ಕೊರೋನಾದಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುತ್ತಿವೆ ಈ ಲಕ್ಷಣಗಳು: ಎಚ್ಚರ, ಇಲ್ಲದಿದರೆ ಅಪಾಯ

in Helath-Arogya/Kannada News/News 590 views

ನವದೆಹಲಿ:

Advertisement
ಕೊರೊನಾ ಸೋಂಕು ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೂ ಎಡೆಮಾಡಿಕೊಡುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್… ಹೀಗೆ ಗಂಭೀರ ಸಮಸ್ಯೆಯಿಂದ ಹಿಡಿದು ಕೂದಲು ಉದುರುವಿಕೆ, ಚರ್ಮ ಸಮಸ್ಯೆ ಹೀಗೆ ಕೆಲವು ಸಮಸ್ಯೆಗಳೂ ಎದುರಾಗಬಹುದು ಎನ್ನುತ್ತಿದ್ದಾರೆ ವೈದ್ಯರು.

ಸೋಂಕಿನಿಂದ ಚೇತರಿಕೆ ಕಾಣುತ್ತಿರುವ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಿರುವ ಕಾರಣ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಇಂಥ ಸಮಸ್ಯೆಗಳು ಕಂಡುಬಂದಾಗ ತಕ್ಷಣವೇ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತ. ಇಂಥ ಸಣ್ಣ ಪುಟ್ಟ ಸಮಸ್ಯೆಗಳೆರಡೆ ನಿರ್ಲಕ್ಷ್ಯ ಸಲ್ಲದು ಎನ್ನುತ್ತಿದ್ದಾರೆ. ಮುಂದೆ ಓದಿ…

ಚೇತರಿಸಿಕೊಳ್ಳುತ್ತಿರುವವರಲ್ಲಿ ಚರ್ಮ ಸಮಸ್ಯೆ

ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ, ಈಚೆಗೆ ಗುಣಮುಖರಾಗಿರುವವರಲ್ಲಿ ಅಥವಾ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಹೋಂ ಕ್ವಾರಂಟೈನ್ ಅವಧಿ ಮುಗಿದ ನಂತರ ಕೆಲವರಲ್ಲಿ ಚರ್ಮದಲ್ಲಿ ಉರಿ ಅಥವಾ ಅಲರ್ಜಿಯಂಥ ಲಕ್ಷಣಗಳು ಕಂಡುಬರುತ್ತಿವೆ. ಇದ್ದಕ್ಕಿದ್ದಂತೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ದೆಹಲಿ, ಮುಂಬೈ ಇನ್ನಿತರ ಪ್ರಮುಖ ನಗರಗಳಲ್ಲಿ ಕೊರೊನಾ ರೋಗಿಗಳಲ್ಲಿ ಈ ರೀತಿ ಚರ್ಮ ಸಮಸ್ಯೆಗಳು ಗೋಚರಿಸುತ್ತಿರುವುದಾಗಿ ತಿಳಿದುಬಂದಿದೆ.

