“40 ಸಾವಿರ ಅಡಿ ಎತ್ತರದಲ್ಲಿ ನಮ್ಮ ವಿಮಾನವನ್ನ ತಡೆದು ನಿಲ್ಲಿಸಿದ ಏಲಿಯನ್ ಗಳು, ಬಳಿಕ ಅವುಗಳು….”

in Kannada News/News 139 views

ವಾಷಿಂಗ್ಟನ್: ಏಲಿಯನ್ ಗಳು ಇವೆಯೋ ಇಲ್ಲವೋ ಎಂಬುದು ದಶಕಗಳಿಂದ ಚರ್ಚೆಗೊಳಗಾಗುತ್ತಿರುವ ವಿಷಯವಾಗಿದೆ, ಆದರೆ ಇಲ್ಲಿಯವರೆಗೆ ಯಾವುದೇ ದೃಢವಾದ ಸಾಕ್ಷಿಗಳಾಗಲಿ ಸುಳಿವಾಗಲಿ ಸಿಕ್ಕಿಲ್ಲ. ಆಕಾಶದಲ್ಲಿ ವಿಚಿತ್ರವಾದ ಸಂಗತಿಗಳು ಹಲವು ಬಾರಿ ಕಾಣಿಸಿಕೊಂಡಿದ್ದರೂ, ಅವು ರಾಡಾರ್‌ನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದ್ದವು, ಆದರೆ ವಾಯುಪಡೆಯ ವಿಮಾನವು ಅವುಗಳನ್ನು ತಲುಪುವ ಹೊತ್ತಿಗೆ ಅವು ಕಣ್ಮರೆಯಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಬೇರೆ ಯಾವುದೇ ಗ್ರಹದಲ್ಲೂ ಜೀವವಿದೆಯೇ ಎಂಬುದು ಇನ್ನೂ ದೊಡ್ಡ ಪ್ರಶ್ನೆಯಾಗೇ ಉಳಿದಿದೆ. ಈ ಕುರಿತು ಯುಎಸ್ ಗುಪ್ತಚರ ಸಂಸ್ಥೆ ಸಿಐಎ ಮಾಜಿ ನಿರ್ದೇಶಕರು ಹೊಸ ವಿಷಯವನ್ನ ಬಹಿರಂಗಪಡಿಸಿದ್ದಾರೆ. ಕಳೆದ 15 ದಿನಗಳ ಹಿಂದೆಯಷ್ಟೇ ಯುಎಸ್ ನಲ್ಲಿ ನ್ಯಾಷನಲ್ ಇಂಟೆಲಿಜೆನ್ಸ್ ಏಜೆನ್ಸಿಯ ಮಾಜಿ ನಿರ್ದೇಶಕ ಜಾನ್ ರ‌್ಯಾಟಕ್ಲಿಫ್ ಇದೇ ರೀತಿಯ ವಿಷಯವನ್ನ‌ ಬಹಿರಂಗಪಡಿಸಿದ್ದಾರೆ.

