ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೂ ಭಾರತವೇ ಸುರಕ್ಷಿತ: ಇಲ್ಲಿದೆ ದೇಶದ ಜನತೆಗೆ ನಿಟ್ಟುಸಿರು ಬಿಡುವ ಸುದ್ದಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 489 views

ಯಾರು ಏನೇ ಹೇಳಲಿ ಭಾರತ ಸುರಕ್ಷಿತ ದೇಶವಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಾ-ವು, ನೋ-ವಿ-ನ ಸಂಖ್ಯೆ ಭಾರಿ ಹೆಚ್ಚಾಗಿದೆ. ಮಾಧ್ಯಮಗಳು ಕೂಡ ಈ ಬಗ್ಗೆ ಬೆಳಕು ಚೆಲ್ಲಿವೆ. ವಿಶ್ವದಲ್ಲಿ ಕೊರೊನಾ ಅಬ್ಬರದ ನಡುವೆಯೂ ಭಾರತ ಸುರಕ್ಷಿತ ಎಂದು ಹೇಳಲಾಗಿದೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣದ ಪ್ರಮಾಣ ಅತ್ಯಂತ ಕಡಿಮೆ ಇದೆ.

Advertisement

ಬೆಲ್ಜಿಯಂನಲ್ಲಿ 10,16,609 ಸೋಂಕಿತರಲ್ಲಿ 24,551 ಮಂದಿ ಸಾ#ವ-ನ್ನ-ಪ್ಪಿದ್ದು ಪ್ರತಿ 1 ಲಕ್ಷ ಜನರಲ್ಲಿ 214 ಮಂದಿ ಮೃ#ತ-ಪಟ್ಟಿದ್ದಾರೆ.

ಇಟಲಿಯಲ್ಲಿ 4,11,210 ಸೋಂಕಿತರಲ್ಲಿ 1,22,833 ಜನ ಮೃತಪಟ್ಟಿದ್ದು, ಪ್ರತಿ 1 ಲಕ್ಷ ಜನರಲ್ಲಿ 204 ಮಂದಿ ಮೃ#ತ-ಪಟ್ಟಿದ್ದಾರೆ.

ಯುನೈಟೆಡ್ ಕಿಂಗ್ಡಮ್ ನಲ್ಲಿ 44,50,578 ಸೋಂಕಿತರಲ್ಲಿ 1,27,865 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 191 ಜನ ಮೃ#ತ-ಪಟ್ಟಿದ್ದಾರೆ.

ಅಮೆರಿಕದಲ್ಲಿ 3,27,07,750 ಜನರಿಗೆ ಸೋಂಕು ತಗಲಿದ್ದು, 5,81,754 ಜನ ಮೃತಪಟ್ಟಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 177 ಜನ ಮೃ#ತ-ಪಟ್ಟಿದ್ದಾರೆ.

ಫ್ರಾನ್ಸ್ ನಲ್ಲಿ 58,38,295 ಜನರಿಗೆ ಸೋಂಕು ತಗಲಿದ್ದು, 1,06,553 ಜನ ಮೃ#ತ-ಪಟ್ಟಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 159 ಜನ ಮೃ#ತ-ಪಟ್ಟಿದ್ದಾರೆ.

ಸ್ವೀಡನ್ ನಲ್ಲಿ 10,07,792 ಸೋಂಕಿತರಲ್ಲಿ 14,793 ಮಂದಿ ಮೃ#ತ-ಪಟ್ಟಿದ್ದು, ಪ್ರತಿ 1 ಲಕ್ಷ ಜನರಲ್ಲಿ 138 ಜನ ಮೃ#ತ-ಪಟ್ಟಿದ್ದಾರೆ.

ಸ್ವಿಟ್ಜರ್ ಲೆಂಡ್ ನಲ್ಲಿ 6,70,673 ಸೋಂಕಿತರಲ್ಲಿ 10,706 ಮಂದಿ ಮೃತಪಟ್ಟಿದ್ದಾರೆ, ಪ್ರತಿ 1 ಲಕ್ಷ ಜನರಲ್ಲಿ 125 ಜನ ಮೃ#ತ-ಪಟ್ಟಿದ್ದಾರೆ.

ಆಸ್ಟ್ರಿಯಾದಲ್ಲಿ 6,31,076 ಜನರಿಗೆ ಸೋಂಕು ತಗಲಿದ್ದು, 10,382 ಜನ ಮೃತಪಟ್ಟಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 117 ಜನ ಮೃ#ತ-ಪಟ್ಟಿದ್ದಾರೆ.

ಜರ್ಮನಿಯಲ್ಲಿ 35,30,887 ಜನರಿಗೆ ಸೋಂಕು ತಗುಲಿದ್ದು, 84,844 ಜನ ಸಾವನ್ನಪ್ಪಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 102 ಜನ ಮೃ#ತ-ಪಟ್ಟಿದ್ದಾರೆ.