ಬಾಯಿ ಸುತ್ತ, ತುಟಿಯ ಮೇಲೆ ತುರಿಕೆ, ಗುಳ್ಳೆ

“ಹಲವು ಕೊರೊನಾ ರೋಗಿಗಳಲ್ಲಿ ಈ ರೀತಿ ಚರ್ಮ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ತಮಗೆ ಬೇರೇನೋ ಸಮಸ್ಯೆ ಕಂಡುಬಂದಿದೆ ಎಂದು ಆತಂಕಪಟ್ಟುಕೊಳ್ಳುತ್ತಿದ್ದಾರೆ. ಆದರೆ ಭಯ ಪಟ್ಟುಕೊಳ್ಳುವ ಅಗತ್ಯವಿಲ್ಲ. ಸಮಸ್ಯೆ ಕಂಡುಬಂದ ತಕ್ಷಣ ಚಿಕಿತ್ಸೆ ಪಡೆಯುವುದು ಸೂಕ್ತ” ಎಂದು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಚರ್ಮತಜ್ಞ ಡಾ. ಡಿ.ಎಂ.ಮಹಾಜನ್ ತಿಳಿಸಿದ್ದಾರೆ. ಬಾಯಿ ಸುತ್ತ, ತುಟಿಯ ಮೇಲೆ ಅಥವಾ ಖಾಸಗಿ ಅಂಗಗಳಲ್ಲಿ ತುರಿಕೆ, ಗುಳ್ಳೆ (Herpes)ಗಳಾಗುತ್ತವೆ. ಅಲರ್ಜಿ ಸಮಸ್ಯೆಯ ಇತಿಹಾಸ ಇರುವವರಿಗೆ ಕೊರೊನಾ ಸಮಸ್ಯೆ ಇನ್ನಷ್ಟು ಪ್ರಚೋದನೆ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಕ್ಯಾಂಡಿಡಾ ಫಂಗಸ್‌ನಿಂದ ಈ ಸಮಸ್ಯೆ

ಮೊದಲು ಬಾಯಿ ಸುತ್ತ ಒಂದೆಡೆ ಗುಳ್ಳೆ ಕಾಣಿಸಿಕೊಳ್ಳುತ್ತದೆ. ನಂತರ ಉರಿ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ. ಇದು ಕೂಡ ಒಂದು ರೀತಿ ಶಿಲೀಂಧ್ರ ಸಮಸ್ಯೆಯಾಗಿದ್ದು, ಕೊರೊನಾ ರೋಗಿಗಳಲ್ಲಿ ಕ್ಯಾಂಡಿಡಾ ಫಂಗಸ್‌ನಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯ ಮಹಾಜನ್ ತಿಳಿಸಿದ್ದಾರೆ. ಅತಿ ಹೆಚ್ಚು ಔಷಧಿಗಳ ಸೇವನೆಯಿಂದ ಹೀಗೆ ಆಗಬಹುದು ಎಂದು ಹೇಳಿದ್ದಾರೆ.

ಕೂದಲು ಉದುರುವಿಕೆ ಸಮಸ್ಯೆಯೂ ಹೆಚ್ಚಾಗಿದೆ

“ಚರ್ಮವಷ್ಟೇ ಅಲ್ಲ, ಕೂದಲು ಹಾಗೂ ಉಗುರು ಬೆಳವಣಿಗೆ ಮೇಲೂ ಕೊರೊನಾ ಪರಿಣಾಮ ಕಂಡುಬರುತ್ತಿದೆ. ಸೋಂಕಿನಿಂದ ಚೇತರಿಕೆ ಕಾಣುತ್ತಿರುವವರಲ್ಲಿ ರೋಗ ನಿರೋಧಕ ಶಕ್ತಿ ಕೊರತೆಯಿಂದ ಹೀಗೆ ಬಹು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ” ಎಂದು ಮುಂಬೈನ ಚರ್ಮ ತಜ್ಞರು ಹಾಗೂ ಕೂದಲು ತಜ್ಞರಾದ ಡಾ. ಸೊನಾಲಿ ಕೊಹ್ಲಿ ಹೇಳಿದ್ದಾರೆ. ಈ ಚರ್ಮ ಸಮಸ್ಯೆ ಹಾಗೂ ಕೊರೊನಾ ನಡುವಿನ ಸಂಬಂಧದ ಕುರಿತು ವೈದ್ಯಕೀಯ ಅಧ್ಯಯನ ನಡೆದಿಲ್ಲ. ಆದರೆ “ಹರ್ಪ್” ಚರ್ಮ ಸಮಸ್ಯೆ ಹೆಚ್ಚಿನ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿದೆ. ಕೊರೊನಾ ದೃಢಪಟ್ಟು ತಿಂಗಳ ನಂತರವೂ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕೊರೊನಾಗೂ ಈ ಸೋಂಕಿಗೂ ಸಂಬಂಧವಿದೆ ಎಂದು ಹೇಳುತ್ತಾರೆ.

Advertisement
Share this on...