Advertisement

ಆಗಸದಲ್ಲಿ ವಿಮಾನವನ್ನ ತಡೆದು ನಿಲ್ಲಿಸಲಾಯಿತು

ಸಂದರ್ಶನವೊಂದರಲ್ಲಿ, ಸಿಐಎ ಮಾಜಿ ಮುಖ್ಯಸ್ಥ ಜೇಮ್ಸ್ ವೂಲ್ಸೆ ಏಲಿಯನ್ಸ್ ಗಳಿವೆ ಎಂದು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಉಪಾಖ್ಯಾನವನ್ನೂ ಹಂಚಿಕೊಂಡಿದ್ದಾರೆ. ವೂಲ್ಸೆ ಪ್ರಕಾರ, ಅವರು ಆಕಾಶದಲ್ಲಿ ನಿಗೂಢ ವಿಷಯಗಳ ಬಗ್ಗೆ ಬಹಳ ಸಮಯದಿಂದ ಕೇಳುತ್ತಿದ್ದರು. ಜನರು ಯುಎಫ್‌ಒಗಳಂತಹ ವಿಷಯಗಳನ್ನು ಹಲವು ಬಾರಿ ನೋಡಿದ್ದಾರೆಂದು ಹೇಳಿಕೊಂಡಿದ್ದರು, ಆದರೆ ಅವುಗಳನ್ನು ನಾನು ನಂಬಿರಲಿಲ್ಲ. ಒಂದು ದಿನ ವೂಲ್ಸೆ ತನ್ನ ಸ್ನೇಹಿತನ ವಿಮಾನದಲ್ಲಿ ಹೋಗುತ್ತಿದ್ದನು. ನಂತರ ಇದ್ದಕ್ಕಿದ್ದಂತೆ ಏಲಿಯನ್ಸ್ ಗಳು 40 ಸಾವಿರ ಅಡಿ ಎತ್ತರದಲ್ಲಿ ವಿಮಾನ ಅಚಾನಕ್ಕಾಗಿ ನಿಂತುಬಿಟ್ಟಿತು. ವಿಮಾನದಲ್ಲಿ ಯಾವುದೇ ತಾಂತ್ರಿಕ ತೊಂದರೆಗಳಿಲ್ಲದ ಕಾರಣ ಪೈಲಟ್‌ಗಳು ಕೂಡ ಆಶ್ಚರ್ಯಚಕಿತರಾದರು. ಅದು ಸ್ಥಿರವಾಗಿತ್ತು ಮತ್ತು ಸಾಮಾನ್ಯ ವಿಮಾನದಂತೆ ಹಾರಲು ಸಾಧ್ಯವಾಗುತ್ತಿರಲಿಲ್ಲ.

ಜನರ ಮನದಲ್ಲಿತ್ತು ಒಂದು ಪ್ರಶ್ನೆ

ಆ ದಿನದಿಂದ, ಏಲಿಯನ್ಸ್ ಗಳ ಬಗ್ಗೆ ವೂಲ್ಸೆ ರವರ ಅಭಿಪ್ರಾಯ ಸಂಪೂರ್ಣವಾಗಿ ಬದಲಾಯಿತು. ವಿಮಾನದಲ್ಲಿದ್ದ ಎಲ್ಲರೂ ಏನಾಗುತ್ತಿದೆ ಎಂದು ಪರಸ್ಪರ ಕೇಳುತ್ತಿದ್ದರು. ಆದರೆ ಅದಕ್ಕೆ ಯಾರ ಬಳಿಯೂ ಉತ್ತರವಿರಲಿಲ್ಲ. ಆ ಸಮಯದಲ್ಲಿ, ಅವರು ಏಲಿಯನ್ಸ್ ಗಳ ಜೊತೆ ಸ್ನೇಹ ಬೆಳೆಸಲು ಯೋಚಿಸಿದ್ದರು. ವೂಲ್ಸೆ ಪ್ರಕಾರ, ಆ ಘಟನೆ ನಿಜಕ್ಕೂ ಆಶ್ಚರ್ಯಕರವಾಗಿತ್ತು, ಅದರ ರಹಸ್ಯವನ್ನು ಇಲ್ಲಿಯವರೆಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆ ಸಮಯದಲ್ಲಿ, ವಿಮಾನದಲ್ಲಿ ಕುಳಿತ ಎಲ್ಲ ಜನರು ಈ ಕೆಲಸವನ್ನು ಏಲಿಯನ್ಸ್ ಗಳೇ ಮಾಡಿವೆ ಎಂದು ಭಾವಿಸಿದರು. ಅಲ್ಲಿಂದೀಚೆಗೆ, ಅವರು ಇನ್ನೊಂದು ಜಗತ್ತಿನಲ್ಲಿ ಜೀವನವಿದೆ ಎಂದು ನಂಬಲು ಪ್ರಾರಂಭಿಸಿದರು.

