ಬಡಬಗ್ಗರ, ಅಸಹಾಯಕರ ಆಶಾಕಿರಣ, ಸೋಂಕಿತರ ಪಾಲಿನ ಆಪತ್ಬಾಂಧವ, ನಟ ಸೋನು ಸೂದ್ ಸಮಾಜಸೇವೆಗೆ ಈ ರಾಜಕಾರಣಿಯೇ ಸ್ಪೂರ್ತಿಯಂತೆ: ಆ ರಾಜಕಾರಣಿ ಯಾರು ಗೊತ್ತಾ?

in FILM NEWS/Kannada News/News 226 views

ಮುಂಬೈ: ಬಾಲಿವುಡ್ ನಟ ಸೋನುಸೂದ್‍ರವರು ನನಗೆ ರಾಜಕೀಯ ಪ್ರವೇಶಿಸಲು ಇಷ್ಟ ಇಲ್ಲ. ಆದರೆ ಈ ರಾಜಕಾರಣಿ ನನಗೆ ಸ್ಪೂರ್ತಿ ಎಂದು ತಿಳಿಸಿದ್ದಾರೆ.

ಕೊರೊನಾ ಸಂಕಷ್ಟದಲ್ಲಿರುವ ಹಲವಾರು ಮಂದಿಗೆ ಸೆಲೆಬ್ರೆಟಿಗಳು ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಬಾಲಿವುಡ್ ನಟ ಸೂನ್ ಸೂದ್ ಕೂಡ ಲಾಕ್‍ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿ ಆರ್ಥಿಕವಾಗಿ ಹಾಗೂ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಅನೇಕ ಜನರಿಗೆ ನೆರವಾಗುತ್ತಿದ್ದಾರೆ.

Advertisement

ಇಷ್ಟೆಲ್ಲಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟ ಸೋನು ಸೂದ್‍ರವರಿಗೆ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಂದರೆ ಬಹಳ ಇಷ್ಟ ಹಾಗೂ ಅವರು ಅಭಿವೃದ್ಧಿ ಪಡಿಸಿದ ಕಾರ್ಯಗಳು ತಮಗೆ ಸ್ಫೂರ್ತಿ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮೊದಲಿಗೆ ನಾನು ನಟನಾಗಿ ಕೆಲಸ ಆರಂಭಿಸಿದಾಗ ಶೂಟಿಂಗ್‍ಗಾಗಿ ಹೈದರಾಬಾದ್‍ಗೆ ತೆರಳುತ್ತಿದ್ದೆ. ಈ ನಗರ ನೋಡಲು ಬಹಳ ಸುಂದರವಾಗಿತ್ತು. ಅಲ್ಲಿನ ಬೆಳವಣಿಗೆಗೆ ಕಾರಣ ಚಂದ್ರಬಾಬು ನಾಯ್ಡುರವರು ಎಂಬ ವಿಚಾರ ತಿಳಿಯಿತು. ಸದ್ಯ ತಾವು ಮಾಡುತ್ತಿರುವ ಅನೇಕ ಕೆಲಸಗಳಿಗೆ ಅವರೇ ಸ್ಪೂರ್ತಿ ಹಾಗೂ ಇಂದಿನ ಯುವ ಜನತೆ ಕೂಡ ಅವರನ್ನು ಪ್ರೇರಣೆಯಾಗಿ ಪಡೆದುಕೊಳ್ಳಬೇಕು ಎಂದಿದ್ದಾರೆ.

ವಿಶೇಷವೆಂದರೆ ಸೋನು ಸೂದ್ ಪತ್ನಿ ಸೋನಾಲಿಯವರು ಕೂಡ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯವರಾಗಿದ್ದು, ತಮ್ಮ ವಿದ್ಯಾಭ್ಯಾಸಕ್ಕಾಗಿ ನಾಗ್‍ಪುರಕ್ಕೆ ತೆರಳಿದಾಗ ಸೋನು ಸೂದ್‍ರವರನ್ನು ಭೇಟಿಯಾಗಿದ್ದು, ನಂತರ ಇಬ್ಬರು ಪ್ರೀತಿಸಿ ವಿವಾಹವಾಗಿದ್ದಾರೆ.

