ಆರೆಸ್ಸೆಸ್‌ಗೆ ಬರೋಬ್ಬರಿ 2.5 ಮಿಲಿಯನ್ ಡಾಲರ್ ದೇಈಗೆ ನೀಡಿದ ಟ್ವಿಟರ್ ಸಿಇಓ ಜ್ಯಾಕ್ ಡಾರ್ಸೆ

in Kannada News/News 243 views

Jack Dorsey donates $ 2.5 million to RSS affiliate NGO: ಆರ್‌ಎಸ್‌ಎಸ್‌ನ ಸಂಘಟನೆಯಾದ ಸೆವಾ ಇಂಟರ್‌ನ್ಯಾಷನಲ್‌ಗೆ ಭಾರತದಲ್ಲಿ ಕೋವಿಡ್-19 ಪರಿಹಾರ ಕಾರ್ಯಕ್ಕಾಗಿ ಟ್ವಿಟರ್ ಸಿಇಒ ಜಾಕ್ ಡಾರ್ಸೆ $2.5 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ. ಜ್ಯಾಕ್ ಡಾರ್ಸೆ ಮೂರು ಸಂಸ್ಥೆಗಳ ನಡುವೆ 15 ಮಿಲಿಯನ್ ಡಾಲರ್ ನಿಧಿಯನ್ನು ನಿಗದಿಪಡಿಸಿದ್ದಾರೆ. ವಾಸ್ತವವಾಗಿ, ಮೇ 10 ರಂದು, ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡುವ ಪೋಸ್ಟ್ ಅನ್ನು ಹಂಚಿಕೊಂಡಿದ್ದು “ಭಾರತದಲ್ಲಿ COVID-19 ಬಿಕ್ಕಟ್ಟಿಗೆ ಸಹಾಯ ಮಾಡಲು CARE, AID INDIA ಮತ್ತು Seva International ನಡುವೆ million 15 ಮಿಲಿಯನ್ ಡಾಲರ್ ಗಳನ್ನ ದೇಣಿಗೆಯಾಗಿ ನೀಡಿದ್ದೇವೆ” ಎಂದು ಬರೆದಿದ್ದಾರೆ.

ಇದೀಗ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೇ ನಡೆಯನ್ನು ಶ್ಲಾಘಿಸಲಾಗುತ್ತಿದೆ, ಆದರೆ ಇದೀಗ ಭಾರತದ ಲಿಬರಲ್ಸ್ ಈಗ ಅವರ ವಿರುದ್ಧ ಒಂದು ಕ್ಯಾಂಪೇನ್ ಶುರು ಮಾಡಿದ್ದಾರೆ. ಏಕೆಂದರೆ ಟ್ವಿಟ್ಟರ್ ಸಿಇಓ ದೇಣಿಗೆ ನೀಡಿರುವುದರ ಮೂರು ಸಂಸ್ಥೆಗಳ ಪೈಕಿ ಒಂದು ಸೇವಾ ಇಂಟರ್ನ್ಯಾಷನಲ್ ಕೂಡ ಇದೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ, ಸೇವಾ ಇಂಟರ್ನ್ಯಾಷನಲ್ ಹಿಂದೂ ನಂಬಿಕೆಯನ್ನು ಆಧರಿಸಿದ ಸಂಘಟನೆಯಾಗಿದೆ. ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯ ವಿದೇಶಿ ಸಂಸ್ಥೆಯಾಗಿದ್ದು, ಇದು 1993 ರಲ್ಲಿ ವಿಶ್ವದಾದ್ಯಂತ ಪರಿಹಾರ ಕಾರ್ಯಗಳನ್ನು ಮಾಡುತ್ತದೆ.

ಯಾಕಂದ್ರೆ ಭಾರತದಲ್ಲಿ ತಥಾಕಥಿತ ಜನರು ಹಾಗು ಲಿಬರಲ್ ಗಳಿಗೆ ಆರೆಸ್ಸೆಸ್ ಎಂದರೆ ಮೊದಲಿನಿಂದಲೂ ಉರಿ ಅನ್ನೋದು ಹಾಗು ಈಗ ಆರೆಸ್ಸೆಸ್ ಸ್ವಯಂಸೇವಕನೇ ಭಾರತದ ಪ್ರಧಾನ ಮಂತ್ರಿಯಾಗಿರೋದೂ ಅವರ ಕಣ್ಣಲ್ಲಿ ಚುಚ್ಚುತ್ತಿರುವ ವಿಷಯವಾಗಿದೆ. ಹಾಗಿದ್ದಮೇಲೆ ಇಂತಹ ತಥಾಕಥಿತ ಜನರಿಗೆ ಸಂಘಕ್ಕೆ ನೀಡಿರುವ ದೇಣಿಗೆ ಹೇಗೆ ಅರಗಿಸಿಕೊಳ್ಳೋಕೆ ಸಾಧ್ಯ ಹೇಳಿ?

ಅಂಥದ್ರಲ್ಲಿ ದೇಶದ ತಥಾಕಥಿತ ಬುದ್ಧಿಜೀವಿಗಳು ಜ್ಯಾಕ್ ಡೆರ್ಸಿ ಯವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ ತಥಾಕಥಿತ ರಾಜಕಾರಣಿ ದಿಲೀಪ್ ಮಂಡಲ್ ಟ್ವೀಟ್ ಮಾಡಿ ಸೇವಾ ಇಂಟರ್ನ್ಯಾಷನಲ್ ಗೆ ಡೊನೇಷನ್ ನೀಡಬಾರದು ಎಂದು ಹೇಳಿದ್ದಾರೆ. ಅವರು ಟ್ವೀಟ್ ಮಾಡಿ, “ಪ್ರಿಯ ಜ್ಯಾಕ್ ಡೆರ್ಸಿ ಯವರೇ ಕೊರೋನಾ ವೈರಸ್ ನ ಬಿಕ್ಕಟ್ಟಿನಲ್ಲಿ ನೀವು ಧನಸಹಾಯ ಮಾಡುವ ಮೂಲಕ ದ್ವೇಷ ಹುಟ್ಟಿಸುವುದನ್ನ ಬಿಟ್ಟುಬಿಡಿ” ಎಂದಿದ್ದಾರೆ. ಇದೇ ರೀತಿಯ ಪ್ರತಿಕ್ರಿಯೆಗಳೂ ಸೋಶಿಯಲ್ ಮೀಡಿಯಾಗಳಲ್ಲಿ ಟ್ವಿಟ್ಟರ್ ಸಿಇಓ ವಿರುದ್ಧ ಅಪಪ್ರಚಾರ ಮಾಡಲು ಬಳಸಲಾಗುತ್ತಿದೆ.

Advertisement
Share this on...