ಕೋವಿಡ್‌ಗೆ ಗರ್ಭಿಣಿ ವೈದ್ಯೆ ಬ-ಲಿ: ದೇಶದ ಜನತೆಗೆ ಆಕೆ ಕೊಟ್ಟ ಸಂದೇಶದ ಕೊನೆಯ ವಿಡಿಯೋ ವೈರಲ್, ನೋಡಿದರೆ ಕಣ್ಣೀರು ಬರುತ್ತೆ

in Helath-Arogya/Kannada News/News 6,106 views

ನವದೆಹಲಿ: ಮನಕಲಕುವ ಪೋಸ್ಟ್​ ಒಂದು ರವೀಶ್​ ಚಾವ್ಲಾ ಹೆಸರಿನ ಟ್ವಿಟರ್ ಖಾತೆಯಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಅಪ್​​ಲೋಡ್​ ಮಾಡಿರುವ ರವೀಶ್​, ಮಹಾಮಾರಿ ಕರೊನಾ ವೈರಸ್​ನಿಂದ ತನ್ನ ಗರ್ಭಿಣಿ ಪತ್ನಿ ದೀಪಿಕಾ ಮತ್ತು ಹೊರ ಜಗತ್ತಿಗೆ ಕಾಲಿಡುವ ಮುನ್ನವೇ ತಾಯಿಯ ಹೊಟ್ಟೆಯಲ್ಲಿ ಮೃ#ತಪ-ಟ್ಟ ಮಗುವನ್ನು ಕಳೆದುಕೊಂಡು ಒಬ್ಬಂಟಿಯಾದ ಕಣ್ಣೀರ ಕತೆಯನ್ನು ಬಿಚ್ಚಿಟ್ಟಿದ್ದಾರೆ.

ರವೀಶ್​ ಅಪ್​ಲೋಡ್​ ಮಾಡಿರುವ ವಿಡಿಯೋದಲ್ಲಿ ಸಾವಿಗೂ ಮುನ್ನ ಮಾತನಾಡಿರುವ ದೀಪಿಕಾ, ಕರೊನಾ ವೈರಸ್​ ಗಂಭೀರತೆ ಮತ್ತು ಯಾವುದೇ ಕಾರಣಕ್ಕೂ ಅದನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ವೃತ್ತಿಯಲ್ಲಿ ಸ್ವತಃ ವೈದ್ಯೆಯಾಗಿರುವ ದೀಪಿಕಾ ಏಪ್ರಿಲ್​ 26ರಂದು ಸಾಯುವ ಮುನ್ನ ಅಂದರೆ, ಏಪ್ರಿಲ್​ 17ರಂದು ವಿಡಿಯೋ ರೆಕಾರ್ಡ್​ ಒಂದನ್ನು ಮಾಡಿದ್ದಾರೆ. ಆ ವಿಡಿಯೋದಲ್ಲಿ ಅವರು ಮಾತನಾಡಲು ಕಷ್ಟಪಡುತ್ತಿರುವುದನ್ನು ಗಮನಿಸಬಹುದಾಗಿದೆ. ಅಲ್ಲದೆ, ಕರೊನಾವನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ದೀಪಿಕಾ ಮೃ#ತಪ-ಟ್ಟ ಬಳಿಕ ಪತಿ ರವೀಶ್​, ಅಮ್ಮಂದಿರ ದಿನದ ಅಡಿಬರಹದೊಂದಿಗೆ ವಿಡಿಯೋ ಅಪ್​ಲೋಡ್​ ಮಾಡಿಕೊಂಡಿದ್ದಾರೆ. “ಕರೊನಾದಿಂದ ನನ್ನ ಗರ್ಭಿಣಿ ಪತ್ನಿಯನ್ನು ಕಳೆದುಕೊಂಡೆ ಮತ್ತು ಹೊರ ಜಗತ್ತಿಗೆ ಕಾಲಿಡುವ ಮುನ್ನವೇ ನಮ್ಮ ಮಗು ಸಹ ತೀ-ರಿ ಹೋಯಿತು. ಏಪ್ರಿಲ್​ 26ರಂದು ಪತ್ನಿ ಮೃ#ತಪ-ಟ್ಟಳು. ಏಪ್ರಿಲ್​ 11ರಂದು ಕೋವಿಡ್​ ಪಾಸಿಟಿವ್​ ಆಗಿತ್ತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಡುವೆಯೇ ಏಪ್ರಿಲ್​ 17ರಂದು ಆಕೆ ವಿಡಿಯೋ ಮಾಡಿದ್ದು, ಕರೊನಾವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾಳೆ” ಎಂದು ರವೀಶ್​ ಬರೆದುಕೊಂಡಿದ್ದಾರೆ.

ನನ್ನ ಮಡದಿ ಮಾತೃತ್ವದ ಬಗ್ಗೆ ಸಂಪೂರ್ಣವಾಗಿ ಭಕ್ತಿ ಹೊಂದಿದ್ದಳು. ಮೂರು ವರ್ಷದ ಮಗನನ್ನು ನನ್ನ ಬಳಿಯೇ ಬಿಟ್ಟು, ಹುಟ್ಟಲಿರುವ ಮಗುವಿನೊಂದಿಗೆ ಸ್ವರ್ಗಕ್ಕೆ ಹೋಗಿದ್ದಾಳೆ. ತಾಯಿಯ ದಿನದ ಶುಭಾಶಯಗಳು ದೀಪಿಕಾ ಎಂದು ರವೀಶ್​ ಭಾವನಾತ್ಮಕವಾಗಿ ಟ್ವೀಟ್​ ಮಾಡಿದ್ದಾರೆ.

ದೀಪಿಕಾ ದಂತ ಚಿಕಿತ್ಸೆಯಲ್ಲಿ ಪರಿಣಿತಿ ಪಡೆದಿದ್ದರಂತೆ. ಪಿಪಿಇ ಕಿಟ್, ಡಬಲ್ ಮಾಸ್ಕ್ ಸೇರಿದಂತೆ ಅನೇಕ ಮುನ್ನೆಚ್ಚರಿಕೆಗಳನ್ನು ದೀಪಿಕಾ ತೆಗೆದುಕೊಂಡಿದ್ದಳು. ಆದರೂ, ವೈರಸ್​ ಅವಳ ಜೀವವನ್ನು ಬ-ಲಿ-ಪಡೆಯಿತು ಎಂದು ರವೀಶ್​ ಹೇಳಿದ್ದಾರೆ.

ಇದೀಗ ಸಾಕಷ್ಟು ಟ್ವಿಟ್ಟಿಗರು ದೀಪಿಕಾ ಸಾ-ವಿಗೆ ಕಂಬನಿ ಮಿಡಿದಿದ್ದು, ಕರೊನಾ ಹಗುರವಾಗಿ ಪರಿಗಣಿಸದೇ ಗಂಭೀರವಾಗಿ ತೆಗೆದುಕೊಳ್ಳಲು ಮನವಿ ಮಾಡುತ್ತಿದ್ದಾರೆ.

Advertisement
Share this on...