ಗುಹಾಟಿ, ಜೂ.18- ಅಸ್ಸಾಂನ ಕಾಂಗ್ರೆಸ್ ಶಾಸಕರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಹುಲ್ ಗಾಂಧಿಗೆ ನಾಯಕತ್ವ ನಿಭಾಯಿಸುವ ಸಾಮರ್ಥ್ಯ ಇಲ್ಲ ಮತ್ತು ಪಕ್ಷದಲ್ಲಿ ವಯಸ್ಸಾದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಾಲ್ಕು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದ ಜೋರ್ತ್ ಜಿಲ್ಲೆ ಮರೈಣಿ ಕ್ಷೇತ್ರದ ರುಪ್ ಜ್ಯೋತಿ ಕುರ್ಮಿ ಅವರು ಇಂದು ವಿಧಾನಸಭೆಯ ಅಧ್ಯಕ್ಷರಾದ ಬಿಶ್ವಜಿತ್ ಡೈಮರಿ ಅವರಿಗೆ ರಾಜೀನಾಮೆ ನೀಡಿದ್ದಾರೆ.
ರುಪ್ ಜ್ಯೋತಿ ಅವರು ಬಿಜೆಪಿ ಸೇರಿರುವ ಸಾಧ್ಯತೆ ಇದೆ. ತಾವು ಕಾಂಗ್ರೆಸ್ ಬಿಡುತ್ತಿರುವುದನ್ನು ಟ್ವಿಟರ್ ನಲ್ಲಿ ತಿಳಿಸಿರುವ ಅವರು, ದೆಹಲಿ ಹೈಕಮಾಂಡ್ ಮತ್ತು ಗುಹಾಟಿಯ ಕಾಂಗ್ರೆಸ್ ನಾಯಕರು ಹಿರಿಯ ನಾಯಕರಿಗಷ್ಟೆ ಆದ್ಯತೆ ನೀಡುತ್ತಿದ್ದಾರೆ. ಯುವಧ್ವನಿಯನ್ನು ಅಡಗಿಸಲಾಗುತ್ತಿದೆ. ಅದಕ್ಕಾಗಿ ದೇಶದ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಸ್ಥಿತಿ ಹಿನಾಯವಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಾರಿ ಅಧಿಕಾರಕ್ಕೆ ಬರಲು ಉತ್ತಮ ಅವಕಾಶ ಇತ್ತು, ಎಐಯುಡಿಎಫ್ ಜೊತೆ ನಕಲಿ ಮೈತ್ರಿಯನ್ನು ಮುಂದುವರೆಸಬಾರದು ಎಂದು ನಾನು ಹೇಳಿದ್ದೆ, ನನ್ನ ಮಾತು ಕೇಳಲಿಲ್ಲ. ಹಾಗಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡು ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು ಎಂದಿದ್ದಾರೆ.
ರಾಹುಲ್ ಗಾಂಧಿಗೆ ತಮ್ಮ ಹೆಗಲ ಮೇಲೆ ನಾಯಕತ್ವ ಹೊರುವ ಸಾಮರ್ಥ್ಯ ಇಲ್ಲ. ಪಕ್ಷಕ್ಕೆ ಅವರೇನಾದರೂ ಉಪಕಾರ ಮಾಡಬೇಕೆಂದಿದ್ದರೆ ಮುಂದೆ ಏನು ಮಾಡದೆ ಸುಮ್ಮನಿದ್ದರೆ ಸಾಕು ಎಂದು ಸಲಹೆ ನೀಡಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ಸಾಂನಲ್ಲಿ ಕಾಂಗ್ರೆಸ್ ಸೋಲು ಕಂಡಿದೆ.
ಮುಂದಿನ ಸುದ್ದಿ: 2023 ರ ಚುನಾವಣೆಯ ಬಳಿಕ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಎಂದ ಆಂಧ್ರ ಜ್ಯೋತಿಷಿ
ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಈಗಾಗಲೇ ಮೈತ್ರಿ ಲಕ್ನಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಎರಡೂ ಬಾರಿಯೂ ಪೂರ್ಣಾವಧಿ ಅಧಿಕಾರ ನಡೆಸದೆ ಕೆಳಗೆ ಇಳಿದರು. ಹೀಗಿದ್ದರೂ 2023ರ ವಿಧಾನಸಭೆ ಚುನಾವಣೆ ಬಳಿಕ ಮತ್ತೆ ಸಿಎಂ ಗಾದಿಗೇರುವ ಕನಸಿನಲ್ಲಿದ್ದಾರೆ.
ಈ ಕನಸಿಗೆ ಬಲ ತುಂಬುವಂತೆ ಆಂಧ್ರ ಪ್ರದೇಶ ಮೂಲದ ಪ್ರಖ್ಯಾತ ಜೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. “2023ರ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದೆ. ಆಗ ಎಚ್ಡಿಕೆ ಮತ್ತೆ ರಾಜ್ಯದ ಸಿಎಂ ಆಗುತ್ತಾರೆ. ಮುಂಬರುವ ಪಂಚಮಾಧಿಪತಿ ದೆಸೆಯಲ್ಲಿ ಅಧಿಕಾರ ನಿಶ್ಚಿತ” ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.