ಜಾನ್ ರ‌್ಯಾಟಕ್ಲಿಫ್ ಕೂಡ ಇದೇ ಮಾತನ್ನ ಹೇಳಿದ್ದರು

ಮಾರ್ಚ್ ಅಂತ್ಯದಲ್ಲಿ, ಯುಎಸ್ ನ್ಯಾಷನಲ್ ಇಂಟೆಲಿಜೆನ್ಸ್ ನ ಮಾಜಿ ನಿರ್ದೇಶಕ ಜಾನ್ ರ‌್ಯಾಟಕ್ಲಿಫ್ ಸಂದರ್ಶನವೊಂದನ್ನು ನೀಡಿದರು. ಇದರಲ್ಲಿ ಅವರು ಏಪ್ರಿಲ್ 20 ರಂದು ಯುಎಸ್ ನೌಕಾಪಡೆ ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದರು. ಅದರಲ್ಲಿ ಒಂದು UAP (Unidentified Aerial Phenomena) ಇತ್ತು. UAP ಎಂಬ ಪದವನ್ನು ಮಿಲಿಟರಿಯ ಪರವಾಗಿ ಬಳಸಲಾಗುತ್ತದೆ, ಆದರೆ ಇದರ ಅರ್ಥ UFA ಎಂಬುದೇ ಆಗಿರುತ್ತದೆ. ಆ ಸಮಯದಲ್ಲಿ ಅಪರಿಚಿತ ವಿಮಾನ (ಯುಎಫ್‌ಒ) ವೇಗವಾಗಿ ಹಾರುವಂತೆ ಕಾಣಿಸಿಕೊಂಡಿತು. ಸ್ವಲ್ಪ ಸಮಯದ ನಂತರ ಅದು ಶಬ್ದದ ವೇಗಕ್ಕಿಂತ ವೇಗವಾಗಿಬಿಟ್ಟಿತು. ಸಾಮಾನ್ಯವಾಗಿ ಯುದ್ಧ ವಿಮಾನವು ಶಬ್ದದ ವೇಗಕ್ಕಿಂತ ವೇಗವಾಗಿ ಹಾರಿದಾಗ ಅದನ್ನು ಸೋನಿಕ್ ಬೂಮ್ ಎಂದು ಕರೆಯಲಾಗುತ್ತದೆ. ಆಗ ಒಂದು ದೊಡ್ಡ ಶಬ್ದ ಕೇಳುತ್ತದೆ ಆದರೆ UFO ಸೂಪರ್ ಸೋನಿಕ್ ವಿಮಾನದಂತೆ ವೇಗವಾಗಿ ಚಲಿಸಲಾರಂಭಿಸಿದಾಗ ಅಂತಹ ಯಾವುದೇ ಶಬ್ದ ಕೇಳಿ ಬರಲಿಲ್ಲ. ಆ ಘಟನೆಯನ್ನು ನೋಡಿ ಪೈಲಟ್‌ಗಳೂ ಆಶ್ಚರ್ಯಚಕಿತರಾಗಿದ್ದರು.

