ಕೋವಿಶೀಲ್ಡ್, ಕೋವ್ಯಾಕ್ಸಿನ್ ಹೊರತಾಗಿ ಭಾರತಕ್ಕೆ ಸಿಕ್ಕಿತು ಮೂರನೆ ವ್ಯಾಕ್ಸಿನ್, ಬೆಲೆ ಕೂಡ ನಿಗದಿ ಮಾಡಿದ ಸರ್ಕಾರ: ಶೇ. 91.6 ಪರಿಣಾಮಕಾರಿ ಅಂತೆ ಈ ವ್ಯಾಕ್ಸಿನ್

in Helath-Arogya/Kannada News/News 431 views

ದೇಶದಲ್ಲಿ ಇಲ್ಲಿಯವರೆಗೂ ಕೋವ್ಯಾಕ್ಸಿನ್​, ಕೋವಿಶೀಲ್ಡ್​​ ಲಸಿಕೆಗಳನ್ನು ನೀಡಲಾಗುತ್ತಿತ್ತು. ಈಗ ಅಧಿಕೃತವಾಗಿ 3ನೇ ಲಸಿಕೆಯಾಗಿ ಸ್ಪುಟ್ನಿಕ್​​ ವ್ಯಾಕ್ಸಿನ್​ ಸೇರ್ಪಡೆಕೊಂಡಿದೆ. ಇದರಿಂದ ಎಲ್ಲೆಡೆ ತಲೆದೂರಿರುವ ಲಸಿಕೆ ಕೊರತೆ ಸಮಸ್ಯೆ ತಗ್ಗಬಹುದು.

ನವದೆಹಲಿ: ದೇಶಾದ್ಯಂತ ಕೊರೋನಾ ಲಸಿಕೆ ಕೊರತೆ  ಸಮಸ್ಯೆ ತಾಂಡವವಾಡುತ್ತಿರುವ ಬೆನ್ನಲ್ಲೇ ದೇಶದಲ್ಲಿ 3ನೇ ಲಸಿಕೆಗೆ ಅಧಿಕೃತ ಅನುಮತಿ ಸಿಕ್ಕಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳಲುವ ಸ್ಪುಟ್ನಿಕ್​ ವಿ ವಿತರಣೆಗೆ ಇಂದಿನಿಂದ ಅನುಮತಿ ನೀಡಲಾಗಿದೆ. ರಷ್ಯಾದಿಂದ ಕಳೆದ ಕೆಲ ದಿನಗಳ ಹಿಂದೆಯೇ ಲಸಿಕೆಯ ಮೊದಲ ಬ್ಯಾಚ್​  ಭಾರತಕ್ಕೆ ಬಂದಿದ್ದರೂ ಪ್ರಾಯೋಗಿಕ ಹಂತದಲ್ಲಿತ್ತು. ಇಂದು ಸ್ಪುಟ್ನಿಕ್​ ವಿ ಲಸಿಕೆಗೆ ಅಧಿಕೃತವಾಗಿ ಅನುಮತಿ ನೀಡಿ, ಹೈದ್ರಾಬಾದ್​ನ ವ್ಯಕ್ತಿಗೆ ಮೊದಲ ಡೋಸ್​ ನೀಡುವ ಮೂಲಕ ಚಾಲನೆ ನೀಡಲಾಗಿದೆ. ಇನ್ನು ರಷ್ಯಾದಿಂದ ಆಮದಾಗುತ್ತಿರುವ ಸ್ಪುಟ್ನಿಕ್​ ಲಸಿಕೆಗೆ ಬೆಲೆ ಕೂಡ ನಿಗದಿಪಡಿಸಲಾಗಿದೆ.

Advertisement

ಸ್ಪುಟ್ನಿಕ್​ ಲಸಿಕೆಯ ಪ್ರತಿ ಡೋಸ್​ಗೆ 955 ರೂಪಾಯಿ ನಿಗದಿಪಡಿಸಲಾಗಿದೆ. 5% ಜಿಎಸ್​​​​ಟಿ ಇರುವುದಿಂದ ಒಟ್ಟು ಬೆಲೆ 1,002 ರೂಪಾಯಿ ಆಗಲಿದೆ. ಇನ್ನು ಭಾರತದಲ್ಲಿ ಉತ್ಪಾದಿಸುವ ಸ್ಪುಟ್ನಿಕ್  ಲಸಿಕೆ  ಬೆಲೆ ಇನ್ನೂ  ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಭಾರತದಲ್ಲಿ ಹೈದರಾಬಾದ್​​​ನ ಡಾ. ರೆಡ್ಡೀಸ್ ಲ್ಯಾಬ್​​​ನಲ್ಲಿ ಸ್ಪುಟ್ನಿಕ್​​ ಲಸಿಕೆ ಉತ್ಪಾದನೆಯಾಗಲಿದೆ. ಇಂದು ಸ್ಪುಟ್ನಿಕ್​ ಲಸಿಕೆ ವಿತರಣೆಗೆ ಅನುಮತಿ ಹಿನ್ನೆಲೆ ಹೈದರಾಬಾದಿನಲ್ಲಿ ಕಸ್ಟಮ್ ಫಾರ್ಮಾ ಸೇವೆಗಳ ಜಾಗತಿಕ ಮುಖ್ಯಸ್ಥ ದೀಪಕ್ ಸಪ್ರಾ ಎಂಬುವರಿಗೆ ಮೊದಲ ಡೋಸ್ ನೀಡಲಾಯಿತು.

