“ಅಮ್ಮನನ್ನ ಕಳೆದುಕೊಂಡೆ, ದಯವಿಟ್ಟು ಕದ್ದಿರುವ ಆಕೆಯ ನೆನಪನ್ನಾದರೂ‌ ಕೊಟ್ಟು ಬಿಡಿ” ಮಡಿಕೇರಿಯ 9 ವರ್ಷದ ಬಾಲಕಿಯ ಪತ್ರ ನಿಮಗೆ ಕಣ್ಣೀರು ತರಿಸುತ್ತೆ

in Uncategorized 151 views

ಮಡಿಕೇರಿ: ಕೊರೋನಾ ಎರಡನೇ ಅಲೆಯಲ್ಲಿ ಸಿಲುಕಿ ಬಳಲುತ್ತಿರುವವರ ಗೋಳಾಟ ಒಂದೆಡೆಯಾದರೆ ತಮ್ಮವರನ್ನು, ತಮ್ಮ ಪೋಷಕರನ್ನು ಕಳೆದುಕೊಂಡವರ, ಅನಾಥರಾದ ಮಕ್ಕಳ ಗೋಳಿನ ಕಥೆ ಇನ್ನೊಂದೆಡೆ. ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನವೂ ಮುಗಿಲುಮುಟ್ಟುತ್ತಿದೆ.

ಏನಿದು ಘಟನೆ: ಕೊಡಗು ಜಿಲ್ಲೆಯ ಮಡಿಕೇರಿಯ ಕುಶಾಲಪ್ಪನಗರ ಲೇಔಟ್ ನ ಕೋವಿಡ್ ಆಸ್ಪತ್ರೆಯಲ್ಲಿ ಮೊನ್ನೆ ಮೇ 16ರಂದು 9 ವರ್ಷದ ಬಾಲಕಿ ಹೃತಿಕ್ಷಾ ತಾಯಿ ಕೋವಿಡ್ ನಿಂದ ಮೃತಪಟ್ಟಿದ್ದರು.ಅದಕ್ಕೆ 10 ದಿನ ಮೊದಲು ಮೇ 6ರಂದು ಹೃತಿಕ್ಷಾ ತಾಯಿ ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

ಹೃತಿಕ್ಷಾ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆಯ ತಂದೆ 41 ವರ್ಷದ ನವೀನ್ ಕುಮಾರ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

ಹೃತಿಕ್ಷಾಳ ತಾಯಿ ಆಸ್ಪತ್ರೆಗೆ ದಾಖಲಾದಾಗ ಮೊಬೈಲ್ ಫೋನ್ ಇಟ್ಟುಕೊಂಡಿದ್ದರು.ಅದರಲ್ಲಿ ಅವರ ಫೋಟೋಗಳು, ಕುಟುಂಬಕ್ಕೆ ಸಂಬಂಧಿಸಿದ ಫೋಟೋಗಳು, ಸಂಪರ್ಕ ಸಂಖ್ಯೆಗಳು, ಅನೇಕ ಮಾಹಿತಿಗಳಿದ್ದವು. ಹೃತಿಕ್ಷಾ ಆನ್ ಲೈನ್ ಕ್ಲಾಸ್ ಗೆ ಅವಲಂಬಿತವಾಗಿದ್ದುದು ತಾಯಿಯ ಮೊಬೈಲ್ ನಲ್ಲಿಯೇ, ಇದೀಗ ಆಕೆಯ ತಾಯಿಯ ಜೊತೆ ಮೊಬೈಲ್ ಕೂಡ ಕಾಣೆಯಾಗಿದ್ದು ಬಾಲಕಿ ಹೃತಿಕ್ಷಾಳನ್ನು ಇನ್ನಷ್ಟು ದುಃಖಕ್ಕೀಡುಮಾಡಿದೆ.

ಕಾಣೆಯಾಗಿರುವ ಮೊಬೈಲ್ ನಲ್ಲಿ ತಾಯಿಗೆ ಸಂಬಂಧಪಟ್ಟ ಸಾಕಷ್ಟು ನೆನಪುಗಳಿವೆ, ಫೋಟೋಗಳಿವೆ, ಹೀಗಾಗಿ ಮೊಬೈಲ್ ಹುಡುಕಿಕೊಡಿ ಎಂದು ಬಾಲಕಿ ಹೃತಿಕ್ಷಾ ಮತ್ತು ಆಕೆಯ ತಂದೆ ನವೀನ್ ಕುಮಾರ್ ಕೊಡಗು ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪತ್ನಿ ಸತ್ತ ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದ ಬೇರೆಲ್ಲಾ ವಸ್ತುಗಳು ಸಿಕ್ಕಿವೆ, ಆದರೆ ಮೊಬೈಲ್ ಕಾಣೆಯಾಗಿದೆ, ನಾವು ಆಸ್ಪತ್ರೆಯಲ್ಲಿ ಕೇಳಿದಾಗ ಸಕಾರಾತ್ಮಕ ಉತ್ತರ ಬರಲಿಲ್ಲ, ನಮ್ಮ ಆಸ್ಪತ್ರೆಯಲ್ಲಿ ಮೊಬೈಲ್ ಕಳವಾಗಲು ಸಾಧ್ಯವಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.ನಮಗೆ ತೀವ್ರ ದುಃಖವಾಗಿ ಈ ಮನವಿ ಸಲ್ಲಿಸುತ್ತಿದ್ದೇವೆ ಎಂದು ನವೀನ್ ಕುಮಾರ್ ಹೇಳುತ್ತಿದ್ದಾರೆ.

