ಬಾರ್ಸಿಲೋನಾ: ಕೆಲಸ ಕೊಟ್ಟಿದ್ದ ಬಾಸ್ ಮ ರ್ಮಾಂ ಗ ವನ್ನೇ ಕ ತ್ತ ರಿ ಸಿದ ಮಹಿಳೆ ತಾನೇ ಪೊಲೀಸರಿಗೆ ಕರೆ ಮಾಡಿ ಶರಣಾಗಿರುವ ಘಟನೆ ಸ್ಪೇನ್ನ ಬಾರ್ಸಿಲೋನಾ ನಗರದಲ್ಲಿ ನಡೆದಿದೆ. ಮಹಿಳೆಯ ಈ ಕೃ ತ್ಯ ಕ್ಕೆ ಕಾರಣವನ್ನು ಕೇಳಿದ ಪೊಲೀಸರು ಆಕೆಯ ಬಾಸ್ ಅನ್ನೂ ಬಂ ಧಿ ಸಿ ಕರೆದುಕೊಂಡು ಹೋಗಿದ್ದಾರೆ.
ಆಕೆ ಸುಮಾರು 30 ವರ್ಷದ ಮಹಿಳೆ. ಬಾಂಗ್ಲಾದೇಶದ ಮೂಲದವಳಾಗಿರುವ ಆಕೆ ಬಾರ್ಸಿಲೋನಾದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಆಕೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಬಾಸ್ ಆಕೆಗೆ ಯಾವಾಗಲೂ ಹಿಂ ಸೆ ಕೊಡುತ್ತಿದ್ದನಂತೆ. ನನ್ನೊಂದಿಗೆ ಮಂಚದಲ್ಲಿ ಮಲಗು, ಮುತ್ತು ಕೊಡು ಎಂದು ಪೀ ಡಿ ಸುತ್ತಿರುತ್ತಿದ್ದನಂತೆ. ತಿಂಗಳುಗಳ ಕಾಲ ಅವನಿಂದ ತನ್ನನ್ನು ರಕ್ಷಿಸಿಕೊಂಡಿದ್ದ ಮಹಿಳೆ ಇತ್ತೀಚೆಗೆ ಒಮ್ಮೆ ತನ್ನ ಉ ಗ್ರ ರೂಪ ತೋರಿದ್ದಾಳೆ.
ಇತ್ತೀಚೆಗೆ ಒಂದು ದಿನ ಆ ಬಾಸ್ ಮಹಿಳೆಯ ಮೇಲೆ ಅ ತ್ಯಾ ಚಾ ರ ಮಾಡಲು ಮುಂದಾಗಿದ್ದಾನೆ. ಆಗ ಸಿಟ್ಟಿಗೆದ್ದ ಆಕೆ ಅಲ್ಲಿದ್ದ ಚಾಕುವಿನಿಂದ ಆತನ ಮ ರ್ಮಾಂ ಗ ವನ್ನೇ ಕ ತ್ತ ರಿ ಸಿದ್ದಾಳೆ. ನಂತರ ತಾನೇ ಪೊಲೀಸರಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವ ಶ ಕ್ಕೆ ಪಡೆದಿದ್ದಾರೆ. ನಂತರ ಲೈಂ ಗಿ ಕ ದೌ ರ್ಜ ನ್ಯ ಪ್ರಕರಣದಲ್ಲಿ ಆಕೆಯ ಬಾಸ್ ಅನ್ನೂ ಬಂಧಿಸಲಾಗಿದೆ. ಆತನೂ ಕೂಡ ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಮೂಲದವನು ಎನ್ನಲಾಗಿದೆ.
ಇದನ್ನೂ ಓದಿ: ಶ ವ ಎದ್ದು ಕುಳಿತಾಗ ದಿಕ್ಕಾಪಾಲಾಗಿ ಓಡಿದ ಜನ
ಸಾಮಾಜಿಕ ಜಾಲತಾಣದಲ್ಲಿ ಕೆಲವು ಹಾಸ್ಯದ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ದುಃಖ, ನೋವಿನಲ್ಲಿರುವ ಜನರಿಗೆ ಇಂಥ ವಿಡಿಯೋಗಳು ಸ್ವಲ್ಪ ರಿಲ್ಯಾಕ್ಸ್ ನೀಡ್ತವೆ. ಅಂತಹದ್ದೇ ವಿಡಿಯೋ ಒಂದು ಟ್ವಿಟರ್ ನಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕೆಲವರು ನಗ್ತಿದ್ದರೆ ಮತ್ತೆ ಕೆಲವರು ಭಯಗೊಂಡು ಓಡ್ತಿದ್ದಾರೆ.
ಆಪ್ತರ ಸಾವು ನೋವು ನೀಡುವುದು ಸಹಜ. ಆಪ್ತರನ್ನು ಮರೆಯುವುದು ಕಷ್ಟವಾಗುತ್ತದೆ. ಆದ್ರೆ ಶ ವ ಪೆಟ್ಟಿಗೆಯಲ್ಲಿದ್ದ ಶ ವ ಅಚಾನಕ್ ಎದ್ದಾಗ, ಖುಷಿಯಾಗುವುದು ಮಾಮೂಲಿಯಾದ್ರೂ ಆ ಕ್ಷಣ ಆಘಾತ, ಭಯ ಆಗುತ್ತದೆ. ಜನರು ಗಾಬರಿಗೊಳ್ತಾರೆ. ಇಂತಹದ್ದೇ ವಿಡಿಯೋ ಈಗ ವೈರಲ್ ಆಗಿದೆ.
ಶವಪೆಟ್ಟಿಗೆಯಲ್ಲಿ ವ್ಯಕ್ತಿ ನೋಡಿ ಜನರು ಅಳ್ತಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಎದ್ದು ಕುಳಿತುಕೊಳ್ತಾನೆ. ಇದನ್ನು ನೋಡಿದ ಜನರು ದಿಕ್ಕಾಪಾಲಾಗಿ ಓಡ್ತಾರೆ. ಶ ವ ವೆದ್ದು ಓಡಾಡ್ತಿದ್ದಂತೆ ಸಂಬಂಧಿಕರು, ಆಪ್ತರು ಅಲ್ಲಿಂದ ಓಡ್ತಾರೆ. 20 ಸೆಕೆಂಡಿನ ಈ ವಿಡಿಯೋ ತಮಾಷೆ ವಿಡಿಯೋ ಆಗಿದ್ದು, ಕೆಲವರಿಗೆ ಇದು ಶಾಕ್ ನೀಡಿದ್ರೆ ಮತ್ತೆ ಕೆಲವರ ಹಾಸ್ಯಕ್ಕೆ ಕಾರಣವಾಗಿದೆ. ಈವರೆಗೆ 65 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.
Hold my beer while I take this man’s soul. 😮🥴🍺 pic.twitter.com/38P5LX5w89
— 🍺 Hold My Beer 🍺 (@HldMyBeer) May 31, 2021