ಕೇವಲ 15 ಸಾವಿರ ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ ಲಕ್ಷಾಂತರ ರೂಪಾಯಿ: ಮೋದಿ ಸರ್ಕಾರದಿಂದಲೂ ಸಿಗುತ್ತೆ 90% ವರೆಗಿನ ಸಾಲ

in Kannada News/News/ಕನ್ನಡ ಮಾಹಿತಿ 393 views

ಈಗಿನ ಪರಿಸ್ಥಿತಿಯಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವಂತಾಗಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಸ್ವಂತ ಉದ್ಯೋಗ ಮಾಡುವ ಆಲೋಚನೆಯಲ್ಲಿದ್ದಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭ ಬರುವ ವ್ಯವಹಾರ ಶುರು ಮಾಡಿ.

Advertisement

ಉತ್ತಮ ಲಾಭ ಬರುವ ವ್ಯವಹಾರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಕೂಡ ಒಂದು. ಇದಕ್ಕೆ ಸರ್ಕಾರದಿಂದ ಧನ ಸಹಾಯವೂ ಸಿಗುತ್ತದೆ. ಇದನ್ನು ಶುರು ಮಾಡಲು ಹೆಚ್ಚು ವೆಚ್ಚ ಮಾಡಬೇಕಾಗಿಲ್ಲ. ಕೇವಲ 15 ಸಾವಿರ ರೂಪಾಯಿಗೆ ನೀವು ವ್ಯವಹಾರ ಶುರು ಮಾಡಬಹುದು.

ಮುದ್ರಾ ಸಾಲ ಯೋಜನೆಯಡಿ ಸರ್ಕಾರವು ಕೈಗೆಟುಕುವ ದರದಲ್ಲಿ ಸಾಲವನ್ನು ನೀಡುತ್ತದೆ. ಈ ವ್ಯವಹಾರದ ಮೂಲಕ ಮೊದಲ ವರ್ಷದಲ್ಲಿ 1 ಲಕ್ಷ 10 ಸಾವಿರ ರೂಪಾಯಿಗಳನ್ನು ಗಳಿಸಬಹುದು. ಮುಂದಿನ ವರ್ಷದಿಂದ ಲಾಭ ಹೆಚ್ಚಾಗುತ್ತದೆ.

ದಿನಕ್ಕೆ 180 ಪ್ಯಾಕೆಟ್‌ಗಳನ್ನು ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು 1.45 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದರಲ್ಲಿ ಶೇಕಡಾ 90 ರಷ್ಟು ಅಂದರೆ 1.30 ಲಕ್ಷ ರೂಪಾಯಿಗಳನ್ನು ಮುದ್ರಾ ಯೋಜನೆಯಿಂದ ತೆಗೆದುಕೊಳ್ಳಬಹುದು. ಉಳಿದ 15 ಸಾವಿರವನ್ನು ಪಾವತಿಸಿದರೆ ಸಾಕು. ಇದನ್ನು ಚಿಕ್ಕದಾಗಿ ಪ್ರಾರಂಭಿಸಲು 16×16 ಚದರ ಅಡಿ ಕೋಣೆ ಸಾಕಾಗುತ್ತದೆ.

ಇದನ್ನೂ ಓದಿ: ದಿನಕ್ಕೆ 100 ರೂ. ಹೂಡಿಕೆ ಮಾಡಿ ಸಾಕು 10 ಕೋಟಿಗೂ ಅಧಿಕ ಹಣ ಗಳಿಸಿ..! ಕೋಟ್ಯಧಿಪತಿಯಾಗುವುದು ಹೀಗೆ ನೋಡಿ..!