ಇದೀಗ ಆಸ್ಪತ್ರೆಯ ಸಿಬ್ಬಂದಿಗಳನ್ನೆಲ್ಲಾ ವಿಚಾರಿಸಿ, ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಮೊಬೈಲ್ ಹುಡುಕಿಕೊಡುವ ಭರವಸೆಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿನಿಂದ ದಾಖಲಾಗಿ ಮೃತಪಟ್ಟವರಲ್ಲಿ ಅನೇಕರ ವಸ್ತುಗಳು, ಮೊಬೈಲ್ ಗಳು ಕಾಣೆಯಾಗಿವೆ ಎಂಬ ದೂರುಗಳು ಬಂದಿವೆ. ಹಲವು ಆಸ್ಪತ್ರೆಗಳಲ್ಲಿ ರೋಗಿಗಳ ಆಭರಣಗಳು, ಹಣ, ಬೇರೆ ವಸ್ತುಗಳು ಕಾಣೆಯಾಗಿರುವ ದೂರುಗಳು ಕೇಳಿಬರುತ್ತಿವೆ.

ಮುಂದಿನ ಸುದ್ದಿ: ಅಪ್ಪನ ಹೆ#ಣ ಬೇಡ, ಅವರ ಹಣ ಬೇಕು; ಅನಾಥ ಶವ ಎಂದರೂ ಸರಿ ಎಂದ, 6 ಲಕ್ಷ ಎಂದಾಗ 5 ನಿಮಿಷ ಎಂದ ಮಗ

ಮೈಸೂರು: ಕರೊನಾದಿಂದ ಮೃ#ತ-ರಾದ ತಂದೆಯ ಶ#ವ-ವನ್ನು ಪಡೆಯಲು ಹಿಂಜರಿದ ಪುತ್ರ, ತಂದೆಯ ಕೋಣೆಯಲ್ಲಿ ಲಕ್ಷಾಂತರ ರೂಪಾಯಿ ಇದೆ ಎಂದಾಗ ಐದು ನಿಮಿಷ ಇರಿ ಹೇಳುತ್ತೇನೆ ಎಂದು ಹಣಕ್ಕೆ ಬಾಯ್ಬಿಟ್ಟ ಪ್ರಸಂಗವೊಂದು ನಡೆದಿದೆ. ಹೀಗೆ ಬಂಧು-ಬಳಗವಿದ್ದರೂ ವ್ಯಕ್ತಿಯೊಬ್ಬರ ಶವ ಅನಾಥ ಎನಿಸಿಕೊಂಡ ದುರಂತ ಸನ್ನಿವೇಶ ಸೃಷ್ಟಿಯಾಗಿತ್ತು.

ಮೈಸೂರಿನ ಹೆಬ್ಬಾಳದ ಸೂರ್ಯ ಬೇಕರಿ ಬಳಿ ಇರುವ ಮನೆಯೊಂದರ ನಿವಾಸಿಯೊಬ್ಬರು ಕರೊನಾದಿಂದಾಗಿ ಮೃತಪಟ್ಟಿದ್ದರು. ಆದರೆ ಪಾರ್ಥಿವ ಶರೀರದ ಕುರಿತು ಮಾಹಿತಿ ನೀಡಿದಾಗ ಅದನ್ನು ಪಡೆಯಲು ಪುತ್ರ ನಿರಾಕರಿಸಿದ್ದಾನೆ. ತಂದೆಯ ಶವವನ್ನು ಯಾರೂ ಪಡೆಯದಿದ್ದರೆ ಅದನ್ನು ಅನಾಥ ಶವ ಎಂದು ಪರಿಗಣಿಸಿ ಕೊಂಡೊಯ್ಯಲಾಗುವುದು ಎಂದು ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಅವರು ಮೃತ ವ್ಯಕ್ತಿಯ ಪುತ್ರನಿಗೆ ವಿಡಿಯೋ ಕಾಲ್​ ಮಾಡಿ ತಿಳಿಸಿದ್ದರು.

ಅನಾಥ ಶವ ಎಂದು ಕೊಂಡೊಯ್ಯಲಾಗುವುದು ಎಂದರೂ ಸರಿ ಎಂದ ಮಗ, ತಂದೆಯ ಕೋಣೆಯಲ್ಲಿ 6 ಲಕ್ಷ ರೂಪಾಯಿ ಇದೆ, ಎಟಿಎಂ ಕಾರ್ಡ್​ಗಳು, ಮೊಬೈಲ್​ ಫೋನ್​ಗಳು ಇವೆ ಎಂದಾಗ, ಐದು ನಿಮಿಷ ಇರಿ ಹೇಳುತ್ತೇನೆ ಎಂದಿರುವ ವಿಡಿಯೋವೊಂದು ಇದೀಗ ವೈರಲ್​ ಆಗಲಾರಂಭಿಸಿದೆ. ತಂದೆಯ ಬಳಿ ಇರುವ 6 ಲಕ್ಷ ರೂ. ಹಣ ದಾಖಲೆಗಳನ್ನು ತಂದು ಕೊಡಿ ಎಂದು ಮಗ ಹೇಳಿದ್ದು, ಎಲ್ಲ ಇದ್ದೂ ವ್ಯಕ್ತಿಯೊಬ್ಬರ ಶ#ವ ಅನಾಥ ಎನಿಸಿಕೊಂಡಿದೆ.

Advertisement
Share this on...