ರಿಯಾಲಿಟಿ ಶೊಗಳು ಸುಳ್ಳು, ಅವುಗಳ ಅಸಲಿ ಬಣ್ಣ ಬಯಲು: ಹಿಗ್ಗಾಮುಗ್ಗಾ ಝಾಡಿಸಿದ ದೇಶದ ಜನತೆ

in Kannada News/News/ಮನರಂಜನೆ/ಸಿನಿಮಾ 2,860 views

ಕಿರುತೆರೆಯ ರಿಯಾಲಿಟಿ ಶೋಗಳ ಅಸಲಿಯತ್ತಿನ ಬಗ್ಗೆ ಪ್ರೇಕ್ಷಕರಿಗೆ ಮೊದಲಿನಿಂದಲೂ ಅನುಮಾನ ಇದೆ. ಅದರಲ್ಲೂ ಹಿಂದಿಯ ‘ಇಂಡಿಯನ್​ ಐಡಲ್​’ ಸಿಂಗಿಂಗ್​ ರಿಯಾಲಿಟಿ ಶೋ ಹಲವು ವಿವಾದಗಳನ್ನು ಮಾಡಿಕೊಂಡಿದೆ. ಪ್ರತಿ ದಿನ ಈ ಕಾರ್ಯಕ್ರಮದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹತ್ತು ಹಲವು ಕಾರಣಗಳಿಗಾಗಿ ಇದನ್ನು ಟ್ರೋಲ್​ ಮಾಡಲಾಗುತ್ತಿದೆ. ಈಗ ‘ಇಂಡಿಯನ್​ ಐಡಲ್​’ ಜಡ್ಜ್​ಗಳ ಹುಸಿ ಕಣ್ಣೀರು ಎಲ್ಲರಿಂದ ಟೀಕೆಗೆ ಒಳಪಡುತ್ತಿದೆ.

Advertisement

ಇತ್ತೀಚೆಗೆ ಫಾದರ್ಸ್​ ಡೇ ಪ್ರಯುಕ್ತ ‘ಇಂಡಿಯನ್​ ಐಡಲ್​’ ಸ್ಪರ್ಧಿಗಳು ವಿಶೇಷ ಹಾಡುಗಳನ್ನು ಹೇಳಿದರು. ಅಲ್ಲದೆ, ತಮ್ಮ ತಂದೆ ಬಗೆಗಿನ ಕಥೆಗಳನ್ನೂ ವೇದಿಕೆ ಮೇಲೆ ಶೇರ್​ ಮಾಡಿಕೊಂಡರು. ಅದನ್ನು ಕೇಳಿದ ನಿರ್ಣಾಯಕರಾದ ಹಿಮೇಶ್​ ರೇಷಮಿಯಾ ಮತ್ತು ನೇಹಾ ಕಕ್ಕರ್​ ಅವರು ಕಣ್ಣೀರು ಹಾಕಿದರು. ಆದರೆ ಅವರು ನಿಜವಾಗಿಯೂ ಅತ್ತಿಲ್ಲ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಇದು ಹುಸಿ ಕಣ್ಣೀರು ಎಂದು ಟ್ರೋಲ್​ ಮಾಡಲಾಗುತ್ತಿದೆ.

ಬರುಬರುತ್ತ ಇದು ದೈನಂದಿನ ಧಾರಾವಾಹಿ ಥರ ಆಗುತ್ತಿದೆ. ಬರೀ ಡ್ರಾಮಾ ಹೆಚ್ಚಾಗುತ್ತಿದೆ. ಜಡ್ಜ್​ಗಳು ಓವರ್​ ಆ್ಯಕ್ಟಿಂಗ್​ ಮಾಡುವುದನ್ನು ನಿಲ್ಲಿಸಬೇಕು ಎಂದು ಜನರು ಟ್ರೋಲ್​ ಮಾಡಿದ್ದಾರೆ. ಕೆಲವರು ಈ ಶೋನಿಂದ ನಿರಾಶೆಗೊಂಡಿರುವುದು ಮಾತ್ರವಲ್ಲದೆ ವಿಪರೀತ ಕೋಪವನ್ನೂ ವ್ಯಕ್ತಪಡಿಸಿಕದ್ದಾರೆ. ಒಟ್ಟಾರೆ ಈ ಪ್ರಸಂಗಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಹಲವು ಬಗೆಯ ಮೀಮ್​ಗಳು ಹರಿದಾಡುತ್ತಿವೆ.