ಮ್ಯೂಚುವಲ್ ಫಂಡ್‌ ಎಸ್‌ಐಪಿ ಕ್ಯಾಲ್ಕುಲೇಟರ್ ಅನ್ನು ನೀವು ಗೂಗಲ್‌ ಸರ್ಚ್‌ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು.  ಆದ್ದರಿಂದ, ಜನರು ತಮ್ಮ ದೀರ್ಘಕಾಲೀನ ಹೂಡಿಕೆ ಗುರಿಗಳನ್ನು ಪೂರೈಸಲು ಅಗತ್ಯವಾದ ಮಾಸಿಕ ಮ್ಯೂಚುಯಲ್ ಫಂಡ್ ಎಸ್‌ಐಪಿಯನ್ನು ಸುಲಭವಾಗಿ ಕಂಡುಹಿಡಿಯಬಹುದು.

ನಿಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಷೇರು ಮಾರುಕಟ್ಟೆಯಲ್ಲಿ ಅದರಲ್ಲೂ ಎಸ್‌ಐಪಿಯಲ್ಲಿ ಹೂಡಿಕೆ ಮಾಡುವುದು ಸಂಪತ್ತಿನ ಕ್ರೋಢೀಕರಣಕ್ಕೆ ಕಾರಣವಾಗು ತ್ತದೆ. ಇದು ನಿವೃತ್ತಿಯ ನಂತರದ ಅಥವಾ ತುರ್ತು ಸಂದರ್ಭಗಳಲ್ಲಿ ಆರ್ಥಿಕವಾಗಿ ಸುರಕ್ಷಿತ ಜೀವನವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಈಗ ಕೊರೊನಾ, ಲಾಕ್‌ಡೌನ್‌ ಸಮಯದಿಂದ ನಿಮಗೆ ಹಣಕಾಸಿನ ತೊಂದರೆಯಾಗಿ ರಬಹುದು. ಹಲವರಿಗೆ ಸಂಬಳ ಕಡಿತವಾಗಿರಬಹುದು, ಇನ್ನೂ ಹಲವರ ಕೆಲಸವೇ ಹೋಗಿರಬಹುದು. ಆದರೆ, ಭವಿಷ್ಯದಲ್ಲಿ ನಿಮಗೆ ಹೆಚ್ಚು ಹಣಕಾಸಿನ ತೊಂದರೆಯಾ ಗುವುದು ಬೇಡವೆಂದರೆ ದಿನಕ್ಕೆ 100 ರೂ. ಹೂಡಿಕೆ ಮಾಡಿ ಸಾಕು. ಈ ದಿನ ಮತ್ತು ಯುಗದಲ್ಲಿ, ಕೆಟ್ಟದ್ದಕ್ಕಾಗಿ ತಯಾರಿ ಮಾಡುವುದು ಅಗತ್ಯವಾಗಿದ್ದು, ಅತ್ಯುತ್ತಮ ತಂತ್ರವಾಗಿದೆ.

ಅಲ್ಲದೆ, ಜನರು ತಮ್ಮ ಬ್ಯಾಂಕಿನಲ್ಲಿ ತೃಪ್ತಿದಾಯಕ ಮೊತ್ತವಿದ್ದರೆ 55 ವರ್ಷ ವಯಸ್ಸಿಗೇ ನಿವೃತ್ತಿ ಹೊಂದುವ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ.  ಈ ಹಿನ್ನೆಲೆ ಹಣ ಹೂಡಿಕೆ ಮಾಡಲು ಉತ್ತಮ ಮಾರ್ಗವೆಂದರೆ ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP). ಇದು ಮ್ಯೂಚುವಲ್‌ ಫಂಡ್‌ನ ಒಂದು ಪ್ರಮುಖವಾದ ಹೂಡಿಕೆ ಮಾಡುವ ಜಾಗ. ಸುಮಾರು 25 ವರ್ಷ ವಯಸ್ಸಿನ ಯುವಕರು ಒಂದೇ ಸಮಯದಲ್ಲಿ ಹೆಚ್ಚು ಹಣ ಹೂಡಿಕೆ ಮಾಡಲು ಇಷ್ಟಪಡುವುದಿಲ್ಲ.

