VIDEO| ತಿರುಪತಿಯ ಈ ರಹಸ್ಯಗಳನ್ನ ಕಂಡು ಸ್ವತಃ ನಾಸಾ ಶಾಕ್: ಅಷ್ಟಕ್ಕೂ ಇಲ್ಲಿರುವ ನಿಗೂಢ ಸಂಗತಿಗಳೇನು? ವಿಡಿಯೋ ನೋಡಿ

in Kannada News/News/Story/ಕನ್ನಡ ಮಾಹಿತಿ 3,193 views

 

ಭಾರತದ ಚಮತ್ಕಾರಿ ಹಾಗು ರಹಸ್ಯಮಯ ಮಂದಿರಗಳಲ್ಲಿ ತಿರುಪತಿಯ ಬಾಲಾಜಿ ಮಂದಿರವೂ ಒಂದು ಎಂದೇ ಹೇಳಲಾಗುತ್ತದೆ. ತಿರುಪತಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ ಶ್ರೀಮಂತ ಹಾಗು ಬಡವರು ನಿಜವಾದ ಶೃದ್ಧಾ ಭಾವದಿಂದ ತಲೆ ಬಾಗುತ್ತಾರೆ. ಈ ಮಂದಿರ ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.

Advertisement

ಪ್ರತಿ ವರ್ಷ ಲಕ್ಷಾಂತರ ಶೃದ್ಧಾಳುಗಳು ಸಪ್ತಬೆಟ್ಟಗಳ ಮೇಲೆ ವಿರಾಜಮಾನರಾಗಿರುವ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ. ಮಾನ್ಯತೆಗಳ ಪ್ರಕಾರ ಭಗವಾನ್ ಬಾಲಾಜಿ ತನ್ನ ಪತ್ನಿ ಪದ್ಮಾವತಿಯ ಜೊತೆ ಇದೇ ತಿರುಪತಿಯಲ್ಲಿ ವಾಸಿಸುತ್ತಾರೆ. ಭಕ್ತರು ನಿಷ್ಕಲ್ಮಷ ಮನಸ್ಸಿನಿಂದ ಇಲ್ಲಿ ಭಗವಂತನಲ್ಲಿ ಪ್ರಾರ್ಥಿಸಿದರೆ‌ ಬಾಲಾಜಿ ಅಂತಹ ಭಕ್ತರ ಎಲ್ಲ ಇಷ್ಟಾರ್ಥಿಗಳನ್ನೂ ಈಡೇರಿಸುತ್ತಾನೆ ಎಂಬ ಮಾನ್ಯತೆಯೂ ಇಲ್ಲಿದೆ.

ಭಕ್ತರ ಇಷ್ಟಾರ್ಥಗಳು ಈಡೇರಿದ ಬಳಿಕ ಭಕ್ತರು ತಮ್ಮ ಶೃದ್ಧಾನುಸಾರ ತಿರುಪತಿಯಲ್ಲಿ ತಮ್ಮ ಕೂದಲನ್ನ ದಾನ ಮಾಡುತ್ತಾರೆ. ಅಂದರೆ ಕೇಶಮುಂಡನ ಮಾಡಿಸಿಕೊಳ್ಳುತ್ತಾರೆ. ಈ ಅಲೌಕಿಕ ಹಾಗು ಚಮತ್ಕಾರಿ ಮಂದಿರಕ್ಕೆ ಸಂಬಂಧಿಸಿದ ಒಂದು ರಹಸ್ಯವಿದೆ ಅದನ್ನ ಕೇಳಿದರೆ ನೀವು ಕೂಡ ಆಶ್ಚರ್ಯಚಕಿತರಾಗುತ್ತೀರ. ಬನ್ನಿ ಹಾಗಿದ್ದರೆ ಈ ಮಂದಿರಕ್ಕೆ ಸಂಬಂಧಿಸಿದ ಕೆಲ ರೋಚಕ ಹಾಗು ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ.

ಮಾನ್ಯತೆಗಳ ಪ್ರಕಾರ ಭಗವಾನ್ ವೆಂಕಟೇಶ್ವರ ಸ್ವಾಮಿಯ ಮೂರ್ತಿಯ ಮೇಲೆ ಖುದ್ದು ವೆಂಕಟೇಶ್ವರನೇ ವಿರಾಜಮಾನನಾಗಿದ್ದಾನೆ. ಭಕ್ತರು ಹೇಳುವ ಪ್ರಕಾರ ಮಂದಿರದಲ್ಲಿ ವಿಚಿತ್ರ ಘಟನೆಯೊಂದು ನಡೆಯುತ್ತದೆ. ಇದನ್ನ ನೋಡಿದರೆ ನಿಜಕ್ಕೂ ಇಲ್ಲಿ ಭಗವಂತನಿದ್ದಾನೆ ಎಂದೇ ಭಾಸವಾಗುತ್ತದೆ.

