ಗೆದ್ದು ಬೀಗಿದ ಸಂಸದ ತೇಜಸ್ವಿ ಸೂರ್ಯ: ವಿರೋಧಿಗಳಿಗೆ ಭಾರೀ ಮುಖಭಂಗ.! ಆಗಿದ್ದೇನು ಗೊತ್ತಾ?

in Kannada News/News 742 views

ಬೆಂಗಳೂರು: ಬಿಬಿಎಂಪಿ ಕೊರೋನಾ ವಾರ್‌ ರೂಂ‌ ನಲ್ಲಿ ನಡೆಯುತ್ತಿದ್ದ ಬೆಡ್ ಸ್ಕ್ಯಾಂ ಹ#ಗ-ರಣವನ್ನು ಬಯಲಿಗೆಳೆದಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಹೈಕೋರ್ಟ್ ನಿರಾಳತೆ ಒದಗಿಸಿದೆ.

ಈ ಅ-ಕ್ರ-ಮ-ವನ್ನು ಬಯಲಿಗೆಳೆದ ಬಳಿಕ ತೇಜಸ್ವಿ ಸೂರ್ಯ ಅವರ ವಿ-ರು-ದ್ಧ ಕಾಂಗ್ರೆಸ್‌ನ ವೈ ಬಿ ಶ್ರೀವತ್ಸ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿ‌ದೆ. ಈ ಅರ್ಜಿ ರಾಜಕೀಯ ಪ್ರೇರಿತವಾಗಿದೆಯೇ ಹೊರತು ಯಾವುದೇ ರೀತಿಯ ಸಾರ್ವಜನಿಕ ಹಿತಾಸಕ್ತಿ‌ಯನ್ನು ಹೊಂದಿಲ್ಲ ಎಂದು ಕೋರ್ಟ್ ತಿಳಿಸಿದೆ.

Advertisement

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಬೆಡ್ ಸ್ಕ್ಯಾಂ ದಂ-ಧೆ ಬ-ಯ-ಲಿಗೆಳೆದ ತೇಜಸ್ವಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಬಳಿಕ ಬಣ್ಣ ಬದಲಾಯಿಸಿ ಇದಕ್ಕೆ ಕೋ-ಮು-ವಾ-ದಿ ಬಣ್ಣ ಬಳಿಯುವ ಮೂಲಕ ಹೊಲಸು ರಾಜಕೀಯಕ್ಕೆ ಇಳಿದಿತ್ತು. 17 ಮಂದಿ ಮು-ಸ್ಲಿಂ ಸಮುದಾಯಕ್ಕೆ ಸೇರಿದ ಸಿಬ್ಬಂದಿ‌ಗಳ ಹೆಸರನ್ನು ತೇಜಸ್ವಿ ಹೇಳಿದ್ದಾರೆ. ಅವರು ಕೇವಲ ಒಂದು ಸಮುದಾಯದ ವಿ-ರು-ದ್ಧ ಪಿ-ತೂ-ರಿ ನಡೆಸುತ್ತಿದ್ದಾರೆ ಎಂದೆಲ್ಲ ಕಾಂಗ್ರೆಸ್ ಆ-ರೋ-ಪಿ-ಸಿತ್ತು. ಈ ಸಂಬಂಧ ಕಾಂಗ್ರೆಸ್‌ನ ಶ್ರೀವತ್ಸ ಹೈಕೋರ್ಟ್‌ಗೆ ತೇಜಸ್ವಿ ಸೂರ್ಯ ವಿ-ರು-ದ್ಧ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ತಿರಸ್ಕರಿಸಿ‌ರುವ ಹೈಕೋರ್ಟ್ ಇದೊಂದು ರಾಜಕೀಯ ದು-ರು-ದ್ದೇ-ಶ-ದಿಂದ ಸಲ್ಲಿಸಲಾದ ಅರ್ಜಿಯೇ ಹೊರತು ಯಾವುದೇ ಸಾಮಾಜಿಕ ಕಳಕಳಿಯಿಂದ ಈ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆ ಮೂಲಕ ತೇಜಸ್ವಿ ಸೂರ್ಯ ಅವರಿಗೆ ರಿಲೀಫ್ ನೀಡಿದೆ.

ನಿರಂತರವಾಗಿ ಜನರ ಸಹಾಯಕ್ಕೆ ಧಾವಿಸುತ್ತಿರುವ ತೇಜಸ್ವಿ ಸೂರ್ಯ

ಕೊರೋನಾ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 250 ಯೂನಿಟ್ ಗಳ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್‌ಗೆ  (ಕಳೆದ ಭಾನುವಾರ) ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದ್ದರೆ.