UFO ಗಳ 3 ವಿಡಿಯೋ ಜಾರಿ ಮಾಡಿದ್ದ ಅಮೇರಿಕಾ

ಭೂಮಿಯ ಹೊರಗಿನ ಯಾವುದೇ ಗ್ರಹದಲ್ಲಿ ಜೀವಗಳಿವೆಯೇ ಎಂಬ ಬಗ್ಗೆ ಮತ್ತೆ ಚರ್ಚೆ ಈಗಲೂ ನಡೆಯುತ್ತಲೇ ಇದೆ. ಈಗ ಈ ವಾದಕ್ಕೆ ಅಮೇರಿಕನ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಪೆಂಟಗನ್ ಅಡಿಪಾಯವನ್ನು ಹಾಕಿದೆ. ಹೌದು, ಏಲಿಯನ್ಸ್ (ಅನ್ಯಗ್ರಹ ಜೀವಿಗಳು) ಇದ್ದಾವೋ ಇಲ್ಲವೋ ಎಂಬ ಕುತೂಹಲಕಾರಿ ಪ್ರಶ್ನೆಗಳ ಮೇಲೆ, ಅಮೇರಿಕನ್ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಾದ ಪೆಂಟಗನ್ ರಹಸ್ಯ ಪಟ್ಟಿಯಿಂದ ಮೂರು ವೀಡಿಯೊಗಳನ್ನು ಜಗತ್ತಿಗೆ ತೋರಿಸುವ ಮೂಲಕ ಚರ್ಚೆಯನ್ನು ಹುಟ್ಟುಹಾಕಿದೆ. ಈ ವಿಡಿಯೋ ಜಾರಿಯಾದ ಬಳಿಕ ಏಲಿಯನ್ ಹಾಗು UFO ಗಳು ಈಗ ಮತ್ತೆ ಚರ್ಚೆಯಲ್ಲಿವೆ. ಈ ವೀಡಿಯೊಗಳಲ್ಲಿ ನೀವು UFO (Unidentified Flying Objects) ಕಾಣಬಹುದಾಗಿದ್ದು ಇದನ್ನ ಅಮೆರಿಕಾದ ನೌಕಾಪಡೆಯ ಪೈಲಟ್‌ಗಳು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಎಲ್ಲಾ ಮೂರೂ ವೀಡಿಯೊಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅಮೇರಿಕನ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ (ಡಿಒಡಿ) ಹೇಳಿದೆ. ಅವುಗಳಲ್ಲಿ ಮೊದಲನೆಯ ವಿಡಿಯೋ ನವೆಂಬರ್ 2004 ರಲ್ಲಿ ಹಾಗು ಮತ್ತು ಉಳಿದ ಎರಡು ವಿಡಿಯೋಗಳನ್ನ 2015 ರಲ್ಲಿ ಸೆರೆಹಿಡಿಯಲಾಗಿದೆ. ಈ‌ ವಿಡಿಯೊಗಳನ್ನು 2007 ಮತ್ತು 2017 ರಲ್ಲಿ ಅನಧಿಕೃತವಾಗಿ ಬಿಡುಗಡೆ ಮಾಡಲಾಗಿತ್ತು. ರಕ್ಷಣಾ ಇಲಾಖೆ ಹೇಳಿಕೆಯಲ್ಲಿ ಹೇಳಿಕೆಯಲ್ಲಿ ತಿಳಿಸಿರುವಂತೆ – ಪ್ರಸಾರವಾಗುತ್ತಿರುವ ತುಣುಕನ್ನು ನಿಜವೋ ಅಥವಾ ಇಲ್ಲವೋ ಮತ್ತು ಅಂತಹ ಹೆಚ್ಚಿನ ವೀಡಿಯೊಗಳು ಇದೆಯೇ ಎಂಬ ಜನರ ಗೊಂದಲವನ್ನು ನಿವಾರಿಸಲು ಡಿಒಡಿ ಈ ವೀಡಿಯೊವನ್ನು ಬಿಡುಗಡೆ ಮಾಡುತ್ತಿದೆ.  ವೀಡಿಯೊದಲ್ಲಿ ನೋಡಿದ ವಿಮಾನವು “ಅಜ್ಞಾತ” ವಸ್ತುವಿನಂತೆ ಕಾಣುತ್ತಿದೆ ಎಂದು ಹೇಳಿದೆ.

ಹೇಳಿಕೆಯಲ್ಲಿ ತಿಳಿಸಿರುವಂತೆ – ಆಳವಾದ ಪರಿಶೀಲನೆಯ ನಂತರ, ಈ ವೀಡಿಯೊಗಳ ಅಧಿಕೃತ ಬಿಡುಗಡೆಯು ಯಾವುದೇ ಸೂಕ್ಷ್ಮ ಮಾಹಿತಿ ಅಥವಾ ಸಿಸ್ಟಮ್‌ನ್ನ ಹೊರಹಾಕುವುದಿಲ್ಲ ಹಾಗು ಅಜ್ಞಾತ ವೈಮಾನಿಕ ವಸ್ತುವಿನ ಮಿಲಿಟರಿ ವಾಯುಪ್ರದೇಶದ ಒಳನುಗ್ಗುವಿಕೆಯ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಇಲಾಖೆ ನಿರ್ಧರಿಸಿತು.

ಈ ಮೂರು ವೀಡಿಯೊಗಳ ಸತ್ಯಾಸತ್ಯತೆನ್ನ 2019 ರಲ್ಲಿ ಪೆಂಟಗನ್ ದೃಢಪಡಿಸಿದೆ. 2004 ರಲ್ಲಿ ತರಬೇತಿಯ ಸಮಯದಲ್ಲಿ ಪೈಲಟ್‌ಗಳು ಈ 40 ಅಡಿ ಉದ್ದದ ಅಪರಿಚಿತ ವಸ್ತುವನ್ನು ನೀರಿನಿಂದ 50 ಅಡಿ ಎತ್ತರಕ್ಕೆ ಸುಳಿದಾಡುತ್ತಿರುವುದನ್ನು ಗಮನಿಸಿದ್ದರು. ಇದೇ ರೀತಿಯ ದೃಶ್ಯ 2015 ರಲ್ಲೂ ಕಂಡಿತ್ತು. ಈ ಎರಡು ವೀಡಿಯೊಗಳನ್ನು 2017 ರಲ್ಲಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ. ವೀಡಿಯೊದಲ್ಲಿ ಆ ವಸ್ತು ಆಕಾಶದ ಕಡೆಗೆ ಚಲಿಸುತ್ತಿದೆ ಎಂದು ಕಂಡುಬರುತ್ತಿದೆ. ಒಬ್ಬ ಪೈಲಟ್, ಆತನ ಸಹೋದ್ಯೋಗಿಯನ್ನ ನೋಡಿ, ಇದು ತಿರುಗುತ್ತಿದೆ ಎಂದು ಹೇಳುವುದನ್ನು ಕೇಳಬಹುದಾಗಿದೆ. ‘ಟು ದಿ ಸ್ಟಾರ್ಸ್ ಅಕಾಡೆಮಿ’ ಎಂಬ ಖಾಸಗಿ ವಿಜ್ಞಾನ ಸಂಸ್ಥೆ 2018 ರಲ್ಲಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿತ್ತು. ಅವರು ಅಪರಿಚಿತ ವೈಮಾನಿಕ ವಸ್ತುಗಳನ್ನು ಅಧ್ಯಯನ ಮಾಡುತ್ತಾರೆ ಎಂದು ಸಂಸ್ಥೆ ಹೇಳಿದೆ.