ಮಂದಿರದಲ್ಲಿ ಬಾಲಾಜಿಯ ಮೂರ್ತಿಗಳ ಮೇಲೆ ಕಿವಿಗೊಟ್ಟು ಕೇಳಿದರೆ ಮೂರ್ತಿಯೊಳಗಿನಿಂದ ಶಬ್ದಗಳೂ ಕೇಳಿಬರುತ್ತವೆ. ಈ ಶಬ್ದಗ ಸಮುದ್ರದ ಅಲೆಗಳಂತೆ ಭಾಸವಾಗುತ್ತವೆ. ಆದರೆ ತಿರುಪತಿಯ ಅಷ್ಟು ಹತ್ತಿರದಲ್ಲಿ ಯಾವ ಸಮುದ್ರವೂ ಇಲ್ಲ. ಆದರೂ ಮೂರ್ತಿಯೊಳಗೆ ಸಮುದ್ರದ ಅಲೆಗಳಂತೆ ಶಬ್ದ ಕೇಳಿಬರುತ್ತವೆ. ಇನ್ನೊಂದು ಆಶ್ಚರ್ಯಕರ ಹಾಗು ರಹಸ್ಯಮಯ ಸಂಗತಿಯೇನೆಂದರೆ ಎಂತಹ ಭಯಂಕರ ಚಳಿಗಾಲವಿರಲಿ ಅಥವ ಯಾವುದೇ ದಿನವಾಗಿರಲಿ (ಬೇಸಿಗೆ ಹಾಗು ಮಳೆಗಾಲ) ತಿರುಪತಿ ಬಾಲಾಜಿಯ ಇಡೀ ವಿಗ್ರಹದಿಂದ ಬೆವರಿನಂತೆ ನೀರು ಸುರಿಯುತ್ತಲೇ ಇರುತ್ತದೆ‌. ಅಲ್ಲಿನ ಅರ್ಚಕರು ಮೂರ್ತಿಯ ಮುಖವನ್ನು ಒರೆಸುತ್ತಿರುವುದು ಹಾಗು ಒರೆಸಿದ ತಕ್ಷಣ ಮತ್ತೆ ಬೆವರು ಬರುವವುದನ್ನ ನೀವು ಈ ಕೆಳಗಿನ ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನೊಂದು ಆಶ್ಚರ್ಯಕರ ಸಂಗತಿಯೇನೆಂದರೆ ನೀವು ಸಮುದ್ರ ತೀರಕ್ಕೆ ಹೋದಾಗ ಯಾವ ರೀತಿಯ ಶಾಂತಿ ಸಿಗುತ್ತದೆಯೋ ಅದೇ ರೀತಿ ಮಂದಿರದ ಪ್ರಾಂಗಣದಲ್ಲಿ ನಮಗೆ ಭಾಸವಾಗುತ್ತದೆ.

ಮಂದಿರದ ಮುಖ್ಯ ದ್ವಾರದಲ್ಲಿ ಒಬ್ಬ ಸೇವಕಿಯ ಕೆತ್ತನೆ ಹಾಗು ಒಂದು ಛಡಿಯನ್ನ ಕಾಣಬಹುದು. ಮಾನ್ಯತೆಗಳ ಪ್ರಕಾರ ವೆಂಕಟೇಶ್ವರ ಸ್ವಾಮಿಗೆ ಚಿಕ್ಕವನಿದ್ದಾಗ ಇದೇ ಛಡಿಯಿಂದ ಶಿಕ್ಷೆ ನೀಡಲಾಗುತ್ತಿತ್ತಂತೆ. ಇದೇ ಕಾರಣದಿಂದ ವೆಂಕಟೇಶ್ವರನ ಗದ್ದದ ಮೇಲೆ ಗಾಯವಾಗಿತ್ತು. ಇದೇ ಕಾರಣದಿಂದ ಇದುವರೆಗೂ ಮೂರ್ತಿಯ ಗದ್ದದ ಮೇಲೆ ಗುರುವಾರದಂದು ಚಂದನದ ಲೇಪ ಮಾಡಲಾಗುತ್ತದೆ.

ನೂರಾರು (ಸಾವಿರಾರು ಅಥವ ಲಕ್ಷಾಂತರ) ವರ್ಷಗಳಿಂದ ಜ್ಯೋತಿ ಆರಿಲ್ಲ

ಭಗವಾನ್ ತಿರುಪತಿಯ ಮಂದಿರದಲ್ಲಿ ದೀಪವೊಂದಿದ್ದು ಅದು ಸದಾಕಾಲ ಉರಿಯುತ್ತಲೇ ಇರುತ್ತದೆ. ಆಶ್ಚರ್ಯಕರ ಸಂಗತಿಯೇನೆಂದರೆ ಈ ದೀಪ ಬೆಳಗಲು ಎಣ್ಣೆಯನ್ನ ಬಳಸುವುದೇ ಇಲ್ಲ. ಆದರೆ ಈ ದೀಪ ಎಷ್ಟು ವರ್ಷಗಳಿಂದ ಇಲ್ಲಿ ಉರಿಯುತ್ತಿದೆ ಅನ್ನೋದು ಮಾತ್ರ ಈವರೆಗೂ ಯಾರಿಗೂ ತಿಳಿದಿಲ್ಲ.

Advertisement
Share this on...