ಭಾರತದಲ್ಲಿ 2,26,62, 575 ಮಂದಿಗೆ ಸೋಂಕು ತಗಲಿದ್ದು, 2,46,116 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ ಒಂದು ಲಕ್ಷ ಜನರಲ್ಲಿ 18.01 ಮಂದಿ ಮೃ#ತ-ಪಟ್ಟಿದ್ದಾರೆ.

ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದೆ. https://coronavirus.jhu.edu/data/mortality ಇಲ್ಲಿ ಗಮನಿಸಬಹುದಾಗಿದೆ.

ಗುಡ್ ನ್ಯೂಸ್: ಕೋವ್ಯಾಕ್ಸಿನ್ ಹಾಗು ಕೋವಿಶೀಲ್ಡ್ ಹೊರತಾಗಿ ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್-V ವ್ಯಾಕ್ಸಿನ್‌

ದೇಶದಲ್ಲಿ ಇಲ್ಲಿಯವರೆಗೂ ಕೋವ್ಯಾಕ್ಸಿನ್​, ಕೋವಿಶೀಲ್ಡ್​​ ಲಸಿಕೆಗಳನ್ನು ನೀಡಲಾಗುತ್ತಿತ್ತು. ಈಗ ಅಧಿಕೃತವಾಗಿ 3ನೇ ಲಸಿಕೆಯಾಗಿ ಸ್ಪುಟ್ನಿಕ್​​ ವ್ಯಾಕ್ಸಿನ್​ ಸೇರ್ಪಡೆಕೊಂಡಿದೆ. ಇದರಿಂದ ಎಲ್ಲೆಡೆ ತಲೆದೂರಿರುವ ಲಸಿಕೆ ಕೊರತೆ ಸಮಸ್ಯೆ ತಗ್ಗಬಹುದು.

ದೇಶಾದ್ಯಂತ ಕೊರೋನಾ ಲಸಿಕೆ ಕೊರತೆ  ಸಮಸ್ಯೆ ತಾಂಡವವಾಡುತ್ತಿರುವ ಬೆನ್ನಲ್ಲೇ ದೇಶದಲ್ಲಿ 3ನೇ ಲಸಿಕೆಗೆ ಅಧಿಕೃತ ಅನುಮತಿ ಸಿಕ್ಕಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳಲುವ ಸ್ಪುಟ್ನಿಕ್​ ವಿ ವಿತರಣೆಗೆ ಇಂದಿನಿಂದ ಅನುಮತಿ ನೀಡಲಾಗಿದೆ. ರಷ್ಯಾದಿಂದ ಕಳೆದ ಕೆಲ ದಿನಗಳ ಹಿಂದೆಯೇ ಲಸಿಕೆಯ ಮೊದಲ ಬ್ಯಾಚ್​  ಭಾರತಕ್ಕೆ ಬಂದಿದ್ದರೂ ಪ್ರಾಯೋಗಿಕ ಹಂತದಲ್ಲಿತ್ತು. ಇಂದು ಸ್ಪುಟ್ನಿಕ್​ ವಿ ಲಸಿಕೆಗೆ ಅಧಿಕೃತವಾಗಿ ಅನುಮತಿ ನೀಡಿ, ಹೈದ್ರಾಬಾದ್​ನ ವ್ಯಕ್ತಿಗೆ ಮೊದಲ ಡೋಸ್​ ನೀಡುವ ಮೂಲಕ ಚಾಲನೆ ನೀಡಲಾಗಿದೆ. ಇನ್ನು ರಷ್ಯಾದಿಂದ ಆಮದಾಗುತ್ತಿರುವ ಸ್ಪುಟ್ನಿಕ್​ ಲಸಿಕೆಗೆ ಬೆಲೆ ಕೂಡ ನಿಗದಿಪಡಿಸಲಾಗಿದೆ.