ಲಾಕ್‍ಡೌನ್ ವೇಳೆ ಸೋನು ಸೂದ್‍ರವರು ಮಾಡಿರುವ ಅನೇಕ ಕೆಲಸಗಳನ್ನು ನೋಡಿ ಚಂದ್ರಬಾಬುರವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್ IAS ಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡುವ ಮೂಲಕವಾಗಿ ಮತ್ತೊಂದು ನೆರವನ್ನು ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತ ಅಭಿಮಾನಿಗಳು ಸೋನು ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಕೊರೊನಾ ಬಂದಾಗಿನಿಂದ ಹಾಗೂ ಲಾಕ್‍ಡೌನ್ ಆದಾಗಿನಿಂದ ಸಾಮನ್ಯ ಜನರಿಗೆ ವಾಲಿವುಡ್ ನಟ ಸೋನು ಸೂದ್ ಒಂದಿಲ್ಲೊಂದು ಸಹಾಯ ಮಾಡುತ್ತ ಬಂದಿದ್ದಾರೆ. ಇದೀಗ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಸಹಾಯಹಸ್ತ ಚಾಚಿದ್ದಾರೆ.

ದೆಹಲಿಯ ಯುವ ಸಂಘಟನೆಯ ದಿಯಾ ಹಾಗೂ ಸೋನು ಸೂದ್ ಒಟ್ಟಾಗಿ ಸಂಭವಂ ಎಂಬ ಯೋಜನೆ ಒಂದನ್ನು ಲಾಂಚ್ ಮಾಡಿದ್ದಾರೆ. ಇದರ ಅಡಿಯಲ್ಲಿ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ಸಿದ್ಧವಾಗುತ್ತಿರುವ ಆಕಾಂಕ್ಷಿಗಳಿಗೆ ಉಚಿತವಾಗಿ ಕೋಚಿಂಗ್ ಸ್ಕಾಲರ್ ಶಿಪ್ ನೀಡಲಾಗುತ್ತದೆ.

ಐಎಎಸ್ ತಯಾರಿ ಮಾಡಬೇಕಾ ನೀವು? ಕೋಚೀಂಗ್ ಪಡೆಯಲು ಬಯಸುವವರು www.SoodCharityFoundation.org ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಜೂನ್ 30 ರಿಜಿಸ್ಟ್ರೇಷನ್‍ಗೆ ಕೊನೆಯ ದಿನವಾಗಿದೆ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

ಸೋನು ಸೂದ್‍ಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವಂತೆ ನೆಟ್ಟಿಗರ ಒತ್ತಾಯ:

ತೆರೆಮೇಲೆ ಅನೇಕ ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯಿಸಿರುವ ನಟ ಸೋನು ಸೂದ್ ನಿಜ ಜೀವನದಲ್ಲಿ ಹಲವರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಕಳೆದ ಬಾರಿ ಕೋವಿಡ್ ಲಾಕ್‍ಡೌನ್ ವೇಳೆ ನೂರಾರು ವಲಸೆ ಕಾರ್ಮಿಕರ ಕಷ್ಟಕ್ಕೆ ಮಿಡಿದ ಸೋನು ಸೂದ್ ಈ ಬಾರಿ ಸೋಂಕಿತರ ಜೀವ ಉಳಿಸಲು ಹಗಲು ರಾತ್ರಿ ಎನ್ನದೆ ಶ್ರಮ ವಹಿಸಿದ್ದದ್ದಾರೆ. ಮಾನವೀಯತೆ ಮೆರೆದ ಸೋನು ಸೂದ್‍ಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮವಿಭೂಷಣ’ ನೀಡುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.

135 ಕೋಟಿ ಭಾರತೀಯರ ಪ್ರೀತಿಯೇ ನನಗೆ ಅತ್ಯಂತ ದೊಡ್ಡ ಪ್ರಶಸ್ತಿ. ಇದನ್ನು ನಾನು ಈಗಾಗಲೇ ಸ್ಕೀಕರಿಸಿದ್ದೇನೆ ಎಂದು ಸೋನು ಟ್ವೀಟ್ ಮಾಡಿ ಎಲ್ಲರ ಹೃದಯ ಗೆದ್ದಿದ್ದಾರೆ.

Advertisement
Share this on...