ್ವದ ಏಕೈಕ ದೇವಾಲಯವಾಗಿದೆ ಎಂದು ಹೇಳಬಹುದು, ಈ ದೇವಾಲಯವನ್ನು ಯಮರಾಜನಿಗಾಗಿ ನಿರ್ಮಿಸಲಾಗಿದೆ ಎಂದು ಜನರು ಹೇಳುತ್ತಾರೆ, ಆದ್ದರಿಂದ ಯಾರೂ ಈ ದೇವಾಲಯ ಪ್ರವೇಶಿಸಲು ಸಾಧ್ಯವಿಲ್ಲ.

ವಿಶೇಷ ಏನಂದರೆ ಈ ದೇವಾಲಯದಲ್ಲಿ ಚಿತ್ರಗುಪ್ತನಿಗೆ ಒಂದು ಪ್ರತ್ಯೇಕ ಕೋಣೆ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ, ಅಲ್ಲಿ ಅವರು ಮಾನವರ ಒಳ್ಳೆಯ ಮತ್ತು ಕೆಟ್ಟ ವಿಷಯಗಳ ದಾಖಲೆಯನ್ನು ಪುಸ್ತಕದಲ್ಲಿ ಇಡುತ್ತಾರೆ ಎಂಬ ನಂಬಿಕೆ ಇದೆ. ದೇವಾಲಯದ ಒಳಗೆ ಚಿನ್ನ, ಬೆಳ್ಳಿ, ತಾಮ್ರ ಮತ್ತು ಕಬ್ಬಿಣದಿಂದ ಮಾಡಿದ ನಾಲ್ಕು ಗುಪ್ತ ಬಾಗಿಲುಗಳಿವೆ ಎಂದು ಹೇಳಲಾಗುತ್ತದೆ. ಹೆಚ್ಚು ಪಾಪಗಳನ್ನು ಮಾಡುವವರ ಆತ್ಮವು ಕಬ್ಬಿಣದ ಗೇಟ್ ಒಳಗೆ ಹೋಗುತ್ತದೆ ಮತ್ತು ಒಳ್ಳೆಯದನ್ನು ಮಾಡಿದ ವ್ಯಕ್ತಿಯ ಆತ್ಮವು ಚಿನ್ನದ ಗೇಟ್ ಒಳಗೆ ಹೋಗುತ್ತದೆ ಎಂದು ಅಲ್ಲಿನ ಜನ ಹೇಳುತ್ತಾರೆ.

Advertisement
Share this on...