ಇತ್ತೀಚೆಗಷ್ಟೇ ಇಸ್ರೇಲ್ ವಿಜ್ಞಾನಿ ಬಹಿರಂಗಪಡಿಸಿದ್ದ ವಿಷಯವೇನು ಗೊತ್ತಾ?

ಟೆಲ್ ಅವಿವ್, ಇಸ್ರೇಲ್: ಇಸ್ರೇಲ್‌ನ ಟಾಪ್ ಸ್ಪೇಸ್ ಸೆಕ್ಯೂರಿಟಿ ಅಫೀಸರ್ ಏಲಿಯನ್ಸ್ ಗಳಿವೆ ಮತ್ತು ಅಮೆರಿಕದ ಉಸ್ತುವಾರಿ (ನಿರ್ಗಮಿತ) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಎಂದು ಹೇಳುವ ಮೂಲಕ ಭಾರೀ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅವರ ಈ ಹೇಳಿಕೆಯ ನಂತರ, ವಿಜ್ಞಾನ ಜಗತ್ತಿನಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಕಳೆದ 3 ವರ್ಷಗಳಲ್ಲಿ, ನಡೆದ ವಿಚಿತ್ರ ಘಟನೆಗಳು ನಡೆದಿದ್ದು, ಅದರ ನಂತರ ಮೂರನೇ ಜಗತ್ತಿನಲ್ಲಿ ವಾಸಿಸುವ ಜನರೊಂದಿಗೆ ಸಂಪರ್ಕದ ಬಗ್ಗೆ ಚರ್ಚೆಗಳು ನಡೆದಿವೆ.

ಸಂಪರ್ಕ ಸಾಧಿಸಿದ ಏಲಿಯನ್ಸ್

ಇಸ್ರೇಲ್‌ನ ರಕ್ಷಣಾ ಸಚಿವಾಲಯದ ಬಾಹ್ಯಾಕಾಶ ವಿಭಾಗದ ಮುಖ್ಯಸ್ಥರಾಗಿರುವ ಹೈಮ್ ಇಶಾದ್, ಮನುಷ್ಯರು ಕಾಲ್ಪನಿಕ ಎಂದು ಹೇಳುವ ನಕ್ಷತ್ರಪುಂಜಕ್ಕೆ ಸಂಬಂಧಿಸಿದ ಕೆಲ ಜೀವಿಗಳು ಭೂಮಿಯ ಮೇಲಿರುವ ಮನುಷ್ಯರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಸಂಪರ್ಕದ ಬಗ್ಗೆ ಜಗತ್ತಿಗೆ ಮಾತ್ರ ಯಾರಿಗೂ ಹೇಳಲಾಗಿಲ್ಲ, ಕಾರಣ ‘ಮಾನವರು’ ಇನ್ನೂ ಈ ಏಲಿಯನ್ಸ್ ಗಳು ಇವೆ, ಅವುಗಳು ನಮ್ಮನ್ನ ಸಂಪರ್ಕಿಸಬಹುದು ಎಂಬುದನ್ನ ಈಗಲೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರು ಇದನ್ನು ಜೆರುಸಲೆಮ್ ಪೋಸ್ಟ್‌ನ ಲೇಖನದಲ್ಲಿ ಹೇಳಿದ್ದಾರೆ. ಅವರ ಸಂದರ್ಶನವು ಮೊದಲು ಇಸ್ರೇಲ್‌ನ ಯೋಡಿಯಟ್ ಅಹರೋನಾಟ್ ಪತ್ರಿಕೆಯಲ್ಲಿ ಶುಕ್ರವಾರ ಪ್ರಕಟವಾಗಿದ್ದು ಇದು ಹೆಬ್ರೂ ಭಾಷೆಯಲ್ಲಿ ಪ್ರಕಟವಾಗಿತ್ತು. ಈ ಲೇಖನವನ್ನು ಮಂಗಳವಾರ ಇಂಗ್ಲಿಷ್‌ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ. “ಕೆಲವು ಅಜ್ಞಾತ ಹಾರುವ ವಸ್ತುಗಳು ಹಲವಾರು ಬಾರಿ ತಮ್ಮ ಬಗ್ಗೆ ಯಾರಿಗೂ ಹೇಳಬಾರದು ಯಾಕಂದ್ರೆ ಮನುಷ್ಯರು ಈ ವಿಷಯವನ್ನ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ ಅಥವ ಇಂತಹ ವಿಷಯಗಳನ್ನ ಒಪ್ಪಿಕೊಳ್ಳಲೂ ಅವರಿಗೆ ಸಾಧ್ಯವಿಲ್ಲ” ಎಂದು ತಿಳಿಸಿವೆ ಎಂದು ಇಶಾದ್ ಹೇಳಿದ್ದಾರೆ.