ಅದಕ್ಕೆ  ನೀವು ಚಿಕ್ಕವರಿದ್ದಾಗ ಮತ್ತು ನಿಮ್ಮ ವೃತ್ತಿ ಜೀವನದ ಆರಂಭಿಕ ಹಂತದಲ್ಲಿ, ನೀವು ಕಡಿಮೆ ಉಳಿತಾಯವನ್ನು ಹೊಂದಿರುವಿರಿ.  ಆದರೆ, ನಿಮ್ಮ ದೀರ್ಘಕಾಲೀನ ಹೂಡಿಕೆಯ ಗುರಿಯ ಬಗ್ಗೆ ನಿಮಗೆ ಖಚಿತವಾಗಿದ್ದರೆ, ಯಾವುದೇ ವೃತ್ತಿಪರ ಸಹಾಯದ ಅಗತ್ಯವಿಲ್ಲದೆ ಮ್ಯೂಚುವಲ್ ಫಂಡ್‌ನ ಎಸ್‌ಐಪಿಯಲ್ಲಿ ಹೂಡಿಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಮ್ಯೂಚುವಲ್ ಫಂಡ್‌ ಎಸ್‌ಐಪಿ ಕ್ಯಾಲ್ಕುಲೇಟರ್ ಅನ್ನು ನೀವು ಗೂಗಲ್‌ ಸರ್ಚ್‌ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು.  ಆದ್ದರಿಂದ, ಜನರು ತಮ್ಮ ದೀರ್ಘಕಾಲೀನ ಹೂಡಿಕೆ ಗುರಿಗಳನ್ನು ಪೂರೈಸಲು ಅಗತ್ಯವಾದ ಮಾಸಿಕ ಮ್ಯೂಚುಯಲ್ ಫಂಡ್ ಎಸ್‌ಐಪಿಯನ್ನು ಸುಲಭವಾಗಿ ಕಂಡುಹಿಡಿಯಬಹುದು. ನೀವು ಮ್ಯೂಚುವಲ್ ಫಂಡ್‌ ಎಸ್‌ಐಪಿಯಲ್ಲಿ 10-15 ವರ್ಷ ಹೂಡಿಕೆ ಮಾಡುವುದಾದರೆ ಕನಿಷ್ಠ 12 ಶೇಕಡಾ ಲಾಭವನ್ನು ನಿರೀಕ್ಷಿಸಬಹುದು.

ಒಂದು ವೇಳೆ 25 ರಿಂದ 30 ವರ್ಷ ಅವಧಿ ಇದ್ದರೆ, ಕಳೆದ 2 – 3 ವರ್ಷಗಳ ಷೇರು ಮಾರುಕಟ್ಟೆಯನ್ನು ಗಮನಿಸಿದರೆ ಶೇ.  15-17 ರಷ್ಟು ಲಾಭ ನಿರೀಕ್ಷಿಸಬಹುದು.  ಒಂದು ವೇಳೆ, ನಿಮ್ಮ ಸಂಬಳ ಪ್ರತಿ ವರ್ಷ ಶೇ.  10-15ರಷ್ಟು ಹೆಚ್ಚಳವಾದರೆ, ಅದೇ ರೀತಿ ಮ್ಯೂಚುವಲ್‌ ಫಂಡ್‌ ಹೂಡಿಕೆಯನ್ನು ಪ್ರತಿ ವರ್ಷ ಶೇ 15 ರಷ್ಟು ಹೆಚ್ಚಳ ಮಾಡಿದರೆ ಲಾಭ ಹೆಚ್ಚಾಗಲಿದೆ ಎಂದು ಹೂಡಿಕೆ ತಜ್ಞರು ಸಲಹೆ ನೀಡುತ್ತಾರೆ.