ದೇಶದಲ್ಲಿ ಇಲ್ಲಿಯವರೆಗೂ ಕೋವ್ಯಾಕ್ಸಿನ್​, ಕೋವಿಶೀಲ್ಡ್​​ ಲಸಿಕೆಗಳನ್ನು ನೀಡಲಾಗುತ್ತಿತ್ತು. ಈಗ ಅಧಿಕೃತವಾಗಿ 3ನೇ ಲಸಿಕೆಯಾಗಿ ಸ್ಪುಟ್ನಿಕ್​​ ವ್ಯಾಕ್ಸಿನ್​ ಸೇರ್ಪಡೆಕೊಂಡಿದೆ. ಇದರಿಂದ ಎಲ್ಲೆಡೆ ತಲೆದೂರಿರುವ ಲಸಿಕೆ ಕೊರತೆ ಸಮಸ್ಯೆ ತಗ್ಗಬಹುದು ಎಂದು ಅಂದಾಜಿಸಲಾಗುತ್ತಿದೆ. ಇನ್ನು ಕೋವ್ಯಾಕ್ಸಿನ್​, ಕೋವಿಶೀಲ್ಡ್​​ ಲಸಿಕೆಗಳಿಗಿಂದ ಸ್ಪುಟ್ನಿಕ್​ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಡಾ. ರೆಡ್ಡೀಸ್ ಲ್ಯಾಬ್​​​ ತಿಳಿಸಿದೆ. ಸ್ಪುಟ್ನಿಕ್​ ವಿ ಲಸಿಕೆ ಶೇ.91.6ರಷ್ಟು ಪರಿಣಾಮಕಾರಿ ಎಂದು ತಿಳಿಸಿದ್ದಾರೆ. ಮುಂದಿನ ವಾರದಿಂದಲೇ ಸ್ಪುಟ್ನಿಕ್​​ ಲಸಿಕೆ ಮಾರುಕಟ್ಟೆಗೆ ಬರಲಿದೆ.

ಕೊರೋನಾದಿಂದ ತೀವ್ರವಾಗಿ ತತ್ತರಿಸಿರುವ ಭಾರತಕ್ಕೆ ಸೋಂಕಿನ ವಿರುದ್ಧ ಹೋರಾಡಲು ಇರುವ ದೊಡ್ಡ ಅಸ್ತ್ರ ಕೊರೋನಾ ಲಸಿಕೆ. ಪ್ರತಿಯೊಬ್ಬರು ಧೈರ್ಯದಿಂದ ಮುಂದೆ ಬಂದು ಲಸಿಕೆ ಹಾಕಿಸಿಕೊಂಡು ಕೊರೋನಾ ವಿರುದ್ಧ ಹೋರಾಡಬೇಕಿದೆ. ತ್ವರಿತಗತಿಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ತಲುಪಲು ಸ್ಪುಟ್ನಿಕ್​ ಲಸಿಕೆ ಸಹಾಯಕಾರಿಯಾಗಲಿದೆ. ದೇಶದಲ್ಲಿನ ಲಸಿಕೆ ಕೊರತೆ ತಗ್ಗುವ ನಿಟ್ಟಿನಲ್ಲಿ ಸ್ಪುಟ್ನಿಕ್​ ಲಸಿಕೆಗೆ ಅನುಮತಿ ಸಿಕ್ಕಿರುವುದು ಆಶಾದಾಯಕವಾಗಿದೆ.

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌, ಏಪ್ರಿಲ್ 21ರಿಂದ ದಿನ‌ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರುವರೆ ಲಕ್ಷದಷ್ಟು ಜನ ಸೋಂಕು ಪೀಡಿತರಾಗುತ್ತಿದ್ದಾರೆ.

ಗುರುವಾರ 3,43,144 ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,44,776 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,40,46,809ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಗುರುವಾರ  4,000 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,62,317ಕ್ಕೆ ಏರಿಕೆ ಆಗಿದೆ.

Advertisement
Share this on...