ಈ ಹಿಂದೆ ಕೂಡ ಇಂಡಿಯನ್​​ ಐಡಲ್​ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು. ಸ್ಪರ್ಧಿಗಳನ್ನು ಹೊಗಳುವಂತೆ ಆಯೋಜಕರು ಒತ್ತಾಯ ಹೇರುತ್ತಾರೆ. ಸ್ಪರ್ಧಿಗಳ ನಡುವೆ ಸುಳ್ಳು ಪ್ರೇಮಕಥೆಯನ್ನು ಸೃಷ್ಟಿಸಲಾಗುತ್ತದೆ ಎಂಬಿತ್ಯಾದಿ ಆರೋಪಗಳನ್ನು ಮಾಡಲಾಗಿತ್ತು. ಈ ಶೋಗೆ ಅತಿಥಿಯಾಗಿ ಹೋಗಿದ್ದ ಕಿಶೋರ್​ ಕುಮಾರ್​ ಪುತ್ರ ಅಮಿತ್​ ಕುಮಾರ್​ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಸ್ಪರ್ಧಿಗಳು ಹೇಗೆ ಹಾಡಿದರೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಮೇಕರ್​ಗಳು ನಮಗೆ ಹೇಳುತ್ತಿದ್ದರು. ಅದು ನಿಜಕ್ಕೂ ದೊಡ್ಡ ವಿಚಾರ. ಹೀಗಾಗಿ, ನನಗೆ ಜಡ್ಜ್​ ಆಗಿ ಮುಂದುವರಿಯೋಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ಇರೋಕೆ ಸಾಧ್ಯವಿಲ್ಲ. ಹೀಗಾಗಿ, ನಾನು ಹೊರ ಬಂದೆ. ನಾನು ಯಾವುದೇ ಶೋಗಳಿಗೂ ಈಗ ಜಡ್ಜ್​ ಆಗಿ ಹೋಗುತ್ತಿಲ್ಲ’ ಎಂದು ಇಂಡಿಯನ್​ ಐಡಲ್​ ಐದು ಹಾಗೂ ಆರನೇ ಸೀಸನ್​ ಜಡ್ಜ್​ ಆಗಿದ್ದ ಸುನಿಧಿ ಚೌಹಾಣ್​ ಹೇಳಿದ್ದರು.

ಬಡತನ, ಫೇಕ್​ ಲವ್​ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್​ ಐಡಲ್​ ವಿನ್ನರ್​ ಆರೋಪ

Indian Idol 12: ಫೇಕ್​ ಲವ್​ ಸ್ಟೋರಿಗಳನ್ನು ಸೃಷ್ಟಿಸಿ ಜನರನ್ನು ಸೆಳೆಯುವ ತಂತ್ರ ನಡೆಯುತ್ತಿದೆ. ನಿಜವಾದ ಟ್ಯಾಲೆಂಟ್​ಗೆ ಬೆಲೆ ನೀಡುವ ಬದಲು ಇಂಥ ಫೇಕ್​ ಲವ್​​ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಎಂದು ಅಭಿಜೀತ್​ ಸಾವಂತ್ ಟೀಕೆ ಮಾಡಿದ್ದಾರೆ.

ಕಿರುತೆರೆ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಮನರಂಜನಾ ವಾಹಿನಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತವೆ. ಅದರಲ್ಲೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ಮೋಡಿ ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಬಗ್ಗೆ ಪರ-ವಿರೋಧದ ಅನೇಕ ಚರ್ಚೆಗಳು ಸೋಶಿಯಲ್​ ಮೀಡಿಯಾದಲ್ಲಿ ನಡೆದಿದೆ. ಹಿಂದಿಯ ‘ಇಂಡಿಯನ್​ ಐಡಲ್​ 12’ ಸಿಂಗಿಂಗ್​ ರಿಯಾಲಿಟಿ ಶೋ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪರ್ಧಿಗಳನ್ನು, ನಿರೂಪಕರನ್ನು ಹಾಗೂ ಜಡ್ಜ್​ಗಳನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿದೆ. ‘ಇಂಡಿಯನ್​ ಐಡಲ್​ 12’ ಬಗ್ಗೆ ಈಗ ಇಂಡಿಯನ್​ ಐಡಲ್​ ಮೊದಲ ಸೀಸನ್​ನ ವಿನ್ನರ್​ ಅಭಿಜೀತ್​ ಸಾವಂತ್​ ಮಾತನಾಡಿದ್ದಾರೆ.