ಮಂಗಳ ಗ್ರಹಕ್ಕಾಗಿ ಸೀಕ್ರೆಟ್ ಒಪ್ಪಂದ

ಇಶಾದ್ ರವರು ಹೇಳುವ ಪ್ರಕಾರ ಮನುಷ್ಯರು ಅನ್ಯಗ್ರಹಗಳ, ಬ್ರಹ್ಮಾಂಡದ ಬಗ್ಗೆ ಹೇಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೋ ಅದೇ ರೀತಿ ಏಲಿಯನ್ಸ್ ಗಳೂ ಬ್ರಹ್ಮಾಂಡದ ಸಂರಚನೆಯ ಬಗ್ಗೆ ತಿಳಿದುಕೊಳ್ಳಲು ಬಯಸುತ್ತವೆ ಹಾಗು ಅವು ಭೂಮಿಯ ಮೇಲಿನ ಜೀವನವನ್ನೂ ತಿಳಿದುಕೊಳ್ಳಲು ಉತ್ಸುಕರಾಗಿವೆ ಎಂದು ಹೇಳಿದ್ದಾರೆ‌. ಇಶಾದ್ ಒಬ್ಬ ರಿಟೈರ್ಡ್ ಜನರಲ್ ಆಗಿದ್ದು ಸದ್ಯ ಅವರು ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಸ್ರೇಲ್ ನಲ್ಲಿ ಇಶಾದ್ ರವರ ಬಗ್ಗೆ ಅಲ್ಲಿನ ಜನರಿಗೆ ಭಾರೀ ವಿಶ್ವಾಸ ಹಾಗು ಗೌರವವಿದೆ. ಅವರು ಕಳೆದ 30 ವರ್ಷಗಳ ಕಾಲ ಸ್ಪೇಸ್ ಸೆಕ್ಯೂರಿಟಿ ಪ್ರೋಗ್ರಾಮ್‌‌ನ ಮುಖ್ಯಸ್ಥರಾಗಿದ್ದರು. ಅವರಿಗೆ ಮೂರು ಬಾರಿ ಇಸ್ರೇಲಿನ ಸೆಕ್ಯೂರಿಟಿ ಅವಾರ್ಡ್ ನಿಂದ ಸನ್ಮಾನಿಸಲಾಗಿದೆ. 87 ವರ್ಷದ ಇಷಾದ್ ಹೇಳುವ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಕಳೆದ ಹಲವು ದಶಕಗಳಿಂದ ಏಲಿಯನ್ಸ್ ಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಹೇಳಿದ್ದಾರೆ. ಮಂಗಳ ಗ್ರಹದ ಮೇಲೆ ಸೀಕ್ರೆಟ್ ಅಂಡರ್‌ಗ್ರೌಂಡ್ ನೆಲೆಯನ್ನು ನಿರ್ಮಿಸಲು ಪರಸ್ಪರ ಸಹಕಾರಕ್ಕಾಗಿ ಒಪ್ಪಂದ ಸೇರಿದಂತೆ ಯುಎಸ್ ಮತ್ತು ಏಲಿಯನ್ಸ್ ನಡುವೆ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇಸ್ರೇಲಿನ ಮಾಜಿ ಅಧಿಕಾರಿಯ ಪ್ರಕಾರ, ಅಮೆರಿಕದ ಗಗನಯಾತ್ರಿಗಳು ಮತ್ತು ಏಲಿಯನ್ಸ್ ಗಳು ಮಂಗಳ ಗ್ರಹದಲ್ಲಿದ್ದಾರೆ.