ಸ್ಪುಟ್ನಿಕ್​ ಲಸಿಕೆಯ ಪ್ರತಿ ಡೋಸ್​ಗೆ 955 ರೂಪಾಯಿ ನಿಗದಿಪಡಿಸಲಾಗಿದೆ. 5% ಜಿಎಸ್​​​​ಟಿ ಇರುವುದಿಂದ ಒಟ್ಟು ಬೆಲೆ 1,002 ರೂಪಾಯಿ ಆಗಲಿದೆ. ಇನ್ನು ಭಾರತದಲ್ಲಿ ಉತ್ಪಾದಿಸುವ ಸ್ಪುಟ್ನಿಕ್  ಲಸಿಕೆ  ಬೆಲೆ ಇನ್ನೂ  ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಭಾರತದಲ್ಲಿ ಹೈದರಾಬಾದ್​​​ನ ಡಾ. ರೆಡ್ಡೀಸ್ ಲ್ಯಾಬ್​​​ನಲ್ಲಿ ಸ್ಪುಟ್ನಿಕ್​​ ಲಸಿಕೆ ಉತ್ಪಾದನೆಯಾಗಲಿದೆ. ಇಂದು ಸ್ಪುಟ್ನಿಕ್​ ಲಸಿಕೆ ವಿತರಣೆಗೆ ಅನುಮತಿ ಹಿನ್ನೆಲೆ ಹೈದರಾಬಾದಿನಲ್ಲಿ ಕಸ್ಟಮ್ ಫಾರ್ಮಾ ಸೇವೆಗಳ ಜಾಗತಿಕ ಮುಖ್ಯಸ್ಥ ದೀಪಕ್ ಸಪ್ರಾ ಎಂಬುವರಿಗೆ ಮೊದಲ ಡೋಸ್ ನೀಡಲಾಯಿತು.

ದೇಶದಲ್ಲಿ ಇಲ್ಲಿಯವರೆಗೂ ಕೋವ್ಯಾಕ್ಸಿನ್​, ಕೋವಿಶೀಲ್ಡ್​​ ಲಸಿಕೆಗಳನ್ನು ನೀಡಲಾಗುತ್ತಿತ್ತು. ಈಗ ಅಧಿಕೃತವಾಗಿ 3ನೇ ಲಸಿಕೆಯಾಗಿ ಸ್ಪುಟ್ನಿಕ್​​ ವ್ಯಾಕ್ಸಿನ್​ ಸೇರ್ಪಡೆಕೊಂಡಿದೆ. ಇದರಿಂದ ಎಲ್ಲೆಡೆ ತಲೆದೂರಿರುವ ಲಸಿಕೆ ಕೊರತೆ ಸಮಸ್ಯೆ ತಗ್ಗಬಹುದು ಎಂದು ಅಂದಾಜಿಸಲಾಗುತ್ತಿದೆ. ಇನ್ನು ಕೋವ್ಯಾಕ್ಸಿನ್​, ಕೋವಿಶೀಲ್ಡ್​​ ಲಸಿಕೆಗಳಿಗಿಂದ ಸ್ಪುಟ್ನಿಕ್​ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಡಾ. ರೆಡ್ಡೀಸ್ ಲ್ಯಾಬ್​​​ ತಿಳಿಸಿದೆ. ಸ್ಪುಟ್ನಿಕ್​ ವಿ ಲಸಿಕೆ ಶೇ.91.6ರಷ್ಟು ಪರಿಣಾಮಕಾರಿ ಎಂದು ತಿಳಿಸಿದ್ದಾರೆ. ಮುಂದಿನ ವಾರದಿಂದಲೇ ಸ್ಪುಟ್ನಿಕ್​​ ಲಸಿಕೆ ಮಾರುಕಟ್ಟೆಗೆ ಬರಲಿದೆ.

ಕೊರೋನಾದಿಂದ ತೀವ್ರವಾಗಿ ತತ್ತರಿಸಿರುವ ಭಾರತಕ್ಕೆ ಸೋಂಕಿನ ವಿರುದ್ಧ ಹೋರಾಡಲು ಇರುವ ದೊಡ್ಡ ಅಸ್ತ್ರ ಕೊರೋನಾ ಲಸಿಕೆ. ಪ್ರತಿಯೊಬ್ಬರು ಧೈರ್ಯದಿಂದ ಮುಂದೆ ಬಂದು ಲಸಿಕೆ ಹಾಕಿಸಿಕೊಂಡು ಕೊರೋನಾ ವಿರುದ್ಧ ಹೋರಾಡಬೇಕಿದೆ. ತ್ವರಿತಗತಿಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ತಲುಪಲು ಸ್ಪುಟ್ನಿಕ್​ ಲಸಿಕೆ ಸಹಾಯಕಾರಿಯಾಗಲಿದೆ. ದೇಶದಲ್ಲಿನ ಲಸಿಕೆ ಕೊರತೆ ತಗ್ಗುವ ನಿಟ್ಟಿನಲ್ಲಿ ಸ್ಪುಟ್ನಿಕ್​ ಲಸಿಕೆಗೆ ಅನುಮತಿ ಸಿಕ್ಕಿರುವುದು ಆಶಾದಾಯಕವಾಗಿದೆ.

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌, ಏಪ್ರಿಲ್ 21ರಿಂದ ದಿನ‌ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರುವರೆ ಲಕ್ಷದಷ್ಟು ಜನ ಸೋಂಕು ಪೀಡಿತರಾಗುತ್ತಿದ್ದಾರೆ.

Advertisement
Share this on...