ಈ ರೀತಿಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ನಡುವಿನ ಲವ್​ಸ್ಟೋರಿಯನ್ನು ತೋರಿಸಲಾಗುತ್ತದೆ. ಆದರೆ ಅದು ನಿಜವಾದ ಪ್ರೇಮಕಥೆ ಆಗಿರುವುದಿಲ್ಲ. ಫೇಕ್​ ಲವ್​ ಸ್ಟೋರಿಗಳನ್ನು ಸೃಷ್ಟಿಸಿ ಜನರನ್ನು ಸೆಳೆಯುವ ತಂತ್ರ ನಡೆಯುತ್ತಿದೆ. ನಿಜವಾದ ಟ್ಯಾಲೆಂಟ್​ಗೆ ಬೆಲೆ ನೀಡುವ ಬದಲು ಇಂಥ ಫೇಕ್​ ಲವ್​​ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಎಂದು ಅಭಿಜೀತ್​ ಸಾವಂತ್ ಟೀಕೆ ಮಾಡಿದ್ದಾರೆ.

ಇಂಡಿಯನ್​ ಐಡಲ್​ 12’ರ ಸ್ಪರ್ಧಿಗಳಾದ ಪವನ್​ ದೀಪ್​ ರಾಜನ್​ ಅರುಣಿತಾ ನಡುವೆ ಪ್ರೀತಿ ಇದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಈ ಕಾರ್ಯಕ್ರಮದಲ್ಲಿ ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರಿಗೆ ನಮನ ಸಲ್ಲಿಸುವ ಸಲುವಾಗಿ ವಿಶೇಷ ಎಪಿಸೋಡ್​ ನಡೆಸಲಾಯಿತು. ಆ ಎಪಿಸೋಡ್​ ಸರಿಯಾಗಿ ಮೂಡಿಬಂದಿಲ್ಲ ಹಾಗೂ ಕಿಶೋರ್​ ಕುಮಾರ್​ಗೆ ಅಗೌರವ ಸೂಚಿಸಿದಂತಾಗಿದೆ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಈ ವಿಶೇಷ ಎಪಿಸೋಡ್​ಗಳಲ್ಲಿ ಮುಖ್ಯ ಅತಿಥಿಯಾಗಿ ಕಿಶೋರ್​ ಕುಮಾರ್​ ಅವರ ಮಗ ಅಮಿತ್​ ಕುಮಾರ್​ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಬಂದ ಬಳಿಕ ಅವರು ಕೂಡ ‘ಇಂಡಿಯನ್​ ಐಡಲ್​ 12’ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ‘ನನಗೆ ಆ ಶೋ ಖಂಡಿತಾ ಇಷ್ಟ ಆಗಲಿಲ್ಲ. ಎಲ್ಲ ಸ್ಪರ್ಧಿಗಳನ್ನು ಹೊಗಳಬೇಕು ಎಂದು ಆಯೋಜಕರು ಹೇಳಿದ್ದರು. ಅದರಂತೆ ನಾನು ನಡೆದುಕೊಂಡೆ’ ಎಂದು ಮಾಧ್ಯಮವೊಂದಕ್ಕೆ ಅಮಿತ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದರು. ಹೀಗೆ ಎಲ್ಲ ಕಡೆಗಳಿಂದಲೂ ಇಂಡಿಯನ್​ ಐಡಲ್​ ಕಾರ್ಯಕ್ರಮದ ಬಗ್ಗೆ ಟೀಕೆ ಕೇಳಿಬರುತ್ತಿದೆ.

Advertisement
Share this on...