ಇನ್ನು ಆಕ್ಸಿಜನ್ ಬ್ಯಾಂಕ್ ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಸಂಸದ ತೇಜಸ್ವಿ ಸೂರ್ಯ, 1 ಸಾವಿರಕ್ಕೂ ಅಧಿಕ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಬೆಂಗಳೂರು ನಾಗರಿಕರ ಸೇವೆಗೆ ಒದಗಿಸಲಿದ್ದು, ಈಗಾಗಲೇ 100 ಜನ ಕೋವಿಡ್ ಸೋಂಕಿತರಿಗೆ ಹಾಗೂ ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದ 150 ರೋಗಿಗಳಿಗೆ ಮನೆಗೇ ಕಾನ್ಸನ್ಟ್ರೇಟರ್ ಸೇವೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ ನ ಅಲ್ಪ ಗುಣಲಕ್ಷಣಗಳನ್ನು ಹೊಂದಿದ ಹಲವು ರೋಗಿಗಳಲ್ಲಿ  ಆಕ್ಸಿಜನ್ ಕೊರತೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಆಸ್ಪತ್ರೆ ಬೆಡ್ ಹಂಚಿಕೆಗಿಂತ ಪೂರ್ವದಲ್ಲಿ ಆಕ್ಸಿಜನ್ ಒದಗಿಸಿದಲ್ಲಿ ರೋಗಿಗಳಿಗೆ ಅತ್ಯಂತ ಹೆಚ್ಚಿನ ಸಹಾಯವಾಗಲಿದ್ದು, ಮನೆಯಲ್ಲಿ ಇದ್ದುಕೊಂಡೇ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದರು.

ನಗರದಲ್ಲಿ ಐಸಿಯು ಬೆಡ್ ಗಳ ಸಮಸ್ಯೆ ಎದ್ದು ಕಾಣಿಸ್ತಿದೆ. ಈ ಸಮಸ್ಯೆ ಆಗಬಾರದು ಅಂತಾ ಕಾನ್ಸನ್ಟ್ರೇಟರ್ಸ್ ಬ್ಯಾಂಕ್ ಗಳನ್ನ‌ ನೀಡ್ತಾ ಇದ್ದೀವಿ. ಬೇರೆ ಬೇರೆ ದೇಶದಲ್ಲಿರೋ ಕನ್ನಡಿಗರು ನಮಗೆ ಇದನ್ನ ಕಳಿಸಿದ್ದಾರೆ. 1000 ಆಕ್ಸಿ ಬ್ಯಾಂಕ್ ಗಳನ್ನ ಮಾಡುತ್ತೇವೆ ಎಂದು ಹೇಳಿದರು.

ಕೊರೋನಾ ಚಿಕಿತ್ಸೆ ಆದನಂತರ ಕೆಲವರಿಗೆ ಆಕ್ಸಿಜನ್ ಅವಶ್ಯಕತೆ ಇರತ್ತೆ. ಅವರಿಗಾಗಿ ಈ ಆಕ್ಸಿ ಬ್ಯಾಂಕ್  ಸಹಾಯವಾಗಲಿವೆ. 350 ಕಾನ್ಸನ್ಟ್ರೇಟರ್ ಗಳು ಪೇಟಿಎಂ ಕಂಪನಿಯಿಂದ ಜಯನಗರದ ಆಸ್ಪತ್ರೆಗೆ ಬರಲಿದೆ ಹೆಲ್ಪ್ ಲೈನ್ ಇದೆ. 08061914960 ಈ ನಂಬರ್ ಗೆ ಕಾಲ್ ಮಾಡಿದ್ರೆ, ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಗಳು ಅವಶ್ಯಕತೆ ಇರುವವರಿಗೆ ಸಿಗಲಿದೆ. ಈ ಸೇವೆ ಸಂಪೂರ್ಣ ಉಚಿತವಾಗಿರಲಿದೆ ಸ್ಪಷ್ಟಪಡಿಸಿದರು.

ಮನೆಗೆ ಬರುತ್ತೆ  ಆಕ್ಸಿಜನ್ ಕಾನ್ಸನ್ಟ್ರೇಟರ್

ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ನಾಗರಿಕರು, ಬೆಂಗಳೂರು ದಕ್ಷಿಣ ಸಂಸದರ ವತಿಯಿಂದ ಆರಂಭಿಸಲಾಗಿರುವ ಕೋವಿಡ್ ರಕ್ಷಾ ಸಹಾಯವಾಣಿ 080 6191 4960 ಸಂಖ್ಯೆಗೆ ಕರೆ ಮಾಡಿದಲ್ಲಿ ಸ್ವಯಂ ಸೇವಕರು ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ನೇರವಾಗಿ ಮನೆಗೆ ತಲುಪಿಸುತ್ತಾರೆ.

ಮಾಡಬೇಕಾದದ್ದು ಏನು?

ರೋಗಿಗಳ ಹೆಸರು, ವಯಸ್ಸು,ದೂರವಾಣಿ ಸಂಖ್ಯೆ,ಆಕ್ಸಿಜನ್ ಸ್ಯಾಚುರೇಷನ್ ಪ್ರಮಾಣ, ಆರೋಗ್ಯ ಸ್ಥಿತಿಗತಿಗಳ ವಿವರಗಳನ್ನು ಸಲ್ಲಿಸಿದ ನಂತರ ಆಧಾರ್ ಕಾರ್ಡ್, ಪಲ್ಸ್ ಆಕ್ಸಿಮೀಟರ್ ರೀಡಿಂಗ್ ನೊಂದಿಗೆ ರೋಗಿಯ ಫೋಟೋ ಕಳುಹಿಸಬೇಕಾಗುತ್ತದೆ. ಎಂ ಪಿ ಕಛೇರಿಯ ಸ್ವಯಂಸೇವಕರು ಡಾಕ್ಟರ್ ಪ್ರೀಸ್ಕ್ರಿಪ್ಷನ್ ಧೃಢೀಕರಿಸಿಕೊಂಡ ನಂತರ ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.

 

Advertisement
Share this on...