ಈ ಬಗ್ಗೆ ತಿಳಿಸುವವರಿದ್ದರು ಟ್ರಂಪ್ ಆದರೆ…

ಇಶಾದ್ ರವರು ಹೇಳುವಂತೆ, “ಯುಎಸ್ ಸರ್ಕಾರ ಮತ್ತು ಏಲಿಯನ್ಸ್ ಗಳ ನಡುವೆ ಒಪ್ಪಂದವಿದೆ. ಮಂಗಳ ಗ್ರಹದಲ್ಲಿ ಕೆಲವು ಪ್ರಯೋಗಗಳನ್ನು ಮಾಡಲು ಅವರ ನಡುವೆ ಒಪ್ಪಂದವಾಗಿದೆ” ಎಂದಿದ್ದಾರೆ. ಟ್ರಂಪ್ ಅನ್ಯಗ್ರಹ ಜೀವಿಗಳ ಬಗ್ಗೆ ಬಹಿರಂಗಪಡಿಸುವವರಿದ್ದರು, ಆದರೆ ನಕ್ಷತ್ರಪುಂಜದ ಸಂಘವು ಅದನ್ನು ಮಾಡಲು ನಿರ್ಬಂಧಿಸಿದೆ ಎಂದು ಇಶಾದ್ ಹೇಳಿದ್ದಾರೆ. ಇಶಾದ್ ಅವರು ಹೇಳುವ ಪ್ರಕಾರ, ಅವರು ಈಗ ಯಾವ ವಿಷಯಗಳ ಬಗ್ಗೆ ಬಹಿರಂಗಪಡಿಸುತ್ತಿದ್ದಾರೋ ಅದನ್ನ 5 ವರ್ಷಗಳ ಹಿಂದೆ ಹೇಳಿದ್ದರೆ ಅವರನ್ನು ಹುಚ್ಚಾಸ್ಪತ್ರೆಗೆ ದಾಖಲಿಸುತ್ತಿದ್ದರು. ಆದರೆ ಈಗ ಜಗತ್ತು ಅನ್ಯಗ್ರಹ ಜೀವಿಗಳ ಅಸ್ತಿತ್ವವನ್ನ ಒಪ್ಪಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಎನ್‌ಸಿಬಿ ನ್ಯೂಸ್ ಪರವಾಗಿ ಈ ವಿಷಯದ ಬಗ್ಗೆ ಅಮೇರಿಕನ್ ಮತ್ತು ಇಸ್ರೇಲಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅದೇ ಸಮಯದಲ್ಲಿ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇನ್ನೂ ಏಲಿಯನ್ಸ್ ಗಳ ಜೀವನದ ಬಗ್ಗೆ ದೃಢವಾದ ಸಾಕ್ಷ್ಯಗಳನ್ನು ಪಡೆಯಬೇಕಾಗಿದೆ ಎಂದು ಹೇಳಿದೆ. ನಾಸಾ ಸೋಲಾರ್ ಸಿಸ್ಟಂ ಬಗ್ಗೆ ಹೆಚ್ಚು ಅನ್ವೇಷಿಸುತ್ತಿದೆ ಮತ್ತು ಈ ವಿಶ್ವದಲ್ಲಿ ಮನುಷ್ಯ ಒಬ್ಬನೇ ಇದ್ದಾನಾ ಅಥವ ಅನ್ಯಗ್ರಹಗಳು ಹಾಗು ಅವುಗಳಲ್ಲಿ ಜೀವಿಗಳೂ ಇವೆಯಾ ಎಂಬ ಉತ್ತರವನ್ನು ಹುಡುಕಾಡುತ್ತಿದೆ.

Advertisement
Share this on...