ನೀವು ತಿಂಗಳಿಗೆ 3,000 ರೂ.ಗಳ ಎಸ್‌ಐಪಿ ಪ್ರಾರಂಭಿಸುತ್ತೀರ ಎಂದು ಭಾವಿಸೋಣ, ಈ ಹಿನ್ನೆಲೆ 30 ವರ್ಷಗಳಲ್ಲಿ ಶೇ 15 ರಷ್ಟು ಮ್ಯೂಚುವಲ್ ಫಂಡ್‌ ಎಸ್‌ಐಪಿ ಆದಾಯವನ್ನು ಊಹಿಸಿದರೆ, 30 ವರ್ಷಗಳ ನಂತರ  ನಿಮ್ಮ ಹಣ  2,10,29,461 ರೂ. ಗಳಾಗುತ್ತದೆ. ಅಂದರೆ, ಈ ಅವಧಿಯಲ್ಲಿ ಎಸ್‌ಐಪಿ ಹೂಡಿಕೆದಾರರು ಅಮದರೆ ನೀವು ಮಾಡಿದ ನಿವ್ವಳ ಹೂಡಿಕೆ 10,80,000 ರೂ. ಮತ್ತು ಗಳಿಸಿದ ಲಾಭ 1,99,49,461 ರೂ.

ಇನ್ನೊಂದೆಡೆ, ಆರಂಭದಲ್ಲಿ 3,000 ರೂ ಎಸ್‌ಐಪಿ ಹೂಡಿಕೆ ಮಾಡಿ, ವಾರ್ಷಿಕವಾಗಿ ಎಸ್‌ಐಪಿ ಹೂಡಿಕೆಯನ್ನು ಶೇ. 15 ರಷ್ಟು ಹೆಚ್ಚಿಸುತ್ತಾ ಹೋದರೆ, 15 ಪ್ರತಿಶತದಷ್ಟು ಆದಾಯವನ್ನು ನೀಡುವ 30 ವರ್ಷಗಳ ಅವಧಿಗೆ, 7,74,73,568 ರೂ. ಗೆ ಬೆಳೆಯುತ್ತದೆ.  ಈ ಮ್ಯೂಚುಯಲ್ ಫಂಡ್‌ಗಳ ಎಸ್‌ಐಪಿ ಹೂಡಿಕೆಯಲ್ಲಿ, ನಿಮ್ಮ ನಿವ್ವಳ ಹೂಡಿಕೆ 1,56,37,884 ರೂ. ಆದರೆ,  30 ವರ್ಷಗಳ ಹೂಡಿಕೆಯಲ್ಲಿ ಗಳಿಸಿದ ಲಾಭ 6,18,35,684ರೂ.

ಆದರೆ, ಮ್ಯೂಚುಯಲ್ ಫಂಡ್‌ಗಳ ಎಸ್‌ಐಪಿ ಹೂಡಿಕೆಯ ಮುಕ್ತಾಯಕ್ಕೆ 3-4 ವರ್ಷಗಳಲ್ಲಿ ಷೇರು ಮಾರುಕಟ್ಟೆ ಸಾಮಾನ್ಯವಾಗಿ ವರ್ತಿಸಿದರೆ ಹೂಡಿಕೆದಾರರು ಶೇಕಡಾ 17 ರವರೆಗೆ ಹೆಚ್ಚಿನ ಆದಾಯವನ್ನು ಪಡೆಯುವ ಸಾಧ್ಯತೆಗಳಿವೆ. ಅಂತಹ ಸಂದರ್ಭದಲ್ಲಿ, ನೀವು 30 ವರ್ಷಗಳಲ್ಲಿ  10,72,57,314 ರೂ. ಹಣವನ್ನು ಗಳಿಸಬಹುದಾಗಿದೆ. ಅಂದರೆ, ನಿಮ್ಮ ಬಳಿ 10 ಕೋಟಿಗೂ ಅಧಿಕ ಹಣ ಇರುತ್ತದೆ.

ಆದ್ದರಿಂದ, ನಿಮ್ಮ ತಿಂಗಳ 3,000 ರೂ ಅಥವಾ ದಿನಕ್ಕೆ 100 ರೂ. ಹಣ ಮ್ಯೂಚುವಲ್ ಫಂಡ್ ಹೂಡಿಕೆ ತಜ್ಞರು ಸೂಚಿಸಿದಂತೆ ಮೇಲೆ ತಿಳಿಸಿದ ಟ್ರಿಕ್ ಬಳಸಿದರೆ ನೀವು  10.72 ಕೋಟಿ ರೂ. ವರೆಗೆ ಗಳಿಸಬಹುದಾಗಿದೆ.

Advertisement
Share this on...